ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ವರ್ಷಾಂತ್ಯದ ಪರಾಮರ್ಶೆ- ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ-2024
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯನ್ನು 1ನೇ ಜನವರಿ, 2024 ರಿಂದ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ
ಮಾರ್ಚ್, 2024 ರೊಳಗೆ ಯಶಸ್ವಿಯಾಗಿ ಜಾರಿಗೊಳಿಸಲಾದ ಸಾರವರ್ಧಿತ ಅಕ್ಕಿಯ ಪೂರೈಕೆ, ಶೇ.100 ರಷ್ಟು ಎತ್ತುವಿಕೆಯ ಸಾಧನೆ; ಸಾಂಪ್ರದಾಯಿಕ ಗಿರಣಿ ಅಕ್ಕಿಯನ್ನು ಸಾರವರ್ಧಿತ ಅಕ್ಕಿಯಿಂದ ಬದಲಾಯಿಸಲಾಗಿದೆ
ಭಾರತದಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಶೇ.100 ರಷ್ಟು ಡಿಜಿಟಲೀಕರಣಗೊಂಡ ಪಡಿತರ ಚೀಟಿಗಳು
ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳ ಪಾರದರ್ಶಕ ವಿತರಣೆಗಾಗಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ePoS) ಸಾಧನಗಳನ್ನು ಬಳಸಿಕೊಂಡು ದೇಶದಲ್ಲಿ ಶೇ.99.8 ರಷ್ಟು ನ್ಯಾಯಬೆಲೆ ಅಂಗಡಿಗಳು ಸ್ವಯಂಚಾಲಿತವಾಗಿವೆ
ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವ ದೇಶಾದ್ಯಂತ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಸಕ್ರಿಯಗೊಳಿಸಲಾಗಿದೆ
ಇ-ಎನ್ ಡಬ್ಲ್ಯೂ ಆರ್ ಗಳ ಬದಲು ಸಾಲ ಖಾತರಿ ಯೋಜನೆಯು ಕೊಯ್ಲಿನ ನಂತರದ ಸಾಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ರೈತರ ಆದಾಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ
ಆಹಾರ ಧಾನ್ಯಗಳ ರೂಟ್ ಆಪ್ಟಿಮೈಸೇಶನ್ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ
Posted On:
20 DEC 2024 11:36AM by PIB Bengaluru
2024ರಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಚಟುವಟಿಕೆಗಳ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ):
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಅಡಚಣೆಗಳಿಂದ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುವ ನಿರ್ದಿಷ್ಟ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ, ಪಿಎಂಜಿಕೆಎವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ನಿಯಮಿತ ಹಂಚಿಕೆಗೆ ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಹಂಚಿಕೆಯನ್ನು ಮಾಡಲಾಗಿದೆ. ಪಿಎಂಜಿಕೆಎವೈ (ಹಂತ I-VII) ಅಡಿಯಲ್ಲಿ 28 ತಿಂಗಳುಗಳವರೆಗೆ 1118 ಎಲ್ ಎಂ ಟಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು ಯೋಜಿತ ಹಣಕಾಸು ವೆಚ್ಚವು ಸುಮಾರು 3.91 ಲಕ್ಷ ಕೋಟಿ ರೂ. ಆಗಿತ್ತು.
ಬಡ ಫಲಾನುಭವಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರವ್ಯಾಪಿ ಏಕರೂಪತೆ ಮತ್ತು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು ಎನ್ ಎಫ್ ಎಸ್ ಎ ಫಲಾನುಭವಿಗಳಿಗೆ ಅಂದರೆ ಎಎವೈ ಕುಟುಂಬಗಳು ಮತ್ತು ಪಿ ಎಚ್ ಎಚ್ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ 1 ಜನವರಿ 2023 ರಿಂದ ಪ್ರಾರಂಭವಾಗಿ ಒಂದು ವರ್ಷ ಅವಧಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಎನ್ ಎಫ್ ಎಸ್ ಎ ಪ್ರಯೋಜನಗಳನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಈ ಹಿಂದೆ ಎನ್ ಎಫ್ ಎಸ್ ಎ ಅಡಿಯಲ್ಲಿ ಪ್ರತಿ ಕೆಜಿ ಅಕ್ಕಿಗೆ 3 ರೂ., ಗೋಧಿಗೆ ಕೆಜಿಗೆ 2 ರೂ. ಮತ್ತು ಒರಟು ಧಾನ್ಯಗಳಿಗೆ 1 ರೂ.ನಂತೆ ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಪಿಎಂಜಿಕೆಎವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯ ವಿತರಣೆಯ ಅವಧಿಯನ್ನು ಜನವರಿ 1, 2024 ರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.
ಪಿಎಂಜಿಕೆಎವೈ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್ ಎಫ್ ಎಸ್ ಎ) ಪರಿಣಾಮಕಾರಿ ಮತ್ತು ಏಕರೂಪದ ಅನುಷ್ಠಾನವನ್ನು ಖಚಿತಪಡಿಸುತ್ತದೆ. ಒಂದು ದೇಶ ಒಂದು ಪಡಿತರ ಚೀಟಿ (ಒ ಎನ್ ಒ ಆರ್ ಸಿ) ಅಡಿಯಲ್ಲಿ, ಇದು ಪಡಿತರ ಚೀಟಿಯ ಪೋರ್ಟಬಿಲಿಟಿಯ ಯಶಸ್ವಿ ಉಪಕ್ರಮವಾಗಿದೆ, ಯಾವುದೇ ಫಲಾನುಭವಿಯು ದೇಶಾದ್ಯಂತ ಏಕರೂಪದ ಎನ್ ಎಫ್ ಎಸ್ ಎ ಅರ್ಹತೆ ಮತ್ತು ಬೆಲೆಯಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಪಡೆಯಬಹುದು. ಉಚಿತ ಆಹಾರ ಧಾನ್ಯಗಳು ಏಕಕಾಲದಲ್ಲಿ ದೇಶಾದ್ಯಂತ ಒಂದು ದೇಶ ಒಂದು ಪಡಿತರ ಚೀಟಿ (ಒ ಎನ್ ಒ ಆರ್ ಸಿ) ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನವನ್ನು ಖಚಿತಪಡಿಸುತ್ತದೆ ಮತ್ತು ಈ ಆಯ್ಕೆ ಆಧಾರಿತ ವೇದಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಪ್ರಸ್ತುತ, 81.35 ಕೋಟಿ ಜನರನ್ನು ಒಳಗೊಂಡಿರುವ ಗುರಿಯಲ್ಲಿ 80.67 ಕೋಟಿ ಜನರು ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ.
