ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ದಾರಿಪಲ್ಲಿ ರಾಮಯ್ಯ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
12 APR 2025 1:09PM by PIB Bengaluru
ಶ್ರೀ ದಾರಿಪಲ್ಲಿ ರಾಮಯ್ಯ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದರು. ಲಕ್ಷಗಟ್ಟಲೆ ಮರಗಳನ್ನು ನೆಡಲು ಮತ್ತು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ಸುಸ್ಥಿರತೆಯ ಚಾಂಪಿಯನ್ ಆಗಿದ್ದಾರೆ ಎಂದು ಪ್ರಧಾನಮಂತ್ರಿಯವರು ಶ್ಲಾಘಿಸಿದರು.
ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ:
"ದಾರಿಪಳ್ಳಿ ರಾಮಯ್ಯ ಅವರು ಸುಸ್ಥಿರತೆಯ ಚಾಂಪಿಯನ್ ಎಂದು ಸದಾ ನೆನಪಿಸಿಕೊಳ್ಳುತ್ತಾರೆ. ಲಕ್ಷಗಟ್ಟಲೆ ಮರಗಳನ್ನು ನೆಡಲು ಮತ್ತು ರಕ್ಷಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ದಣಿವರಿಯದ ಪ್ರಯತ್ನಗಳು ಪ್ರಕೃತಿಯ ಮೇಲಿನ ಆಳವಾದ ಪ್ರೀತಿ ಮತ್ತು ಭವಿಷ್ಯದ ಪೀಳಿಗೆಯ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ. ಅವರ ಕೆಲಸವು ನಮ್ಮ ಯುವಜನರನ್ನು ಹಸಿರು ಗ್ರಹವನ್ನು ನಿರ್ಮಿಸುವ ಅನ್ವೇಷಣೆಗೆ ಪ್ರೇರೇಪಿಸುತ್ತದೆ. ಈ ಸಂದರ್ಭದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗಿದೆ.ಓಂ ಶಾಂತಿ."
“దరిపల్లి రామయ్య గారు సుస్థిరత కోసం గళం వినిపించిన వ్యక్తిగా గుర్తుండిపోతారు. లక్షలాది చెట్లను నాటడానికి, వాటిని రక్షించడానికి ఆయన తన జీవితాన్ని అంకితమిచ్చారు. ఆయన అవిశ్రాంత కృషి ప్రకృతి పట్ల గాఢమైన ప్రేమనూ,భవిష్యత్తు తరాల పట్ల బాధ్యతను ప్రతిబింబిస్తాయి. ఆయన చేసిన కృషి మన యువతలో, మరింత సుస్థిరమైన హరిత గ్రహాన్ని నిర్మించాలనే తపనను ప్రేరేపిస్తూనే ఉంటుంది. ఈ విషాద సమయంలో ఆయన కుటుంబ సభ్యులకు,అభిమానులకు నా ప్రగాఢ సానుభూతి తెలియజేస్తున్నాను. ఓం శాంతి.”
*****
(Release ID: 2121377)
Visitor Counter : 14
Read this release in:
Odia
,
Telugu
,
Malayalam
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil