ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಗೆ  'ಶ್ರೀಲಂಕಾ ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ

Posted On: 05 APR 2025 2:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇಂದು ಅಧ್ಯಕ್ಷ ದಿಸ್ಸನಾಯಕೆ ಅವರು 'ಶ್ರೀಲಂಕಾ ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ ಮಾಡಿದರು. ಕೃತಜ್ಞತೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ, ಇದು ಭಾರತ ಮತ್ತು ಶ್ರೀಲಂಕಾದ ಜನರ ನಡುವೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಐತಿಹಾಸಿಕ ಬಾಂಧವ್ಯದ ಸಂಕೇತವಾಗಿದೆ ಎಂದರು.

ಈ ಸಂಬಂಧ ಎಕ್ಸ್ ಖಾತೆಯ ವಿವಿಧ ಪೋಸ್ಟ್ ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:

"ಇಂದು ಅಧ್ಯಕ್ಷ ದಿಸ್ಸನಾಯಕೆ ಅವರಿಂದ 'ಶ್ರೀಲಂಕಾ ಮಿತ್ರ ವಿಭೂಷಣ' ಪ್ರಶಸ್ತಿ ಪಡೆದಿರುವುದು ನನಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಈ ಗೌರವ ನನ್ನದು ಮಾತ್ರವಲ್ಲ - ಇದು ಭಾರತದ 1.4 ಶತಕೋಟಿ ಜನರಿಗೆ ಸಲ್ಲಿಸುವ ಗೌರವವಾಗಿದೆ. ಇದು ಭಾರತ ಮತ್ತು ಶ್ರೀಲಂಕಾದ ಜನರ ನಡುವೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಐತಿಹಾಸಿಕ ಸಂಬಂಧಗಳನ್ನು ಸಂಕೇತಿಸುತ್ತದೆ. ಈ ಗೌರವಕ್ಕಾಗಿ ನಾನು ಅಧ್ಯಕ್ಷರಿಗೆ, ಸರ್ಕಾರಕ್ಕೆ ಮತ್ತು ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

@anuradisanayake"

“ஜனாதிபதி திசாநாயக்க அவர்களால் இன்றைய தினம் 'இலங்கை மித்ர விபூஷண்' என்ற விருது எனக்கு வழங்கப்பட்டமை மகத்தான பெருமைக்குரிய விடயமாகும். இந்த உயரிய கௌரவம் எனக்கே மட்டும் உரித்தான ஒன்றல்ல, இந்தியாவின் 1.4 பில்லியன் மக்களுக்கும் கிடைக்கப்பெற்ற உயர் மரியாதையாகும். அத்துடன் இந்திய - இலங்கை மக்களிடையிலான வரலாற்று ரீதியான உறவுகள் மற்றும் ஆழ வேரூன்றிக் காணப்படும் நட்புறவை இது குறித்து நிற்கின்றது. இந்த கௌரவத்துக்காக இலங்கை ஜனாதிபதி, அரசாங்கம் மற்றும் மக்கள் அனைவருக்கும் எனது இதயபூர்வமான நன்றியை தெரிவித்துக்கொள்கின்றேன்.

@anuradisanayake”

 

 

*****


(Release ID: 2119439) Visitor Counter : 12