ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಂಸತ್ತಿನ ಪ್ರಶ್ನೆ: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಾಗರೋತ್ತರ ವಿದ್ಯಾರ್ಥಿವೇತನ

Posted On: 18 MAR 2025 2:08PM by PIB Bengaluru

ಕಳೆದ ಹತ್ತು ವರ್ಷಗಳಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಒದಗಿಸಿದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನದ (ಎನ್ಒಎಸ್) ವಿವರಗಳು ಈ ಕೆಳಗಿನಂತಿವೆ:

ಕ್ರಮ ಸಂ.

ವರ್ಷ

ಕಳೆದ ಹತ್ತು ವರ್ಷಗಳಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಲು ಎನ್ಒಎಸ್ ಅಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಂಖ್ಯೆ

 

 

ಪರಿಶಿಷ್ಟ ಜಾತಿ

ಪರಿಶಿಷ್ಟ ಪಂಗಡ

1.

2014-15

159

20

2.

2015-16

50

15

3.

2016-17

108

16

4.

2017-18

178

20

5.

2018-19

97

20

6.

2019-20

97

20

7.

2020-21

90

20

8.

2021-22

122

20

9.

2022-23

119

20

10.

2023-24

117

23

ಒಟ್ಟು

1037

194

* ಹಿಂದಿನ ವರ್ಷಗಳಲ್ಲಿ ಖಾಲಿ ಇದ್ದ ಸ್ಥಾನಗಳನ್ನು ಮುಂದಕ್ಕೆ ಕೊಂಡೊಯ್ಯಲಾಯಿತು.

ಪ್ರಸ್ತುತ 263 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮತ್ತು 39 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಕ್ರಿಯೆಯ ಸರಳೀಕರಣ, ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸುವಂತಹ ಹೊಸ ಉಪಕ್ರಮಗಳು; ಪೊಲೀಸ್ ಪರಿಶೀಲನೆಯನ್ನು ತೆಗೆದುಹಾಕುವುದು ಮತ್ತು ಬಾಕಿ ಇರುವ ಪ್ರಕರಣ / ಅಪರಾಧಕ್ಕೆ ಶಿಕ್ಷೆಯಾಗದಿರುವ ಬಗ್ಗೆ ಸ್ವಯಂ ಘೋಷಣೆ ಪಡೆಯುವುದು; ಕ್ಯೂಎಸ್ ಶ್ರೇಯಾಂಕ ಆಧಾರಿತ ಆಯ್ಕೆ ಕಾರ್ಯವಿಧಾನದ ಪರಿಚಯ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕುಟುಂಬ ಆದಾಯ ಮಿತಿ, ಸ್ಲಾಟ್ ಗಳ ಸಂಖ್ಯೆ ಮತ್ತು ಆರ್ಥಿಕ ಸಹಾಯದ ಮೊತ್ತವನ್ನು ಹೆಚ್ಚಿಸಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.

 

*****


(Release ID: 2112278) Visitor Counter : 24


Read this release in: English , Urdu , Hindi , Tamil