ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಸಿಂಫನಿ ಆಫ್ ಇಂಡಿಯಾ

Posted On: 11 MAR 2025 3:32PM by PIB Bengaluru

ʻವೇವ್ಸ್ʼ ಶೃಂಗಸಭೆಯಲ್ಲಿ ಬೃಹತ್‌  ಸಂಗೀತ ಸ್ಪರ್ಧೆ

 

ಪರಿಚಯ

ʻವಿಶ್ವ ದೃಶ್ಯಶ್ರಾವ್ಯ ಮತ್ತು ಮನರಂಜನಾ ಶೃಂಗಸಭೆʼ (ಆಡಿಯೊ ವಿಷುಯಲ್ ಅಂಡ್ ಎಂಟರ್‌ಟೈನ್‌ಮೆಂಟ್‌ ಸಮಿಟ್‌-ʻವೇವ್ಸ್ʼ) ಅಡಿಯಲ್ಲಿ ʻಸಿಂಫನಿ ಆಫ್ ಇಂಡಿಯಾ ಚಾಲೆಂಜ್ʼ ಕಾರ್ಯಕ್ರಮವು ದೇಶಾದ್ಯಂತದ ಅತ್ಯುತ್ತಮ ಸಂಗೀತ ಪ್ರತಿಭೆಗಳನ್ನು ಅನಾವರಣಗೊಳಿಸಲಿದೆ. ಈ ಅಸಾಧಾರಣ ಸಂಗೀತ ಪ್ರಯಾಣಕ್ಕೆ ವೇದಿಕೆ ಸಜ್ಜಾಗಿದೆ. ಆರಂಭದಲ್ಲಿ 212 ಸಂಗೀತಗಾರರು ಈ ಚಾಲೆಂಜ್‌ಗೆ ನೋಂದಾಯಿಸಿಕೊಂಡಿದ್ದು, ಕಠಿಣ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಅಗ್ರ 80 ಅಸಾಧಾರಣ ಶಾಸ್ತ್ರೀಯ ಮತ್ತು ಜಾನಪದ ಕಲಾವಿದರನ್ನು ಮುಂದೆ ತಂದಿದೆ, ಅವರು ಈಗ ʻಗ್ರ್ಯಾಂಡ್ ಗಾಲಾʼ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದಾರೆ.

ʻವಿಶ್ವ ದೃಶ್ಯಶ್ರಾವ್ಯ ಮತ್ತು ಮನರಂಜನಾ ಶೃಂಗಸಭೆʼ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನೆ (ಎಂ&ಇ) ವಲಯದ ಸಂಯೋಜಿಸುವ ಮೂಲಕ ಒಂದು ವಿಶಿಷ್ಟ ಕೇಂದ್ರಬಿಂದುವಾಗಿದೆ. ಈ ಕಾರ್ಯಕ್ರಮವು ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದ್ದು, ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಹಾಗೂ ಮತ್ತು ವಿಶ್ವದ ಪ್ರತಿಭೆಗಳೊಂದಿಗೆ ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಈ ಶೃಂಗಸಭೆಯು 2025ರ ಮೇ 1ರಿಂದ 4 ರವರೆಗೆ ಮುಂಬೈನ ʻಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ʼ ಮತ್ತು ʻಜಿಯೋ ವರ್ಲ್ಡ್ ಗಾರ್ಡರ್ನ್ಸ್‌ʼನಲ್ಲಿ ನಡೆಯಲಿದೆ. ʻಬ್ರಾಡ್ಕಾಸ್ಟಿಂಗ್ ಮತ್ತು ಇನ್ಫೋಟೈನ್ಮೆಂಟ್ʼ, ʻಎವಿಜಿಸಿ-ಎಕ್ಸ್ಆರ್ʼ, ʻಡಿಜಿಟಲ್ ಮೀಡಿಯಾ ಮತ್ತು ನಾವಿನ್ಯತೆʼ ಹಾಗೂ ʻಫಿಲ್ಮ್ಸ್-ವೇವ್ಸ್ʼ ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಇದು ಗಮನ ಕೇಂದ್ರೀಕರಿಸಲಿದೆ. ಈ ಕಾರ್ಯಕ್ರಮವು ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಕಟೆಂಟ್‌ ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸಲಿದೆ.

