ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಪಿಎಂ-ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ವಿವಿಧ ಘಟಕಗಳ ಅನುಷ್ಠಾನಕ್ಕಾಗಿ ಕಾರ್ಯಾಚರಣಾ ಮಾರ್ಗಸೂಚಿ - ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಬಿಡುಗಡೆ

Posted On: 14 JAN 2025 12:55PM by PIB Bengaluru

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ನವೀಕರಿಸಬಹುದಾದ ಇಂಧನ ಸೇವಾದಾತ ಕಂಪೆನಿ (RESCO) ಮಾದರಿಗಳು/ ಬಳಕೆ ಆಧಾರಿತ ಒಟ್ಟುಗೂಡಿಸುವಿಕೆ ಮಾದರಿ (ಯುಎಲ್‌ಎ) ಮಾದರಿಗಳಿಗಾಗಿ 'ಪಾವತಿ ಭದ್ರತಾ ಕಾರ್ಯವಿಧಾನ' ಮತ್ತು 'ಕೇಂದ್ರ ಹಣಕಾಸು ನೆರವು' ಘಟಕದ ಅನುಷ್ಠಾನಕ್ಕಾಗಿ ಯೋಜನಾ ಮಾರ್ಗಸೂಚಿಗಳನ್ನು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಿಸಿದೆ.

ಈ ಯೋಜನೆಯು ಗ್ರಾಹಕರಿಗೆ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಅಳವಡಿಸಿಕೊಳ್ಳಲು ಎರಡು ಪರ್ಯಾಯ ಅನುಷ್ಠಾನ ಮಾದರಿಗಳನ್ನು ನೀಡುತ್ತದೆ: ಮೊದಲನೆಯದು, ರೆಸ್ಕೋ (ನವೀಕರಿಸಬಹುದಾದ ಇಂಧನ ಸೇವಾದಾತ ಕಂಪೆನಿ) ಮಾದರಿ – ಇದರಡಿ ಸೇವಾದಾತ ಕಂಪೆನಿಗಳು ಸೌರ ಮೇಲ್ಛಾವಣಿಗಳ ಅಳವಡಿಕೆಗೆ ಹೂಡಿಕೆ ಮಾಡಲಿದ್ದು, ಗ್ರಾಹಕರು ಅಳವಡಿಕೆ ವೆಚ್ಚವನ್ನು ಭರಿಸದೇ, ಬಳಸುವ ವಿದ್ಯುತ್‌ ಗೆ ಮಾತ್ರ ಪಾವತಿ ಮಾಡಬಹುದಾಗಿರುತ್ತದೆ; ಇನ್ನು ಎರಡನೆಯದು – ಬಳಕೆ ಆಧಾರಿತ ಒಗ್ಗೂಡುವಿಕೆ (ಯುಎಲ್ಎ) ಮಾದರಿ, ಇದರಡಿ ಪ್ರಸರಣಾ ಕಂಪೆನಿ (ಡಿಸ್ಕಾಂ) ಗಳು  ಅಥವಾ ರಾಜ್ಯ ಸ್ವಾಮ್ಯದ ಘಟಕಗಳು ನಿವಾಸಿಗಳ ಪರವಾಗಿ ವೈಯಕ್ತಿಕವಾಗಿ ಅವರ ಮನೆಗಳ ಮೇಲೆ ಸೌರ ಮೇಲ್ಛಾವಣಿ ಯೋಜನೆಯನ್ನು ಅನುಷ್ಠಾನ ಮಾಡಲಿದೆ. 

ಈ ಯೋಜನೆ ಅಂಶದಡಿಯಲ್ಲಿ, ವಸತಿ ವಲಯದಲ್ಲಿ ರೆಸ್ಕೋ-ಆಧಾರಿತ ಗ್ರಿಡ್-ಸಂಪರ್ಕಿತ ಮೇಲ್ಛಾವಣಿ ಸೌರ ಮಾದರಿಗಳಲ್ಲಿ ಅಪಾಯ-ಮುಕ್ತ ಹೂಡಿಕೆಗಳಿಗಾಗಿ ಪಾವತಿ ಭದ್ರತಾ ಕಾರ್ಯವಿಧಾನ (PSM) ಗಾಗಿ ₹100 ಕೋಟಿ ಕಾರ್ಪಸ್ ನಿಧಿಯನ್ನು ಮೀಸಲಿಡಲಾಗಿದೆ; ಸಚಿವಾಲಯದ ಸೂಕ್ತ ಅನುಮೋದನೆಯ ನಂತರ ಇತರ ಅನುದಾನಗಳು, ನಿಧಿಗಳು ಮತ್ತು ಬೇರೆ ಬೇರೆ ಮೂಲಗಳಿಂದ ಇದಕ್ಕೆ ಪೂರಕ ನಿಧಿ ಒದಗಿಸಬಹುದಾಗಿದೆ.

ಈ ಮಾರ್ಗಸೂಚಿಗಳು ರಾಷ್ಟ್ರೀಯ ಪೋರ್ಟಲ್ (https://www.pmsuryaghar.gov.in/) ಮೂಲಕ ಗ್ರಾಹಕರು ಕೈಗೊಂಡಿರುವ ಅಸ್ತಿತ್ವದಲ್ಲಿರುವ ಅನುಷ್ಠಾನ ವಿಧಾನಕ್ಕೆ (ಕ್ಯಾಪೆಕ್ಸ್ ಮೋಡ್) ಹೆಚ್ಚುವರಿಯಾಗಿವೆ ಮತ್ತು ಈ ಪರ್ಯಾಯ ಮಾದರಿಗಳು ರಾಷ್ಟ್ರೀಯ ಪೋರ್ಟಲ್ ಆಧಾರಿತ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಯೋಜನೆಯ ಮಾರ್ಗಸೂಚಿಗಳನ್ನು ಇಲ್ಲಿ ಪಡೆಯಬಹುದು.

 

*****


(Release ID: 2092923) Visitor Counter : 15