ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಂಶೋಧನೆಗಳು ಅಧಿಕೃತ, ಪ್ರಾಯೋಗಿಕವಾಗಿರಬೇಕು; ಮತ್ತು, ಹಣದ ದಾಹದ ಪ್ರಾಮುಖ್ಯತೆಯೊಂದಿಗೆ ಮಾಡಿ ಕವಾಟುಗಳಲ್ಲಿ ಧೂಳು ಹಿಡಿಯುವ ರೀತಿಯ ಸಂಶೋಧನಾ ಪ್ರಬಂಧಗಳಿಂದ ದೂರವಿರಲು ಭಾರತದ ಉಪರಾಷ್ಟ್ರಪತಿಯವರು ಕರೆ ನೀಡಿದರು 


ಪ್ರಪಂಚವು ನಮ್ಮನ್ನು ಸಂಶೋಧನೆ ಮತ್ತು ಅಭಿವೃದ್ಧಿಯ ಕಠಿಣ ವ್ಯವಸ್ಥೆಯಾಗಿ ನೋಡಿದಾಗ ಮಾತ್ರ ಆತ್ಮನಿರ್ಭರತೆ ತುಂಬಿ ಬರುತ್ತದೆ-ಉಪರಾಷ್ಟ್ರಪತಿ

ನಮ್ಮ ಹಿಂದಿನ ಸಾಧನೆಗಳ ಮೇಲೆ ನಾವು ನಮ್ಮ ಪ್ರಶಸ್ತಿಗಳನ್ನು ಪಡೆದು ವಿಶ್ರಮಿಸಲು ಸಾಧ್ಯವಿಲ್ಲ -ಉಪರಾಷ್ಟ್ರಪತಿ

ದೇಶೀಕರಣವು ನಟ್ಸ್ ಮತ್ತು ಬೋಲ್ಟ್‌ ಗಳಿಗೆ ಸೀಮಿತವಾದಾಗ ಅದು ಪ್ರಾಮುಖ್ಯತೆಯ ಕಡೆಗೆ ಗಮನಹರಿಸುವುದಿಲ್ಲ -ಉಪರಾಷ್ಟ್ರಪತಿ

ವಿನ್ಯಾಸದಿಂದ ತಯಾರಿಕೆ ಅಂತಿಮ ಹಂತದವರೆಗೆ ಅರೆವಾಹಕ ಕ್ರಾಂತಿಯನ್ನು ಬಿಇಎಲ್ ಮುನ್ನಡೆಸಬೇಕು - ಉಪರಾಷ್ಟ್ರಪತಿ

ಹೊಸತನವನ್ನು ಕಂಡುಕೊಳ್ಳುವ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಶಾಲಾ-ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳ ಮನದಲ್ಲಿ ಮೂಡಬೇಕು-ಉಪರಾಷ್ಟ್ರಪತಿ

ಬಿಇಎಲ್ ನಲ್ಲಿ ಇಂದು ನಡೆದ ಆರ್&ಡಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಿದರು

Posted On: 11 JAN 2025 3:28PM by PIB Bengaluru

ಭಾರತದ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು ಇಂದು ನೆಲದ ವಾಸ್ತವಿಕತೆಯನ್ನು ಬದಲಾಯಿಸಲು ಸಮರ್ಥವಾಗಿರುವ ಅಧಿಕೃತ, ವಾಸ್ತವಿಕ ಮತ್ತು ಪ್ರಾಯೋಗಿಕ ಸಂಶೋಧನೆಗೆ ಕರೆ ನೀಡಿದರು.

ಬೆಂಗಳೂರಿನಲ್ಲಿ ಇಂದು ನಡೆದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಆರ್ & ಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾರತದ ಉಪರಾಷ್ಟ್ರಪತಿಯವರು, ಜಾಗತಿಕ ದೃಷ್ಟಿಕೋನದಲ್ಲಿ, ನೀವು ನೋಡಿದರೆ, ನಮ್ಮ ಪೇಟೆಂಟ್ ಕೊಡುಗೆಯು ಮುಖ್ಯವಾಗಿ ಅಪೇಕ್ಷಿತವಾಗಿರುವುದನ್ನು ಬಿಟ್ಟುಬಿಡುತ್ತವೆ. ಸಂಶೋಧನೆಯ ವಿಷಯಕ್ಕೆ ಬಂದರೆ, ಸಂಶೋಧನೆಯು ಅಧಿಕೃತವಾಗಿರಬೇಕು. ಸಂಶೋಧನೆಯು ಅತ್ಯಾಧುನಿಕವಾಗಿರಬೇಕು. ಸಂಶೋಧನೆಯು ಪ್ರಾಯೋಗಿಕವಾಗಿರಬೇಕು. ಸಂಶೋಧನೆಯು ನೆಲದ ವಾಸ್ತವತೆಯ ಸ್ಥಿತಿಗತಿಯನ್ನು ಬದಲಾಯಿಸಬೇಕು. ಕೇವಲ ಮೇಲ್ಮೈಪದರನ್ನು ಮೀರಿದ ಸಂಶೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಸಂಶೋಧನೆಯು ಆಳವಾದ , ವಾಸ್ತವವಾಗಿರುವ,  ನೀವು ತರಲು ಬಯಸುವ ಬದಲಾವಣೆಯೊಂದಿಗೆ ಪರಸ್ಪರ ಸಂಬಂಧ ಹೊಂದಿರಬೇಕು.