ʻಸಿಂಫನಿ ಆಫ್ ಇಂಡಿಯಾ ಚಾಲೆಂಜ್ʼ ಕಾರ್ಯಕ್ರಮವನು ʻಪ್ರಸಾರʼ ಮತ್ತು ಮಾಹಿತಿ-ಮನರಂಜನೆ (ಇನ್ಫೋಟೈನ್ಮೆಂಟ್) ಎಂಬ ಮೊದಲ ಸ್ತಂಭದ ಅಡಿಯಲ್ಲಿ ಬರುತ್ತದೆ. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡಲಿದೆ. ಇಲ್ಲಿ ಜನರು ವ್ಯಾಪಕ ಶ್ರೇಣಿಯ ಕಲಾ ಪ್ರಕಾರಗಳ ವಿವಿಧ ಸಂಗೀತ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದ್ದಾರೆ. ಇದು ಸಂಗೀತ ಪ್ರಿಯರ ವೈವಿಧ್ಯಮಯ ಅಭಿರುಚಿಗಳನ್ನು ನಿಜವಾಗಿಯೂ ಆಚರಿಸುವ ಒಂದು ಕಾರ್ಯಕ್ರಮವಾಗಿದೆ.

ಅರ್ಹತಾ ಮಾನದಂಡಗಳು

  • ವಯಸ್ಸು: ಪಾಲ್ಗೊಳ್ಳುವರು 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಾಗಿರಬೇಕು
  • ಪೌರತ್ವ: ಕೇವಲ ಭಾರತೀಯ ಪೌರರಿಗಷ್ಟೇ ಭಾಗವಹಿಸಲು ಅವಕಾಶ
  • ವಿಭಾಗಗಳು: ಈ ಕಾರ್ಯಕ್ರಮವು ಏಕ ಗಾಯಕರು (ಸೋಲೊ ವೋಕಲಿಸ್ಟ್‌), ಗುಂಪು ಗಾಯಕರು (ವೋಕಲ್‌ ಗ್ರೂಪ್‌) ಮತ್ತು ಸಂಗೀತ ಸಾಧನಗಳಲ್ಲಿ ವೈಶಿಷ್ಟ್ಯತೆ ಹೊಂದಿರುವ ಸೋಲೊ ಏಕ ವಾದಕರಿಗೆ (ಸೋಲೊಯಿಸ್ಟ್‌) ಈ ಸ್ಪರ್ಧೆ ತೆರೆದಿತ್ತು

ʻಸಿಂಫನಿ ಆಫ್ ಇಂಡಿಯಾʼದಲ್ಲಿ ಪಾಲ್ಗೊಳ್ಳಲು, ಭಾಗವಹಿಸುವವರು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗಿತ್ತು:

ಸಲ್ಲಿಕೆ ಮಾರ್ಗಸೂಚಿಗಳು:

ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಕೆಗಳಿಗಾಗಿ ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ:

  1. ಆಡಿಷನ್ ಸಾಮಗ್ರಿ:
  • ಪ್ರತಿಯೊಬ್ಬ ಸ್ಪರ್ಧಿಯು ತಮ್ಮ ವಿಶಿಷ್ಟ ಶೈಲಿ, ಸಂಗೀತ ಪರಿಣತಿ ಮತ್ತು ಸಂಕೀರ್ಣ ಸಂಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ರೆಕಾರ್ಡ್ ಮಾಡಿದ ಪ್ರದರ್ಶನವನ್ನು ಸಲ್ಲಿಸಬೇಕು. ಗಾಯಕರು ಯಾವುದೇ ಕೃತಿಸ್ವಾಮ್ಯ ಉಲ್ಲಂಘನೆಯಿಂದ ಮುಕ್ತವಾಗಿ ಮೂಲ ಸಂಯೋಜನೆಗಳನ್ನು ಸಲ್ಲಿಸಬೇಕು.
  1. ಕಾರ್ಯನಿರ್ವಹಣೆ ಅವಧಿ:
  • ಪ್ರತಿ ಸಂಗೀತದ ತುಣುಕು ಗರಿಷ್ಠ 2 ನಿಮಿಷಗಳ ಅವಧಿಯನ್ನು ಹೊಂದಿರಬೇಕು.
  1. ವೈವಿಧ್ಯತೆ:
  • ಸಲ್ಲಿಸಿದ ತುಣುಕು ವಿಭಿನ್ನವಾಗಿದೆ ಮತ್ತು ಪ್ರದರ್ಶಕನ ಬಹುಮುಖತೆ ಮತ್ತು ವ್ಯಾಪ್ತಿಯನ್ನು ಪ್ರದರ್ಶಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.
  1. ಸಲ್ಲಿಕೆ ಸ್ವರೂಪ:
  • ರೆಕಾರ್ಡಿಂಗ್ ಗಳನ್ನು mp4 ಸ್ವರೂಪದಲ್ಲಿ ಸಲ್ಲಿಸಬೇಕು.
  • ರೆಕಾರ್ಡಿಂಗ್ ಗಳು 48 kHz, 16-ಬಿಟ್ ಸ್ವರೂಪದಲ್ಲಿರಬೇಕು.

 

ನೋಂದಣಿ ಪ್ರಕ್ರಿಯೆ:

  • ಆನ್ ಲೈನ್ ನೋಂದಣಿ: ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಂದಣಿ
    ಲಿಂಕ್ ಮೂಲಕ ಎಲ್ಲಾ ನೋಂದಣಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗಿದೆ.
  • ಆಡಿಷನ್ ಸಾಮಗ್ರಿ ಸಲ್ಲಿಕೆ: ಮೇಲೆ ತಿಳಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಆಡಿಷನ್ ಸಾಮಗ್ರಿಗಳನ್ನು ಅದೇ ವೇದಿಕೆಯ ಮೂಲಕ ಸಲ್ಲಿಸಲಾಗಿದೆ.

ಸ್ಪರ್ಧೆಯ ಸುತ್ತುಗಳು:

  • ಪ್ರಾಥಮಿಕ ಸುತ್ತು:

ಕಠಿಣ ಆನ್‌ಲೈನ್ ಆಡಿಷನ್ ಪ್ರಕ್ರಿಯೆಯಲ್ಲಿ, ಸ್ಪರ್ಧಿಗಳನ್ನು ಅವರು ಸಲ್ಲಿಸಿದ ರೆಕಾರ್ಡಿಂಗ್‌ಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಯಿತು. ಅತ್ಯುತ್ತಮ 40-50 ಸಂಗೀತಗಾರರನ್ನು ಆಯ್ಕೆ ಮಾಡಿದ ನಂತರ, ʻಸಿಂಫನಿʼಯನ್ನು ನಾಲ್ಕು ವಲಯಗಳಲ್ಲಿ ರಚಿಸಲಾಯಿತು ಮತ್ತು ಸ್ಪರ್ಧೆಯು ಒಂದು ಗುಂಪಾಗಿ ಮುಂದುವರಿಯಿತು.

  • ಸೆಮಿಫೈನಲ್ ಮತ್ತು ಫೈನಲ್ ಸುತ್ತುಗಳು:

ಅತ್ಯುತ್ತಮ 8 ʻಸಿಂಫನಿʼ ಗುಂಪುಗಳನ್ನು ಸೆಮಿಫೈನಲ್‌ಗೆ ಆಯ್ಕೆ ಮಾಡಲಾಯಿತು, 3 ವಿಜೇತರು ಮತ್ತು 2 ರನ್ನರ್ ಅಪ್ ಅನ್ನು ಆಯ್ಕೆ ಮಾಡಲಾಯಿತು.

