ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ‌ವು 2024-25ರ ಹಣಕಾಸು ವರ್ಷದಲ್ಲಿ ಐತಿಹಾಸಿಕ ಬೆಳವಣಿಗೆಯನ್ನು ಸಾಧಿಸಿದೆ


30 ಗಿಗಾವ್ಯಾಟ್‌ ದಾಖಲೆಯ ಸೇರ್ಪಡೆಯೊಂದಿಗೆ ಒಟ್ಟು ಸ್ಥಾಪಿತ ಆರ್‌ಇ ಸಾಮರ್ಥ್ಯ‌ವು 220.10 ಗಿಗಾವ್ಯಾಟ್‌ ತಲುಪುತ್ತದೆ

106 ಗಿಗಾವ್ಯಾಟ್‌ ಸೌರ ವಿದ್ಯುತ್‌; 50 ಗಿಗಾವ್ಯಾಟ್‌ ಮೈಲಿಗಲ್ಲನ್ನು ದಾಟಿದ ಪವನ ಶಕ್ತಿ

Posted On: 10 APR 2025 6:15PM by PIB Bengaluru

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) 2024-25ರ ಹಣಕಾಸು ವರ್ಷದಲ್ಲಿಭಾರತದ ಶುದ್ಧ ಇಂಧನ ಕ್ಷೇತ್ರದಲ್ಲಿದೃಢವಾದ ಪ್ರಗತಿಯನ್ನು ವರದಿ ಮಾಡಿದೆ. ದಾಖಲೆಯ ವಾರ್ಷಿಕ 29.52 ಗಿಗಾವ್ಯಾಟ್‌ ಸಾಮರ್ಥ್ಯ‌ದ ಸೇರ್ಪಡೆಯೊಂದಿಗೆ, ದೇಶದಲ್ಲಿ ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ (ಆರ್‌ಇ) ಸಾಮರ್ಥ್ಯ‌ವು 2025ರ ಮಾರ್ಚ್‌ 3 ರ ವೇಳೆಗೆ 220.10 ಗಿಗಾವ್ಯಾಟ್‌ ತಲುಪಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ198.75 ಗಿಗಾವ್ಯಾಟ್‌ಗಿಂತ ಹೆಚ್ಚಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ ‘ಪಂಚಾಮೃತ’ ಗುರಿಗಳ ಅಡಿಯಲ್ಲಿತನ್ನ ಬದ್ಧತೆಗಳ ಭಾಗವಾಗಿ, 2030ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಆಧಾರಿತ ಸಾಮರ್ಥ್ಯ‌ವನ್ನು ಸಾಧಿಸುವ ಗುರಿಯತ್ತ ಭಾರತದ ಸ್ಥಿರ ಪ್ರಗತಿಯನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ.

ಸೌರ ಶಕ್ತಿಯು ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ

2024-25ರ ಹಣಕಾಸು ವರ್ಷದಲ್ಲಿ23.83 ಗಿಗಾವ್ಯಾಟ್‌ ಸೇರ್ಪಡೆಯೊಂದಿಗೆ ಸೌರ ಶಕ್ತಿಯು ವರ್ಷದ ಸಾಮರ್ಥ್ಯ‌ ವಿಸ್ತರಣೆಗೆ ಹೆಚ್ಚಿನ ಕೊಡುಗೆ ನೀಡಿದೆ, ಇದು ಹಿಂದಿನ ವರ್ಷದಲ್ಲಿಸೇರಿಸಲಾದ 15.03 ಗಿಗಾವ್ಯಾಟ್‌ಗಿಂತ ಗಮನಾರ್ಹ ಹೆಚ್ಚಳವಾಗಿದೆ. ಒಟ್ಟು ಸ್ಥಾಪಿತ ಸೌರ ಸಾಮರ್ಥ್ಯ‌ವು ಈಗ 105.65 ಗಿಗಾವ್ಯಾಟ್‌ ಆಗಿದೆ. ಇದರಲ್ಲಿನೆಲ-ಮೌಂಟೆಡ್‌ ಸ್ಥಾಪನೆಗಳಿಂದ 81.01 ಗಿಗಾವ್ಯಾಚ್‌, ಮೇಲ್ಛಾವಣಿಯ ಸೌರಶಕ್ತಿಯಿಂದ 17.02 ಗಿಗಾವ್ಯಾಟ್‌, ಹೈಬ್ರಿಡ್‌ ಯೋಜನೆಗಳ ಸೌರ ಘಟಕಗಳಿಂದ 2.87 ಗಿಗಾವ್ಯಾಟ್‌ ಮತ್ತು ಆಫ್‌-ಗ್ರಿಡ್‌ ವ್ಯವಸ್ಥೆಗಳಿಂದ 4.74 ಗಿಗಾವ್ಯಾಟ್‌ ಸೇರಿವೆ. ಈ ಬೆಳವಣಿಗೆಯು ಯುಟಿಲಿಟಿ-ಸ್ಕೇಲ್‌ ಮತ್ತು ವಿತರಣಾ ವಿಭಾಗಗಳಲ್ಲಿಸೌರ ಶಕ್ತಿಯ ನಿರಂತರ ಬಳಕೆಯನ್ನು ಪ್ರದರ್ಶಿಸುತ್ತದೆ.