“ಅಧಿಕೃತ ಸಂಶೋಧನೆಯನ್ನು ಮಾತ್ರ ಸಂಶೋಧನೆ ಎಂದು ಗುರುತಿಸಬೇಕು. ಸಂಶೋಧನೆಯನ್ನು ಕಡೆಗಣಿಸುವವನು ಕಠಿಣ ಮಾನದಂಡಗಳನ್ನು ಹೊಂದಿರಬೇಕು. ಉದಾಹರಣೆಯೆಂದರೆ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟರೆ, ಪ್ರಸ್ತುತಪಡಿಸುವ ಆರ್ಥಿಕವಾಗಿ ಲಾಭದಾಯಕ ಕ್ಷಣಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸಂಶೋಧನಾ ಪ್ರಬಂಧಗಳು ಆನಂತರ ಕಪಾಟಿನಲ್ಲಿ ಹೋಗಿ ಧೂಳನ್ನು ಸಂಗ್ರಹಿಸುವುದು ರದ್ದಿಗಳಾಗುವುದನ್ನು ನೋಡಿದ್ದೇವೆ, ಇಂತಹ ಸಂಶೋಧನಾ ಪ್ರಬಂಧಗಳನ್ನು ನಾವು ದೂರವಿಡಬೇಕು. ನಿಮ್ಮ ಟ್ರ್ಯಾಕ್ ರೆಕಾರ್ಡ್ ಅತ್ಯಂತ ಪ್ರಭಾವಶಾಲಿಯಾಗಿದೆ. ಆದರೆ ಇಡೀ ರಾಷ್ಟ್ರವು ನಿರೀಕ್ಷೆಯ ಮನಸ್ಥಿತಿಯಲ್ಲಿದ್ದಾಗ, ಅದು ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಕೇವಲ ನಮ್ಮ ಹಿಂದಿನ ಸಾಧನೆಗಳ ಮೇಲೆ ಮಾತ್ರ ನಾವು ನಮ್ಮ ಪ್ರಶಸ್ತಿಗಳನ್ನು ಪಡೆದು ಆರಾಮವಾಗಿ ವಿಶ್ರಮಿಸಲು ಸಾಧ್ಯವಿಲ್ಲ.

ವಿವಿಧ ಕ್ಷೇತ್ರದಲ್ಲಿ, ಅದರಲ್ಲೂ ಸೆಮಿಕಂಡಕ್ಟರ್ ಕ್ರಾಂತಿ ಮತ್ತು ಹ್ಯಾಂಡ್‌ ಹೆಲ್ಡ್ ಸ್ಟಾರ್ಟ್‌ಅಪ್‌ ಗಳನ್ನು ಮುನ್ನಡೆಸಲು ಬಿಇಎಲ್ ಗೆ ಕರೆ ನೀಡಿದ ಉಪರಾಷ್ಟ್ರಪತಿಯವರು, “ನಿಮ್ಮ ಸಂಸ್ಥೆಯು ಈಗಲೇ..... ವಿನ್ಯಾಸದಿಂದ ತಯಾರಿಕೆಯವರೆಗೆ ಅರೆವಾಹಕ ಕ್ರಾಂತಿಯನ್ನು ಮುನ್ನಡೆಸಬೇಕು.  ಅದರ ಬಗ್ಗೆ ಯೋಚಿಸಿ, ಚಿಂತನೆ ಮಾಡಿ, ಬುದ್ದಿಮತ್ತೆ ಮಾಡಿ, ನಿಮ್ಮ ಮೆದುಳನ್ನು ಒರೆಗೆ ಹಚ್ಚಿ, ಆ ನಿಟ್ಟಿನಲ್ಲಿ ಬಳಕೆ ಮಾಡಿ.  ಇದು ಇಂದಿನ ಅಗತ್ಯವೂ ಕೂಡ ಆಗಿದೆ.  ನಾವು ಉಪಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.  ಎರಡು, ಫ್ರೆಂಡ್‌ ಶೊರಿಂಗ್ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಸ್ಥಾಪಿಸಿ...ಇದನ್ನು ಮಾಡಿ ತೋರಿಸಿ.  ದೇಶೀಯ ಸ್ಟಾರ್ಟ್‌ಅಪ್‌ ಗಳು ಮತ್ತು ಸ್ಥಳೀಯ ಘಟಕಗಳ ಅಭಿವೃದ್ಧಿಯನ್ನು ಪೋಷಿಸಿ. ಇವುಗಳನ್ನು ಕೇವಲ ಪದಗಳಾಗಿ ನೋಡಬೇಡಿ. ಕೈ ಹಿಡಿಯುವ ಅಗತ್ಯವಿರುವ ಸ್ಟಾರ್ಟ್‌ಅಪ್‌ ಗಳನ್ನು ಗುರುತಿಸಿ, ಪ್ರಯತ್ನಿಸಿ ಸಾಧಿಸಿ ತೋರಿಸಿಕೊಡಿ. ನಮ್ಮಲ್ಲಿ  ಸಾಹಸ ಮಾಡಲು ಬಯಸುವ ಸಾಕಷ್ಟು ಜನರಿದ್ದಾರೆ. ” ಎಂದು ಹೇಳಿದರು. 

ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಸಾಧಿಸುವಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಭಾರತದ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು, “ಪೇಟೆಂಟ್‌ ಗಳ ಮೂಲಕ ನಮ್ಮ ಕೊಡುಗೆಯ ವಿಷಯಕ್ಕೆ ಬಂದಾಗ, ನಾವು ಕೊಡುಗೆ ನೀಡುತ್ತಿರುವ ಕ್ಷೇತ್ರಗಳಲ್ಲಿ ಅಲ್ಲ. ನಮ್ಮ ಉಪಸ್ಥಿತಿಯು ಚಿಕ್ಕದಾಗಿದೆ. ನಾವು ಮಾನವೀಯತೆಯ ಆರನೇ ಒಂದು ಭಾಗ. ನಮ್ಮ ಪ್ರತಿಭೆಯು ನಮಗೆ ವ್ಯಾಪಕವಾದ ಭಾಗವಹಿಸುವಿಕೆಯನ್ನು ಅನುಮತಿಸುತ್ತದೆ.  ಮತ್ತು ಅದಕ್ಕಾಗಿ, ವ್ಯವಸ್ಥಾಪಕ ಸ್ಥಾನ, ಆಡಳಿತದ ಸ್ಥಾನದಲ್ಲಿರುವ ಪ್ರತಿಯೊಬ್ಬರೂ ಉಪಕ್ರಮವನ್ನು ತೆಗೆದುಕೊಳ್ಳಬೇಕು. ಇದು ಅಗತ್ಯವಿದೆ ಏಕೆಂದರೆ ನಾವು ಸಂಶೋಧನೆ ಮತ್ತು ಅಭಿವೃದ್ಧಿಗೆ ಚಂದಾದಾರರಾದಾಗ ಮಾತ್ರ ಜಾಗತಿಕ ಸಮುದಾಯದಲ್ಲಿ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು. ಆತ್ಮನಿರ್ಭರ ಭಾರತದ ಪರಿಕಲ್ಪನೆಯೇ ಇದರ ಮೇಲೆ ಬೇರೂರಿದೆ. ಮತ್ತು, ಪ್ರಪಂಚವು ನಮ್ಮನ್ನು ಸಂಶೋಧನೆ ಮತ್ತು ಅಭಿವೃದ್ಧಿಯ ಕಠಿಣ ವ್ಯವಸ್ಥೆಯಾಗಿ ನೋಡಿದಾಗ ಮಾತ್ರ ನಮ್ಮಲ್ಲಿ ಆತ್ಮನಿರ್ಭರ್ತವು ಸಾಧ್ಯವಾಗುದು." ಎಂದು ಹೇಳಿದರು.

