ಉಪರಾಷ್ಟ್ರಪತಿಗಳ ಕಾರ್ಯಾಲಯ
ಜನವರಿ 21, 2025 ರಂದು ಛತ್ತೀಸ್ ಗಢದ ರಾಯ್ ಪುರಕ್ಕೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ
Posted On:
20 JAN 2025 2:55PM by PIB Bengaluru
ಎನ್.ಐ.ಟಿ. ರಾಯ್ ಪುರ, ಐಐಟಿ ಭಿಲಾಯಿ, ಐ.ಐ.ಎಂ. ರಾಯ್ ಪುರದ ವಿದ್ಯಾರ್ಥಿಗಳೊಂದಿಗೆ ಉಪರಾಷ್ಟ್ರಪತಿಯವರು ಸಂವಾದ ನಡೆಸಲಿದ್ದಾರೆ.
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಜನವರಿ 21, 2025 ರಂದು ಛತ್ತೀಸ್ ಗಢದ ರಾಯ್ ಪುರಕ್ಕೆ ಒಂದು ದಿನದ ಪ್ರವಾಸ ಕೈಗೊಳ್ಳಲಿದ್ದಾರೆ.
ಉಪರಾಷ್ಟ್ರಪತಿಯವರು ತಮ್ಮ ಭೇಟಿಯ ಸಮಯದಲ್ಲಿ, "ಉತ್ತಮ ಭಾರತವನ್ನು ನಿರ್ಮಿಸುವ ವಿಚಾರಗಳು" ಎಂಬ ವಿಷಯದ ಕುರಿತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್.ಐ.ಟಿ) ರಾಯ್ಪುರ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ) ಭಿಲಾಯಿ, ಭಾರತೀಯ ನಿರ್ವಹಣಾ ಸಂಸ್ಥೆ (ಐ.ಐ.ಎಂ) ರಾಯ್ ಪುರದ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.
*****
(Release ID: 2094665)
Visitor Counter : 7