ಟಿಪಿಡಿಎಸ್/ಒಡಬ್ಲ್ಯುಎಸ್ ಅಡಿಯಲ್ಲಿ 2023-24ರ ಆಹಾರ ಧಾನ್ಯಗಳ ವಾರ್ಷಿಕ ಹಂಚಿಕೆ ಮತ್ತು ಹೆಚ್ಚುವರಿ ಹಂಚಿಕೆ (ಪ್ರವಾಹ, ಹಬ್ಬಗಳು ಇತ್ಯಾದಿ):
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಎನ್ ಎಫ್ ಎಸ್ ಎ {ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತಾ ಕುಟುಂಬ (ಪಿ ಎಚ್ ಎಚ್), ಟೈಡ್ ಓವರ್, ಪ್ರಧಾನಮಂತ್ರಿ ಪೋಷಣಾ ಯೋಜನೆ, ಗೋಧಿ ಆಧಾರಿತ ಪೌಷ್ಟಿಕಾಂಶ ಕಾರ್ಯಕ್ರಮ (ಐ ಸಿ ಡಿ ಎಸ್ ಸಮೂಹದ ಒಂದು ಘಟಕ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಧಾನ್ಯಗಳ ಹಂಚಿಕೆಯನ್ನು ಮಾಡುತ್ತದೆ. ಉದಾಹರಣೆಗೆ, ಹದಿಹರೆಯದ ಬಾಲಕಿಯರ ಯೋಜನೆ, ಅನ್ನಪೂರ್ಣ ಯೋಜನೆ ಮತ್ತು ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳ ಯೋಜನೆ (ಡಬ್ಲ್ಯು ಐ ಎಚ್). 2024-25ನೇ ಸಾಲಿನ ಯೋಜನೆವಾರು ಹಂಚಿಕೆ ಈ ಕೆಳಗಿನಂತಿದೆ:
|
ಯೋಜನೆಯ ಹೆಸರು
|
ಅಕ್ಕಿ
|
ಗೋಧಿ
|
ಪೌಷ್ಟಿಕ-ಧಾನ್ಯಗಳು
|
ಒಟ್ಟು
ಲಕ್ಷ ಟನ್ ಗಳಲ್ಲಿ
|
ಎ
|
ಟಿಪಿಡಿಎಸ್ (ಎನ್ ಎಫ್ ಎಸ್ ಎ ಹಂಚಿಕೆ)
|
|
ಅಂತ್ಯೋದಯ ಅನ್ನ ಯೋಜನೆ (ಎಎವೈ)
|
69.80
|
29.68
|
0.00
|
99.48
|
|
ಆದ್ಯತಾ ಕುಟುಂಬ (ಪಿ ಎಚ್ ಎಚ್)
|
273.20
|
149.73
|
6.42
|
429.35
|
|
ಟಿಪಿಡಿಎಸ್ (ಟೈಡ್ ಓವರ್)
|
21.19
|
5.04
|
0.00
|
26.23
|
|
ಪಿಎಂ ಪೋಷಣ್ (ಎಂಡಿಎಂ)
|
19.21
|
3.76
|
0.00
|
22.96
|
|
ಡಬ್ಲ್ಯು ಬಿ ಎನ್ ಪಿ (ಐಸಿಡಿಎಸ್)
|
13.89
|
11.74
|
0.16
|
25.78
|
|
ಒಟ್ಟು
|
397.28
|
199.95
|
6.57
|
603.80
|
ಬಿ
|
ಇತರ ಕಲ್ಯಾಣ ಯೋಜನೆಗಳು
|
|
ವಸತಿ ನಿಲಯಗಳು ಮತ್ತು ಕಲ್ಯಾಣ ಸಂಸ್ಥೆಗಳು
|
3.24
|
0.87
|
0.00
|
4.10
|
|
ಹದಿಹರೆಯದ ಬಾಲಕಿಯರ ಯೋಜನೆ (ಎಸ್ ಎ ಜಿ)
|
0.334
|
0.343
|
0.0038
|
0.68
|
|
ಅನ್ನಪೂರ್ಣ
|
0.00
|
0.00
|
0.00
|
0.00
|
|
ಒಟ್ಟು
|
3.57
|
1.21
|
0.00
|
4.78
|
ಸಿ
|
ಹೆಚ್ಚುವರಿ ಹಂಚಿಕೆ (ಹಬ್ಬ, ವಿಪತ್ತು, ಹೆಚ್ಚುವರಿ ಟಿಡಿಪಿಎಸ್ ಇತ್ಯಾದಿ)
|
|
ನೈಸರ್ಗಿಕ ವಿಕೋಪ ಇತ್ಯಾದಿ
(ಎಂ ಎಸ್ ಪಿ ದರಗಳು)
|
0.06
|
0.07
|
0.00
|
0.13
|
|
ಹಬ್ಬ/ಹೆಚ್ಚುವರಿ ಅವಶ್ಯಕತೆ ಇತ್ಯಾದಿ
(ಆರ್ಥಿಕ ವೆಚ್ಚ)
|
0.96
|
0.60
|
0.00
|
1.56
|
|
ಒಟ್ಟು
|
1.02
|
0.67
|
0.00
|
1.69
|
ಎ+ಬಿ+ಸಿ
|
ಒಟ್ಟು
|
401.88
|
201.83
|
6.57
|
610.28
|
ಅಕ್ಕಿಯ ಸಾರವರ್ಧನೆ ಕುರಿತು ಮಾನ್ಯ ಪ್ರಧಾನಮಂತ್ರಿಯವರ ಘೋಷಣೆ
ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು 75 ನೇ ಸ್ವಾತಂತ್ರ್ಯ ದಿನದಂದು (15 ಆಗಸ್ಟ್, 2021) ತಮ್ಮ ಭಾಷಣದಲ್ಲಿ ಸರ್ಕಾರದ ಯೋಜನೆಗಳಾದ್ಯಂತ ಸಾರವರ್ಧಿತ ಅಕ್ಕಿಯನ್ನು ಪೂರೈಸುವ ಮೂಲಕ ಪೌಷ್ಟಿಕಾಂಶವನ್ನು ಒದಗಿಸುವ ಘೋಷಣೆ ಮಾಡಿದರು. ಘೋಷಣೆಯ ಅನುಸಾರವಾಗಿ, ಉದ್ದೇಶಿತ ಜನಸಂಖ್ಯೆಯಲ್ಲಿ ಸಾರವರ್ಧಿತ ಅಕ್ಕಿಯ ಏಕರೂಪದ ಪೌಷ್ಠಿಕಾಂಶದ ಪರಿಣಾಮವನ್ನು ಸಾಧಿಸುವ ಸಲುವಾಗಿ ಭಾರತ ಸರ್ಕಾರವು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್), ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ (ಪಿಎಂ ಪೋಷಣ್) ಯೋಜನೆ, ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತರ ಕಲ್ಯಾಣ ಯೋಜನೆಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಪೂರೈಸುತ್ತಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ನಿಗದಿಪಡಿಸಿದ ಮಾನದಂಡಗಳಿಗೆ ಬದ್ಧವಾಗಿ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನಂತಹ ಅಗತ್ಯ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಾರವರ್ಧಿತ ಅಕ್ಕಿಯನ್ನು ಒದಗಿಸುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದೆ. ಈ ಉಪಕ್ರಮವನ್ನು ಮೂರು ಹಂತಗಳಲ್ಲಿ ಹೆಚ್ಚಿಸಲಾಗಿದೆ - ಹಂತ I (2021-22) ಐಸಿಡಿಎಸ್ ಮತ್ತು ಪಿಎಂ-ಪೋಷಣ್, ಹಂತ II (2022-23) ಐಸಿಡಿಎಸ್, ಪಿಎಂ-ಪೋಷಣ್ ಮತ್ತು ಟಿಡಿಪಿಎಸ್ ಅಡಿಯಲ್ಲಿ 291 ಮಹತ್ವಾಕಾಂಕ್ಷೆಯ ಮತ್ತು ಹೆಚ್ಚಿನ ಹೊರೆಯ ಜಿಲ್ಲೆಗಳು ಮತ್ತು ಹಂತ III-ಐಸಿಡಿಎಸ್,ಪಿಎಂ ಪೋಷಣ್ ಮತ್ತು ಟಿಡಿಪಿಎಸ್ ಅಡಿಯಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ.
2024 ರ ಮಾರ್ಚ್ ವೇಳೆಗೆ ಸಾರವರ್ಧಿತ ಅಕ್ಕಿಯನ್ನು ಪೂರೈಸುವ ಉಪಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ, ಶೇ.100 ರಷ್ಟು ಎತ್ತುವಿಕೆಯನ್ನು ಸಾಧಿಸಲಾಗಿದೆ. ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಸಾಂಪ್ರದಾಯಿಕ ಗಿರಣಿ ಅಕ್ಕಿಯನ್ನು ಸಾರವರ್ಧಿತ ಅಕ್ಕಿಯೊಂದಿಗೆ ಬದಲಾಯಿಸಲಾಗಿದೆ. ಆರಂಭದಲ್ಲಿ ಜೂನ್ 30, 2024 ರವರೆಗೆ ಆಹಾರ ಸಬ್ಸಿಡಿ ಭಾಗವಾಗಿ ಭಾರತ ಸರ್ಕಾರದಿಂದ ಹಣವನ್ನು ನೀಡಲಾಗಿದ್ದು, ಮುಂದಿನ ಮುಂದುವರಿಕೆ ಮತ್ತು ಭವಿಷ್ಯದ ವೆಚ್ಚ-ಹಂಚಿಕೆಗಾಗಿ ಉಪಕ್ರಮವನ್ನು ಪರಿಶೀಲಿಸಲಾಗಿದೆ. ಅಕ್ಟೋಬರ್ 9, 2024 ರಂದು ನಡೆದ ಸಭೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಜುಲೈ 2024 ರಿಂದ ಮತ್ತು ಡಿಸೆಂಬರ್ 2028 ರವರೆಗೆ ಮುಂದುವರಿಸಲು ಸಂಪುಟವು ಅನುಮೋದನೆ ನೀಡಿದೆ. ಈ ಉಪಕ್ರಮವು ಕೇಂದ್ರ ವಲಯವಾಗಿ ಮುಂದುವರಿಯುತ್ತದೆ. ಈ ಉಪಕ್ರಮವು ಕೇಂದ್ರ ವಲಯದ ಉಪಕ್ರಮವಾಗಿ ಮುಂದುವರಿಯುತ್ತದೆ, ಅಸ್ತಿತ್ವದಲ್ಲಿರುವ ಪಿಎಂಜಿಕೆಎವೈ ಚೌಕಟ್ಟಿನ ಅಡಿಯಲ್ಲಿ ಸರ್ಕಾರದಿಂದ ಸಂಪೂರ್ಣವಾಗಿ ಹಣವನ್ನು ನೀಡಲಾಗುತ್ತದೆ, ಪಿಎಂಜಿಕೆಎವೈ ಯೋಜನೆಗಾಗಿ ಈ ಹಿಂದೆ ಅನುಮೋದಿಸಲಾದ 11,79,859 ಕೋಟಿ ರೂ.ಹಂಚಿಕೆಯನ್ನು ಬಳಸಿಕೊಳ್ಳುತ್ತದೆ.
ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಡಿಪಿಎಸ್) ಸುಧಾರಣೆಗಳು
ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ ಎಫ್ ಎಸ್ ಎ ಅಡಿಯಲ್ಲಿ ಶೇ.100 ರಷ್ಟು ಪಡಿತರ ಚೀಟಿಗಳು/ಫಲಾನುಭವಿಗಳ ಡಿಜಿಟಲೀಕರಣ ಮಾಡಿದ ಡೇಟಾ. ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವ ಸುಮಾರು 20.54 ಕೋಟಿ ಪಡಿತರ ಚೀಟಿಗಳ ವಿವರಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಾರದರ್ಶಕ ಪೋರ್ಟಲ್ ಗಳಲ್ಲಿ ಲಭ್ಯವಿವೆ.
ಶೇ.99.8 ಕ್ಕಿಂತ ಹೆಚ್ಚು ಪಡಿತರ ಚೀಟಿಗಳ ಆಧಾರ್ ಸೀಡಿಂಗ್ (ಕನಿಷ್ಠ ಒಬ್ಬ ಸದಸ್ಯ).
ದೇಶದಲ್ಲಿ ಸುಮಾರು ಶೇ.99.8 (ಒಟ್ಟು 5.43 ಲಕ್ಷದಲ್ಲಿ 5.41 ಲಕ್ಷ) ನ್ಯಾಯಬೆಲೆ ಅಂಗಡಿಗಳು ಪಾರದರ್ಶಕ ಮತ್ತು ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳ ವಿತರಣೆಗಾಗಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ePoS) ಸಾಧನಗಳನ್ನು ಬಳಸಿಕೊಂಡು ಸ್ವಯಂಚಾಲಿತವಾಗಿವೆ.
ಆಹಾರ ಧಾನ್ಯಗಳ ವಿತರಣೆಯ ಅಡಿಯಲ್ಲಿ, ಶೇ.97 ಕ್ಕಿಂತ ಹೆಚ್ಚು ವಹಿವಾಟುಗಳನ್ನು ಬಯೋಮೆಟ್ರಿಕ್ ಮೂಲಕ ದಾಖಲಿಸಲಾಗಿದೆ/ಆಧಾರ್ ಅನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ದೃಢೀಕರಿಸಲಾಗಿದೆ.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಪ್ರಗತಿ
ಆಗಸ್ಟ್ 2019ರಲ್ಲಿ ಕೇವಲ 4 ರಾಜ್ಯಗಳಲ್ಲಿ ಅಂತರ-ರಾಜ್ಯ ಪೋರ್ಟಬಿಲಿಟಿಯೊಂದಿಗೆ ಪ್ರಾರಂಭಿಸಿ, ಇಲ್ಲಿಯವರೆಗೆ, ಒ ಎನ್ ಒ ಆರ್ ಸಿ ಯೋಜನೆಯನ್ನು ಎಲ್ಲಾ 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ (ದೇಶದಾದ್ಯಂತ) ಸುಮಾರು 80 ಕೋಟಿ ಎನ್ ಎಫ್ ಎಸ್ ಎ ಫಲಾನುಭವಿಗಳು, ಅಂದರೆ, ಸುಮಾರು ಶೇ.100 ರಷ್ಟು ಎನ್ ಎಫ್ ಎಸ್ ಎ ಜನಸಂಖ್ಯೆಯನ್ನು ಸಕ್ರಿಯಗೊಳಿಸಲಾಗಿದೆ.
ಆಗಸ್ಟ್ 2019 ರಲ್ಲಿ ಒ ಎನ್ ಒ ಆರ್ ಸಿ ಯೋಜನೆ ಪ್ರಾರಂಭವಾದಾಗಿನಿಂದ, ದೇಶದಲ್ಲಿ ಒ ಎನ್ ಒ ಆರ್ ಸಿ ಯೋಜನೆಯಡಿಯಲ್ಲಿ 158.8 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದೆ, ಇದು 315.8 ಎಲ್ ಎಂ ಟಿ ಗಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ತಲುಪಿಸುತ್ತದೆ, ಇದು ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ವಹಿವಾಟುಗಳನ್ನು ಒಳಗೊಂಡಿದೆ.
2024 ರ ಅವಧಿಯಲ್ಲಿ, 2024 ರ 11 ತಿಂಗಳುಗಳಲ್ಲಿ ಸುಮಾರು 30 ಕೋಟಿ ಪೋರ್ಟೆಬಿಲಿಟಿ ವಹಿವಾಟುಗಳನ್ನು ನಡೆಸಲಾಯಿತು, ಇದು ಎನ್ ಎಫ್ ಎಸ್ ಎ ಮತ್ತು ಪಿಎಂಜಿಕೆಎವೈನ ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಪೋರ್ಟಬಿಲಿಟಿ ವಹಿವಾಟುಗಳನ್ನು ಒಳಗೊಂಡಂತೆ ಸುಮಾರು 66 ಎಲ್ ಎಂ ಟಿ ಆಹಾರ ಧಾನ್ಯಗಳನ್ನು ತಲುಪಿಸಿದೆ. ಪ್ರಸ್ತುತ, ಪಿಎಂಜಿಕೆಎವೈ ಆಹಾರಧಾನ್ಯ ವಿತರಣೆಯ ಅಡಿಯಲ್ಲಿ ಪ್ರತಿ ತಿಂಗಳು 2.5 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ.
ಆಹಾರ ಧಾನ್ಯಗಳ ಚಲನೆ
2024 ರ ಅವಧಿಯಲ್ಲಿ (ಜನವರಿ, 2024 ರಿಂದ ಅಕ್ಟೋಬರ್, 2024 ರವರೆಗೆ), 204 ಕಂಟೈನರೈಸ್ಡ್ ರೇಕ್ ಗಳು ಸರಿಸುಮಾರು 4.40 ಕೋಟಿ ರೂ.ಗಳಷ್ಟು ಸರಕು ಸಾಗಾಟದ ಉಳಿತಾಯದೊಂದಿಗೆ ಸಂಚರಿಸಿದವು.
ಆಂಧ್ರಪ್ರದೇಶದ ಗೊತ್ತುಪಡಿಸಿದ ಡಿಪೋಗಳಿಂದ ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಮತ್ತು ಕರ್ನಾಟಕದಲ್ಲಿ ಲಕ್ಷದ್ವೀಪಕ್ಕೆ ಗೊತ್ತುಪಡಿಸಿದ ಡಿಪೋಗಳಿಗೆ ಕರಾವಳಿ ಹಡಗು ಮತ್ತು ರಸ್ತೆ ಚಲನೆಯನ್ನು ಒಳಗೊಂಡ ಅಕ್ಕಿಯ ಬಹು-ಮಾದರಿ ಸಾಗಣೆಯನ್ನು ಎಫ್ ಸಿ ಐ ಕೈಗೊಳ್ಳುತ್ತಿದೆ. 2024 ರ ಅವಧಿಯಲ್ಲಿ (ಅಂದರೆ ಜನವರಿ, 2024 ರಿಂದ ಅಕ್ಟೋಬರ್, 2024 ರವರೆಗೆ) 0.39 ಎಲ್ ಎಂ ಟಿ ಆಹಾರ ಧಾನ್ಯಗಳ ದಾಸ್ತಾನು ಸಾಂಪ್ರದಾಯಿಕ ಸಾರಿಗೆ ವಿಧಾನಕ್ಕೆ ಹೋಲಿಸಿದರೆ ವೆಚ್ಚ ಉಳಿತಾಯ ಆಧಾರದ ಮೇಲೆ ಸಾಗಿಸಲಾಗಿದೆ.
ಇದಲ್ಲದೆ, ಎಫ್ ಸಿ ಐ ಒಟ್ಟು 10205 ರೇಕ್ ಗಳ ಆಹಾರ ಧಾನ್ಯಗಳನ್ನು ಸರಿಸುಮಾರು 358.93 ಎಲ್ ಎಂ ಟಿ ಪ್ರಮಾಣವನ್ನು 2024 ರ ಜನವರಿಯಿಂದ ಅಕ್ಟೋಬರ್ 2024 ರವರೆಗೆ ಎನ್ ಎಫ್ ಎಸ್ ಎ ಅಗತ್ಯವನ್ನು ಪೂರೈಸಲು ಲೋಡ್ ಮಾಡಲಾಗಿದೆ.
ರೈತರಿಗೆ ಬೆಂಬಲ
ಖರೀದಿ ಕಾರ್ಯಾಚರಣೆ: ಆಹಾರ ನಿರ್ವಹಣೆಯ ಮುಖ್ಯ ಉದ್ದೇಶಗಳು ರೈತರಿಂದ ಲಾಭದಾಯಕ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವುದು, ಗ್ರಾಹಕರಿಗೆ ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವುದು ಮತ್ತು ಆಹಾರ ಭದ್ರತೆ ಮತ್ತು ಬೆಲೆ ಸ್ಥಿರತೆಗಾಗಿ ಹೆಚ್ಚುವರಿ ಸಂಗ್ರಹವನ್ನು ನಿರ್ವಹಿಸುವುದು. ಕೇಂದ್ರ ಸರ್ಕಾರವು ಎಫ್ ಸಿ ಐ ಮತ್ತು ರಾಜ್ಯ ಏಜೆನ್ಸಿಗಳ ಮೂಲಕ ಭತ್ತ, ಒರಟು ಧಾನ್ಯಗಳು ಮತ್ತು ಗೋಧಿಗೆ ಬೆಂಬಲ ಬೆಲೆಯನ್ನು ನೀಡುತ್ತಿದೆ. ಎಲ್ಲಾ ಆಹಾರ ಧಾನ್ಯಗಳನ್ನು (ಗೋಧಿ ಮತ್ತು ಭತ್ತ) ಗೊತ್ತುಪಡಿಸಿದ ಕೇಂದ್ರಗಳಲ್ಲಿ ಮಾರಾಟ ಮಾಡಲು ಸೂಚಿಸಲಾದ ಅಂಶಗಳಿಗೆ ಅನುಗುಣವಾಗಿ ಸಾರ್ವಜನಿಕ ಖರೀದಿ ಏಜೆನ್ಸಿಗಳು ಘೋಷಿಸಿದ ಬೋನಸ್ ಸೇರಿದಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಎಫ್ ಸಿ ಐ/ರಾಜ್ಯ ಏಜೆನ್ಸಿಗಳಿಗೆ ಎಂ ಎಸ್ ಪಿ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಅವರಿಗೆ ಅನುಕೂಲಕರವಾಗಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
ಆರ್ ಎಂ ಎಸ್ 2024-25 ರಲ್ಲಿ, 266.05 ಎಲ್ ಎಂ ಟಿ ಪ್ರಮಾಣದ ಗೋಧಿಯನ್ನು ಖರೀದಿಸಲಾಯಿತು, ಇದರ ಮೂಲಕ 2248725 ರೈತರು ಪ್ರಯೋಜನ ಪಡೆದರು.
ಕೆಎಂಎಸ್ 2023-24 ರ ಅವಧಿಯಲ್ಲಿ 782.29 ಎಲ್ ಎಂ ಟಿ ಭತ್ತವನ್ನು ಖರೀದಿಸಲಾಗಿದ್ದು, ಇದರ ಮೂಲಕ 10657828 ರೈತರು ಪ್ರಯೋಜನ ಪಡೆದಿದ್ದಾರೆ. ಪ್ರಸ್ತುತ ಕೆಎಂಎಸ್ 2024-25 ರಲ್ಲಿ, 283.17 ಎಲ್ ಎಂ ಟಿ ಭತ್ತವನ್ನು ಖರೀದಿಸಲಾಗಿದೆ ಮತ್ತು 01.12.2024 ರವರೆಗೆ 2014007 ರೈತರು ಪ್ರಯೋಜನ ಪಡೆದಿದ್ದಾರೆ.
