ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಗೌರವ ನಮನ
Posted On:
27 MAR 2025 2:33PM by PIB Bengaluru
ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವ ನಮನ ಸಲ್ಲಿಸಿದರು. ದುರ್ಬಲ ವರ್ಗದವರ ಅಭ್ಯುದಯಕ್ಕಾಗಿ ಹಾಗೂ ಸಮಾನತೆ, ಸಹಾನುಭೂತಿ ಮತ್ತು ನ್ಯಾಯವನ್ನು ಉತ್ತೇಜಿಸಲು ಶ್ರೀ ಠಾಕೂರ್ ಅವರ ಕಾರ್ಯವನ್ನು ಶ್ಲಾಘಿಸಿರುವ ಶ್ರೀ ಮೋದಿ ಅವರು, ಮತುವ ಧರ್ಮ ಮಹಾ ಮೇಳ 2025 ಕ್ಕೆ ಶುಭ ಹಾರೈಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಅವರ ಸೇವೆ ಮತ್ತು ಆಧ್ಯಾತ್ಮಿಕತೆಯೆಡೆಗೆ ಆಧ್ಯತೆಗೆ ವಂದನೆಗಳು, ಇದರಿಂದಾಗಿ ಅವರು ಅಸಂಖ್ಯಾತ ಜನರ ಹೃದಯದಲ್ಲಿ ನೆಲೆಸಿದ್ದಾರೆ. ದುರ್ಬಲವರ್ಗದವರ ಉನ್ನತಿಗೆ ಹಾಗೂ ಸಮಾನತೆ, ಸಹಾನುಭೂತಿ ಮತ್ತು ನ್ಯಾಯಕ್ಕಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಪಶ್ಚಿಮ ಬಂಗಾಳದ ಠಾಕೂರ್ ನಗರ ಮತ್ತು ಬಾಂಗ್ಲಾದೇಶದ ಒರಂಕಡಿಗೆ ಭೇಟಿ ನೀಡಿ ಅವರಿಗೆ ಗೌರವ ನಮನ ಸಲ್ಲಿಸಿದ್ದು, ಆ ಭೇಟಿಯನ್ನು ನಾನು ಎಂದಿಗೂ ಮರೆಯುವುದಿಲ್ಲ.
ಮತುವ ಸಮುದಾಯ ವೈಭವಯುತ ಸಂಸ್ಕೃತಿಯನ್ನು ಪ್ರದರ್ಶಿಸುವ #MatuaDharmaMahaMela2025 ಕ್ಕೆ ನನ್ನ ಶುಭ ಹಾರೈಕೆಗಳು. ನಮ್ಮ ಸರ್ಕಾರವು ಮತುವಾ ಸಮುದಾಯದ ಕಲ್ಯಾಣಕ್ಕಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಮುಂದಿನ ದಿನಗಳಲ್ಲಿ ಅವರ ಯೋಗಕ್ಷೇಮಕ್ಕಾಗಿ ಅವಿರತವಾಗಿ ಶ್ರಮಿಸುವುದನ್ನು ಮುಂದುವರಿಸಲಿದ್ದೇವೆ. ಜೈ ಹರಿಬೋಲ್!
@aimms_org”
"শ্রী শ্রী হরিচাঁদ ঠাকুরের জন্মজয়ন্তীতে শ্রদ্ধাঞ্জলি। তিনি সেবা ও আধ্যাত্মিকতার ওপর জোর দিয়েছিলেন। তাই, অগুণতি মানুষের হৃদয়ে তিনি বেঁচে আছেন। প্রান্তিক মানুষের উন্নয়ন এবং সাম্য, করুণা ও বিচার সুনিশ্চিত করার লক্ষ্যে তিনি জীবন উৎসর্গ করেছিলেন। তাঁর প্রতি শ্রদ্ধাজ্ঞাপনের উদ্দেশ্যে পশ্চিমবঙ্গের ঠাকুরনগর ও বাংলাদেশের ওড়াকান্দিতে আমার সফর আমি ভুলব না।
#MatuaDharmaMahaMela2025 এর প্রতি শুভেচ্ছা রইল। মতুয়া সংস্কৃতির গৌরবোজ্জ্বল দিক গুলিকে এই মেলা তুলে ধরবে। মতুয়া সমাজের কল্যানের লক্ষ্যে সরকার বিভিন্ন উদ্যোগ নিয়েছেন। আগামীতেও আমরা তাঁদের ভাল'র জন্যে অনলসভাবে কাজ করে যাব।
জয় হরিবোল!
@aimms_org"
*****
(Release ID: 2115734)
Visitor Counter : 25
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam