ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಿಬಿಐ ಅಭಿವೃದ್ಧಿಪಡಿಸಿರುವ ‘ಭಾರತ್ ಪೊಲ್” ಪೋರ್ಟಲ್ ಅನ್ನು ಜನವರಿ 07, 2025 ರಂದು ನವದೆಹಲಿಯಲ್ಲಿ ಲೋಕಾರ್ಪಣೆ ಮಾಡಲಿರುವ   ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಕೇಂದ್ರ ಸರ್ಕಾರ ಕಾನೂನು ಜಾರಿ ಸಂಸ್ಥೆಗಳನ್ನು ಬಲಪಡಿಸಲು ಹಲವಾರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ

‘ಭಾರತ್ ಪೊಲ್’ ಪೋರ್ಟಲ್ ಮೂಲಕ ದೇಶದ ಕಾನೂನು ಜಾರಿ ಸಂಸ್ಥೆಗಳು ನೈಜ ಸಮಯಕ್ಕೆ ಮಾಹಿತಿ ಪಡೆಯಬಹುದಾಗಿದೆ

ಈ ಪೋರ್ಟಲ್ ಇಂಟರ್ ಪೋಲ್ ಒಳಗೊಂಡಂತೆ ರೆಡ್ ಕಾರ್ನರ್ ನೋಟಿಸ್ ಮತ್ತು ಇತರೆ ವರ್ಣ ಸಂಹಿತೆಯ ಇಂಟರ್ ಪೋಲ್ ನೋಟಿಸ್ ಗಳ ಮೂಲಕ ಮಾಡುವ ಮನವಿಗಳನ್ನು ಸುಗಮಗೊಳಿಸುತ್ತದೆ

ಪೊಲೀಸ್ ಅಧಿಕಾರಿಗಳಿಗೆ ಕ್ಷೇತ್ರಮಟ್ಟದಲ್ಲಿ ಅಪರಾಧಗಳು ಮತ್ತು ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ‘ಭಾರತ್ ಪೊಲ್’ ಪೋರ್ಟಲ್ ಪರಿವರ್ತನೆಯ ಸಾಧನವಾಗಲಿದೆ

‘ಭಾರತ್ ಪೊಲ್’ ಪೋರ್ಟಲ್ ಅಂತಾರಾಷ್ಟ್ರೀಯ ಅಪರಾಧಗಳನ್ನು ಹತ್ತಿಕ್ಕಲು ಭಾರತದ ಪ್ರಯತ್ನಗಳನ್ನು ಬಲಗೊಳಿಸಲಿದ್ದು, ಸುಲಭ ಮತ್ತು ತ್ವರಿತವಾಗಿ ಅಂತಾರಾಷ್ಟ್ರೀಯ ನೆರವು ದೊರೆಯವಂತೆ ಮಾಡಲಿದೆ

ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಶಸ್ತಿ ಗೆದ್ದ ಸಿಬಿಐ ಅಧಿಕಾರಿಗಳನ್ನು ಗೌರವಿಸಲಿದ್ದಾರೆ

Posted On: 06 JAN 2025 6:15PM by PIB Bengaluru

ಕೇಂದ್ರೀಯ ತನಿಖಾ ದಳ [ಸಿಬಿಐ] ಅಭಿವೃದ್ಧಿಪಡಿಸಿರುವ ‘ಭಾರತ್ ಪೊಲ್” ಪೋರ್ಟಲ್ ಅನ್ನು ಜನವರಿ 07, 2025 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಕೇಂದ್ರ ಸರ್ಕಾರ ಕಾನೂನು ಜಾರಿ ಸಂಸ್ಥೆಗಳನ್ನು ಬಲಪಡಿಸಲು ಹಲವಾರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ.‘ಭಾರತ್ ಪೊಲ್’ ಪೋರ್ಟಲ್ ಮೂಲಕ ದೇಶದ ಎಲ್ಇಎ [ಕಾನೂನು ಜಾರಿ ಸಂಸ್ಥೆಗಳು]  ನೈಜ ಸಮಯಕ್ಕೆ ಮಾಹಿತಿ ಪಡೆಯಬಹುದಾಗಿದೆ.

ಭಾರತದಲ್ಲಿ ಇಂಟರ್ ಪೋಲ್ ಕೇಂದ್ರೀಯ ತನಿಖಾ ದಳ [ಎನ್.ಸಿ.ಬಿ – ನವದೆಹಲಿ] ಸಿಬಿಐ ಕಾನೂನು ಜಾರಿ ಸಂಸ್ಥೆಗಳು ಒಳಗೊಂಡಂತೆ ದೇಶದ ವಿವಿಧ ಸಂಸ್ಥೆಗಳ ಜೊತೆ ಕ್ರಿಮಿನಲ್ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ಪಡೆಯಲು ಸಹಕಾರಿಯಾಗಲಿದೆ. ರಾಜ್ಯ, ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಂತದಲ್ಲಿ ಘಟಕ ಅಧಿಕಾರಿಗಳು [ಯುಒಗಳು], ಪೊಲೀಸ್ ಆಯುಕ್ತರು ಮತ್ತು ಶಾಖಾ ಮುಖ್ಯಸ್ಥರು, ಮತ್ತು ತನ್ನ ಸಂಘಟನೆಗಳ ವಲಯದಲ್ಲಿ ಸಂಪರ್ಕ ಅಧಿಕಾರಿಗಳಿಗೆ [ಐಎಲ್ಒಗಳು] ಸಮನ್ವಯತೆ ಹೊಂದಲು ಸಹಕಾರಿಯಾಗಲಿದೆ.  ಪ್ರಸ್ತುತ ಸಿಬಿಐ, ಐಎಲ್ಒಗಳು ಮತ್ತು ಯುಒಗಳ ನಡುವೆ ಪತ್ರ, ಇ ಮೇಲ್ ಮತ್ತು ಫ್ಯಾಕ್ಸ್ ಮೂಲಕ ಸಂಪರ್ಕ ವ್ಯವಸ್ಥೆ ಇದೆ.   

ಸೈಬರ್-ಅಪರಾಧಗಳು, ಹಣಕಾಸು ಅಪರಾಧಗಳು, ಆಮೂಲಾಗ್ರವಾದ ಆನ್‌ಲೈನ್ ವಂಚನೆಗಳು, ಸಂಘಟಿತ ಅಪರಾಧಗಳು, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಇತ್ಯಾದಿಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಅಪರಾಧಗಳ ಹೆಜ್ಜೆಗುರುತುಗಳು, ಅಪರಾಧ ತನಿಖೆಗಳಲ್ಲಿ ತ್ವರಿತ ಮತ್ತು ನೈಜ-ಸಮಯದ ಅಂತರರಾಷ್ಟ್ರೀಯ ಸಹಾಯದ ಅಗತ್ಯವಿದೆ. ಈ ಸವಾಲುಗಳನ್ನು ಎದುರಿಸಲು ಸಿಬಿಐ ‘ಬಾರತ್ ಪೊಲ್’ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಇದು ಅಧಿಕೃತ ಜಾಲತಾಣವಾಗಿದೆ. ಇದು ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆ ವ್ಯಾಪ್ತಿಗೆ ತರಲಿದೆ. 

ಈ ಪೋರ್ಟಲ್ ಇಂಟರ್ ಪೋಲ್ ಒಳಗೊಂಡಂತೆ ರೆಡ್ ಕಾರ್ನರ್ ನೋಟಿಸ್ ಮತ್ತು ಇತರೆ ವರ್ಣ ಸಂಹಿತೆಯ ಇಂಟರ್ ಪೋಲ್ ನೋಟಿಸ್  ಮೂಲಕ ಮಾಡುವ ಮನವಿಗಳನ್ನು ಸುಗಮಗೊಳಿಸುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಕ್ಷೇತ್ರಮಟ್ಟದಲ್ಲಿ ಅಪರಾಧಗಳು ಮತ್ತು ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ‘ಭಾರತ್ ಪೊಲ್’ ಪೋರ್ಟಲ್ ಪರಿವರ್ತನೆಯ ಸಾಧನವಾಗಲಿದೆ.  

ತನಿಖಾ ವಲಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ರಾಷ್ಟ್ರಪತಿ ಪೊಲೀಸ್ ಪದಕ ಮತ್ತು ಕೇಂದ್ರ ಗೃಹ ಸಚಿವರ ಪದಕಗಳನ್ನು ಪಡೆದ 35 ಸಿಬಿಐ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪದಕ ಪ್ರದಾನ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಡಿಒಪಿಟಿ, ಕೇಂದ್ರೀಯ ಜಾಗೃತ ಆಯೋಗ ಮತ್ತು ಕೇಂದ್ರ ಪೊಲೀಸ್ ಸಂಘಟನೆಗಳು ಒಳಗೊಂಡಂತೆ ವಿವಿಧ ಸಚಿವಾಲಯ/ಇಲಾಖೆಗಳು ಭಾಗವಹಿಸಲಿದ್ದಾರೆ.

 

*****


(Release ID: 2090758) Visitor Counter : 21