ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಟಿಕೆ ತಯಾರಿಕಾ ವಲಯದಲ್ಲಿ ನಮ್ಮ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ನಮ್ಮ ಹೊಸ ಅವಕಾಶಗಳ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ: ಪ್ರಧಾನಮಂತ್ರಿ

Posted On: 20 JAN 2025 2:08PM by PIB Bengaluru

ಆಟಿಕೆ ತಯಾರಿಕಾ ವಲಯದಲ್ಲಿ ಕೇಂದ್ರ ಸರ್ಕಾರದ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ಹೊಸ ಅವಕಾಶಗಳ ನಮ್ಮ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು.

ಮನ್ ಕಿ ಬಾತ್ ನವೀಕರಣಗಳ ಕುರಿತಾಗಿ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:

“ಮನ್ ಕಿ ಬಾತ್  (#MannKiBaat) ಸಂಚಿಕೆಯೊಂದರಲ್ಲಿ ನಾವು ಆಟಿಕೆ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಮತ್ತು ಭಾರತದಾದ್ಯಂತ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುವ ಆಟಿಕೆ ತಯಾರಿಕಾ ವಲಯದ ಜನಪ್ರಿಯಗೊಳಿಸುವಿಕೆ ಬಗ್ಗೆ ಮಾತನಾಡಿದ್ದೇವೆ, ನಾವು ಅದರಲ್ಲಿ ಬಹಳಷ್ಟು ವಿಷಯಗಳನ್ನು ಒಳಪಡಿಸಿದ್ದೇವೆ.

ಈ ವಲಯದಲ್ಲಿ ನಮ್ಮ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ಹೊಸ ಅವಕಾಶಗಳ ನಮ್ಮ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ.”  

 

 

*****

 


(Release ID: 2094533) Visitor Counter : 18