ಒರಟು ಧಾನ್ಯಗಳು / ಸಿರಿಧಾನ್ಯಗಳ ಖರೀದಿ
ಕೆಎಂಎಸ್ 2023-24 ರಲ್ಲಿ ನಡೆಸಲಾದ ಒಟ್ಟು ಒರಟಾದ ಧಾನ್ಯ ಖರೀದಿಯು 12.55 ಎಲ್ ಎಂ ಟಿ ಆಗಿದೆ, ಇದು ಕೆಎಂಎಸ್ 2022-23 ರಲ್ಲಿ ಖರೀದಿಸಿದ್ದಕ್ಕೆ ಹೋಲಿಸಿದರೆ ಶೇ.170 ಆಗಿದೆ. ಕಳೆದ 10 ವರ್ಷಗಳಲ್ಲಿ ಇದು ಅತಿ ಹೆಚ್ಚು ಒರಟು ಧಾನ್ಯಗಳ ಖರೀದಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಒರಟು ಧಾನ್ಯಗಳು/ಸಿರಿಧಾನ್ಯಗಳ ಖರೀದಿ ಮತ್ತು ಪ್ರಸಕ್ತ ವರ್ಷದ ಅಂದಾಜು ಖರೀದಿಯು ಈ ಕೆಳಗಿನಂತಿದೆ:
ಮೆಟ್ರಿಕ್ ಟನ್‌ಗಳಲ್ಲಿ
ಕೆಎಂಎಸ್
|
ಸರಕು
|
ಒಟ್ಟು
|
2022-23
|
ಜೋಳ
|
85197
|
ಬಜ್ರಾ
|
182005
|
ಮೆಕ್ಕೆ ಜೋಳ
|
13122
|
ರಾಗಿ
|
456745
|
ಒಟ್ಟು
|
737069
|
2023-24
|
ಜೋಳ
|
323163
|
|
ಬಜ್ರಾ
|
696457
|
ಮೆಕ್ಕೆ ಜೋಳ
|
4532
|
ರಾಗಿ
|
230920
|
ಒಟ್ಟು
|
1255073
|
2024-25*
|
ಜೋಳ
|
196000
|
|
ಬಜ್ರಾ
|
713000
|
ಮೆಕ್ಕೆ ಜೋಳ
|
160000
|
ರಾಗಿ
|
830500
|
ಮೈನರ್ ಮಿಲೆಟ್ಸ್ (ಫಾಕ್ಸ್‌ಟೈಲ್)
|
3000
|
ಒಟ್ಟು
|
1902500
|
* ರಾಜ್ಯಗಳು/ಯುಟಿಗಳಿಂದ ಪಡೆದ ವಿನಂತಿಯ ಪ್ರಕಾರ ಅಂದಾಜು ಖರೀದಿ ಪ್ರಮಾಣ.
ಆಹಾರ ಧಾನ್ಯ ಪ್ಯಾಕೇಜಿಂಗ್ ವಸ್ತು
ಸೆಣಬಿನ ಗಿರಣಿಗಳ ಉತ್ಪಾದನೆಯ ಸಾಮರ್ಥ್ಯ ಮತ್ತು ರಾಜ್ಯಗಳು/ಎಫ್ ಸಿ ಐ ನ ಅಗತ್ಯತೆಯ ದೃಷ್ಟಿಯಿಂದ, ಈ ಇಲಾಖೆಯು ರಾಜ್ಯ ಖರೀದಿ ಏಜೆನ್ಸಿಗಳು ಮತ್ತು ಎಫ್ ಸಿ ಐ ಗೆ ಕೆಎಂಎಸ್ 2024-25 ರಲ್ಲಿ 17.53 ಲಕ್ಷ ಸೆಣಬಿನ ಬೇಲ್ ಗಳನ್ನು ಮತ್ತು ಆರ್ ಎಂ ಎಸ್ 2024-25/ ಕೆಎಂಎಸ್ 2023-24 (ರಬಿ ಬೆಳೆ) ನಲ್ಲಿ 15.67 ಲಕ್ಷ ಸೆಣಬಿನ ಬೇಲ್ ಗಳನ್ನು ಹಂಚಿಕೆ ಮಾಡಿದೆ. ಸಾಕಷ್ಟು ಸೆಣಬಿನ ಚೀಲಗಳು ಲಭ್ಯವಿರುವುದರಿಂದ, ಕಳೆದ ಎರಡು ಋತುಗಳಲ್ಲಿ ರಾಜ್ಯಗಳು/ಎಫ್ ಸಿ ಐ ಗೆ HDPE/PP ಚೀಲಗಳ ಬಳಕೆಗೆ ಯಾವುದೇ ಅನುಮತಿಯನ್ನು ನೀಡಲಾಗಿಲ್ಲ.
ಗೋಧಿ ದಾಸ್ತಾನಿಗೆ ಮಿತಿಯನ್ನು ಹೇರುವುದು
ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸುವ ಸಲುವಾಗಿ ಮತ್ತು ಸಂಗ್ರಹಣೆ ಮತ್ತು ಅಪ್ರಾಮಾಣಿಕ ಊಹಾಪೋಹವನ್ನು ತಡೆಗಟ್ಟಲು, ಭಾರತ ಸರ್ಕಾರವು 24 ಜೂನ್ 2024 ರಂದು ಗೋಧಿ ದಾಸ್ತಾನು ಮಿತಿಗಳನ್ನು ವಿಧಿಸಿದೆ. ಅದನ್ನು ನಂತರ 09.09.2024 ಮತ್ತು 11.12.2024 ರಂದು ಪರಿಷ್ಕರಿಸಲಾಯಿತು ಮತ್ತು 31 ಮಾರ್ಚ್ 2025 ರವರೆಗೆ ಕೆಳಗಿನಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ:
ಘಟಕಗಳು
|
ಗೋಧಿ ಸಂಗ್ರಹ ಮಿತಿ
|
ವ್ಯಾಪಾರಿಗಳು / ಸಗಟು ವ್ಯಾಪಾರಿಗಳು
|
1000 ಎಂ ಟಿ
|
ಬಿಗ್ ಚೈನ್ ಚಿಲ್ಲರೆ ವ್ಯಾಪಾರಿಗಳು
|
ಪ್ರತಿ ಔಟ್‌ಲೆಟ್ ಗೆ 5 ಎಂ ಟಿ ಗರಿಷ್ಠ ಪ್ರಮಾಣಕ್ಕೆ ಒಳಪಟ್ಟಿರುತ್ತದೆ (ಒಟ್ಟು ಔಟ್‌ಲೆಟ್ ಗಳ ಸಂಖ್ಯೆಯಿಂದ 5 ಗುಣಿಸಿದಾಗ) ಅವರ ಎಲ್ಲಾ ಔಟ್‌ಲೆಟ್ ಗಳು ಮತ್ತು ಡಿಪೋಗಳ ಒಟ್ಟು ಸಂಗ್ರಹವನ್ನು ಇದರಲ್ಲಿ ಸೇರಿಸಲಾಗುತ್ತದೆ.
|
ಸಂಸ್ಕರಿಸುವವರು
|
ಮಾಸಿಕ ಸ್ಥಾಪಿತ ಸಾಮರ್ಥ್ಯದ (MIC) ಶೇ.50 ರಷ್ಟನ್ನು ಏಪ್ರಿಲ್ 2025 ರವರೆಗೆ ಉಳಿದ ತಿಂಗಳುಗಳಿಂದ ಗುಣಿಸಲಾಗುತ್ತದೆ.
|
ಪರಿಷ್ಕೃತ ಸಂಗ್ರಹ ಮಿತಿಗಳು ಅಧಿಸೂಚನೆಯ ದಿನಾಂಕದಿಂದ 15 ದಿನಗಳ ನಂತರ ಅನ್ವಯಿಸುತ್ತವೆ (ಅಂದರೆ 11.12.2024).
