ಬಾಹ್ಯಾಕಾಶ ವಿಭಾಗ
azadi ka amrit mahotsav

ಸ್ಪೇಡೆಕ್ಸ್ ಮಿಷನ್: ಬಾಹ್ಯಾಕಾಶ ಪರಿಶೋಧನೆಯ ಕ್ರಾಂತಿಕಾರಕ ಬದಲಾವಣೆ 


ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯಕ್ಕೆ ಪ್ರವರ್ತಕ

Posted On: 16 JAN 2025 3:18PM by PIB Bengaluru

"ಉಪಗ್ರಹಗಳ ಬಾಹ್ಯಾಕಾಶ ಡಾಕಿಂಗ್ನ ಯಶಸ್ವಿ ಪ್ರದರ್ಶನಕ್ಕಾಗಿ ಇಸ್ರೋದ ನಮ್ಮ ವಿಜ್ಞಾನಿಗಳು ಮತ್ತು ಇಡೀ ಬಾಹ್ಯಾಕಾಶ ಸಮುದಾಯಕ್ಕೆ ಅಭಿನಂದನೆಗಳು.

ಮುಂಬರುವ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಗಳಿಗೆ ಇದು ಒಂದು ಮಹತ್ವದ ಹೆಜ್ಜೆಯಾಗಿದೆ."

ಶ್ರೀ ನರೇಂದ್ರ ಮೋದಿ, ಭಾರತದ ಪ್ರಧಾನಮಂತ್ರಿ

ಐತಿಹಾಸಿಕ ಸಾಧನೆಯಲ್ಲಿ, ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್ - SpaDeX) ಮಿಷನ್ ನ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ , ಡಾಕಿಂಗ್ ಕಾರ್ಯಾಚರಣೆಯು ಜನವರಿ 16, 2025 ರಂದು ಯಶಸ್ವಿಯಾಗಿ ಪೂರ್ಣಗೊಂಡಿತು, ಇದು ಬಾಹ್ಯಾಕಾಶ ಡಾಕಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ರಾಷ್ಟ್ರಗಳ ಶ್ರೇಷ್ಠ ಗುಂಪಿಗೆ ಭಾರತದ ಪ್ರವೇಶವನ್ನು ಸೂಚಿಸುತ್ತದೆ. ಈ ಯಶಸ್ಸಿನೊಂದಿಗೆ, ಭಾರತವು ಈ ತಾಂತ್ರಿಕ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿ.ಎಸ್.ಎಲ್.ವಿ)-ಸಿ60 ಅನ್ನು ಬಳಸಿಕೊಂಡು ಸ್ಪೇಡೆಕ್ಸ್ ಬಾಹ್ಯಾಕಾಶ ನೌಕೆಗಳನ್ನು ಯಶಸ್ವಿಯಾಗಿ ಉಡಾಯಿಸುವ ಮೂಲಕ ಇಸ್ರೊ  ಡಿಸೆಂಬರ್ 30, 2024 ರಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಅಭೂತಪೂರ್ವ  ಮಿಷನ್ ಬಾಹ್ಯಾಕಾಶ ನೌಕೆಯ ಸಂಧಿಸುವಿಕೆ, ಡಾಕಿಂಗ್ ಮತ್ತು ಅನ್ ಡಾಕಿಂಗ್ನಲ್ಲಿ ಭಾರತದ ತಾಂತ್ರಿಕ ಪರಿಣತಿಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ - ಇದು ಉಪಗ್ರಹಗಳ ಸೇವೆ, ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಗಳು ಮತ್ತು ಅಂತರಗ್ರಹ ಪರಿಶೋಧನೆಯಂತಹ ಭವಿಷ್ಯದ ಪ್ರಯೋಗಗಳಿಗೆ ಬೇಕಾದ ನಿರ್ಣಾಯಕ ಸಾಮರ್ಥ್ಯವಾಗಿದೆ.

