ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

XR ಕ್ರಿಯೇಟರ್ ಹ್ಯಾಕಥಾನ್ ಮುಂದಿನ ಪೀಳಿಗೆಯ ವಿಸ್ತೃತ ರಿಯಾಲಿಟಿ ಇನ್ನೋವೇಟರ್ ಗಳನ್ನು ಪ್ರದರ್ಶಿಸಿತು


ಈ ಕಾರ್ಯಕ್ರಮವು ಚಂದ್ರಯಾನದ ವರ್ಚುವಲ್ ಅನುಭವ ಮತ್ತು ಗೇಮಿಂಗ್ ವಾರ್ಫೇರ್ ಸಿಮ್ಯುಲೇಶನ್ ಅನ್ನು ಪ್ರದರ್ಶಿಸುವ ಆಕರ್ಷಕ VR ಚಟುವಟಿಕೆಯ ಸೆಷನ್ ಒಳಗೊಂಡಿತ್ತು

Posted On: 13 FEB 2025 6:26PM by PIB Bengaluru

ವೇವ್ಲ್ಯಾಪ್ಸ್ ಮತ್ತು ಭಾರತ್ XR ಸಂಸ್ಥೆಗಳು ಆಯೋಜಿಸಿದ್ದ XR ಕ್ರಿಯೇಟರ್ ಹ್ಯಾಕಥಾನ್ನ ದೆಹಲಿ ಆವೃತ್ತಿಯು ಫೆಬ್ರವರಿ 8ರಂದು ನೋಯ್ಡಾದ 91 ಸ್ಪ್ರಿಂಗ್ಬೋರ್ಡ್ನಲ್ಲಿ ಯಶಸ್ವಿಯಾಗಿ ನಡೆಯಿತು. WAVE ಸಮ್ಮಿಟ್ ಉಪಕ್ರಮದ ಭಾಗವಾದ ಈ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಉತ್ಸಾಹಿಗಳು ಎಕ್ಸ್ಟೆಂಡೆಡ್ ರಿಯಾಲಿಟಿ (XR) ತಂತ್ರಜ್ಞಾನದ ಅತ್ಯಾಧುನಿಕ ವಿಧಾನಗಳನ್ನು ಪರಿಶೀಲಿಸಿದರು. WAVES ನ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬೆಂಬಲದೊಂದಿಗೆ ನಡೆದ ಈ ಕಾರ್ಯಕ್ರಮವು, ಭಾರತವು ಇಮ್ಮರ್ಸಿವ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ದೆಹಲಿಯ ತಾಂತ್ರಿಕ ಸಮುದಾಯದ ಬದ್ಧತೆಯನ್ನು ಎತ್ತಿ ತೋರಿಸಿತು.

ದೆಹಲಿ ಸಭೆಯಲ್ಲಿ, ಖ್ಯಾತ ಉದ್ಯಮ ತಜ್ಞರಾದ ಶ್ರೀಮತಿ ಛವಿ ಗಾರ್ಗ್, ಶ್ರೀ ಅಂಕಿತ್ ರಾಘವ್ ಮತ್ತು ಶ್ರೀ ಸಿದ್ಧಾರ್ಥ ಸತ್ಯಾರ್ಥಿ ಅವರು AR ಮತ್ತು VR ತಂತ್ರಜ್ಞಾನಗಳ ಕುರಿತು ಸಮಗ್ರ ಸೆಷನ್ ಗಳನ್ನು ನಡೆಸಿಕೊಟ್ಟರು. ಭಾಗವಹಿಸಿದವರು ಯೂನಿಟಿ ಮತ್ತು ಅನ್ರಿಯಲ್ ಎಂಜಿನ್ ಗಳ ಬಗ್ಗೆ ವಿವರವಾದ ಮಾಹಿತಿ ಹಾಗೂ AR/VR ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವ ಪ್ರಾಯೋಗಿಕ ಜ್ಞಾನವನ್ನು ಪಡೆದರು. ಈ ಅವಧಿಗಳು ವಿವಿಧ ಕೈಗಾರಿಕಾ ಬಳಕೆಗಳನ್ನು ಎತ್ತಿ ತೋರಿಸಿದವು, ಇದು ಹಾಜರಿದ್ದವರಿಗೆ ಮೌಲ್ಯಯುತವಾದ ನೈಜ-ಪ್ರಪಂಚದ ದೃಷ್ಟಿಕೋನಗಳನ್ನು ಒದಗಿಸಿತು.

ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ನಿರ್ದೇಶಕರಾದ ಶ್ರೀ ಅಶುತೋಷ್ ಮೊಹ್ಲೆ ಅವರ ಉಪಸ್ಥಿತಿ. ಅವರು WAVES ನಲ್ಲಿ ನೋಡಲ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಯವರ ಭಾಗವಹಿಸುವಿಕೆಯು ಭಾರತದ ಕ್ರಿಯೇಟರ್ ಆರ್ಥಿಕತೆಯನ್ನು ಪೋಷಿಸಲು ಮತ್ತು ತಾಂತ್ರಿಕ ಇನೋವೇಷನ್ ಗಳನ್ನು ಬೆಂಬಲಿಸಲು ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿತು.

ಈ ಕಾರ್ಯಕ್ರಮವು ಒಂದು ವಿಶೇಷವಾದ ವಿಆರ್ ಚಟುವಟಿಕೆಯನ್ನು ಒಳಗೊಂಡಿತ್ತು. ಇದರಲ್ಲಿ ಭಾಗವಹಿಸಿದವರು, XR ಕ್ರಿಯೇಟರ್ ಹ್ಯಾಕಥಾನ್ನಲ್ಲಿ ತಮ್ಮ ಸಹವರ್ತಿಗಳಿಂದ ಅಭಿವೃದ್ಧಿಪಡಿಸಲ್ಪಟ್ಟ ಅತ್ಯಾಧುನಿಕ ಯೋಜನೆಗಳನ್ನು ಕಣ್ತುಂಬಿಕೊಂಡರು. ಚಂದ್ರಯಾನದ ವರ್ಚುವಲ್ ಅನುಭವ, ನವೀನ ಗೇಮಿಂಗ್ ವಾರ್ಫೇರ್ ಸಿಮ್ಯುಲೇಶನ್, ಮತ್ತು ಗಮನಾರ್ಹವಾದ ವಿಆರ್ ಪ್ರವಾಸೋದ್ಯಮ ಅಪ್ಲಿಕೇಶನ್ನಂತಹ ತಲ್ಲೀನಗೊಳಿಸುವ ಪ್ರದರ್ಶನಗಳು ಭಾರತದ XR ಸಮುದಾಯದ ವಿವಿಧ ಸಾಮರ್ಥ್ಯಗಳನ್ನು ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದವು.

ಅರೆಕ್ಸಾ ಸಂಸ್ಥೆಯ ಸಹ-ಸಂಸ್ಥಾಪಕಿ ಮತ್ತು XR ಕ್ರಿಯೇಟರ್ ಹ್ಯಾಕಥಾನ್ನ ಸಹ-ಆಯೋಜಕರಾದ ಶ್ರೀಮತಿ ಛವಿ ಗಾರ್ಗ್ ಅವರು XR ತಂತ್ರಜ್ಞಾನದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಾ, "XR ತಂತ್ರಜ್ಞಾನವು ವೇಗವಾಗಿ ವಿಕಸನಗೊಳ್ಳುತ್ತಿದೆ ಮತ್ತು ವೆಬ್, ಅಪ್ಲಿಕೇಶನ್ಗಳು ಮತ್ತು AI/ML ನಂತಹ ಇತರ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿದಾಗ ಅದರ ಪೂರ್ಣ ಸಾಮರ್ಥ್ಯವನ್ನು ತಲುಪುತ್ತದೆ" ಎಂದು ಹೇಳಿದರು.

"ಸರ್ಕಾರ ಮತ್ತು ಕೈಗಾರಿಕಾ ಪಾಲುದಾರರ ಈ ಉಪಕ್ರಮಗಳು XR ಉದ್ಯಮದಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಭಾರತದಲ್ಲೇ ಸೃಷ್ಟಿಸಲು ಮತ್ತು ಜಗತ್ತಿಗೆ ಪ್ರದರ್ಶಿಸಲು ಒಂದು ವೇದಿಕೆಯನ್ನು ಸೃಷ್ಟಿಸುತ್ತಿವೆ," ಎಂದು WAVES ನ ಕೈಗಾರಿಕಾ ಸಂಘದ ಪಾಲುದಾರ ಮತ್ತು XR ಕ್ರಿಯೇಟರ್ ಹ್ಯಾಕಥಾನ್ನ ಸಹ-ಆಯೋಜಕರಾದ ವೇವ್ಲ್ಯಾಪ್ಸ್ನ CEO ಅಶುತೋಷ್ ಕುಮಾರ್ ಹೇಳಿದರು.

