ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಪಕ್ಷಿ ಜ್ವರ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ಕೋಳಿ ಉದ್ಯಮ ಸಂಪೂರ್ಣವಾಗಿ ಸಹಕಾರ ನೀಡುತ್ತವೆ


ಜೈವಿಕ ಸುರಕ್ಷತಾ ಕ್ರಮಗಳ ತ್ರಿಕೋನ ಕಾರ್ಯತಂತ್ರದ ಅನುಷ್ಠಾನ, ಬಲವರ್ಧಿತ ಕಣ್ಗಾವಲು ಮತ್ತು ಕೋಳಿ ಸಾಕಣೆ ಕೇಂದ್ರಗಳ ಕಡ್ಡಾಯ ನೋಂದಣಿ ಮಾಡಬೇಕು

Posted On: 05 APR 2025 2:44PM by PIB Bengaluru

ದೇಶದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಹಕ್ಕಿ ಜ್ವರ (ಪಕ್ಷಿ ಜ್ವರ) ಕುರಿತು ಚರ್ಚಿಸಲು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿ.ಎ.ಹೆಚ್.ಡಿ) ಏಪ್ರಿಲ್ 4, 2025 ರಂದು ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿತು. ವೈಜ್ಞಾನಿಕ ವಿಶೇಷಜ್ಞರು, ತಜ್ಞರು, ಕೋಳಿ ಉದ್ಯಮ ಪ್ರತಿನಿಧಿಗಳು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸಿಕೊಂಡು ಹಕ್ಕಿ ಜ್ವರದ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ರೋಗವನ್ನು ತಡೆಗಟ್ಟಲು ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ತಂತ್ರಗಳನ್ನು ಅನ್ವೇಷಿಸಲು ಕೇಂದ್ರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ (ಡಿ.ಎ.ಹೆಚ್.ಡಿ) ಕಾರ್ಯದರ್ಶಿ ಶ್ರೀಮತಿ ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಪಕ್ಷಿ ಜ್ವರ ತಡೆಗಟ್ಟಲು ಮತ್ತು ನಿಯಂತ್ರಿಸಲು ಮೂರು-ಕೋನ ಕಾರ್ಯತಂತ್ರವನ್ನು ಕೇಂದ್ರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ (ಡಿ.ಎ.ಹೆಚ್.ಡಿ) ಪಾಲುದಾರರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗಿದೆ. ಇದು ಕೋಳಿ ಸಾಕಣೆ ಕೇಂದ್ರಗಳು ನೈರ್ಮಲ್ಯ ಅಭ್ಯಾಸಗಳನ್ನು ಹೆಚ್ಚಿಸಬೇಕು, ಕೃಷಿ ಪ್ರವೇಶವನ್ನು ನಿಯಂತ್ರಿಸಬೇಕು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕಠಿಣ ಜೈವಿಕ ಭದ್ರತಾ ಶಿಷ್ಟಾಚಾರ(ಪ್ರೋಟೋಕಾಲ್‌)ಗಳನ್ನು ಅನುಸರಿಸಬೇಕು, ರೋಗ ಟ್ರ್ಯಾಕಿಂಗ್ ಮತ್ತು ನಿಯಂತ್ರಣವನ್ನು ಹೆಚ್ಚಿಸಲು ಕೋಳಿ ಸಾಕಣೆ ಕೇಂದ್ರಗಳ ಬಲವರ್ಧಿತ ಕಣ್ಗಾವಲು ಮತ್ತು ಕಡ್ಡಾಯ ನೋಂದಣಿಯನ್ನು ಒಳಗೊಂಡಿರಬೇಕು (ಎಲ್ಲಾ ಕೋಳಿ ಸಾಕಣೆ ಕೇಂದ್ರಗಳು ಒಂದು ತಿಂಗಳೊಳಗೆ ಆಯಾಯ ರಾಜ್ಯ ಪಶುಸಂಗೋಪನಾ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ರಾಜ್ಯ ಸರ್ಕಾರವು ಕೋಳಿ ಉದ್ಯಮದ ಪಾಲುದಾರರನ್ನು ನಿರ್ದೇಶನದೊಂದಿಗೆ 100% ಶಿಷ್ಟಾಚಾರ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದೆ).

