ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೋ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು ಮತ್ತು ಲೋಕೋ ಪೈಲಟ್‌ಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ 


ಯುವ ಸ್ನೇಹಿತರ ಅದ್ಭುತ ಪ್ರತಿಭೆಯು ನನ್ನಲ್ಲಿ ಹೊಸ ಚೈತನ್ಯ ತುಂಬಿದೆ: ಪ್ರಧಾನಮಂತ್ರಿ

Posted On: 05 JAN 2025 8:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನಮೋ ಭಾರತ್ ರೈಲಿನಲ್ಲಿ ಸಹಿಬಾಬಾದ್ ಆರ್ ಆರ್ ಟಿ ಎಸ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ಆರ್ ಆರ್ ಟಿ ಎಸ್ ನಿಲ್ದಾಣದವರೆಗೆ ಸಂಚರಿಸಿದರು. ಪ್ರಯಾಣದ ಸಂದರ್ಭದಲ್ಲಿ ಅವರು ಯುವ ಸ್ನೇಹಿತರೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಈ ಯುವಸಮೂಹ ಪ್ರಧಾನಿ ಅವರಿಗೆ ಹಲವು ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದರು. 

ಪ್ರಧಾನಮಂತ್ರಿಗಳ ಬಗ್ಗೆ ಮತ್ತು ನವ, ಉದಯೋನ್ಮುಖ ಭಾರತದ ಬಗ್ಗೆ ಕವನ ವಾಚಿಸಿದ ಯುವತಿಯೊಂದಿಗೆ ಶ್ರೀ ಮೋದಿ ಅವರು ಸಂವಾದ ನಡೆಸಿ ಅವರನ್ನು ಶ್ಲಾಘಿಸಿದರು. ಶ್ರೀ ಮೋದಿ ಅವರಿಗೆ ಪೇಂಟಿಂಗ್ ಅನ್ನು ನೀಡಿದ ಮನೆಯ ಫಲಾನುಭವಿ ಹುಡುಗನೊಂದಿಗೆ ಸಂವಾದ ನಡೆಸಿದರು. ಹೊಸ ಮನೆಯ ಪ್ರಗತಿಯ ಬಗ್ಗೆ ಬಾಲಕನನ್ನು ವಿಚಾರಿಸಿದರು ಮತ್ತು ಶುಭ ಹಾರೈಸಿದರು. ಇನ್ನೋರ್ವ ಬಾಲಕಿ ಕೂಡ ಪ್ರಧಾನಮಂತ್ರಿಯವರ ಬಗ್ಗೆ ಕವನ ವಾಚಿಸಿದರು, ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ನಂತರ ಪ್ರಧಾನಮಂತ್ರಿಯವರು ಮಹಿಳಾ ಲೋಕೋ ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಲೋಕೋ ಪೈಲೆಟ್ ಗಳು ತಮ್ಮ ಕೆಲಸದ ಬಗ್ಗೆ ಸಂತೋಷ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. ಅತ್ಯಂತ ಏಕಾಗ್ರತೆಯಿಂದ ಕೆಲಸ ಮಾಡುವಂತೆ ಮನವಿ ಮಾಡಿದ ಪ್ರಧಾನಮಂತ್ರಿ ಅವರು, ಹೊಸ ಕೆಲಸಕ್ಕೆ ಶುಭ ಹಾರೈಸಿದರು.

 

 

*****


(Release ID: 2090412) Visitor Counter : 26