ರಕ್ಷಣಾ ಸಚಿವಾಲಯ
azadi ka amrit mahotsav

ಏರೋ ಇಂಡಿಯಾ 2025


ಭಾರತೀಯ ನೌಕಾ ವಾಯುಯಾನವು 'ಆತ್ಮನಿರ್ಭರ'ದತ್ತ ಸಾಗುತ್ತಿದೆ

Posted On: 09 FEB 2025 8:01PM by PIB Bengaluru

ಭಾರತೀಯ ನೌಕಾಪಡೆಯು 'ಆತ್ಮನಿರ್ಭರ'ದ ಉದ್ದೇಶವನ್ನು ಮುನ್ನಡೆಸಿದೆ, ಇದರಲ್ಲಿ ಅದು ಖರೀದಿದಾರರ ನೌಕಾಪಡೆಯಿಂದ ಬಿಲ್ಡರ್ಸ್ (ನಿರ್ಮಾಣ ಮಾಡುವ ) ನೌಕಾಪಡೆಯಾಗಿ ರೂಪಾಂತರಗೊಂಡಿದೆ, ಭಾರತೀಯ ಶಿಪ್ ಯಾರ್ಡ್ ಗಳಲ್ಲಿ 60 ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ನೌಕಾಪಡೆಯ ಅವಿಭಾಜ್ಯ ಅಂಗವಾಗಿರುವ ಭಾರತೀಯ ನೌಕಾ ವಾಯುಯಾನವೂ ಹಾದಿಯಲ್ಲಿ ಸ್ಥಿರತೆಯಿಂದ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲು “ಆತ್ಮ ನಿರ್ಭರ ಭಾರತೀಯ ನೌಕಾ ವಾಯುಯಾನ –ತಾಂತ್ರಿಕ ಮಾರ್ಗಸೂಚಿ 2047ನ್ನು ರೂಪಿಸಲಾಗಿದೆ ಮತ್ತು ಏರೋ ಇಂಡಿಯಾ 2025 ರ ಸಮಯದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025 ರ ದ್ವೈವಾರ್ಷಿಕ ಕಾರ್ಯಕ್ರಮವು ಬಳಕೆದಾರರು, ಆರ್ &ಡಿ ಸಂಸ್ಥೆಗಳು, ಶಿಕ್ಷಣ ತಜ್ಞರು, ಉದ್ಯಮ ಪಾಲುದಾರರು, ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ (ಸ್ಟಾರ್ಟ್ಅಪ್ಗಳಿಗೆ) ವಾಯುಯಾನ ಕ್ಷೇತ್ರದ ಮೂಲಕ 2047 ರ ವೇಳೆಗೆ 'ವಿಕ್ಷಿತ್ ಭಾರತ್' ರಾಷ್ಟ್ರೀಯ ದೃಷ್ಟಿಕೋನಕ್ಕೆ ಸಂಬಂಧಿಸಿ ಸಂವಹನ ನಡೆಸಲು ಮತ್ತು ಸಾಮೂಹಿಕ ಕೊಡುಗೆ ನೀಡಲು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ನೌಕಾ ವಾಯುಯಾನಕ್ಕೆ ತನ್ನ ಭವಿಷ್ಯದ ಅವಶ್ಯಕತೆಗಳನ್ನು ಪ್ರಸ್ತುತಪಡಿಸಲು ಮತ್ತು ಯಾವುದೇ ನೌಕಾ ವಾಯುಯಾನ ವೇದಿಕೆಯಲ್ಲಿ ಮೂಲಭೂತವಾಗಿ ಅಗತ್ಯವಿರುವ ಮೂರು ಎಸ್ - ಸಿಸ್ಟಮ್ಸ್, ಸ್ಟ್ರಕ್ಚರ್ಸ್ ಮತ್ತು ಸಾಫ್ಟ್ವೇರ್ಗೆ (ವ್ಯವಸ್ಥೆ, ರಚನೆ ಮತ್ತು ಸಾಫ್ಟ್ವೇರ್) ಸಂಬಂಧಿಸಿದಂತೆ ಅವರು ಏನು ನೀಡಬೇಕಾಗಿದೆ ಎಂಬುದನ್ನು ಪ್ರದರ್ಶಿಸಲು ಉದ್ಯಮಕ್ಕೆ ವೇದಿಕೆಯನ್ನು ಒದಗಿಸುತ್ತದೆ.

ಭಾರತೀಯ ನೌಕಾಪಡೆಯು ಮುಖ್ಯ ಭೂಭಾಗದಿಂದ ದೂರದಲ್ಲಿರುವ ಆಳ ಸಮುದ್ರಗಳು ಮತ್ತು ವಿಶಾಲವಾದ ಸಾಗರಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ, ಭಾರತೀಯ ನೌಕಾಪಡೆಯ ವಾಯುಯಾನ ವೇದಿಕೆಗಳಿಗೆ ಹೆಚ್ಚಿನ ಗೋಚರತೆ ಇಲ್ಲ. ಏರೋ ಇಂಡಿಯಾ 2025 ಅನ್ನು ಸ್ಥಿರ ಪ್ರದರ್ಶನದ ಭಾಗವಾಗಿ ಪ್ರಸ್ತುತ ಭಾರತೀಯ ನೌಕಾಪಡೆ ನಿರ್ವಹಿಸುತ್ತಿರುವ ವಿವಿಧ ರೀತಿಯ ನೌಕಾ ವಿಮಾನಗಳನ್ನು ಪ್ರದರ್ಶಿಸಲು ಮತ್ತು ಸಾಮಾನ್ಯ ಜನರಿಗೆ ಪರಿಚಯಿಸಲು ಒಂದು ಅವಕಾಶವಾಗಿ ಬಳಸಲಾಗುತ್ತಿದೆ. ಇದರಲ್ಲಿ ಮಿಗ್ 29 ಕೆ 4 ನೇ ತಲೆಮಾರಿನ ವಾಹಕ ಯುದ್ಧ ವಿಮಾನ, ಕಮೋವ್ 31,  ವಾಯುಗಾಮಿ ಮುನ್ನೆಚ್ಚರಿಕೆ ಹೆಲಿಕಾಪ್ಟರ್, ಸೀಕಿಂಗ್ 42 ಬಿ ಮತ್ತು ಎಂಎಚ್ 60 ಆರ್ ಜಲಾಂತರ್ಗಾಮಿ ನಿರೋಧಿ ಹಾಗು  ಹಡಗು ನಿರೋಧಿ ಹೆಲಿಕಾಪ್ಟರ್ಗಳು ಸೇರಿವೆ.

ಇದಲ್ಲದೆ, ಭಾರತೀಯ ನೌಕಾಪಡೆಯು ಲಘು ಯುದ್ಧ ವಿಮಾನಗಳನ್ನು (ನೌಕಾಪಡೆ) ಪ್ರದರ್ಶನ ಪ್ರದೇಶದಲ್ಲಿ ಪ್ರದರ್ಶಿಸಲಿದೆ. ಈ ವಿಮಾನವನ್ನು ಏರೋನಾಟಿಕಲ್ ಡಿಸೈನ್ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿದೆ ಮತ್ತು ಎಚ್ಎಎಲ್ ತಯಾರಿಸಿದೆ. ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಲ್ಲಿ ಎಲ್ಸಿಎ (ನೌಕಾಪಡೆ) ಯಶಸ್ವಿಯಾಗಿ ಇಳಿಸಿರುವುದು ಭಾರತವನ್ನು ಡೆಕ್ ಆಧಾರಿತ ಯುದ್ಧ ವಿಮಾನವನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ, ಪರೀಕ್ಷಿಸುವ ಮತ್ತು ತಯಾರಿಸುವ ಸಾಮರ್ಥ್ಯವಿರುವ  ಕೆಲವೇ  ರಾಷ್ಟ್ರಗಳ ತಂಡಕ್ಕೆ  ಏರಿಸಿದೆ. ಗುಂಪಿನಲ್ಲಿ ವಿಮಾನಗಳು ಹಾರಾಡುತ್ತ ಆಕಾಶದಲ್ಲಿ ವಿಶಿಷ್ಟ ರಚನೆಯನ್ನು ನಿರ್ಮಾಣ ಮಾಡುವ ಫ್ಲೈ-ಪಾಸ್ಟ್ ವಿಮಾನ ರಚನೆಗಳಲ್ಲಿ 'ವಿಕ್ಟರಿ' ಅನ್ನು ಸೂಚಿಸುವ 'ವಿ' ಯನ್ನು ನಿರ್ಮಾಣ ಮಾಡುವಲ್ಲಿ  ಆಲ್ ನೇವಿ ವರುಣಾ ರಚನೆಯಲ್ಲಿ , ಪಿ 8 ಐ ಮುಂಚೂಣಿಯಲ್ಲಿದ್ದು, ಮಿಗ್ 29 ಕೆ ಮತ್ತು ಹಾಕ್ 132 ವಿಮಾನಗಳು ಅದನ್ನು ಹಿಂಬಾಲಿಸುತ್ತವೆ.