ಈ ಸಭೆಯಲ್ಲಿ ಮಾತನಾಡಿದ ಶ್ರೀಮತಿ ಅಲ್ಕಾ ಉಪಾಧ್ಯಾಯ ಅವರು, "ನಮ್ಮ ಕೋಳಿ ಉದ್ಯಮ ವಲಯವನ್ನು ರಕ್ಷಿಸುವುದು ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ನಿರ್ಣಾಯಕವಾಗಿದೆ. ಪಕ್ಷಿ ಜ್ವರ ವಿರುದ್ಧದ ನಮ್ಮ ಹೋರಾಟದಲ್ಲಿ ಕಟ್ಟುನಿಟ್ಟಾದ ಜೈವಿಕ ಭದ್ರತೆ, ವೈಜ್ಞಾನಿಕ ಕಣ್ಗಾವಲು ಮತ್ತು ಜವಾಬ್ದಾರಿಯುತ ಉದ್ಯಮ ಅಭ್ಯಾಸಗಳು ಅತ್ಯಗತ್ಯವಾಗಿವೆ" ಎಂದು ಹೇಳಿದರು. ಹೆಚ್ಚುವರಿಯಾಗಿ, ಪೂರ್ವಭಾವಿ ರೋಗ ಪತ್ತೆ ಮತ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು, ನಿರಂತರವಾಗಿ ಹಾಗೂ ಏಕಾಏಕಿ ಅಪಾಯವನ್ನು ಕಡಿಮೆ ಮಾಡಲು ಮತ್ತು ಕೋಳಿ ಉದ್ಯಮವನ್ನು ರಕ್ಷಿಸಲು ಮುನ್ಸೂಚಕ ಮಾದರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಕೂಡಾ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಭೋಪಾಲ್ ದ ಐಸಿಎಆರ್‌ - ನಿಹ್ಸಾದ್‌ ಸಂಸ್ಥೆ, ಅಭಿವೃದ್ಧಿಪಡಿಸಿದ ಹೆಚ್9ಎನ್2 (ಕಡಿಮೆ ರೋಗಕಾರಕ ಪಕ್ಷಿ ಜ್ವರ) ಲಸಿಕೆಯನ್ನು ಬಳಸಲು ಕೇಂದ್ರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು (ಡಿ.ಎ.ಹೆಚ್.ಡಿ) ಅನುಮತಿಸಿದೆ, ಇದು ಈಗ ವಾಣಿಜ್ಯಿಕವಾಗಿ ಸರ್ವತ್ರ ಬಳಕೆದಾರರಿಗೆ ಲಭ್ಯವಿದೆ. ಎಲ್.ಪಿ.ಎ.ಐ ಲಸಿಕೆಯ ಪರಿಣಾಮಕಾರಿತ್ವವನ್ನು ರಾಷ್ಟ್ರೀಯ ಅಧ್ಯಯನವು ಈಗಾಗಲೇ ಮೌಲ್ಯಮಾಪನ ಮಾಡಿದೆ. ಭಾರತದಲ್ಲಿ ಹೈಲಿ ಪ್ಯಾಥೋಜೆನಿಕ್ ಏವಿಯನ್ ಇನ್ಫ್ಲುಯೆನ್ಸ (ಹೆಚ್.ಪಿ.ಎ.ಐ) ವಿರುದ್ಧ ಲಸಿಕೆಯನ್ನು ಬಳಸಲು ಅನುಮತಿಸುವ ಸಾಧ್ಯತೆಯ ಬಗ್ಗೆಯೂ ಸಭೆಯಲ್ಲಿ ಉತ್ತಮ ರೀತಿಯಲ್ಲಿ ಹಾಗೂ  ವ್ಯಾಪಕವಾಗಿ ಚರ್ಚಿಸಲಾಯಿತುತು. ಕೋಳಿ ಉದ್ಯಮದ ಪ್ರತಿನಿಧಿಗಳು ಸರ್ಕಾರವನ್ನು ತಮ್ಮ ಈ ವಲಯದಲ್ಲಿ ಮತ್ತಷ್ಟು ಆರ್ಥಿಕ ನಷ್ಟವನ್ನು ತಡೆಗಟ್ಟಲು ಲಸಿಕೆಯನ್ನು ಒಂದು ತಂತ್ರವಾಗಿ ಅನ್ವೇಷಿಸುವಂತೆ ಹಾಗೂ ಬಳಕೆಗಾಗಿ ಒದಗಿಸಿಕೊಡಲು ಒತ್ತಾಯಿಸಿದರು. ಪ್ರಸ್ತುತ ಲಭ್ಯವಿರುವ ಹೆಚ್.ಪಿ.ಎ.ಐ ಲಸಿಕೆಗಳು ಬರಡಾದ ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಆದರೆ ವೈರಸ್ ಪಸರಿಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ವೈಜ್ಞಾನಿಕ ತಜ್ಞರು ವಿವರಿಸಿದರು. ಈ ಸಂಕೀರ್ಣತೆಗಳನ್ನು ಗಮನದಲ್ಲಿಟ್ಟುಕೊಂಡು, ನೀತಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಮತ್ತಷ್ಟು ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ ಎಂದು ಸಭೆಯು ಶಿಫಾರಸು ಮಾಡಿತು. ಭಾರತದಲ್ಲಿ ಹೆಚ್.ಪಿ.ಎ.ಐ ಲಸಿಕೆಯ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ವಿವರವಾದ ವಿಜ್ಞಾನ ಆಧಾರಿತ ಮೌಲ್ಯಮಾಪನಗಳನ್ನು ನಡೆಸಲು ಸಭೆಯು ಶಿಫಾರಸು ಮಾಡಿತು. ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸಿ ಸ್ಥಳೀಯ ಹೆಚ್.ಪಿ.ಎ.ಐ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಂಶೋಧನಾ ಪ್ರಯತ್ನಗಳನ್ನು ಸಹ ಈ ಮೂಲಕ ಪ್ರಾರಂಭಿಸಲಾಗಿದೆ.

