ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿ


2024ರ ಸಾಧನೆಗಳು ಮತ್ತು 2025 ರ ಮುನ್ನೋಟ

Posted On: 22 JAN 2025 11:36AM by PIB Bengaluru

ಭಾರತವು ಸುಸ್ಥಿರ ಭವಿಷ್ಯದತ್ತ ತನ್ನ ಪರಿವರ್ತನೆಯನ್ನು ವೇಗಗೊಳಿಸುತ್ತಿರುವುದರಿಂದ, ಅದರ ನವೀಕರಿಸಬಹುದಾದ ಇಂಧನ (ಆರ್‌ ಇ) ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. 2024ರಲ್ಲಿ, ಸೌರ ಮತ್ತು ಪವನ ಶಕ್ತಿ ಸ್ಥಾಪನೆಗಳು, ನೀತಿ ಪ್ರಗತಿಗಳು ಮತ್ತು ಮೂಲಸೌಕರ್ಯ ಸುಧಾರಣೆಗಳಲ್ಲಿ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, 2025ರಲ್ಲಿ ಮಹತ್ವಾಕಾಂಕ್ಷೆಯ ಗುರಿಗಳಿಗೆ ವೇದಿಕೆಯನ್ನು ಸ್ಥಾಪಿಸಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯವನ್ನು ಸಾಧಿಸುವ ಬದ್ಧತೆಯೊಂದಿಗೆ, ಭಾರತವು ಶುದ್ಧ ಇಂಧನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. 20 ಜನವರಿ 2025ರ ಹೊತ್ತಿಗೆ, ಭಾರತದ ಒಟ್ಟು ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯವು 217.62 ಗಿಗಾವ್ಯಾಟ್ ತಲುಪಿದೆ.

2024ರಲ್ಲಿ ದಾಖಲೆಯ 24.5 ಗಿಗಾವ್ಯಾಟ್ ಸೌರ ಸಾಮರ್ಥ್ಯ ಮತ್ತು 3.4 ಗಿಗಾವ್ಯಾಟ್ ಪವನ ಸಾಮರ್ಥ್ಯವನ್ನು ಸೇರಿಸಲಾಯಿತು, ಇದು 2023 ಕ್ಕೆ ಹೋಲಿಸಿದರೆ ಸೌರ ಸ್ಥಾಪನೆಗಳಲ್ಲಿ ದುಪ್ಪಟ್ಟಿಗಿಂತ ಹೆಚ್ಚು ಮತ್ತು ಪವನ ಸ್ಥಾಪನೆಗಳಲ್ಲಿ ಶೇ.21 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಸರ್ಕಾರದ ಉತ್ತೇಜನ, ನೀತಿ ಸುಧಾರಣೆಗಳು ಮತ್ತು ದೇಶೀಯ ಸೌರ ಮತ್ತು ಪವನ ಟರ್ಬೈನ್ ಉತ್ಪಾದನೆಯಲ್ಲಿ ಹೆಚ್ಚಿದ ಹೂಡಿಕೆಯು ಈ ಏರಿಕೆಗೆ ಕಾರಣವಾಗಿದೆ.  ಸೌರಶಕ್ತಿಯು ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಗೆ ಪ್ರಮುಖ ಕೊಡುಗೆಯಾಗಿ ಮುಂದುವರೆದಿದೆ, ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಶೇ.47 ರಷ್ಟಿದೆ. ಕಳೆದ ವರ್ಷ, 18.5 ಗಿಗಾವ್ಯಾಟ್ ಬೃಹತ್‌ ಸೌರಶಕ್ತಿ (ಯುಟಿಲಿಟಿ-ಸ್ಕೇಲ್) ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ, ಇದು 2023ಕ್ಕೆ ಹೋಲಿಸಿದರೆ ಸುಮಾರು 2.8 ಪಟ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡು ಭಾರತದ ಒಟ್ಟು ಯುಟಿಲಿಟಿ-ಸ್ಕೇಲ್ ಸೌರ ಸ್ಥಾಪನೆಗಳಿಗೆ ಶೇ.71 ರಷ್ಟು ಕೊಡುಗೆ ನೀಡುವ ಮೂಲಕ ಉನ್ನತ ಕಾರ್ಯಕ್ಷಮತೆಯ ರಾಜ್ಯಗಳಾಗಿ ಹೊರಹೊಮ್ಮಿವೆ.

ಮೇಲ್ಛಾವಣಿಯ ಸೌರ ವಲಯವು 2024ರಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿತು, 4.59 ಗಿಗಾವ್ಯಾಟ್ ಹೊಸ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ, ಇದು 2023 ರಿಂದ ಶೇ.53 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. 2024ರಲ್ಲಿ ಪ್ರಾರಂಭವಾದ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಈ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹತ್ತು ತಿಂಗಳೊಳಗೆ 7 ಲಕ್ಷ ಮೇಲ್ಛಾವಣಿಯ ಸೌರ ಸ್ಥಾಪನೆಗಳನ್ನು ಸುಗಮಗೊಳಿಸಿದೆ. ಹೆಚ್ಚುವರಿಯಾಗಿ, ಆಫ್-ಗ್ರಿಡ್ ಸೌರ ವಿಭಾಗವು ಶೇ.182 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು 2024ರಲ್ಲಿ 1.48 ಗಿಗಾವ್ಯಾಟ್ ಅನ್ನು ಸೇರಿಸಿತು, ಇದು ಗ್ರಾಮೀಣ ಪ್ರದೇಶಗಳಲ್ಲಿ ಭಾರತದ ಇಂಧನ ಪ್ರವೇಶ ಗುರಿಗಳನ್ನು ಹೆಚ್ಚಿಸಿತು.

ಭಾರತವು 2024 ರಲ್ಲಿ ಗುಜರಾತ್ (1,250 ಮೆಗಾವ್ಯಾಟ್), ಕರ್ನಾಟಕ (1,135 ಮೆಗಾವ್ಯಾಟ್) ಮತ್ತು ತಮಿಳುನಾಡು (980 ಮೆಗಾವ್ಯಾಟ್) ನೇತೃತ್ವದಲ್ಲಿ 3.4 ಗಿಗಾವ್ಯಾಟ್ ಹೊಸ ಪವನ ವಿದ್ಯುತ್ ಸಾಮರ್ಥ್ಯವನ್ನು ಸೇರಿಸಿತು. ಈ ರಾಜ್ಯಗಳು ಹೊಸ ಪವನ ಶಕ್ತಿಯ ಸಾಮರ್ಥ್ಯದ ಸೇರ್ಪಡೆಗಳಲ್ಲಿ ಶೇ.98 ರಷ್ಟು ಪಾಲು ಹೊಂದಿವೆ, ಇದು ಪವನ ಶಕ್ತಿ ಉತ್ಪಾದನೆಯಲ್ಲಿ ಅವುಗಳ ಮುಂದುವರಿದ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನೀತಿ ಕ್ರಮಗಳು ಮತ್ತು ಹಣಕಾಸಿನ ಬೆಂಬಲದ ಮೂಲಕ ಆರ್‌ ಇ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅದರ ಮುಖ್ಯಾಂಶಗಳು ಹೀಗಿವೆ:

  • ಹಸಿರು ಗ್ರೀನ್ ಹೈಡ್ರೋಜನ್ ಗೆ ಉತ್ತೇಜನ: ಈ ಉದಯೋನ್ಮುಖ ವಲಯದಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಹಸಿರು ಹೈಡ್ರೋಜನ್ ನೀತಿಗಳ ಅಭಿವೃದ್ಧಿಯನ್ನು ಸರ್ಕಾರವು ಸಕ್ರಿಯವಾಗಿ ಉತ್ತೇಜಿಸಿತು.
  • ಉತ್ಪಾದನಾ ವಿಸ್ತರಣೆ: ದೇಶೀಯ ಸೌರ ಪಿವಿ ಮತ್ತು ವಿಂಡ್ ಟರ್ಬೈನ್ ಉತ್ಪಾದನೆಯನ್ನು ಹೆಚ್ಚಿಸಲಾಯಿತು, ಇದು ಜಾಗತಿಕ ನವೀಕರಿಸಬಹುದಾದ ಇಂಧನ ಉತ್ಪಾದನಾ ಕೇಂದ್ರವಾಗಲು ಭಾರತದ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ.
  • ಗ್ರಿಡ್ ಮೂಲಸೌಕರ್ಯ ಅಭಿವೃದ್ಧಿ: ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದಂತಹ ನವೀಕರಿಸಬಹುದಾದ ಇಂಧನ ಸಮೃದ್ಧ ರಾಜ್ಯಗಳಿಂದ ವಿದ್ಯುತ್ ಸ್ಥಳಾಂತರಿಸಲು ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಪ್ರಸ್ತಾಪಿಸಿದೆ.

ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರವು ಪರಿವರ್ತನೆಯ ಪಯಣದಲ್ಲಿದೆ, 2024ರ ದಾಖಲೆಯ ಸಾಮರ್ಥ್ಯ ಸೇರ್ಪಡೆ ಮತ್ತು ನೀತಿಗಳಿಂದಾಗಿ ಪ್ರಗತಿಯ ವರ್ಷವಾಗಿದೆ. ದೇಶವು 2025 ರತ್ತ ಸಾಗುತ್ತಿರುವಾಗ, ನಿಯಂತ್ರಕ, ಹಣಕಾಸು ಮತ್ತು ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸುವುದು ಮುಖ್ಯವಾಗಿದೆ. ಮುಂದುವರಿದ ನೀತಿ ಬೆಂಬಲ, ಹೆಚ್ಚಿದ ಹೂಡಿಕೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಭಾರತವು ತನ್ನ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಗುರಿಗಳನ್ನು ಸಾಧಿಸಲು ಮತ್ತು ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನಮಾನವನ್ನು ಬಲಪಡಿಸಲು ಉತ್ತಮ ಸ್ಥಾನದಲ್ಲಿದೆ.

 

ಉಲ್ಲೇಖಗಳು:

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

https://npp.gov.in/dashBoard/gc-map-dashboard

Click here to see in PDF:

 

*****


(Release ID: 2095013)