ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇ-ಸ್ಪೋರ್ಟ್ಸ್‌ ಪಂದ್ಯಾವಳಿ


ಗೇಮರ್‌ ಗಳಿಗಾಗಿ ಉನ್ನತ ಸಮರಭೂಮಿ

Posted On: 11 MAR 2025 6:51PM by PIB Bengaluru

ಗೇಮರ್‌ ಗಳಿಗಾಗಿ ಉನ್ನತ ಸಮರಭೂಮಿ

ಪರಿಚಯ

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಇ-ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಪ್ರಮುಖ ಪಾತ್ರ ವಹಿಸುತ್ತದೆ, ಉನ್ನತ ಆಟಗಾರರನ್ನು ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ಒಗ್ಗೂಡಿಸುತ್ತದೆ. ಇ-ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (ಇ ಎಸ್‌ ಎಫ್‌ ಐ) ಆಯೋಜಿಸಿರುವ ಇ-ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2025, ವಿಶ್ವ ಧ್ವನಿ- ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಪ್ರಮುಖ ಅಂಶವಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಬಲದೊಂದಿಗೆ, ಇದು ನಾವೀನ್ಯತೆಯನ್ನು ಪ್ರದರ್ಶಿಸಲು, ಪ್ರತಿಭೆಯನ್ನು ಬೆಳೆಸಲು ಮತ್ತು ಭಾರತದಲ್ಲಿ ಇ-ಸ್ಪೋರ್ಟ್ ಭವಿಷ್ಯವನ್ನು ರೂಪಿಸಲು ಅಸಾಧಾರಣ ವೇದಿಕೆಯನ್ನು ಒದಗಿಸುತ್ತದೆ.

ವಿಶ್ವ ಧ್ವನಿ- ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದ ಏಕೀಕರಣಕ್ಕೆ ಒಂದು ವಿಶಿಷ್ಟ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಜಾಗತಿಕ ಎಂ&ಇ ಉದ್ಯಮದ ಗಮನವನ್ನು ಭಾರತದೆಡೆಗೆ ಸೆಳೆಯುವ ಮತ್ತು ಅದರೊಂದಿಗೆ ಭಾರತೀಯ ಎಂ&ಇ ವಲಯದ ಪ್ರತಿಭೆಯನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ. 

ಈ ಶೃಂಗಸಭೆಯು ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು ಎಂಬ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ, ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸುತ್ತದೆ.

ಇಸ್ಪೋರ್ಟ್ಸ್ ವೇವ್ಸ್ ನ 2ನೇ ಸ್ತಂಭವಾದ ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ)ನ ಪ್ರಮುಖ ಅಂಶವಾಗಿದೆ. 15.02.2025 ರ ಹೊತ್ತಿಗೆ, ಒಟ್ಟು 35,008 ಭಾಗವಹಿಸುವವರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇಫುಟ್‌ಬಾಲ್ ಮತ್ತು ವಿಶ್ವ ಕ್ರಿಕೆಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಸಿಸಿ) ಅನ್ನು ಒಳಗೊಂಡ ಇಸ್ಪೋರ್ಟ್ಸ್ ಸ್ಪರ್ಧೆಗಳನ್ನು ತಂಡಗಳಲ್ಲಿ ನಡೆಸಲಾಗುತ್ತದೆ, ಪ್ರತಿಯೊಂದೂ ಅತ್ಯಾಕರ್ಷಕ ಪಂದ್ಯಗಳನ್ನು ಪ್ರಸ್ತುತಪಡಿಸುತ್ತವೆ, ಅಂತಿಮ ಚಾಂಪಿಯನ್‌ ಗಳು ವೇವ್ಸ್ ನಲ್ಲಿ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಘಟನಾವಳಿ

ವೇವ್ಸ್ ಇಸ್ಪೋರ್ಟ್ಸ್‌ ಚಾಂಪಿಯನ್‌ಶಿಪ್ 2025 (WESC2025) ನಾಲ್ಕು ಆನ್‌ಲೈನ್ ಅರ್ಹತಾ ಹಂತಗಳನ್ನು ಒಳಗೊಂಡಿತ್ತು, ಇಫುಟ್‌ಬಾಲ್ ಮತ್ತು ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್ (ಡಬ್ಲ್ಯುಸಿಸಿ) ಹಂತಗಳು ಈಗಾಗಲೇ ಪೂರ್ಣಗೊಂಡಿವೆ. ಪ್ರತಿ ಹಂತದ ವಿಜೇತರು ಈಗ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸುತ್ತಾರೆ, ಇದನ್ನು ಇ ಎಸ್‌ ಎಫ್‌ ಐ ನಿರ್ಧರಿಸಿದಂತೆ ಆನ್‌ಲೈನ್ ಅಥವಾ ಆಫ್‌ಲೈನ್‌‌ ನಲ್ಲಿ ನಡೆಸಬಹುದು. ಗಮನಾರ್ಹವಾಗಿ, ಹಂತ 1 ರಲ್ಲಿ ಇಫುಟ್‌ಬಾಲ್ ನಲ್ಲಿ ಪವನ್ ಕಂಪೆಲ್ಲಿ (ಅಲಿಯಾಸ್‌ "MrTomboy") ಈಗಾಗಲೇ ಗೆಲುವು ಸಾಧಿಸಿದ್ದಾರೆ ಮತ್ತು ಏಷ್ಯನ್ ಇಸ್ಪೋರ್ಟ್ಸ್ ಗೇಮ್ಸ್ 2024 (AEG2024) ನಲ್ಲಿ ಇಫುಟ್‌ಬಾಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಗ್ರ್ಯಾಂಡ್ ಫಿನಾಲೆ ಅಂತಿಮ ಚಾಂಪಿಯನ್‌ ಗಳನ್ನು ನಿರ್ಧರಿಸುವ ಅಂತಿಮ ಕಾರ್ಯಕ್ರಮವಾಗಿದೆ.

* ಅಗತ್ಯವಿರುವಂತೆ ಪಂದ್ಯಾವಳಿಯ ಸ್ವರೂಪವನ್ನು ಮಾರ್ಪಡಿಸುವ ವಿವೇಚನಾಧಿಕಾರವನ್ನು ಇ ಎಸ್‌ ಎಫ್‌ ಐ ಹೊಂದಿದೆ.

ಮಾರ್ಗಸೂಚಿಗಳು

ಭಾಗವಹಿಸುವವರು ನೋಂದಣಿ ಸಮಯದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ ಮತ್ತು ಪಂದ್ಯಾವಳಿಯ ಉದ್ದಕ್ಕೂ ಅವುಗಳನ್ನು ಅನುಸರಿಸುವುದನ್ನು ಮುಂದುವರಿಸುತ್ತಾರೆ:

ಬಹುಮಾನಗಳು

WESC25 ಪಂದ್ಯಾವಳಿಯ ಪ್ರತಿ ಹಂತದ ವಿಜೇತರು ಮುಖ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಬಹುಮಾನ ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  1. ಮುಖ್ಯ ಕಾರ್ಯಕ್ರಮಕ್ಕೆ ಅರ್ಹತೆ: ಪ್ರತಿ ಹಂತದ ವಿಜೇತರು ಇ ಎಸ್‌ ಎಫ್‌ ಐ ನಿಗದಿಪಡಿಸಿದ ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಲಭ್ಯತೆ ಮತ್ತು ಭಾಗವಹಿಸುವಿಕೆಯನ್ನು ದೃಢೀಕರಿಸಬೇಕು, ಇ ಎಸ್‌ ಎಫ್‌ ಐ ಆದೇಶಿಸಿದ ಯಾವುದೇ ಪ್ರಕ್ರಿಯೆಗಳನ್ನು ಅನುಸರಿಸಬೇಕು. ವಿಜೇತರು ಭಾಗವಹಿಸಲು ಸಾಧ್ಯವಾಗದಿದ್ದರೆ, ಮುಂದಿನ ಅತ್ಯುತ್ತಮ ಶ್ರೇಯಾಂಕಿತ ತಂಡ ಅಥವಾ ಆಟಗಾರ ಅವರ ಸ್ಥಾನವನ್ನು ಪಡೆಯುತ್ತಾರೆ.
  2. WESC25 ರ ಆಚೆಗಿನ ಅವಕಾಶಗಳು: ವಿಜೇತ ತಂಡ ಅಥವಾ ಆಟಗಾರ(ರು) ಸೂಕ್ತವೆಂದು ಪರಿಗಣಿಸಿದರೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಹೆಚ್ಚುವರಿ ಇ-ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇ ಎಸ್‌ ಎಫ್‌ ಐ ಅವಕಾಶ ನೀಡಬಹುದು.
  3. ತರಬೇತಿ ಮತ್ತು ಮಾರ್ಗದರ್ಶನ: ವಿಜೇತ ಆಟಗಾರರು ಅಥವಾ ತಂಡಗಳು ಇ ಎಸ್‌ ಎಫ್‌ ಐ ಏರ್ಪಡಿಸಿದ ತರಬೇತಿ ಅಥವಾ ಮಾರ್ಗದರ್ಶನ ಅವಧಿಗಳಿಗೆ ಲಭ್ಯವಿರಬೇಕು.
  4. ಹೆಚ್ಚುವರಿ ಕಾರ್ಯಕ್ರಮ ಅವಕಾಶಗಳು: ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇ ಎಸ್‌ ಎಫ್‌ ಐ ನ ವಿವೇಚನೆಯಿಂದ ವಿಜೇತ ತಂಡಗಳು ಅಥವಾ ಆಟಗಾರರನ್ನು ಇತರ ಇ-ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಹ್ವಾನಿಸಬಹುದು.

WESC2025 ಗಾಗಿ, ಮುಖ್ಯ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯುವ ಪ್ರತಿ ಹಂತದ ವಿಜೇತರಿಗೆ ವಿಮಾನ ಟಿಕೆಟ್‌ ಗಳು, ಬೋರ್ಡಿಂಗ್ ಮತ್ತು ವಸತಿ ವೆಚ್ಚವನ್ನು ಭರಿಸಲಾಗುತ್ತದೆ.

ಮುಕ್ತಾಯ

ಭಾರತದ ಬೆಳೆಯುತ್ತಿರುವ ಇ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಇ-ಸ್ಪೋರ್ಟ್ಸ್ ಚಾಂಪಿಯನ್‌ ಶಿಪ್ ಒಂದು ಮಹತ್ವದ ಹೆಜ್ಜೆಯಾಗಿದ್ದು, ನಾವೀನ್ಯತೆ ಮತ್ತು ಪ್ರತಿಭೆಯೊಂದಿಗೆ ಸ್ಪರ್ಧೆಯನ್ನು ಸಂಯೋಜಿಸುತ್ತದೆ. ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಭಾಗವಾಗಿ, ಇದು ಜಾಗತಿಕ ಇ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಭಾಗವಹಿಸುವವರಿಗೆ ಅತ್ಯಾಕರ್ಷಕ ಅವಕಾಶಗಳೊಂದಿಗೆ, WESC25 ಮುಂದಿನ ಪೀಳಿಗೆಯ ಇ-ಸ್ಪೋರ್ಟ್ಸ್ ಚಾಂಪಿಯನ್‌ ಗಳನ್ನು ಪ್ರೇರೇಪಿಸಲು ಮತ್ತು ಭಾರತದಲ್ಲಿ ಮನರಂಜನಾ ಉದ್ಯಮದ ಭವಿಷ್ಯವನ್ನು ರೂಪಿಸಲು ಸಜ್ಜಾಗಿದೆ.

ಉಲ್ಲೇಖಗಳು

 

Click here to see PDF.

 

 

*****

 

 


(Release ID: 2110551) Visitor Counter : 11


Read this release in: English , Urdu , Hindi , Tamil