ಸಭೆಯಲ್ಲಿ ಉನ್ನತ ಪರಿಣತ ಪ್ರಾಣಿ ಆರೋಗ್ಯ ತಜ್ಞರು ಮತ್ತು ನುರಿತ ಕೋಳಿ ಲಸಿಕೆ ತಯಾರಕರು, ಕೋಳಿ ಸಂಘಗಳು ಮತ್ತು ಐಸಿಎಆರ್‌ - ನಿಹ್ಸಾದ್‌ ಸಂಸ್ಥೆ,  ಐಸಿಎಆರ್‌ – ಐವ್ರಿ ಸಂಸ್ಥೆ,  ಐಸಿಎಆರ್‌ - ಕಾರಿ ಸಂಸ್ಥೆ, ಐಸಿಎಆರ್‌ - ನಿವೇದಿ ಸಂಸ್ಥೆ ಮತ್ತು ಐಸಿಎಆರ್‌ - ಪೌಲ್ಟ್ರಿ ಸಂಶೋಧನಾ ನಿರ್ದೇಶನಾಲಯ ಸೇರಿದಂತೆ ಪ್ರಮುಖ ಕೋಳಿ ಉದ್ಯಮರಂಗದ ಪಾಲುದಾರರು ಭಾಗವಹಿಸಿದ್ದರು.

ಭಾರತದಲ್ಲಿ ಹಕ್ಕಿ ಜ್ವರ (ಪಕ್ಷಿ ಜ್ವರ) ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ

ಹಕ್ಕಿ ಜ್ವರ(ಪಕ್ಷಿ ಜ್ವರ)ವು ಪಕ್ಷಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ಹರಡುವ (ವೈರಲ್ ) ಕಾಯಿಲೆಯಾಗಿದ್ದು, ಸಸ್ತನಿಗಳಿಗೆ ಸಾಂದರ್ಭಿಕವಾಗಿ ಹರಡುತ್ತದೆ. 2006 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದಾಗಿನಿಂದ, ಹಲವಾರು ರಾಜ್ಯಗಳಲ್ಲಿ ವಾರ್ಷಿಕವಾಗಿ ಏಕಾಏಕಿ ರೋಗಗಳು ವರದಿಯಾಗಿವೆ. ಈ ವರ್ಷ, ವೈರಸ್ ಅಡ್ಡ-ಜಾತಿ ಪ್ರಸರಣವನ್ನು ತೋರಿಸಿದೆ, ಇದು ಕೋಳಿಗಳ ಮೇಲೆ ಮಾತ್ರವಲ್ಲದೆ ಕೆಲವು ಪ್ರದೇಶಗಳಲ್ಲಿ ಕಾಡು ಪಕ್ಷಿಗಳು ಮತ್ತು ದೊಡ್ಡ ಬೆಕ್ಕುಗಳ ಮೇಲೂ ಪರಿಣಾಮ ಬೀರ ತೊಡಗಿದೆ. ಪ್ರಸ್ತುತ, ದೇಶದಲ್ಲಿ ಜಾರ್ಖಂಡ್, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಈ ಸಾಂಕ್ರಾಮಿಕ ರೋಗದ ಆರು ಸಕ್ರಿಯ ಏಕಾಏಕಿ ಹರಡುವ ವಲಯಗಳು ಉಳಿದಿವೆ.