ಈ ಕಾರ್ಯಕ್ರಮವು ಮಹತ್ವದ ಮಾಧ್ಯಮ ಪ್ರಚಾರವನ್ನು ಪಡೆಯಿತು, ಡಿಡಿ ನ್ಯೂಸ್, ಆಲ್ ಇಂಡಿಯಾ ರೇಡಿಯೋ ಮತ್ತು ವಿವಿಧ ಇತರ ಮಾಧ್ಯಮ ವೇದಿಕೆಗಳ ಪ್ರತಿನಿಧಿಗಳು ಕಾರ್ಯಕ್ರಮದ ವಿವರಗಳನ್ನು ವರದಿ ಮಾಡಿದರು. ನಿರತ ಚಟುವಟಿಕೆಗಳ ಯಶಸ್ವಿ ಸಂಘಟನೆ ಭಾಗವಹಿಸುವವರ ಪರಸ್ಪರ ಕ್ರಿಯೆ ಮತ್ತು ಕಲಿಕೆಯ ಅನುಭವಗಳನ್ನು ಮತ್ತಷ್ಟು ಹೆಚ್ಚಿಸಿತು.

ದೆಹಲಿ ಸಭೆಯು ವಿಸ್ತಾರವಾದ XR ಕ್ರಿಯೇಟರ್ ಹ್ಯಾಕಥಾನ್ ಯೋಜನೆಯ ಭಾಗವಾಗಿದೆ, ಇದನ್ನು ಕೈಗಾರಿಕಾ ಸಹಭಾಗಿ ವೇವ್ಲ್ಯಾಪ್ಸ್, ಭಾರತ್ XR ಮತ್ತು XDG ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಈ ಹ್ಯಾಕಥಾನ್ 250 ಕ್ಕೂ ಹೆಚ್ಚು ನಗರಗಳಿಂದ 2,200 ಕ್ಕೂ ಮೀರಿದ ನೋಂದಣಿಗಳನ್ನು ಪಡೆದು, ಭಾರತದ ಅತಿದೊಡ್ಡ VR/AR ಹ್ಯಾಕಥಾನ್ ಎಂಬ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದೆ. ಪ್ರಸ್ತುತ ಈ ಉಪಕ್ರಮವು ಹಂತ 3 ರಲ್ಲಿ ಮುಂದುವರೆಯುತ್ತಿದೆ, ಇದರಲ್ಲಿ ಶ್ರೇಷ್ಠ 40 ತಂಡಗಳು ಅಂತಿಮ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ, ವಿವಿಧ ವಿಷಯಾಧಾರಿತ ನವೀನ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ.

ವೇವ್ ಸಮ್ಮಿಟ್ ಬಗ್ಗೆ:

ವೇವ್ ಸಮ್ಮಿಟ್ ಒಂದು ಪ್ರಮುಖ ಯೋಜನೆಯಾಗಿದ್ದು, ಭಾರತವು ಸೃಜನಶೀಲ ತಂತ್ರಜ್ಞಾನಗಳಲ್ಲಿ ಸಾಧಿಸಿರುವ ಅಭಿವೃದ್ಧಿಯನ್ನು ಸಂಭ್ರಮಿಸುತ್ತದೆ. ಈ ಉಪಕ್ರಮವು ಇಮ್ಮರ್ಸಿವ್ ತಂತ್ರಜ್ಞಾನ ವಲಯದಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಕ್ರಿಯೇಟರ್ ಗಳು, ಉದ್ಯಮದ ಪ್ರಮುಖರು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸುತ್ತದೆ.

XR ಕ್ರಿಯೇಟರ್ ಹ್ಯಾಕಥಾನ್ ಬಗ್ಗೆ:

XR ಕ್ರಿಯೇಟರ್ ಹ್ಯಾಕಥಾನ್ ಒಂದು ರಾಷ್ಟ್ರವ್ಯಾಪಿ ಉಪಕ್ರಮವಾಗಿದ್ದು, ಎಕ್ಸ್ಟೆಂಡೆಡ್ ರಿಯಾಲಿಟಿ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ವೇವ್ಲ್ಯಾಪ್ಸ್, XDG ಮತ್ತು ಭಾರತ್ XR, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಇದನ್ನು ಆಯೋಜಿಸಿದ್ದು, ಭಾರತದಾದ್ಯಂತ ಸೃಜನಶೀಲ ಮನಸ್ಸುಗಳನ್ನು ಒಗ್ಗೂಡಿಸಿ ಇಮ್ಮರ್ಸಿವ್ ತಂತ್ರಜ್ಞಾನಗಳ ಭವಿಷ್ಯವನ್ನು ರೂಪಿಸುತ್ತಿದೆ.

 

*****


(Release ID: 2103095) Visitor Counter : 24