ಡಾಕಿಂಗ್ ಪ್ರಕ್ರಿಯೆಯನ್ನು ಅತ್ಯುತ್ತಮ  ನಿಖರತೆಯೊಂದಿಗೆ ಕಾರ್ಯಗತಗೊಳಿಸಲಾಯಿತು. ಬಾಹ್ಯಾಕಾಶ ನೌಕೆಯು 15-ಮೀಟರ್ನಿಂದ 3-ಮೀಟರ್ ಹೋಲ್ಡ್ ಪಾಯಿಂಟ್ಗೆ ಸರಾಗವಾಗಿ ಚಲಿಸಿತು, ನಿಖರತೆಯೊಂದಿಗೆ ಡಾಕಿಂಗ್ ಅನ್ನು ಪ್ರಾರಂಭಿಸಿತು, ಇದು ಯಶಸ್ವಿ ಬಾಹ್ಯಾಕಾಶ ನೌಕೆಯನ್ನು ಹಿಡಿಯಲು ಕಾರಣವಾಯಿತು. ಇದರ ನಂತರ, ಹಿಂದಕ್ಕೆ ಸರಿಸುವುದನ್ನು ಸರಾಗವಾಗಿ ಪೂರ್ಣಗೊಳಿಸಲಾಯಿತು, ನಂತರ ಸ್ಥಿರತೆಗಾಗಿ ಗಡಸು ಮಾಡಲಾಯಿತು ಮಾಡಲಾಯಿತು. ಡಾಕಿಂಗ್ ನಂತರ, ಎರಡು ಉಪಗ್ರಹಗಳನ್ನು ಒಂದೇ ವಸ್ತುವಾಗಿ ಸಂಯೋಜಿತ ನಿಯಂತ್ರಣವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ, ಇದು ಭಾರತದ ತಾಂತ್ರಿಕ ಪರಿಣತಿಯನ್ನು ಪ್ರದರ್ಶಿಸುತ್ತದೆ. ಮುಂಬರುವ ದಿನಗಳಲ್ಲಿ, ಅನ್ಡಾಕಿಂಗ್ ಕಾರ್ಯಾಚರಣೆಗಳು ಮತ್ತು ವಿದ್ಯುತ್ ವರ್ಗಾವಣೆ ಪರಿಶೀಲನೆಗಳು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಪರೀಕ್ಷಿಸಿಲು ನಿರ್ಧರಿಸಲಾಗಿದೆ.

'ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಡಾಕ್ ಮಾಡಿದೆ!' ... ಇಸ್ರೋದ ಸ್ಪೇಡೆಕ್ಸ್ ಮಿಷನ್ ಐತಿಹಾಸಿಕ ಡಾಕಿಂಗ್ ಯಶಸ್ಸನ್ನು ಸಾಧಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆ ಪಡುತ್ತೇವೆ!’

- ಇಸ್ರೋ

ಸ್ಪೇಡೆಕ್ಸ್ ಉಪಗ್ರಹಗಳಲ್ಲಿ ಒಂದು 15 ಮೀ ಎತ್ತರದ ಸ್ಥಾನದಲ್ಲಿ ಇದೆ.

ಸ್ಪೇಡೆಕ್ಸ್ 62 ನೇ ಪಿ.ಎಸ್.ಎಲ್.ವಿ ಯಿಂದ ಉಡಾವಣೆಯಾದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ಅನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ವೆಚ್ಚಕ್ಕೆ ತಕ್ಕನಾದ ತಂತ್ರಜ್ಞಾನ ಪ್ರದರ್ಶಕ ಕಾರ್ಯಾಚರಣೆಯಾಗಿದೆ. ಚಂದ್ರನ ಕಾರ್ಯಾಚರಣೆಗಳು, ಮಾದರಿಗಳನ್ನು ಹಿಂತರುವುದು ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣದ (ಬಿ.ಎ.ಎಸ್.) ಅಭಿವೃದ್ಧಿ ಸೇರಿದಂತೆ ಭಾರತದ ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಈ ಕಾರ್ಯಾಚರಣೆಯು ನಿರ್ಣಾಯಕವಾಗಿದೆ.