ಹೆಚ್.ಪಿ.ಎ.ಐ. ಕುರಿತಾಗಿ ಪ್ರಸ್ತುತ ಲಭ್ಯ  ಮಾಹಿತಿ /ಪರಿಸ್ಥಿತಿ (ಜನವರಿ 1, 2025 ರಿಂದ ಏಪ್ರಿಲ್ 4, 2025 ರವರೆಗೆ)

ದೇಶೀಯ ಕೋಳಿ ಸಾಕಣೆ

ಮಾನದಂಡಗಳು

ವಿವರಗಳು

ಬಾಧಿತ ರಾಜ್ಯಗಳು

ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ, ಬಿಹಾರ (ಒಟ್ಟು: 8 ರಾಜ್ಯಗಳು)

ಒಟ್ಟು ತೀವ್ರ ಬಾಧಿತ ಕೇಂದ್ರಗಳ ಸಂಖ್ಯೆ

34

ಪ್ರಸ್ತುತ ಸಕ್ರಿಯ ಬಾಧಿತ ಕೇಂದ್ರಗಳ ಸಂಖ್ಯೆ

(3 ರಾಜ್ಯಗಳು - ಜಾರ್ಖಂಡ್ (ಬೊಕಾರೊ ಮತ್ತು ಪಾಕೂರ್), ತೆಲಂಗಾಣ (ರಂಗ ರೆಡ್ಡಿ, ನಲಗೊಂಡ ಮತ್ತು ಯಾದದ್ರಿ ಭುವನಗಿರಿ ಮತ್ತು ಛತ್ತೀಸ್‌ಗಢ (ಬೈಕುಂಠಪುರ, ಕೊರಿಯಾ)

ಬಾಧಿತ ಕೋಳಿಯೇತರ ಪ್ರಭೇದಗಳು (ಜನವರಿ 1 ರಿಂದ ಏಪ್ರಿಲ್ 4, 2025 ರವರೆಗೆ)