'ಆತ್ಮನಿರ್ಭರ ಭಾರತ್' ರಾಷ್ಟ್ರದ ಗುರಿಗೆ ಅನುಸಾರವಾಗಿ, ಇಂಡಿಯಾ ಪೆವಿಲಿಯನ್ ಉದ್ಯಮ ಮತ್ತು ಡಿಆರ್ಡಿಒ ಸಹಭಾಗಿತ್ವದಲ್ಲಿ ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿದ / ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಯೋಜನೆಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಅತ್ಯಾಧುನಿಕ ಕ್ಷಿಪಣಿಗಳು, ಏರ್ ಡ್ರಾಪಬಲ್ ಸರ್ಚ್ ಅಂಡ್ ರೆಸ್ಕ್ಯೂ (ಎಸ್ಎಆರ್) ಕಿಟ್, ಲಾಜಿಸ್ಟಿಕ್ ಸ್ಟೋರ್ಗಳಿಗಾಗಿ ಏರ್ ಡ್ರಾಪಬಲ್ ಕಂಟೇನರ್ (ಎಡಿಸಿ), ಮಿಗ್ 29 ಕೆ ಮತ್ತು ಅಡ್ವಾನ್ಸ್ ಲೈಟ್ ವೇಟ್ ಟಾರ್ಪಿಡೊ (ಎಎಲ್ಡಬ್ಲ್ಯೂಟಿ) ಗಾಗಿ ವಾಹಕ ವ್ಯವಸ್ಥೆಗಳು. ಭಾರತೀಯ ನೌಕಾಪಡೆಯ ಭವಿಷ್ಯದ ಡೆಕ್ ಆಧಾರಿತ ಫೈಟರ್ - ಟ್ವಿನ್ ಎಂಜಿನ್ ಡೆಕ್ ಆಧಾರಿತ ಫೈಟರ್ (4 ++ ಪೀಳಿಗೆ, ಎಡಿಎ ವಿನ್ಯಾಸಗೊಳಿಸಿದೆ) ಸ್ಕೀ ಜಂಪ್ ನಲ್ಲಿ ಅಳವಡಿಸಲಾದ ಸ್ಕೇಲ್ಡ್ ಮಾದರಿಯನ್ನು ಇಂಡಿಯಾ ಪೆವಿಲಿಯನ್ ನಲ್ಲಿ ಪ್ರದರ್ಶಿಸಲಾಗುವುದು. ನೌಕಾ ವಾಯುಯಾನವು ತಂತ್ರಜ್ಞಾನ ಕೇಂದ್ರಿತವಾಗಿರುವುದರಿಂದ, ಭಾರತೀಯ ನೌಕಾಪಡೆಯು ಭವಿಷ್ಯದ ನೌಕಾ ವಾಯುಯಾನ ವೇದಿಕೆಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್ಅಪ್ಗಳನ್ನು ಸೇರಿಸುತ್ತಿದೆ. ಇವುಗಳಲ್ಲಿ ಕೆಲವನ್ನು ಇಂಡಿಯಾ ಪೆವಿಲಿಯನ್ ನಲ್ಲಿ ಪ್ರದರ್ಶಿಸಲಾಗುವುದು.

ಉದ್ಯಮ, ಸ್ಟಾರ್ಟ್ಅಪ್ ಗಳು, ಡಿಪಿಎಸ್ಯುಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಭಾರತೀಯ ನೌಕಾ ವಾಯುಯಾನದ ಭವಿಷ್ಯದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು, ಭಾಗವಹಿಸಲು ಮತ್ತು ಯೋಜಿಸಲು, ಫೆಬ್ರವರಿ 12 ರಂದು 'ಆತ್ಮನಿರ್ಭರ ಭಾರತೀಯ ನೌಕಾ ವಾಯುಯಾನಕ್ಕೆ ಪರಿವರ್ತನೆ - 2047 ಮತ್ತು ಅದರ ಸಂಬಂಧಿತ ಪರಿಸರ ವ್ಯವಸ್ಥೆ' ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಭವಿಷ್ಯದ ಈ ವಿಷಯ ಶೀರ್ಷಿಕೆಯು  ಶತಮಾನೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ವರ್ಷದ ವೇಳೆಗೆ ಸ್ವಾವಲಂಬನೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ದೃಷ್ಟಿಕೋನದ/ಚಿಂತನೆಯ ಸಾಕಾರಕ್ಕೆ ಶೈಕ್ಷಣಿಕ, ಉದ್ಯಮ, ಡಿ ಆರ್ ಡಿ ಒ, ಡಿಪಿಎಸ್ ಯುಗಳು ಮತ್ತು ಉದ್ಯಮಗಳೊಂದಿಗೆ ನಿಕಟ ಸಹಯೋಗ ಮತ್ತು ಸಹಭಾಗಿತ್ವವು ಪ್ರಮುಖವಾಗಿದೆ.

ಏರೋ ಇಂಡಿಯಾ 2025 ನೌಕಾ ವಾಯುಯಾನದ ಬೆಳವಣಿಗೆ ಮತ್ತು ಸಬಲೀಕರಣ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಸ್ವಾವಲಂಬನೆಗೆ ಮತ್ತೊಂದು ಮೆಟ್ಟಿಲು ಎಂಬುದನ್ನು  ಸಾಬೀತುಪಡಿಸುತ್ತದೆ.

 

*****


(Release ID: 2101240) Visitor Counter : 32


Read this release in: English , Urdu , Hindi , Tamil