ಗೋಧಿ ಸಂಗ್ರಹ ಪೋರ್ಟಲ್ ನಲ್ಲಿ ನೋಂದಾಯಿಸಲಾದ ಒಟ್ಟು ಘಟಕಗಳ ಸಂಖ್ಯೆ 25,017 ಮತ್ತು 68 ಎಲ್ ಎಂ ಟಿ ಗೋಧಿಯ ಸಂಗ್ರಹವನ್ನು ಗೋಧಿ ಸಂಗ್ರಹ ಪೋರ್ಟಲ್ ನಲ್ಲಿ ಘೋಷಿಸಲಾಗಿದೆ (11.12.2024 ರಂತೆ).
ಆಹಾರ ಸಬ್ಸಿಡಿ
ಭಾರತ ಸರ್ಕಾರ/ಹಣಕಾಸು ಸಚಿವಾಲಯವು ಪಿಎಂಜಿಕೆಎವೈ (ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ) ಅಡಿಯಲ್ಲಿ ರಾಜ್ಯವಾರು ಹಣವನ್ನು ನಿಯೋಜಿಸುವುದಿಲ್ಲ, ಬದಲಿಗೆ ಆಹಾರ ಸಬ್ಸಿಡಿಗಾಗಿ ಹಣವನ್ನು ಎಫ್ ಸಿ ಐ (ಭಾರತೀಯ ಆಹಾರ ನಿಗಮ) ಮತ್ತು ಉದ್ದೇಶಿತ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆಯಲ್ಲಿ ವಿಕೇಂದ್ರೀಕೃತ ಸಂಗ್ರಹಣೆಯನ್ನು ಅಳವಡಿಸಿಕೊಂಡ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಹಿಂದಿನ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಎಫ್ ಸಿ ಐ ಮತ್ತು ಡಿಸಿಪಿ ರಾಜ್ಯಗಳಿಗೆ ಬಿಡುಗಡೆಯಾದ ಆಹಾರ ಸಬ್ಸಿಡಿ ವಿವರಗಳು ಕ್ರಮವಾಗಿ 2,11,394.39 ಕೋಟಿ ರೂ. ಮತ್ತು 1,40,239.10 ಕೋಟಿ ರೂ. (ಅಕ್ಟೋಬರ್, 2024 ರವರೆಗೆ) ಆಗಿದೆ. ಇದಲ್ಲದೆ, ಡಿಸಿಪಿ ರಾಜ್ಯಗಳಿಗೆ ಬಿಡುಗಡೆಯಾದ ಸಬ್ಸಿಡಿ ವಿವರಗಳು ಕೆಳಗಿನಂತಿವೆ.
|
ರಾಜ್ಯದ ಹೆಸರು
|
2023-24
|
2024-25
(ಅಕ್ಟೋಬರ್ 2024 ರವರೆಗೆ)
|
-
|
ಆಂಧ್ರಪ್ರದೇಶ
|
6268.19
|
5498
|
-
|
ಬಿಹಾರ
|
6557.64
|
7032.12
|
-
|
ಛತ್ತೀಸಗಢ
|
5236.13
|
17.96
|
-
|
ಗುಜರಾತ್
|
267.83
|
2.49
|
-
|
ಕರ್ನಾಟಕ
|
1222.13
|
120.68
|
-
|
ಕೇರಳ
|
1151.85
|
369.86
|
-
|
ಮಧ್ಯಪ್ರದೇಶ
|
16939.27
|
3449.05
|
-
|
ಮಹಾರಾಷ್ಟ್ರ
|
3923.29
|
327.74
|
-
|
ಒಡಿಶಾ
|
14473.68
|
4671.18
|
-
|
ಪಂಜಾಬ್
|
2064.56
|
661.26
|
-
|
ತಮಿಳುನಾಡು
|
7072.53
|
3178.16
|
-
|
ತೆಲಂಗಾಣ
|
5367.07
|
2592.1
|
-
|
ಉತ್ತರಾಖಂಡ
|
724.39
|
517.3
|
-
|
ಪಶ್ಚಿಮ ಬಂಗಾಳ
|
-
|
1535.42
|
-
|
ಜಾರ್ಖಂಡ್ @
|
42.77
|
342.97
|
-
|
ತ್ರಿಪುರಾ
|
106.51
|
35.79
|
-
|
DBT* & ಇತರೆ.
|
267.6
|
105.31
|
-
|
ಹಿಮಾಚಲ ಪ್ರದೇಶ $
|
47.38
|
-
|
|
ಒಟ್ಟು
|
71732.82
|
30457.39
|
ಗಮನಿಸಿ:-
@ ಜಾರ್ಖಂಡ್ ಕೆಎಂಎಸ್ 2016-17 (1 ಜಿಲ್ಲೆಗೆ ಮಾತ್ರ) 2017-18 (5 ಜಿಲ್ಲೆಗಳಿಗೆ ಮಾತ್ರ), 2018-19 (6 ಜಿಲ್ಲೆಗಳಿಗೆ ಮಾತ್ರ) ಡಿಸಿಪಿ ಆಗಿತ್ತು. ಅವರು ಕೆಎಂಎಸ್ 2019-20 ರಲ್ಲಿ ನಾನ್-ಡಿಸಿಪಿಯನ್ನು ಅಳವಡಿಸಿಕೊಂಡಿದ್ದರು. 2023-24 ರಲ್ಲಿ ಡಿಸಿಪಿ ಯನ್ನು ಅಳವಡಿಸಿಕೊಂಡರು.
$ ಹಿಮಾಚಲ ಪ್ರದೇಶವು 2023-24 ರಲ್ಲಿ ಡಿಸಿಪಿ ಮೋಡ್ ಅನ್ನು ಅಳವಡಿಸಿಕೊಂಡಿದೆ
*ಡಿಬಿಟಿ ಯೋಜನೆಯಡಿಯಲ್ಲಿ, ಚಂಡೀಗಢ, ಪುದುಚೇರಿ ಮತ್ತು ದಾದ್ರಾ ಮತ್ತು ನಗರ ಹವೇಲಿಯ ಯುಟಿಗಳಿಗೆ 2015-16ರಿಂದ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ.
ಸಾಧನೆಗಳನ್ನು ಈ ಕೆಳಗಿನಂತಿವೆ:
ಎ. ರಾಜ್ಯಗಳ ಆಹಾರ ಸಬ್ಸಿಡಿ ಖಾತೆಗಳ ಇತ್ಯರ್ಥ / ಅಂತಿಮಗೊಳಿಸಲು ಹೊಸ ಎಸ್ ಒ ಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್): ಆಹಾರ ಸಬ್ಸಿಡಿ ಬಿಡುಗಡೆಯ ಕಾರ್ಯವಿಧಾನವನ್ನು ಪ್ರಮಾಣೀಕರಿಸುವ ಮತ್ತು ಭಾಗೀದಾರರು ತಮ್ಮ ಖಾತೆಗಳನ್ನು ಸಮಯೋಚಿತ ಮತ್ತು ಪರಿಣಾಮಕಾರಿ ವಿಧಾನದಲ್ಲಿ ಇತ್ಯರ್ಥಗೊಳಿಸುವ/ಅಂತಿಮಗೊಳಿಸುವ ಉದ್ದೇಶದಿಂದ ಎಸ್ ಒ ಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ನೀಡಲಾಗಿದೆ. ಎಸ್ ಒ ಪಿ ಯು ಪ್ರಕ್ರಿಯೆಗಳು, ಕಂಪ್ಯೂಟೇಶನ್ ವಿಧಾನಗಳು ಮತ್ತು ಖಾತೆಯ ಇತ್ಯರ್ಥ ಪ್ರಕ್ರಿಯೆಯ ಟೈಮ್‌ಲೈನ್‌ಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸುತ್ತದೆ.
