ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮಹಾಕುಂಭ 2025: ಪ್ರಯಾಗರಾಜ್ ಮೇಳದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರದರ್ಶನವನ್ನು ಮಹಾನಿರ್ದೇಶಕರು (ಆಕಾಶವಾಣಿ) ಪರಿಶೀಲಿಸಿದರು; ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು

Posted On: 07 FEB 2025 8:17PM by PIB Bengaluru

ಆಕಾಶವಾಣಿಯ ಮಹಾನಿರ್ದೇಶಕಿ ಡಾ.ಪ್ರಜ್ಞಾ ಪಲಿವಾಲ್ ಗೌರ್ ಅವರು ಇಂದು ಪ್ರಯಾಗರಾಜ್‌ ನ ಮಹಾಕುಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ‘ಜನಭಾಗೀದಾರಿ ಸೆ ಜನಕಲ್ಯಾಣ’ಎಂಬ ಬಹುಮಾಧ್ಯಮ ಪ್ರದರ್ಶನವನ್ನು ಪರಿಶೀಲಿಸಿದರು. ಪ್ರದರ್ಶನವು ಕಳೆದ 10 ವರ್ಷಗಳಲ್ಲಿ ಭಾರತ ಸರ್ಕಾರದ ಕಾರ್ಯಕ್ರಮಗಳು, ನೀತಿಗಳು, ಯೋಜನೆಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತಿದೆ.

ಕೇಂದ್ರ ಸರ್ಕಾರದ ಪ್ರಯೋಜನಕಾರಿ ಯೋಜನೆಗಳನ್ನು ಪ್ರದರ್ಶಿಸುವ ಡಿಜಿಟಲ್ ಫೋಟೋ ಪ್ರದರ್ಶನವು ಸಾಕಷ್ಟು ಆಸಕ್ತಿದಾಯಕ ಮತ್ತು ಮಾಹಿತಿಯುಕ್ತವಾಗಿದೆ ಎಂದು ಮಹಾನಿರ್ದೇಶಕರು ಬಣ್ಣಿಸಿದರು. ಇದಲ್ಲದೆ, ಇದು ಮಹಾಕುಂಭದ ಮಹತ್ವ ಮತ್ತು ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ಬಹಳ ಆಕರ್ಷಕವಾಗಿ ಚಿತ್ರಿಸಿದೆ ಎಂದು ಅವರು ಹೇಳಿದರು. ಪ್ರದರ್ಶನಕ್ಕೆ ಭೇಟಿ ನೀಡಿದವರು ಪುರಾಣ ಮತ್ತು ಆಧುನಿಕತೆಯ ಆಕರ್ಷಕ ಸಮ್ಮಿಲನವನ್ನು ಅನುಭವಿಸುತ್ತಾರೆ ಎಂದು ಅವರು ಹೇಳಿದರು. ಡಾ. ಗೌರ್ ಅವರು ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗ ಮತ್ತು ಎನ್‌ ಡಿ ಆರ್‌ ಎಫ್‌ ಗೆ ಸಂಬಂಧಿಸಿದ ಮಳಿಗೆಗಳನ್ನು ಪರಿಶೀಲಿಸಿದರು.

ಇದಕ್ಕೂ ಮುನ್ನ ಸೆಕ್ಟರ್ 4ರಲ್ಲಿರುವ ತಾತ್ಕಾಲಿಕ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಕ್ಕೆ ಮಹಾನಿರ್ದೇಶಕರು ಭೇಟಿ ನೀಡಿದ್ದರು. ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗುವ ಸುದ್ದಿ ಬುಲೆಟಿನ್ ಮತ್ತು ಕಾರ್ಯಕ್ರಮಗಳನ್ನು ಪರಿಶೀಲಿಸಿದರು. ಈ ಕಾರ್ಯಕ್ರಮಗಳ ಮೂಲಕ ಶ್ರೋತೃಗಳಿಗೆ ಮಹಾಕುಂಭದ ಕ್ಷಣ ಕ್ಷಣದ ಚಟುವಟಿಕೆಗಳನ್ನು ತಿಳಿಸಲಾಗುತ್ತಿದೆ ಎಂದರು. ಮಹಾ ಕುಂಭಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಆಕಾಶವಾಣಿಯ ವಿಶೇಷ ಎಫ್‌ ಎಂ ಚಾನೆಲ್ 'ಕುಂಭವಾಣಿ' (ಎಫ್‌ ಎಂ 103.5 MHz) ಬಳಸಲಾಗುತ್ತಿದೆ. ಇದಲ್ಲದೆ, ಎಫ್‌ ಎಂ ರೇಡಿಯೊ ಪ್ರಸಾರವನ್ನು ಮಹಾಕುಂಭದಲ್ಲಿ ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆಗೆ ಲಿಂಕ್ ಮಾಡಲಾಗಿದೆ, ಇದರಿಂದಾಗಿ ಭಕ್ತರಿಗೆ ಅನುಕೂಲವಾಗುತ್ತಿದೆ ಎಂದು ಅವರು ಹೇಳಿದರು.

ಮೇಳ ಪ್ರದೇಶದಲ್ಲಿರುವ ಮಾಧ್ಯಮ ಕೇಂದ್ರಕ್ಕೂ ಭೇಟಿ ನೀಡಿದ ಡಾ.ಗೌರ್ ಅವರು ಪತ್ರಕರ್ತರೊಂದಿಗೆ ಸಂವಾದ ನಡೆಸಿ ಅವರಿಗೆ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

 

*****


(Release ID: 2100912) Visitor Counter : 31