  • ಅಂತಿಮ ವಿಜೇತರು:

ಒಟ್ಟು 3 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಐವರು ಉನ್ನತ ಶ್ರೇಣಿಯ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

  • ಪ್ರಸಾರ:

ಪ್ರದರ್ಶನಗಳು ಮತ್ತು ಫಲಿತಾಂಶಗಳು ಸೇರಿದಂತೆ ಇಡೀ ಸ್ಪರ್ಧೆಯನ್ನು ದೂರದರ್ಶನ ಮತ್ತು ಅದರ ಪ್ರಾದೇಶಿಕ ವಾಹಿನಿಗಳಲ್ಲಿ 26 ಕಂತುಗಳ ಸರಣಿಯಾಗಿ ಪ್ರಸಾರ ಮಾಡಲಾಗುತ್ತದೆ.

  • ಪ್ರಾದೇಶಿಕ ಪ್ರದರ್ಶನಗಳು:

ಪ್ರಾದೇಶಿಕ ಪ್ರದರ್ಶನಗಳಿಗೆ ಅರ್ಹತೆ ಪಡೆದ ಸ್ಪರ್ಧಿಗಳು ಪ್ರಾದೇಶಿಕ ಕೇಂದ್ರ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾರೆ, ಅಲ್ಲಿ ಅತ್ಯಂತ ಭರವಸೆಯ ಪ್ರದರ್ಶನಕಾರರನ್ನು ಗುರುತಿಸಲಾಗುವುದು.

  • ಗ್ರ್ಯಾಂಡ್ ಫಿನಾಲೆ:

ಪ್ರಾದೇಶಿಕ ಪ್ರದರ್ಶನಗಳಿಂದ ಆಯ್ಕೆಯಾದ ಉನ್ನತ ಶ್ರೇಣಿಯ ಪ್ರದರ್ಶನಕಾರರು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸುತ್ತಾರೆ.

 

ʻಸಿಂಫನಿ ಆಫ್ ಇಂಡಿಯಾ ಚಾಲೆಂಜ್ʼ ಕಾರ್ಯಕ್ರಮವು ಸೃಜನಶೀಲತೆ ಮತ್ತು ಸಂಗೀತದ ಗಡಿಗಳನ್ನು ವಿಸ್ತರಿಸುವ ಜೊತೆಗೆ ಸಮುದಾಯ, ನಾವೀನ್ಯತೆ ಮತ್ತು ಬೆಳವಣಿಗೆಯ ಪ್ರಜ್ಞೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯುವ ಪ್ರತಿಭೆಗಳನ್ನು ಪೋಷಿಸಲು ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಹೊಸ ಸಂಗೀತ ಅನುಭವಗಳನ್ನು ನೀಡಲು ʻವೇವ್ಸ್ʼ ಪ್ರಮುಖ ವೇದಿಕೆಯಾಗಲಿದೆ.