ಸ್ಪೇಡೆಕ್ಸ್  ಮಿಷನ್ನ ಮುಖ್ಯ ಗುರಿಗಳು:

  • ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಸಂಧಿಸುವ ಮತ್ತು ಡಾಕಿಂಗ್ಗಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು.
  • ಡಾಕ್ ಮಾಡಿದ ಸ್ಥಿತಿಯಲ್ಲಿ ನಿಯಂತ್ರಣ ಸಾಮರ್ಥ್ಯವನ್ನು ಪ್ರದರ್ಶಿಸುವುದು.
  • ಉದ್ದೇಶಿತ ಬಾಹ್ಯಾಕಾಶ ನೌಕೆಯ ಜೀವಿತಾವಧಿಯನ್ನು ವಿಸ್ತರಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದು.
  • ಡಾಕ್ ಮಾಡಿದ ಬಾಹ್ಯಾಕಾಶ ನೌಕೆಯ ನಡುವೆ ವಿದ್ಯುತ್ ವರ್ಗಾವಣೆಯನ್ನು ಪರೀಕ್ಷಿಸುವುದು.

ಈ ಮಿಷನ್ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯನ್ನು ಪ್ರದರ್ಶಿಸುತ್ತದೆ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಇಸ್ರೋದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

ಸ್ಪೇಡೆಕ್ಸ್ ಬಾಹ್ಯಾಕಾಶ ನೌಕೆಗಳು

ಸ್ಪೇಡೆಕ್ಸ್  ಕಾರ್ಯಾಚರಣೆಯು ಎರಡು ಸಣ್ಣ ಉಪಗ್ರಹಗಳನ್ನು ಒಳಗೊಂಡಿದೆ, ಎಸ್.ಡಿ.ಎಕ್ಸ್.01, ಇದು ಚೇಸರ್ ಮತ್ತು ಎಸ್.ಡಿ.ಎಕ್ಸ್. 02, ಇದು ಟಾರ್ಗೆಟ್, ಪ್ರತಿಯೊಂದೂ ಸರಿಸುಮಾರು 220 ಕೆ.ಜಿಗಳಷ್ಟು ತೂಗುತ್ತದೆ. ಈ ಬಾಹ್ಯಾಕಾಶ ನೌಕೆಗಳು  ಉಭಯ ಉದ್ದೇಶದ ಲಕ್ಷಣಗಳನ್ನು ಹೊಂದಿರುತ್ತವೆ, ಅಂದರೆ, ಡಾಕಿಂಗ್ ಸಮಯದಲ್ಲಿ ಯಾವುದೇ ಬಾಹ್ಯಾಕಾಶ ನೌಕೆಯು ಚೇಸರ್ (ಸಕ್ರಿಯ ಬಾಹ್ಯಾಕಾಶ ನೌಕೆ) ಆಗಿ ಕಾರ್ಯನಿರ್ವಹಿಸಬಹುದು. ಅವು ಸೌರ ಫಲಕಗಳು, ಲಿಥಿಯಂ-ಐಯಾನ್ ಬ್ಯಾಟರಿಗಳು ಮತ್ತು ದೃಢವಾದ ವಿದ್ಯುತ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿವೆ. ಆಟಿಟ್ಯೂಡ್ ಮತ್ತು ಆರ್ಬಿಟ್ (ಕಕ್ಷೆ ನಿಯಂತ್ರಣ ವ್ಯವಸ್ಥೆ ) ಕಂಟ್ರೋಲ್ ಸಿಸ್ಟಮ್(AOCS) ನಕ್ಷತ್ರ ಸಂವೇದಕಗಳು, ಸೂರ್ಯ ಸಂವೇದಕಗಳು, ಮ್ಯಾಗ್ನೆಟೋಮೀಟರ್ಗಳು ಮತ್ತು ಪ್ರತಿಕ್ರಿಯೆ ಚಕ್ರಗಳು, ಮ್ಯಾಗ್ನೆಟಿಕ್ ಟಾರ್ಕರ್ಗಳು ಮತ್ತು ಥ್ರಸ್ಟರ್ಗಳಂತಹ ಆಕ್ಟಿವೇಟರ್ಗಳಂತಹ ಸಂವೇದಕಗಳನ್ನು ಒಳಗೊಂಡಿದೆ.