ಬಾಧಿತ ರಾಜ್ಯ

ಪ್ರಭೇದಗಳ ಹೆಸರು

ಮಹಾರಾಷ್ಟ್ರ

ಹುಲಿ, ಚಿರತೆ, ರಣಹದ್ದು, ಕಾಗೆ, ಗಿಡುಗ ಮತ್ತು ಬೆಳ್ಳಕ್ಕಿ

ಮಧ್ಯ ಪ್ರದೇಶ

ಸಾಕು ಬೆಕ್ಕು

ರಾಜಸ್ಥಾನ

ಡೆಮೊಯಿಸೆಲ್ ಕ್ರೇನ್ , ಬಣ್ಣದ ಕೊಕ್ಕರೆ

ಬಿಹಾರ

ಕಾಗೆ

ಗೋವಾ

ಕಾಡು ಬೆಕ್ಕು

ಪಕ್ಷಿ ಜ್ವರ(ಇನ್ಫ್ಲುಯೆನ್ಸ)ವನ್ನು ನಿಯಂತ್ರಿಸಲು ಬಳಸುವ ಸಮಗ್ರ ವಿಧಾನ ಹೀಗಿದೆ

ಕೇಂದ್ರ  ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ (ಡಿ.ಎ.ಹೆಚ್.ಡಿ) ಜಾರಿಗೆ ತಂದಿದೆ. ಇದು ಭಾರತದಲ್ಲಿ ಹೈಲಿ ಪ್ಯಾಥೋಜೆನಿಕ್ ಏವಿಯನ್ ಇನ್ಫ್ಲುಯೆನ್ಸ (ಹೆಚ್.ಪಿ.ಎ.ಐ) ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಮಾಡಿರು ವ ಸರಣಿ ಉಪಕ್ರಮಗಳಾಗಿವೆ. ದೇಶವು ಕಟ್ಟುನಿಟ್ಟಾದ ಶಿಷ್ಟಾಚಾರದಲ್ಲಿ ಕಠಿಣ ನಿಯಮ ಮೂಲಕ "ಪತ್ತೆ ಮತ್ತು ಕೊಲ್ಲುವ" ನೀತಿಯನ್ನು ಅನುಸರಿಸುತ್ತದೆ, ಇದರಲ್ಲಿ ಸೋಂಕಿತ ಪಕ್ಷಿಗಳನ್ನು ಕೊಲ್ಲುವುದು, ಚಲನೆಯನ್ನು ನಿರ್ಬಂಧಿಸುವುದು ಮತ್ತು ಏಕಾಏಕಿ ಹರಡಿದ 1 ಕಿ.ಮೀ ವ್ಯಾಪ್ತಿಯೊಳಗಿನ ಪ್ರದೇಶಗಳನ್ನು ಸೋಂಕುರಹಿತಗೊಳಿಸುವುದು ಸೇರಿವೆ. ವಲಸೆ ಹಕ್ಕಿಗಳು ಹೆಚ್ಚಿನ ಅಪಾಯವನ್ನುಂಟುಮಾಡುವ ಚಳಿಗಾಲದಲ್ಲಿ, ಹೆಚ್ಚಿನ ಕಣ್ಗಾವಲು ಮತ್ತು ಸಿದ್ಧತೆಯೊಂದಿಗೆ ನಿಯಂತ್ರಣ ಕ್ರಮಗಳ ಕುರಿತು ಪ್ರತಿದಿನ ವರದಿ ಮಾಡಲು ರಾಜ್ಯಗಳಿಗೆ ಸೂಚಿಸಲಾಗಿದೆ. ಹೆಚ್.ಪಿ.ಎ.ಐ.ಗಾಗಿ ಕಣ್ಗಾವಲು ಕೋಳಿಯೇತರ ಪ್ರಭೇದಗಳಿಗೂ ವಿಸ್ತರಿಸಲಾಗಿದೆ, ಪರೀಕ್ಷಿಸಲ್ಪಟ್ಟ ದನಗಳು, ಮೇಕೆಗಳು ಮತ್ತು ಹಂದಿಗಳಿಂದ ನಕಾರಾತ್ಮಕ ಫಲಿತಾಂಶಗಳು ಬಂದಿವೆ. ಸಂಭಾವ್ಯ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಜಾಗತಿಕ ಪ್ರಯತ್ನದಲ್ಲಿ, ಹೆಚ್5ಎನ್1 ಪ್ರತ್ಯೇಕತೆಗಳು ಮತ್ತು ಸಂಬಂಧಿತ ಮಾದರಿಗಳ ಅನುಕ್ರಮ ಮಾಹಿತಿ(ಡೇಟಾ)ಯನ್ನು ಅಂತರರಾಷ್ಟ್ರೀಯ ಜಾಲಗಳೊಂದಿಗೆ ಭಾರತವು ಈಗಾಗಲೇ ಹಂಚಿಕೊಂಡಿದೆ. ರಾಷ್ಟ್ರೀಯ ಜಂಟಿ ಏಕಾಏಕಿ ಪ್ರತಿಕ್ರಿಯೆ ತಂಡದ ಜೊತೆಗೆ ಕೇಂದ್ರ ತಂಡಗಳನ್ನು ಏಕಾಏಕಿ ತುರ್ತಾಗಿ ನಿರ್ವಹಿಸಲು ನಿಯೋಜಿಸಲಾಗುತ್ತಿದೆ ಮತ್ತು ರಾಜ್ಯ ಪಶುಸಂಗೋಪನಾ ಇಲಾಖೆಗಳು ಮತ್ತು ಆರೋಗ್ಯ ಮತ್ತು ವನ್ಯಜೀವಿ ಇಲಾಖೆಗಳು ಸೇರಿದಂತೆ ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ನಿಯಮಿತ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಭಾರತವು ಪಕ್ಷಿ ಜ್ವರದ ಏಕಾಏಕಿ ತಡೆಗಟ್ಟಲು ಪರೀಕ್ಷೆ ಮತ್ತು ನಿರ್ಮೂಲನ ನೀತಿಯನ್ನು ನಿರಂತರವಾಗಿ ಅನುಸರಿಸುತ್ತದೆ. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿಯಲ್ಲಿ, ಸರ್ಕಾರವು ಬಾಧಿತ ಪಕ್ಷಿಗಳು, ನಾಶವಾದ ಮೊಟ್ಟೆಗಳು ಮತ್ತು ಆಹಾರಕ್ಕಾಗಿ ಪೀಡಿತ ರೈತರಿಗೆ ಪರಿಹಾರವನ್ನು ನೀಡುತ್ತದೆ, ಈ ಕಾರ್ಯಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು 50:50 ರೀತಿಯಲ್ಲಿ ಹಂಚಿಕೊಳ್ಳುತ್ತವೆ.

 

*****


(Release ID: 2119273) Visitor Counter : 24