ದೂರದರ್ಶನವು ಈ ಸ್ಪರ್ಧಾ ಕಾರ್ಯಕ್ರಮವನ್ನು ಅನ್ನು ʻಮಹಾವೀರ್ ಜೈನ್ ಫಿಲ್ಮ್ಸ್ʼ ಸಹಯೋಗದೊಂದಿಗೆ ನಿರ್ಮಿಸುತ್ತಿದೆ ಮತ್ತು ಹಿರಿಯ ಧಾರಾವಾಹಿ ನಿರ್ದೇಶಕಿ ಶ್ರುತಿ ಅನಿಂದಿತಾ ವರ್ಮಾ ಇದನ್ನು ನಿರ್ದೇಶಿಸುತ್ತಿದ್ದಾರೆ. ಖ್ಯಾತ ಪ್ರತಿಭೆ ಗೌರವ್ ದುಬೆ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಪದ್ಮಶ್ರೀ ಸೋಮ ಘೋಷ್, ಗಾಯಕಿ ಶ್ರುತಿ ಪಾಠಕ್ ಮತ್ತು ಜಾನಪದ ಗಾಯಕ ಸ್ವರೂಪ್ ಖಾನ್ ತೀರ್ಪುಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ಮಾರ್ಗದರ್ಶಕರಾದ ತಾಳವಾದ್ಯಗಾರ (ಪರ್ಕ್ಯೂಷನಿಸ್ಟ್‌) ತೌಫಿಕ್ ಖುರೇಷಿ, ಪದ್ಮಶ್ರೀ ಫ್ಲುಟಿಸ್ಟ್ ರೋನು ಮಜುಂದಾರ್, ಪಿಟೀಲು ವಾದಕಿ ಸುನೀತಾ ಭುಯಾನ್, ತಾಳವಾದ್ಯಗಾರ (ಪರ್ಕ್ಯೂಷನಿಸ್ಟ್‌) ಪಂಡಿತ್ ದಿನೇಶ್, ಶ್ರೀ ತನ್ಮಯ್ ಬೋಸ್, ಲೆಸ್ಲಿ ಲೂಯಿಸ್ ಮತ್ತು ಫ್ಲೂಟಿಸ್ಟ್ ರಾಕೇಶ್ ಚೌರಾಸಿಯಾ ಈ ಸರಣಿಯ ತೀರ್ಪುಗಾರರಾಗಿದ್ದಾರೆ.

ಏಕವ್ಯಕ್ತಿ ಪ್ರದರ್ಶನದಿಂದ ಪ್ರಾರಂಭಿಸಿ, ಅವುಗಳನ್ನು ನಾಲ್ಕು ಗುಂಪುಗಳಾಗಿ ಮತ್ತು ನಂತರ ಎಂಟು ಗುಂಪುಗಳಾಗಿ ಮತ್ತು ಅಂತಿಮವಾಗಿ 10 ಸಂಗೀತಗಾರರಾಗಿ ವಿಲೀನಗೊಳಿಸಲಾಗಿದೆ.  ಅವರು ಮೂಲ ಸಂಗೀತವನ್ನು ರಚಿಸುತ್ತಾರೆ ಮತ್ತು ಸಂಗೀತ ಪ್ರತಿಭೆಯ ಅದ್ಭುತ ʻಸಿಂಫೋನಿʼಯನ್ನು ರಚಿಸಲು ಹಳೆಯ ಜನರನ್ನು ಮರುಸೃಷ್ಟಿಸುತ್ತಾರೆ. ತಲಾ 10 ಸಂಗೀತಗಾರರಲ್ಲಿ ಅಂತಿಮ ಅಗ್ರ 3 ಮಂದಿ ʻಮೆಗಾ ಸಿಂಫನಿʼಯನ್ನು ರಚಿಸುತ್ತಾರೆ, ಅಲ್ಲಿ ಅವರು ಪ್ರತಿಷ್ಠಿತ ʻವೇವ್ಸ್ʼ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶವನ್ನು ಪಡೆಯುತ್ತಾರೆ. ಸರಣಿಯ ಮೂರು ವಿಜೇತ ತಂಡವು ಉತ್ಸಾಹಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಲಿದ್ದು, ಅವರಿಗೆ ಸ್ಪರ್ಧಿಸಲು ಮಾತ್ರವಲ್ಲದೆ ಹೊಸ ಶೈಲಿಗಳು, ಪ್ರಕಾರಗಳು ಮತ್ತು ಸಂಗೀತ ಪ್ರಭಾವಗಳನ್ನು ಪರಿಚಯಿಸಲು ಅವಕಾಶವನ್ನು ನೀಡುತ್ತದೆ.