ಉಪಗ್ರಹಗಳು ಕಕ್ಷೆಯಲ್ಲಿ ಡಾಕಿಂಗ್ ಪ್ರಕ್ರಿಯೆಯನ್ನು ಪ್ರದರ್ಶಿಸಲು ಸಂಕೀರ್ಣ ಕುಶಲತೆಯ ಸರಣಿಯನ್ನು ಕಾರ್ಯಗತಗೊಳಿಸುತ್ತವೆ. ಡಾಕಿಂಗ್ ನಂತರ, ಎರಡು ಉಪಗ್ರಹಗಳು ಒಂದೇ ಬಾಹ್ಯಾಕಾಶ ನೌಕೆಯಾಗಿ ಕಾರ್ಯನಿರ್ವಹಿಸುತ್ತವೆ. ಡಾಕಿಂಗ್ ನ ಯಶಸ್ಸನ್ನು ದೃಢೀಕರಿಸಲು ವಿದ್ಯುತ್ ಶಕ್ತಿಯನ್ನು ಒಂದು ಉಪಗ್ರಹದಿಂದ ಮತ್ತೊಂದಕ್ಕೆ ವರ್ಗಾಯಿಸಲಾಗುತ್ತದೆ. ಯಶಸ್ವಿ ಡಾಕಿಂಗ್ ಮತ್ತು ಅನ್ ಡಾಕಿಂಗ್ ನಂತರ, ಬಾಹ್ಯಾಕಾಶ ನೌಕೆ ಬೇರ್ಪಡುತ್ತದೆ ಹಾಗು ಅಪ್ಲಿಕೇಶನ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಅನ್ ಡಾಕಿಂಗ್ ಸಮಯದಲ್ಲಿ, ಬಾಹ್ಯಾಕಾಶ ನೌಕೆ ಪ್ರತ್ಯೇಕ ಪೇಲೋಡ್ ಕಾರ್ಯಾಚರಣೆಗಳನ್ನು ಶುರು ಮಾಡಲು ಪ್ರತ್ಯೇಕಗೊಳ್ಳುತ್ತದೆ. ಈ ಪೇಲೋಡ್ ಗಳು ಹೆಚ್ಚಿನ ರೆಸಲ್ಯೂಶನ್ ಚಿತ್ರಗಳು, ನೈಸರ್ಗಿಕ ಸಂಪನ್ಮೂಲ ಗಳ ಗಮನಿಸುವಿಕೆ, ಸಸ್ಯವರ್ಗದ ಅಧ್ಯಯನಗಳು ಮತ್ತು ಕಕ್ಷೆಯ ವಿಕಿರಣ ಪರಿಸರ ಮಾಪನಗಳನ್ನು ಒದಗಿಸುತ್ತವೆ, ಇವು ಹಲವಾರು ಉಪಯೋಗಗಳನ್ನು ಕಂಡುಕೊಳ್ಳುತ್ತವೆ.