ಬಿ. ಸ್ಕ್ಯಾನ್ – ಎನ್ ಎಫ್ ಎಸ್ ಎಮತ್ತು ಒ ಡಬ್ಲ್ಯು ಎಸ್ ಗಾಗಿ ಸಬ್ಸಿಡಿ ಕ್ಲೈಮ್ ಅಪ್ಲಿಕೇಶನ್: SCAN ICS, SCAN-DCP, SCAN FCI, SCAN-NFS, SCAN-DBT ಮತ್ತು SCAN FCS ಸೇರಿದಂತೆ ಅದರ ಆರು ಪ್ರಬಲ ಉಪ ಮಾಡ್ಯೂಲ್‌ಗಳೊಂದಿಗೆ ರಾಜ್ಯದ ಪ್ರಸ್ತಾಪಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ವೇಗಗೊಳಿಸುತ್ತದೆ. ಒಟ್ಟಾರೆಯಾಗಿ, ಈ ಮಾಡ್ಯೂಲ್ ಗಳು ಆರ್ಥಿಕ ವೆಚ್ಚ, ಆಹಾರ ಸಬ್ಸಿಡಿ ಬಿಲ್ ಗಳು, ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ, ಕೇಂದ್ರ ಸಹಾಯದ ಅಡಿಯಲ್ಲಿ ಹಕ್ಕುಗಳು ಮತ್ತು ರಾಜ್ಯದ ಖಾತೆಗಳ ಅಂತಿಮ ಇತ್ಯರ್ಥಕ್ಕಾಗಿ ತಡೆರಹಿತ ಮತ್ತು ಏಕೀಕೃತ ವೇದಿಕೆಯನ್ನು ರಚಿಸುತ್ತವೆ. SCAN ಡಿಜಿಟಲ್ ಇಂಡಿಯಾದ ಉತ್ಸಾಹವನ್ನು ಸಾಕಾರಗೊಳಿಸುತ್ತದೆ, ದಕ್ಷತೆ, ಪಾರದರ್ಶಕತೆ ಮತ್ತು ಸಬಲೀಕರಣದ ಭರವಸೆಯನ್ನು ನೀಡುತ್ತದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒ ಎಂ ಎಸ್ ಎಸ್ (ಡಿ)]
ಭಾರತ್ ಆಟ್ಟಾ ಮತ್ತು ಭಾರತ್ ಅಕ್ಕಿಯನ್ನು ಅನುಕ್ರಮವಾಗಿ 06.11.2023 ಮತ್ತು 06.02.2024 ರಂದು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒ ಎಂ ಎಸ್ ಎಸ್ (ಡಿ)] ಅಡಿಯಲ್ಲಿ ಆಟ್ಟಾ (ಗೋಧಿ ಹಿಟ್ಟು) ಮತ್ತು ಅಕ್ಕಿಯನ್ನು ಸಾಮಾನ್ಯ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಲು ಪ್ರಾರಂಭಿಸಲಾಯಿತು. ಭಾರತ್ ಆಟ್ಟಾ ಮತ್ತು ಭಾರತ್ ಅಕ್ಕಿಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನ್ಯಾಫೆಡ್), ಕೇಂದ್ರೀಯ ಭಂಡಾರ ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಸಿ ಸಿ ಎಫ್) ಮೂರು ಕೇಂದ್ರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.
ಹಂತ-1 ರ ಅವಧಿಯಲ್ಲಿ 30.06.2024 ರವರೆಗೆ, ಭಾರತ್ ಆಟ್ಟಾ ಮತ್ತು ಭಾರತ್ ಅಕ್ಕಿಯನ್ನು ಕ್ರಮವಾಗಿ ರೂ.27.50/ಕೆಜಿ ಮತ್ತು ರೂ.29/ಕೆಜಿಗೆ ಗರಿಷ್ಠ ಚಿಲ್ಲರೆ ಬೆಲೆಗೆ ಮಾರಾಟ ಮಾಡಲಾಯಿತು. ಹಂತ II ರ ಅವಧಿಯಲ್ಲಿ, ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯನ್ನು ಈಗ ಕ್ರಮವಾಗಿ ರೂ 30/ಕೆಜಿ ಮತ್ತು ರೂ 34/ಕೆಜಿಗೆ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ, ಮೂರು ಕೇಂದ್ರ ಸಹಕಾರಿ ಸಂಸ್ಥೆಗಳು ತಮ್ಮದೇ ಆದ ಅಂಗಡಿಗಳು, ಮೊಬೈಲ್ ವ್ಯಾನ್ ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಮತ್ತು ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟ ಮಾಡುತ್ತಿವೆ. ಭಾರತ್ ಬ್ರಾಂಡ್ ಮಾರಾಟದ ಹಂತ-I ಸಮಯದಲ್ಲಿ, 15.20 ಎಲ್ ಎಂ ಟಿ ಭಾರತ್ ಅಟ್ಟಾ ಮತ್ತು 14.58 ಎಲ್ ಎಂ ಟಿ ಭಾರತ್ ಅಕ್ಕಿ ಮಾರಾಟವಾಯಿತು. ಪ್ರಸ್ತುತ ಭಾರತ್ ಬ್ರ್ಯಾಂಡ್‌ನ II ನೇ ಹಂತದಲ್ಲಿ ಮಾರಾಟ ಮಾಡಲು ಭಾರತ್ ಅಟ್ಟಾ ಮಾರಾಟಕ್ಕೆ 3.71 ಎಲ್ ಎಂ ಟಿ ಗೋಧಿ ಮತ್ತು ಭಾರತ್ ಅಕ್ಕಿ ಮಾರಾಟಕ್ಕೆ 2.91 ಎಲ್ ಎಂ ಟಿ ಅಕ್ಕಿಯನ್ನು ನಿಗದಿಪಡಿಸಲಾಗಿದೆ.
ಅಲ್ಲದೆ, 10 ಎಲ್ ಎಂ ಟಿ ಅಕ್ಕಿಯನ್ನು 11.07.2024 ರಂದು ಒ ಎಂ ಎಸ್ ಎಸ್ (ಡಿ) ಅಡಿಯಲ್ಲಿ ಇ-ಹರಾಜು ಮೂಲಕ ಖಾಸಗಿ ವ್ಯಕ್ತಿಗಳಿಗೆ ಮತ್ತು ಇ-ಹರಾಜು ಇಲ್ಲದೆ ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡಲು ಹಂಚಿಕೆ ಮಾಡಲಾಗಿದೆ. 25.11.2024 ರಂತೆ, 7.59 ಎಲ್ ಎಂ ಟಿ ಅಕ್ಕಿಯನ್ನು ಎಫ್ ಸಿ ಐ ವರ್ಗದ ಅಡಿಯಲ್ಲಿ ಮಾರಾಟ ಮಾಡಿದೆ. ಇ-ಹರಾಜು ಮೂಲಕ ಖಾಸಗಿ ವ್ಯಕ್ತಿಗಳಿಗೆ ಒ ಎಂ ಎಸ್ ಎಸ್ (ಡಿ) ಅಡಿಯಲ್ಲಿ ಮಾರಾಟ ಮಾಡಲು 28.11.2024 ರಂದು 25 ಎಲ್ ಎಂ ಟಿ ಗೋಧಿಯನ್ನು ಹಂಚಲಾಗಿದೆ.