ಸಾಮಾನ್ಯ ಷರತ್ತುಗಳು:

  1. ತೀರ್ಪುಗಾರರ ನಿರ್ಧಾರಗಳು: ಸೆಲೆಬ್ರಿಟಿ ಜ್ಯೂರಿ ಮತ್ತು ಪ್ರಾದೇಶಿಕ ತೀರ್ಪುಗಾರರ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಎಲ್ಲಾ ಭಾಗವಹಿಸುವವರು ಇದಕ್ಕೆ ಬದ್ಧರಾಗಿರುತ್ತಾರೆ.
  2. ಅನುಮತಿಗಳು: ಭಾಗವಹಿಸುವವರು ತಮ್ಮ ಪ್ರದರ್ಶನಗಳನ್ನು ಸಲ್ಲಿಸುವ ಮೂಲಕ, ಪ್ರಸಾರ ಭಾರತಿ ನಿರ್ವಹಿಸುವ ಎಲ್ಲಾ ವೇದಿಕೆಗಳಲ್ಲಿ ತಮ್ಮ ಕೃತಿಗಳನ್ನು ಪ್ರಸಾರ ಮಾಡುವ ಮತ್ತು ಉತ್ತೇಜಿಸುವ ಹಕ್ಕನ್ನು ಪ್ರಸಾರ ಭಾರತಿಗೆ ನೀಡುತ್ತಾರೆ.
  3. ವೆಚ್ಚಗಳು: ರಾಜ್ಯ ಮಟ್ಟದ ಆಡಿಷನ್‌ಗಳು ಮತ್ತು ಅನ್ವಯವಾದರೆ ನಂತರದ ಯಾವುದೇ ಸುತ್ತುಗಳಲ್ಲಿ ಭಾಗವಹಿಸುವವರು ತಮ್ಮ ಪ್ರಯಾಣ ಮತ್ತು ವಸತಿ ವೆಚ್ಚಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ.

ಕೊನೆಯದಾಗಿ

ಭಾರತೀಯ ಸಂಗೀತ ಸಂಪ್ರದಾಯಗಳು ಮತ್ತು ಸಮಕಾಲೀನ ವ್ಯಾಖ್ಯಾನಗಳ ಮೇಲೆ ಆಳವಾದ ಗಮನವನ್ನು ಕೇಂದ್ರೀಕರಿಸುವುದರೊಂದಿಗೆ, ʻಸಿಂಫನಿ ಆಫ್ ಇಂಡಿಯಾʼ ಸಂಗೀತಗಾರರಿಗೆ ತಮ್ಮ ಕಲಾತ್ಮಕತೆಯನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಲು ಪ್ರವರ್ತಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಶಾಸ್ತ್ರೀಯ ಭಾರತೀಯ ಸಂಗೀತದ ಪರಂಪರೆಯನ್ನು ಆಧುನಿಕ ಆವಿಷ್ಕಾರದೊಂದಿಗೆ ವಿಲೀನಗೊಳಿಸುವ ಮೂಲಕ, ಈ ಸ್ಪರ್ಧೆಯು ಹೊಸ ಪೀಳಿಗೆಯ ಸಂಗೀತಗಾರರನ್ನು ಪ್ರೇರೇಪಿಸಲು ಮತ್ತು ಭಾರತದ ಸಂಗೀತ ಪರಂಪರೆಯನ್ನು ಜಾಗತಿಕ ವೇದಿಕೆಗೆ ಏರಿಸಲು ಪ್ರಯತ್ನಿಸುತ್ತದೆ.

ಉಲ್ಲೇಖ

ಪಿಡಿಎಫ್ ನೋಡಲು ಇಲ್ಲಿ ಕ್ಲಿಕ್ ಮಾಡಿ:

 

*****


(Release ID: 2110560) Visitor Counter : 10