ಸ್ಪೇಡೆಕ್ಸ್  ಮಿಷನ್ನಲ್ಲಿ ಅಳವಡಿಸಲಾದ ಸ್ಥಳೀಯ ತಂತ್ರಜ್ಞಾನಗಳು:

  • ಡಾಕಿಂಗ್ ಕಾರ್ಯವಿಧಾನ.
  • ನಾಲ್ಕು ರೆಂಡೆಜ್ವಸ್ ಮತ್ತು ಡಾಕಿಂಗ್ ಸಂವೇದಕಗಳ ಸೂಟ್.
  • ವಿದ್ಯುತ್ ವರ್ಗಾವಣೆ ತಂತ್ರಜ್ಞಾನ.
  • ಸ್ಥಳೀಯ ನವೀನ ಸ್ವಾಯತ್ತ ರೆಂಡೆಜ್ವಸ್ ಮತ್ತು ಡಾಕಿಂಗ್ ತಂತ್ರ.
  • ಬಾಹ್ಯಾಕಾಶ ನೌಕೆಗಳ ನಡುವಿನ ತಡೆರಹಿತ ಸ್ವತಂತ್ರ ಸಂವಹನಕ್ಕಾಗಿ ಅಂತರ-ಉಪಗ್ರಹ ಸಂವಹನ ಲಿಂಕ್ (ಐ.ಎಸ್.ಎಲ್), ಇತರ ಬಾಹ್ಯಾಕಾಶ ನೌಕೆಯ ಸ್ಥಿತಿಯನ್ನು ತಿಳಿಯಲು ಅಂತರ್ಗತ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಲಾಗಿದೆ.
  • ಜಿ.ಎನ್.ಎಸ್.ಎಸ್.--ಆಧಾರಿತ ನಾವೆಲ್ ರಿಲೇಟಿವ್ ಆರ್ಬಿಟ್ ಡಿಟರ್ಮಿನೇಷನ್ ಮತ್ತು ಪ್ರಸರಣ (ಆರ್.ಒ.ಡಿ.;ಪಿ) ಪ್ರೊಸೆಸರ್  ಇತರ ಬಾಹ್ಯಾಕಾಶ ನೌಕೆಯ ಸಾಪೇಕ್ಷ ಸ್ಥಾನ ಮತ್ತು ವೇಗವನ್ನು ನಿರ್ಧರಿಸುತ್ತದೆ.
  • ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವಿನ್ಯಾಸ ಮೌಲ್ಯೀಕರಣ ಮತ್ತು ಪರೀಕ್ಷೆ ಎರಡಕ್ಕೂ ಸಿಮ್ಯುಲೇಶನ್ ಪರೀಕ್ಷಾ ವೇದಿಕೆಗಳು.

ಸ್ಪೇಡೆಕ್ಸ್: ಭಾರತದ ಬಾಹ್ಯಾಕಾಶ ಪರಿಶೋಧನೆಯನ್ನು ಮುಂದಕ್ಕೆ ಕೊಂಡೊಯ್ಯುವುದು

ಸ್ಪೇಡೆಕ್ಸ್ ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳಲ್ಲಿ ಗಮನಾರ್ಹ  ಪ್ರಗತಿಯನ್ನು ಪ್ರತಿನಿಧಿಸುತ್ತದೆ, ಭವಿಷ್ಯದಲ್ಲಿ ಹೆಚ್ಚು ಸಂಕೀರ್ಣ ಮತ್ತು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಪ್ರಯತ್ನಗಳಿಗೆ ಇಸ್ರೋವನ್ನು  ಸಜ್ಜುಗೊಳಿಸಿದೆ. ಈ ಸಾಧನೆಯ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್, ಸ್ಪೇಡೆಕ್ಸ್ ಭಾರತವನ್ನು ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನನ್ನಾಗಿ ಸ್ಥಾಪಿಸುತ್ತದೆ ಎಂದು ಒತ್ತಿ ಹೇಳಿದರು. ಬಾಹ್ಯಾಕಾಶದಲ್ಲಿ ಜೀವಶಾಸ್ತ್ರದ ಅನ್ವಯಿಸುವಿಕೆಗಾಗಿ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಇಸ್ರೋ ನಡುವಿನ ಮಹತ್ವದ ಸಹಯೋಗವನ್ನು ಅವರು ಎತ್ತಿ ತೋರಿಸಿದರು. ಡಾಕಿಂಗ್ ಪ್ರಯೋಗಕ್ಕಾಗಿ ಬಳಸಲಾಗುವ ಸ್ಥಳೀಯ 'ಭಾರತೀಯ ಡಾಕಿಂಗ್ ಸಿಸ್ಟಮ್'ನ ಮಹತ್ವವನ್ನು ಶ್ರೀ ಸಿಂಗ್ ತಿಳಿಸಿದರು ಹಾಗು  ಈ ಮೈಲಿಗಲ್ಲು ʼಭಾರತೀಯ ಆಂತ್ರಿಕ್ಷಾ ಸ್ಟೇಷನ್ʼ, ʼಚಂದ್ರಯಾನ 4ʼ ಮತ್ತು ʼಗಗನ ಯಾನ್ʼ ಸೇರಿದಂತೆ ಮಹತ್ವಾಕಾಂಕ್ಷೆಯ ಭವಿಷ್ಯದ ಕಾರ್ಯಾಚರಣೆಗಳ ಸುಗಮ ನಿರ್ವಹಣೆಗೆ ದಾರಿ ಮಾಡಿಕೊಡುತ್ತದೆ ಎಂದು ಒತ್ತಿ ಹೇಳಿದರು.

ಚಂದ್ರನ ಬಗ್ಗೆ ಪರಿಶೋಧನೆ ಮತ್ತು ಬಾಹ್ಯಾಕಾಶ ಕೇಂದ್ರಗಳ ಕಾರ್ಯಾಚರಣೆಯಂತಹ ಮುಂಬರುವ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಬಾಹ್ಯಾಕಾಶ ಡಾಕಿಂಗ್ ಅತ್ಯಗತ್ಯವಾಗಿದೆ. ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ, ಇಸ್ರೋ ಸ್ವತಂತ್ರ ಡಾಕಿಂಗ್ ಗೆ ಅಡಿಪಾಯ ಹಾಕುತ್ತಿದೆ - ಇದು ಚಂದ್ರಯಾನ-4 ನಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ರಮುಖ ಶಕ್ತಿಯಾಗಿದೆ. ಹೆಚ್ಚುವರಿಯಾಗಿ, ಗಗನಯಾನ ಮಿಷನ್, ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವುದು ಮತ್ತು ಭಾರತ್ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವುದು ಮುಂತಾದ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಗುರಿಗಳನ್ನು ಬೆಂಬಲಿಸುವಲ್ಲಿ ಸ್ಪೇಡೆಕ್ಸ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ.

ಈ ತಾಂತ್ರಿಕ ಪ್ರಮುಖ ಪ್ರಗತಿಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುವುದಲ್ಲದೆ, ಹೆಚ್ಚು ಸಂಕೀರ್ಣ ಕಾರ್ಯಾಚರಣೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ, ಇದು ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಪ್ರಮುಖವಾಗಿ  ರಾಷ್ಟ್ರದ ಸ್ಥಾನವನ್ನು ಬಲಪಡಿಸುತ್ತದೆ.  . ಜಾಗತಿಕ ಬಾಹ್ಯಾಕಾಶ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಮೂಲಕ, ಸ್ಥಳೀಯ ನಾವೀನ್ಯತೆಯಲ್ಲಿ ಭಾರತದ ಪ್ರಯತ್ನಕ್ಕೆ ಸ್ಪೇಡೆಕ್ಸ್ ಒಂದು ಪ್ರಮಾಣವಾಗಿದೆ.
 
ಆಕರಗಳು:

Click here to see in PDF:

 

*****


(Release ID: 2095095) Visitor Counter : 24


Read this release in: English , Urdu , Hindi , Gujarati