ಸ್ವದೇಶಿಕರಣದ ಕುರಿತು ಮಾತನಾಡಿದ ಅವರು, “ನಾನು ಸಂಪೂರ್ಣ ಸ್ವದೇಶಿ ಘಟಕವನ್ನು ನೋಡುವ ಸಂದರ್ಭವನ್ನು ಹೊಂದಿದ್ದೇನೆ, ಸುವರ್ಣಾವಕಾಶ ಪಡೆದಿದ್ದೇನೆ ಮತ್ತು ನಾವು ಹೆಚ್ಚು ಸ್ವದೇಶಿಕರಣವನ್ನು ಹೊಂದಿರುವ ಉಪಕರಣಗಳನ್ನು ಹೊಂದಿದ್ದೇವೆ.  ಆದರೆ ನೋಡಿ, ನಮ್ಮಲ್ಲಿ ಎಂಜಿನ್ ಇದೆಯೇ?  ನಾವು ಮೂಲ ವಸ್ತುಗಳನ್ನು ಹೊಂದಿದ್ದೇವೆಯೇ?  ಇತರರು ನಮ್ಮಿಂದ ನೋಡಲು ಬಯಸುತ್ತಿರುವುದನ್ನು ನಾವು ಹೊಂದಿದ್ದೇವೆಯೇ?  ಅಥವಾ ನಾವು ಅದನ್ನು ಸಾಮಾನ್ಯ ಅಂಶಗಳಿಗೆ ಸೀಮಿತಗೊಳಿಸುತ್ತಿದ್ದೇವೆಯೇ? ನಟ್ಸ್ ಮತ್ತು ಬೋಲ್ಟ್‌ ಗಳ ವಿಷಯದಲ್ಲಿ ನಾವು ಸ್ಥಳೀಯರು ಎಂದು ತೃಪ್ತಿಪಡುವುದರಲ್ಲಿ ಅರ್ಥವಿಲ್ಲ. ನಮ್ಮ ಸ್ವದೇಶಿಕರಣದ ಗುರಿ, ಅದರಲ್ಲಿ ಶೇಕಡಾ 100 ಪರಿಪೂರ್ಣತೆ ಹೊಂದಿರಬೇಕು. ” ಎಂದು ಹೇಳಿದರು.

ಶಾಲಾ-ಕಾಲೇಜುಗಳಲ್ಲಿಯೇ ನಾವೀನ್ಯತೆಯ ಮನೋಭಾವವನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, “ರಾಷ್ಟ್ರವು ಪ್ರತಿಭೆಯಿಂದ ತುಂಬಿದೆ.  ನಮ್ಮ ಚಿಕ್ಕ ವಯಸ್ಸಿನ ಹುಡುಗರು ಮತ್ತು ಹುಡುಗಿಯರು, ಅವರು ಇನ್ನೂ ವಿಸ್ತಾರವಾದ, ವಿಸ್ತೃತ ಅವಕಾಶಗಳ ಗುಚ್ಛದ ಬಗ್ಗೆ ತಿಳಿದಿರುವುದಿಲ್ಲ. ಅವರು ಸರ್ಕಾರಿ ಕೆಲಸಗಳ ಆಸೆಯಲ್ಲಿ, ಆಗಲೇ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.  ಅದೃಷ್ಟವಶಾತ್, ರಾಷ್ಟ್ರೀಯ ಶಿಕ್ಷಣ ನೀತಿಯು ದೊಡ್ಡ ಬದಲಾವಣೆಯನ್ನು ತಂದಿದೆ.  ನಾವು ಕೇವಲ ಡಿಗ್ರಿಗಳಿಂದ ದೂರವಾಗುತ್ತಿರುವುದನ್ನು ಕಾಣಬೇಕು, ಈ ರೀತಿಯ ಮನಸ್ಸು ಉತ್ತಮವಾಗಿ ಬೆಳೆಸಿ, ವ್ಯವಸ್ಥೆ ಬದಲಾಯಿಸಿಕೊಳ್ಳಿ. ನಾವು ಕೌಶಲ್ಯ ಆಧಾರಿತರಾಗುತ್ತಿದ್ದೇವೆ. ಉತ್ತಮ ಕೌಶಲ್ಯ ಬೆಳೆಸಿಕೊಳ್ಳಬೇಕು. ಇದರ ಜೊತೆಗೆ , ಈಗ ಅತ್ಯಂತ ಮೂಲಭೂತವಾದದ್ದು ಆವಿಷ್ಕಾರ ಮಾಡುವ ಮನೋಭಾವ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ನಮ್ಮಲ್ಲಿ ಮೂಡುವ ಪರಿಸ್ಥಿತಿ ನಿರ್ಮಾಣವಾಗಬೇಕು.  ಅದು ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ಸವ ರೀತಿಯಲ್ಲಿ, ಪ್ರಜ್ವಲಿಸಿ ಉರಿಯುತ್ತಿರುವ ಬೆಂಕಿ ರೀತಿಯಲ್ಲಿ ಎಲ್ಲೆಡೆ ಕಾಣಲು ಸಿಗಬೇಕು." ಎಂದು ಹೇಳಿದರು 

ಈ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ಗವರ್ನರ್ ಶ್ರೀ ತಾವರಚಂದ್ ಗೆಹ್ಲೋಟ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಿಎಂಡಿ  ಶ್ರೀ ಮನೋಜ್ ಜೈನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 

*****
 


(Release ID: 2092105) Visitor Counter : 21


Read this release in: Tamil , English , Urdu , Hindi