ಪವನ ಸ್ಥಾಪನೆಯಲ್ಲಿಸ್ಥಿರ ಏರಿಕೆ

2023-24ರ ಹಣಕಾಸು ವರ್ಷದಲ್ಲಿ3.25 ಗಿಗಾವ್ಯಾಟ್‌ಗೆ ಹೋಲಿಸಿದರೆ 4.15 ಗಿಗಾವ್ಯಾಟ್‌ ಹೊಸ ಸಾಮರ್ಥ್ಯ‌ವನ್ನು ಸೇರಿಸುವುದರೊಂದಿಗೆ ಪವನ ಶಕ್ತಿಯು ವರ್ಷದಲ್ಲಿ ನಿರಂತರ ಪ್ರಗತಿಯನ್ನು ಕಂಡಿದೆ. ಒಟ್ಟು ಸಂಚಿತ ಸ್ಥಾಪಿತ ಪವನ ಸಾಮರ್ಥ್ಯ‌ವು ಈಗ 50.04 ಗಿಗಾವ್ಯಾಟ್‌ ಆಗಿದ್ದು, ಇದು ಭಾರತದ ನವೀಕರಿಸಬಹುದಾದ ಇಂಧನ ಮಿಶ್ರಣದಲ್ಲಿ ಪವನ ಶಕ್ತಿಯ ಪಾತ್ರವನ್ನು ಬಲಪಡಿಸುತ್ತದೆ.

ಜೈವಿಕ ಇಂಧನ ಮತ್ತು ಸಣ್ಣ ಜಲವಿದ್ಯುತ್‌ ಆವೇಗವನ್ನು ಕಾಯ್ದುಕೊಳ್ಳುತ್ತವೆ

ಜೈವಿಕ ಇಂಧನ ಸ್ಥಾಪನೆಗಳು ಒಟ್ಟು 11.58 ಗಿಗಾವ್ಯಾಟ್‌ ಸಾಮರ್ಥ್ಯ‌ವನ್ನು ತಲುಪಿವೆ, ಇದರಲ್ಲಿಆಫ್‌-ಗ್ರಿಡ್‌ ಮತ್ತು ತ್ಯಾಜ್ಯದಿಂದ ಇಂಧನ ಯೋಜನೆಗಳಿಂದ 0.53 ಗಿಗಾವ್ಯಾಟ್‌ ಸೇರಿದೆ. ಸಣ್ಣ ಜಲವಿದ್ಯುತ್‌ ಯೋಜನೆಗಳು 5.10 ಗಿಗಾವ್ಯಾಟ್‌ ಸಾಮರ್ಥ್ಯ‌ವನ್ನು ಸಾಧಿಸಿದ್ದು, ಇನ್ನೂ 0.44 ಗಿಗಾವ್ಯಾಟ್‌ ಅನುಷ್ಠಾನದಲ್ಲಿದೆ. ಈ ವಲಯಗಳು ಭಾರತದ ಇಂಧನ ಭೂದೃಶ್ಯದ ವಿಕೇಂದ್ರೀಕೃತ ಮತ್ತು ವೈವಿಧ್ಯಮಯ ಸ್ವರೂಪಕ್ಕೆ ಕೊಡುಗೆ ನೀಡುವ ಮೂಲಕ ಸೌರ ಮತ್ತು ಪವನ ವಿಭಾಗಗಳಿಗೆ ಪೂರಕವಾಗಿವೆ.

ಶುದ್ಧ ಇಂಧನ ಯೋಜನೆಗಳ ಪೈಪ್‌ಲೈನ್‌ ವಿಸ್ತರಣೆ

ಸ್ಥಾಪಿತ ಸಾಮರ್ಥ್ಯ‌ದ ಜತೆಗೆ, ಭಾರತದಲ್ಲಿ169.40 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಯೋಜನೆಗಳು ಜಾರಿಯಲ್ಲಿವೆ ಮತ್ತು 65.06 ಗಿಗಾವ್ಯಾಟ್‌ ಈಗಾಗಲೇ ಟೆಂಡರ್‌ ಮಾಡಲಾಗಿದೆ. ಹೈಬ್ರಿಡ್‌ ವ್ಯವಸ್ಥೆಗಳು, ದಿನದ 24 ಗಂಟೆಯೂ (ಆರ್‌ಟಿಸಿ) ವಿದ್ಯುತ್‌, ಗರಿಷ್ಠ ವಿದ್ಯುತ್‌ ಮತ್ತು ಥರ್ಮಲ್‌ + ಆರ್‌ಇ ಬಂಡ್ಲಿಂಗ್‌ ಯೋಜನೆಗಳಂತಹ ಉದಯೋನ್ಮುಖ ಪರಿಹಾರಗಳಿಂದ 65.29 ಗಿಗಾವ್ಯಾಟ್‌ ಇದರಲ್ಲಿಸೇರಿದೆ. ಈ ಉಪಕ್ರಮಗಳು ಗ್ರಿಡ್‌ ಸ್ಥಿರತೆ ಮತ್ತು ನವೀಕರಿಸಬಹುದಾದ ಮೂಲಗಳಿಂದ ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿನಿಧಿಸುತ್ತವೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರ ಅಡಿಯಲ್ಲಿ ಎಂಎನ್‌ಆರ್‌ಇ 2030ರ ವೇಳೆಗೆ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಸಾಧಿಸಲು ವಿವಿಧ ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಿರಂತರ ಬೆಳವಣಿಗೆಯು ತನ್ನ ಹವಾಮಾನ ಗುರಿಗಳು ಮತ್ತು ಇಂಧನ ಭದ್ರತೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ದೇಶಾದ್ಯಂತ ನವೀಕರಿಸಬಹುದಾದ ಇಂಧನ ನಿಯೋಜನೆಯನ್ನು ಹೆಚ್ಚಿಸಲು ಸರ್ಕಾರದ ಕೇಂದ್ರೀಕೃತ ಪ್ರಯತ್ನಗಳನ್ನು ಒತ್ತಿಹೇಳುತ್ತದೆ.

 

*****


(Release ID: 2120782)