ಪ್ರಧಾನ ಮಂತ್ರಿಯವರ ಕಛೇರಿ
ಕ್ರ್ಯೂ-9 (Crew-9) ಗಗನಯಾತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
ನಿಜವಾಗಿಯೂ ಪರಿಶ್ರಮ ಎಂದರೆ ಏನು ಎಂಬುದನ್ನು ಸುನೀತಾ ವಿಲಿಯಮ್ಸ್ ಮತ್ತು ಕ್ರ್ಯೂ -9 ಗಗನಯಾತ್ರಿಗಳು ಮತ್ತೊಮ್ಮೆ ನಮಗೆ ತೋರಿಸಿದ್ದಾರೆ: ಪ್ರಧಾನಮಂತ್ರಿ
Posted On:
19 MAR 2025 11:31AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ ಕ್ರ್ಯೂ-9 ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರ್ಯೂ-9 ಗಗನಯಾತ್ರಿಗಳ ಧೈರ್ಯ, ದೃಢಸಂಕಲ್ಪ ಮತ್ತು ಬಾಹ್ಯಾಕಾಶ ಅನ್ವೇಷಣೆಗೆ ನೀಡಿದ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಅಂತರಿಕ್ಷ ಅನ್ವೇಷಣೆಯು ಮಾನವ ಸಾಮರ್ಥ್ಯದ ಮಿತಿಗಳನ್ನು ಮೀರಿ, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ಸಾಕಾರಗೊಳಿಸುವ ಧೈರ್ಯವನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಅವರ ಹೇಳಿದರು. ಪ್ರಥಮ ಪ್ರವರ್ತಕಿ ಮತ್ತು ಗಟ್ಟಿಗಿತ್ತಿಯಾಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿ ಜೀವನದುದ್ದಕ್ಕೂ ಈ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ X ಸಂದೇಶದಲ್ಲಿ ಹೀಗೆ ಹೇಳಿದ್ದಾರೆ.
“ಮರಳಿ ಸ್ವಾಗತ, #Crew9! ಭೂಮಿ ನಿಮ್ಮ ಅನುಪಸ್ಥಿತಿಯನ್ನು ತುಂಬಾ ಅನುಭವಿಸಿತು.
ಗಗಯನಾತ್ರಿಗಳ ಈ ಪರೀಕ್ಷೆಯು ದೃಢತೆ, ಧೈರ್ಯ ಮತ್ತು ಅಪರಿಮಿತ ಮಾನವ ಸ್ಫೂರ್ತಿಯ ಪರೀಕ್ಷೆಯಾಗಿದೆ. ಸುನೀತಾ ವಿಲಿಯಮ್ಸ್ ಮತ್ತು #Crew9 ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೇನು ಎಂಬುದನ್ನು ನಮಗೆ ತೋರಿಸಿ ಕೊಟ್ಟಿದ್ದಾರೆ. ಅಗಾಧವಾದ ಅಪರಿಚಿತತೆಯ ಮುಂದೆ ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತ ಸ್ಫೂರ್ತಿ ನೀಡುತ್ತದೆ.
ಬಾಹ್ಯಾಕಾಶ ಅನ್ವೇಷಣೆಯು ಮಾನವ ಸಾಮರ್ಥ್ಯದ ಮಿತಿಗಳನ್ನು ಮೀರುವುದು, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ಸಾಕಾರಗೊಳಿಸುವ ಸ್ಥೈರ್ಯವನ್ನು ಹೊಂದಿರುವುದು. ಒಬ್ಬ ಪ್ರವರ್ತಕಿ ಮತ್ತು ಸಾಧಕಿಯಾಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಅವರ ಸುರಕ್ಷಿತ ಮರಳುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ದಣಿವರಿಯದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ನಂಬಲಾಗದಷ್ಟು ಹೆಮ್ಮೆಯಿದೆ. ನಿಖರತೆಯು ಉತ್ಸಾಹವನ್ನು ಸಂಧಿಸಿದಾಗ ಮತ್ತು ತಂತ್ರಜ್ಞಾನವು ದೃಢತೆಯನ್ನು ಹೊಂದಿದ್ದರೆ ಏನಾಗುತ್ತದೆ ಎಂಬುದನ್ನು ಅವರು ಪ್ರದರ್ಶಿಸಿದ್ದಾರೆ.
@Astro_Suni
@NASA”
*****
(Release ID: 2112753)
Visitor Counter : 31
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam