ಉಪರಾಷ್ಟ್ರಪತಿಗಳ ಕಾರ್ಯಾಲಯ
ಸೂಕ್ತ ಸಮಯದಲ್ಲಿ ರೈತರ ಸಮಸ್ಯೆಗಳಿಗೆ ಅಗತ್ಯವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ರೈತರ ಕಾಳಜಿಯನ್ನು ಹಿಂದೆ ಸರಿಸಲು ಸಾಧ್ಯವಿಲ್ಲ – ಉಪರಾಷ್ಟ್ರಪತಿ
ಕೃಷಿ ಕೈಗಾರಿಕೆಗಳ ಲಾಭ ರೈತರಿಗೆ ಸಮಾನವಾಗಿ ಹಂಚಿಕೆಯಾಗಬೇಕು – ಉಪರಾಷ್ಟ್ರಪತಿ
ರೈತರು ವೆಚ್ಚ ಮಾಡಿದಾಗ ಆರ್ಥಿಕತೆಯು ಸ್ವಯಂಚಾಲಿತವಾಗಿ ಸ್ಥಾಪನೆಯಾಗಲಿದೆ – ಉಪರಾಷ್ಟ್ರಪತಿ
ಪ್ರತಿಕೂಲ ಹವಾಮಾನ, ಅನಿರೀಕ್ಷಿತ ಮಾರುಕಟ್ಟೆ ಪರಿಸ್ಥಿತಿಗಳಂತಹ ಪ್ರಾಥಮಿಕ ಒತ್ತಡಗಳಿಂದ ಕೃಷಿ ವಲಯವನ್ನು ನಿವಾರಿಸುವ ಅಗತ್ಯವಿದೆ – ಉಪರಾಷ್ಟ್ರಪತಿ
ಯಾವುದೇ ವಿಧದಲ್ಲಿ ನೀಡುವ ಸಬ್ಸಿಡಿ ನೇರವಾಗಿ ಅದು ರೈತರಿಗೆ ತಲುಪಬೇಕು – ಉಪರಾಷ್ಟ್ರಪತಿ
ಭಾರತ ಸರ್ಕಾರ ಅರಿಶಿನ ಮಂಡಳಿ ರಚಿಸುವ ಮೂಲಕ ಅರಿಶಿನಕ್ಕೆ "ಗುಣಪಡಿಸುವ ಸ್ಪರ್ಶ" ನೀಡಿದೆ – ಉಪರಾಷ್ಟ್ರಪತಿ
“ಯೆ ದಿಲ್ ಮಾಂಗೇ ಮೋರ್” ಎಂಬಂತೆ ಭಾರತ ಜಗತ್ತಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ದೇಶವಾಗಿದೆ ಎಂದ ಉಪರಾಷ್ಟ್ರಪತಿ
Posted On:
16 JAN 2025 1:54PM by PIB Bengaluru
ರೈತರ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರದ ಅಗತ್ಯವಿದ್ದು, ರೈತರ ಕಾಳಜಿಯನ್ನು ಹಿಂದೆ ಸರಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಒತ್ತಿ ಹೇಳಿದ್ದಾರೆ.
ಧಾರವಾಡದಲ್ಲಿಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಭೆ ಹಾಗೂ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಜಗದೀಪ್ ಧನ್ ಕರ್ ಅವರು. ರೈತರ ಸಂಕಷ್ಟಗಳು ತುರ್ತಾಗಿ ದೇಶದ ಗಮನಕ್ಕೆ ಬರಬೇಕು. ರೈತರಿಗೆ ಆರ್ಥಿಕ ಭದ್ರತೆ ಅಗತ್ಯವಾಗಿದೆ. ಸಮಸ್ಯೆಗಳು ಏರುತ್ತಿದೆ ಮತ್ತು ಏರಿಕೆಯನ್ನು ತಡೆಯಲಾಗದು ಮತ್ತು ರೈತರ ಕಳವಳವನ್ನು ಹಿಂಬದಿಗೆ ಸರಿಸಲಾಗದು. ಸಮಯವೇ ಎಲ್ಲದಕ್ಕೂ ಪರಿಹಾರದ ಸಾರವಾಗಿದೆ. ಆದರೆ ಮೂಲಭೂತವಾಗಿ ರೈತರ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ ಕಂಡುಕೊಳ್ಳಬೇಕಿದೆ. ಸರ್ಕಾರ ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರೂ ಸಂಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ಪರಿಹಾರಗಳನ್ನು ಕಂಡುಹಿಡಿಯಲು ಸಕಾರಾತ್ಮಕ ಮನಸ್ಸಿನೊಂದಿಗೆ ಏಕಮುಖವಾಗಿ ಮುನ್ನಡೆಯಬೇಕು ಎಂದರು.
ದೇಶದ ಆರ್ಥಿಕತೆಯ ಮೇಲೆ ಕೃಷಿ ವಲಯದ ವಿಸ್ತೃತ ಪರಿಣಾಮಗಳ ಕುರಿತು ಒತ್ತಿ ಹೇಳಿದ ಶ್ರೀ ಧನಕರ್, “ಕೃಷಿ ಆಧಾರಿತ ಕೈಗಾರಿಕೆಗಳು, ಕೃಷಿ ಉತ್ಪಾದನಾ ಕೈಗಾರಿಕೆಗಳು, ಜವಳಿ, ಆಹಾರ, ಖಾದ್ಯ ತೈಲ ಮತ್ತು ಇನ್ನೂ ಅನೇಕ ಸಂಸ್ಥೆಗಳಿವೆ. ಅವೆಲ್ಲಾ ಬೆಳವಣಿಗೆಯಾಗುತ್ತಿವೆ. ಲಾಭ ಗಳಿಸುತ್ತಿವೆ. ನಮ್ಮ ರೈತರು ಲಾಭವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಈ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ರೈತರ ಕಲ್ಯಾಣಕ್ಕಾಗಿ, ಕೃಷಿ ಕ್ಷೇತ್ರದ ಸಂಶೋಧನೆಗಾಗಿ ವಿನಿಯೋಜಿಸಬೇಕು. ಈ ದಿಕ್ಕಿನಲ್ಲಿ ಉದಾರವಾಗಿ ಯೋಚಿಸಬೇಕು ಏಕೆಂದರೆ ಕೃಷಿ ಉತ್ಪನ್ನಗಳು ಅವರ ಜೀವನಾಡಿ ಮತ್ತು ಆ ಹೃದಯ ಬಡಿತವನ್ನು ರೈತರು ನಿಯಂತ್ರಿಸುತ್ತಿದ್ದಾರೆ. ನಮ್ಮಲ್ಲಿ ಮೂರು ವಿಷಯಗಳಿವೆ. ಒಂದು ರೈತರನ್ನು ಸಂತುಷ್ಟಗೊಳಿಸುವುದು. ಎರಡು ನಮ್ಮ ರೈತರು ಸಂತಸದಿಂದಿರುವಂತೆ ನೋಡಿಕೊಳ್ಳುವುದು ಮತ್ತು ನಮ್ಮ ರೈತರನ್ನು ಯಾವುದೇ ಕಾರಣದಿಂದಲೂ ಹರ್ಷದಾಯಕವಾಗಿರುವ ಸನ್ನಿವೇಶ ನಿರ್ಮಾಣ ಮಾಡಬೇಕು” ಎಂದರು.
"ರೈತ ಆರ್ಥಿಕವಾಗಿ ಉತ್ತಮವಾದಾಗ, ಆರ್ಥಿಕತೆಯು ಚಾಲನೆಗೊಳ್ಳುತ್ತದೆ, ಏಕೆಂದರೆ ರೈತ ಖರ್ಚು ಮಾಡುವ ಶಕ್ತಿಯಾಗಿದ್ದಾನೆ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ರೈತರು ಖರ್ಚು ಮಾಡಿದಾಗ, ಆರ್ಥಿಕತೆಯು ಸ್ವಯಂಚಾಲಿತವಾಗಿ ಚಾಲನೆಗೊಳ್ಳುತ್ತದೆ ಮತ್ತು ಆದ್ದರಿಂದ, ನಾವು ಮತ್ತೊಂದು ಸಕಾರಾತ್ಮಕ ಪರಿಣಾಮವನ್ನು ಹೊಂದುತ್ತೇವೆ. ಕೃಷಿ ಕ್ಷೇತ್ರವು ಉಜ್ವಲವಾಗಿದ್ದರೆ ಸುಗಮಗೊಳ್ಳುತ್ತದೆ, ನಯಗೊಳಿಸುವಿಕೆಯ ಮೂಲಕ ಕಾಳಜಿವಹಿಸಿದರೆ ಕೃಷಿ ವಲಯದಲ್ಲಿ ಅನುತ್ಪಾದಕ ಆಸ್ತಿಗಳು ಇರುವುದಿಲ್ಲ. ಐಸಿಯುನಲ್ಲಿರುವ ನಮ್ಮ ರೋಗಿಗಳ ಬಗ್ಗೆ ನಾವು ಗಮನ ಹರಿಸುವಂತೆ ನಾವು ರೈತರತ್ತ ಚಿತ್ತ ಹರಿಸಬೇಕು” ಎಂದು ಅವರು ಹೇಳಿದರು.
ಪ್ರತಿಕೂಲ ಹವಾಮಾನ ಮತ್ತು ಅನಿರೀಕ್ಷಿತ ಮಾರುಕಟ್ಟೆ ಪರಿಸ್ಥಿತಿಗಳಂತಹ ಪ್ರಾಥಮಿಕ ಒತ್ತಡಗಳಿಂದ ರೈತರನ್ನು ಮುಕ್ತಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಶ್ರೀ ಧನಕರ್, “ರೈತ ವಲಯವನ್ನು ಪ್ರಾಥಮಿಕ ಒತ್ತಡಗಳಿಂದ ವಿಶ್ಲೇಷಿಸಲು ಮತ್ತು ನಿವಾರಿಸಲು ಇದು ಸಕಾಲ. ಸರ್ಕಾರ ಬಹಳಷ್ಟು ಮಾಡುತ್ತಿದೆ. ಪ್ರತಿಕೂಲ ಹವಾಮಾನ, ಅನಿರೀಕ್ಷಿತ ಮಾರುಕಟ್ಟೆ ಪರಿಸ್ಥಿತಿಗಳು ಇಲ್ಲದಂತೆ ನೋಡಿಕೊಳ್ಳಬೇಕು. ಕೊರತೆಯಿದ್ದರೆ, ರೈತ ತೊಂದರೆಗೊಳಗಾಗುತ್ತಾನೆ. ಸಾಕಷ್ಟು ಸಮಸ್ಯೆ ಇದ್ದರೆ ಆತ ಬಳಲುತ್ತಾನೆ. ಆದ್ದರಿಂದ, ನಮ್ಮ ರೈತರು ಉತ್ತಮ ಆರ್ಥಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿಧಾನಗಳನ್ನು ರೂಪಿಸಬೇಕಾಗಿದೆ ಎಂದರು.
ರೈತರಿಗೆ ಎಲ್ಲಾ ರೀತಿಯ ಸಬ್ಸಿಡಿಗಳ ನೇರ ವರ್ಗಾವಣೆ ಪರವಾಗಿ ಮಾತನಾಡಿದ ಶ್ರೀ ಜಗದೀಪ್ ಧನ್ ಕರ್ ಅವರು, “ರಸಗೊಬ್ಬರ ಅಥವಾ ಇನ್ನಿತರೆ ಯಾವುದೇ ರೀತಿಯಲ್ಲಿ ಸರ್ಕಾರ ನೀಡುವ ಸಬ್ಸಿಡಿ ನೇರವಾಗಿ ರೈತರಿಗೆ ತಲುಪಬೇಕು ಎಂದು ಬಲವಾಗಿ ಪ್ರತಿಪಾದಿಸಿದರು….. .ಕೃಷಿ ವಲಯದ ಅರ್ಥಶಾಸ್ತ್ರಜ್ಞರು ಈ ನೆರವು ನೇರವಾಗಿ ರೈತರಿಗೆ ತಲುಪಿದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಸದ್ವಿಯೋಗಿಸಬೇಕು. ರೈತರು ಈ ಹಣವನ್ನು ಸಾವಯವ ಮತ್ತು ನೈಸರ್ಗಿಕ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.
ಸರ್ಕಾರ ಅರಿಶಿನ ಮಂಡಳಿ ಸ್ಥಾಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, “ವಾಣಿಜ್ಯ ಸಚಿವರಾದ ಶ್ರೀ ಪಿಯೂಶ್ ಗೋಯಲ್ ಅವರು ಈ ತೀರ್ಮಾನ ಪ್ರಕಟಿಸಿದ್ದನ್ನು ಕೇಳಿ ತಮಗೆ ತುಂಬಾ ಸಂತಸವಾಯಿತು. ಅರಶಿನ ಮಂಡಳಿ, ರಾಷ್ಟ್ರೀಯ ಅರಶಿನ ಮಂಡಳಿ ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ. ಅರಶಿನ ಉತ್ಪಾದನೆ ಮುಂದಿನ ಐದು ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. ರಫ್ತು ಮಾರುಕಟ್ಟೆಯನ್ನು ಸೃಷ್ಟಿಸಲು ಸಕಾರಾತ್ಮಕ ನಿಲುವಿನಲ್ಲಿ ಮಧ್ಯಸ್ಥಿಕೆಗಳು ಇರಲಿದ್ದು, ರೈತರಿಗೆ ಇದರಿಂದ ಅನುಕೂಲವಾಗಲಿದೆ. ರೈತರು ಅದಕ್ಕೂ ಮೌಲ್ಯವನ್ನು ಸೇರಿಸುತ್ತಾರೆ..... ಕೇಂದ್ರ ಸರ್ಕಾರ ಅರಿಶಿನ ಮಂಡಳಿ ರಚಿಸುವ ಮೂಲಕ ಅರಿಶಿನಕ್ಕೆ ಗುಣಪಡಿಸುವ ಸ್ಪರ್ಶವನ್ನು ನೀಡಿದೆ. ಇದು ಎಂತಹ ಸಾಧನೆ. ಪ್ರತಿಯೊಂದು ಕೃಷಿ-ಉತ್ಪನ್ನಕ್ಕೂ ಮೌಲ್ಯವರ್ಧನೆ ಮತ್ತು ವಿಶೇಷ ಉಪಚಾರ ಸಿಗುವಂತೆ ಇಂತಹ ಹೆಚ್ಚಿನ ಮಂಡಳಿಗಳನ್ನು ಹೊಂದಬೇಕೆಂದು ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತೇನೆ ಎಂದರು.
ರೈತರು ತಂತ್ರಜ್ಞಾನವನ್ನು ಅಡಕಗೊಳಿಸಿಕೊಳ್ಳುವ ಕುರಿತು ಗಮನ ಹರಿಸಿದ ಶ್ರೀ ಧನ್ ಕರ್, “ಕೃಷಿ ವಲಯಕ್ಕೆ ಪರಿವರ್ತನೆಯ ಅಗತ್ಯವಿದೆ. ಪರಿವರ್ತನೆ ಎಂಬುದು ನಿರಂತರವಾದದ್ದು. ಸಮಗ್ರ ತಂತ್ರಜ್ಞಾನ ಬೇಕಾಗಿದೆ. ತಂತ್ರಜ್ಞಾನದಿಂದ ತ್ವರಿತ ಬದಲಾವಣೆ ಸಾಧ್ಯ. ಆದರೆ ರೈತ ಇನ್ನೂ ಹಳೆಯ ಟ್ರ್ಯಾಕ್ಟರ್‌ಗೆ ಅಂಟಿಕೊಂಡಿದ್ದಾನೆ. ಟ್ರ್ಯಾಕ್ಟರ್ ಒಂದು ವಲಯವಾಗಿದ್ದು, ಇದಕ್ಕೆ ಸರ್ಕಾರದ ಸಬ್ಸಿಡಿ ಅತ್ಯಧಿಕವಾಗಿದೆ. ರೈತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ತಂತ್ರಜ್ಞಾನ ಅಳವಡಿಸಿಕೊಳ್ಳಲು ಮನವೊಲಿಸಬೇಕು. ಅದಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಗಳು ಈ ಚಟುವಟಿಕೆಗಳಿಗೆ ಪ್ರಧಾನ ಕೇಂದ್ರವಾಗಬೇಕು. ಪ್ರತಿ ಕೃಷಿ ವಿಜ್ಞಾನ ಕೇಂದ್ರಗಳು ಸಾಮಾನ್ಯವಾಗಿ 50,000 ರೈತರನ್ನು ಒಳಗೊಂಡಿರುತ್ತವೆ. ಆ 50,000 ರೈತರು ವಾಸ್ತವವಾಗಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ಸಂಪರ್ಕ ಹೊಂದಿದ್ದರೆ ಕೃಷಿ ಕ್ಷೇತ್ರಕ್ಕೆ ಕೃಷಿಯಲ್ಲಿ ಸಕಾರಾತ್ಮಕ ಕ್ರಾಂತಿ ತರಬಹುದು ಎಂಬುದನ್ನು ಊಹಿಸಿ ಎಂದರು.
“ಕೃಷಿ ಸುಧಾರಣೆ ಅನಿವಾರ್ಯವಾಗಿದೆ. ಏಕೆಂದರೆ ನಾವು ಪ್ರತಿದಿನ ಬದಲಾಗುತ್ತಿದ್ದೇವೆ. ಒಂದು ಮಾದರಿ ಬದಲಾವಣೆ ಇದೆ. ಬಹಳಷ್ಟು ಬದಲಾವಣೆ ಮಾಡಲಾಗುತ್ತಿದೆ. ಆದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಸಂಸ್ಥೆಗಳು ಈಗ ರೈತ ಕೇಂದ್ರಿತವಾಗಿರಬೇಕು. ಪ್ರತಿಯೊಂದು ವೈಜ್ಞಾನಿಕ ಬೆಳವಣಿಗೆಯು ನೆಲದ ಸಾಕ್ಷಾತ್ಕಾರಕ್ಕೆ ಪರಸ್ಪರ ಸಂಬಂಧ ಹೊಂದಿರಬೇಕು. ಇದರ ಪರಿಣಾಮವನ್ನು ನೆಲದ ಮೇಲೆ ಅನುಭವಿಸಬೇಕು........ ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಸಾಟಿಯಿಲ್ಲದ ವ್ಯಾಪ್ತಿಯನ್ನು ಹೊಂದಿದೆ. ಆ ವ್ಯಾಪ್ತಿಯು ನೆಲದ ಮೇಲೆ ಪ್ರತಿಬಿಂಬಿತವಾಗಬೇಕು. ಅದು ಪ್ರತಿಯೊಬ್ಬ ರೈತರ ಕಿವಿಯಲ್ಲಿ ಪ್ರತಿಧ್ವನಿಸಬೇಕು, ”ಎಂದು ಅವರು ಹೇಳಿದರು.
ಇತ್ತೀಚಿನ ಆರ್ಥಿಕ ಬೆಳವಣಿಗೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಆಕಾಂಕ್ಷೆಯ ಪ್ರತಿಬಿಂಬವಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿಯವರು, “ನಾವೀಗ ವಿಸ್ತೃತ ಆರ್ಥಿಕ ಪ್ರಗತಿಯನ್ನು ನೋಡುತ್ತಿದ್ದು, ಇದು ಉತ್ತಮ ಆರ್ಥಿಕ ಬೆಳವಣಿಗೆಯಾಗಿದೆ. ನಾವು ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದ್ದು, ತ್ವರಿತ ಬೆಳವಣಿಗೆ ಕಾಣುತ್ತಿದ್ದೇವೆ. ನಾವೀಗ ಒಂದು ಮೈಲಿಗಲ್ಲಿನಿಂದ ಮತ್ತೊಂದು ಮೈಲಿಗಲ್ಲಿನತ್ತ ಸಾಗುತ್ತಿದ್ದೇವೆ. ನಾವು ಅಸಾಧಾರಣ ಮೂಲಸೌಕರ್ಯ ಪ್ರಗತಿಗೆ ಕಾರಣವಾಗಿದ್ದೇವೆ. ನಾವು ಆಳವಾದ ಡಿಜಿಟಲೀಕರಣ ಹೊಂದಿದ್ದು, ತಾಂತ್ರಿಕವಾಗಿ ಅತ್ಯುತ್ತಮ ಪ್ರಗತಿ ಕಾಣುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಚಿತ್ರಣ, ಪ್ರಧಾನಮಂತ್ರಿಯವರ ಚಹರೆಯ ಮೂಲಕ ನಾವು ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಪ್ರಗತಿಗೆ ಕಾರಣವಾಗಿದ್ದೇವೆ. ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿಯೂ ಪರಿವರ್ತನೆಯಾಗುತ್ತಿದ್ದು, ಇದು ರಾಷ್ಟ್ರೀಯ ಮಹತ್ವಾಕಾಂಕ್ಷೆಯಾಗಿದೆ. ರಸ್ತೆಗಳ ನಂತರ, ವಾಯುಮಾರ್ಗದ ಬಳಿಕ, ಡಿಜಿಟಲ್ ಸಂಪರ್ಕದ ತರುವಾಯ, ಇನ್ನೂ ಅನೇಕ ವಲಯಗಳಲ್ಲಿ ಜಗತ್ತಿನಲ್ಲಿ ನಾವು ಅತ್ಯಂತ ಹೆಚ್ಚಿನ ಮಹತ್ವಾಕಾಂಕ್ಷೆಯ ದೇಶವಾಗಿ ಪರಿವರ್ತನೆಯಾಗಿದ್ದೇವೆ. ಅಲ್ಲದೇ ಶೌಚಾಲಯ ನಿರ್ಮಾಣ, ಕೊಳಾಯಿ ಮೂಲಕ ನೀರು, ಅನಿಲ ಸಂಪರ್ಕ ಸೇರಿದಂತೆ ಇನ್ನೂ ಅನೇಕ ಸಾಧನೆಗಳಿವೆ. ಕೈಗೆಟುವ ದರದಲ್ಲಿ ವಸತಿ ಸೌಲಭ್ಯ, ವ್ಯಾಪಕ ಪ್ರಮಾಣದಲ್ಲಿ ಬ್ಯಾಂಕಿಂಗ್ ಒಳಗೊಳ್ಳುವಿಕೆ ಇನ್ನೂ ಅನೇಕ ವಲಯಗಳಿವೆ. ಆದ್ದರಿಂದ ಇವು ನಮ್ಮ ಕನಸನ್ನು ಮೀರಿದ ಸಾಧನೆಗಳಾಗಿವೆ. ಹಳ್ಳಿಗಳಿಗೆ ಇಂತಹ ಸೌಲಭ್ಯ ಸಿಗುತ್ತದೆ ಎಂದು ನಮ್ಮ ಸಾಮಾನ್ಯ ಜನತೆ ಯೋಚಿಸಿರಲು ಸಾಧ್ಯವಿಲ್ಲ. ಶೌಚಾಲಯ, ಕೊಳವೆ ಮೂಲಕ ನೀರು, ಅನಿಲ ಸಂಪರ್ಕ, ಕೈಗೆಟುವ ದರದಲ್ಲಿ ವಸತಿ, ರಸ್ತೆ ಸಂಪರ್ಕ, ಅಂತರ್ಜಾಲ ಸಂಪರ್ಕವನ್ನು ಹೊಂದಿದ್ದೇವೆ. ಇವುಗಳ ಬಗ್ಗೆ ನಾವು ಎಂದಿಗೂ ಯೋಚಿಸಿರಲಿಲ್ಲ, ಆದ್ದರಿಂದ प्रधानमंत्री जी ने देश में एक वायुमंडल पैदा कर दिया, “ಯೆ ದಿಲ್ ಮಾಂಗೇ ಮೋರ್”.”
*****
(Release ID: 2093505)
Visitor Counter : 12