ಇ-ಎನ್ ಡಬ್ಲ್ಯೂ ಆರ್ ಆಧಾರಿತ ಪ್ಲೆಡ್ಜ್ ಫೈನಾನ್ಸಿಂಗ್ (CGS-NPF) ಗೆ ಸಾಲ ಖಾತರಿ ಯೋಜನೆ
ಇ-ಎನ್ ಡಬ್ಲ್ಯೂ ಆರ್ ಆಧಾರಿತ ಪ್ಲೆಡ್ಜ್ ಫೈನಾನ್ಸಿಂಗ್ (CGS-NPF) ಗಾಗಿ ಸಾಲ ಖಾತರಿ ಯೋಜನೆಯನ್ನು 1000 ಕೋಟಿ ರೂ. ನಿಧಿಯೊಂದಿಗೆ ಅನುಮೋದಿಸಲಾಗಿದೆ. ಈ ಯೋಜನೆಯು 2024-25 ರಿಂದ 16 ನೇ ಹಣಕಾಸು ಆಯೋಗದ ಚಕ್ರದ ಅಂತ್ಯದವರೆಗೆ ಅಂದರೆ 2030-31 ರವರೆಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿ ಎಫ್ ಪಿ ಡಿ) ಜಾರಿಗೊಳಿಸುವ ಕೇಂದ್ರ ವಲಯಗಳ ಯೋಜನೆಯಾಗಿದೆ. ಸಾಲ ಖಾತರಿ ಯೋಜನೆಯು ಮಾನ್ಯತೆ ಪಡೆದ ಗೋದಾಮುಗಳಲ್ಲಿ ಸರಕುಗಳನ್ನು ಠೇವಣಿ ಮಾಡಿದ ನಂತರ ಎಲೆಕ್ಟ್ರಾನಿಕ್ ನೆಗೋಶಬಲ್ ವೇರ್‌ಹೌಸ್ ರಸೀದಿಗಳಿಗಾಗಿ (ಇ-ಎನ್ ಡಬ್ಲ್ಯೂ ಆರ್) ರೈತರು ಪಡೆಯುವ ಅಡಮಾನ ಹಣಕಾಸು ಯೋಜನೆಯಾಗಿದೆ.
ಸಾಲ ಖಾತರಿ ಯೋಜನೆಯು ಇ-ಎನ್ ಡಬ್ಲ್ಯೂ ಆರ್ ಗಳಿಗಾಗಿ ಕೊಯ್ಲಿನ ನಂತರದ ಸಾಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ರೈತರ ಆದಾಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಲ ಖಾತರಿ ಯೋಜನೆಯು ಸಾಲದಾತರಲ್ಲಿ ವಿಶ್ವಾಸವನ್ನು ತುಂಬುತ್ತದೆ ಮತ್ತು ಇ-ಎನ್ ಡಬ್ಲ್ಯೂ ಆರ್ ಗಳ ಮೂಲಕ ಕೊಯ್ಲಿನ ನಂತರದ ಹಣಕಾಸು ಹೆಚ್ಚಿಸಲು ಗೋದಾಮಿನ ಮೇಲೆ ನಂಬಿಕೆಯನ್ನು ಸುಧಾರಿಸುತ್ತದೆ.
ಈ ಯೋಜನೆಯು ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು, ಪ.ಜಾ, ಪ.ಪಂ ಮತ್ತು ದಿವ್ಯಾಂಗರು (ಪಿಡಬ್ಲ್ಯೂಡಿ) ರೈತರ ಮೇಲೆ ಕನಿಷ್ಠ ಗ್ಯಾರಂಟಿ ಶುಲ್ಕದೊಂದಿಗೆ ಕೇಂದ್ರೀಕರಿಸುತ್ತದೆ. ಅಲ್ಲದೆ, ಈ ಯೋಜನೆಯಡಿ ಸಣ್ಣ ವ್ಯಾಪಾರಿಗಳು (ಎಂ ಎಸ್ ಎಂ ಇ) ಸಹ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯು ಕೃಷಿ ಮತ್ತು ತೋಟಗಾರಿಕಾ ಸರಕುಗಳ ಮೇಲೆ ನೀಡಲಾದ ಇ-ಎನ್ ಡಬ್ಲ್ಯೂ ಆರ್ ಗಳ ಮೇಲೆ ನೀಡಲಾದ ಅಡಮಾನ ಸಾಲಗಳನ್ನು ಒಳಗೊಂಡಿದೆ. ಸಾಲ ಮತ್ತು ಗೋದಾಮಿನ ವ್ಯಕ್ತಿ ಅಪಾಯದಿಂದಾಗಿ ಬ್ಯಾಂಕಿಗೆ ಉಂಟಾಗುವ ನಷ್ಟವನ್ನು ಈ ಯೋಜನೆಯು ಒಳಗೊಂಡಿದೆ.
ಗೋದಾಮಿನ ಉನ್ನತೀಕರಣ ಮತ್ತು ಪ್ರಮಾಣೀಕರಣ, ಕೊಯ್ಲಿನ ನಂತರದ ನಷ್ಟಗಳಲ್ಲಿ ಕಡಿತ, ಕೃಷಿ ಸರಕುಗಳ ವೈಜ್ಞಾನಿಕ ಸಂಗ್ರಹಣೆ, ಗ್ರಾಮೀಣ ಪ್ರದೇಶಗಳಲ್ಲಿ ಹಣದ ಹರಿವಿನ ಸುಧಾರಣೆ, ಗೋದಾಮು ವಲಯದ ಸಮಾನ ಬೆಳವಣಿಗೆ ಮತ್ತು ಸರಕು ವ್ಯಾಪಾರದಲ್ಲಿ ಸುಧಾರಣೆಯಂತಹ ಇತರ ಸ್ಥೂಲ ಆರ್ಥಿಕ ಫಲಿತಾಂಶಗಳು ಇದರಲ್ಲಿ ಸೇರಿವೆ.
ಸಾರ್ವಜನಿಕ ವಿತರಣಾ ಯೋಜನೆ ಪೂರೈಕೆ ಸರಪಳಿಯಲ್ಲಿ ರೂಟ್ ಆಪ್ಟಿಮೈಸೇಶನ್ ನ ಅನುಷ್ಠಾನ
ಭಾರತದಲ್ಲಿ ಪಿಡಿಎಸ್ ಪೂರೈಕೆ ಸರಪಳಿಯ ದಕ್ಷತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಹೆಚ್ಚಿಸಲು ರೂಟ್ ಆಪ್ಟಿಮೈಸೇಶನ್ ಒಂದು ಕಾರ್ಯತಂತ್ರದ ವಿಧಾನವಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಸಂದರ್ಭದಲ್ಲಿ, ಇದು ಐಐಟಿ-ದೆಹಲಿ ಅಭಿವೃದ್ಧಿಪಡಿಸಿದ ಆಪ್ಟಿಮೈಸೇಶನ್ ಅಲ್ಗಾರಿದಮ್ ಅನ್ನು ಸೂಕ್ತ ಮಾರ್ಗಗಳು ಮತ್ತು ಗೋದಾಮಿನಿಂದ ಗೋದಾಮಿನವರೆಗೆ ಮತ್ತು ಎಫ್ ಪಿ ಎಸ್ (ನ್ಯಾಯಬೆಲೆ ಅಂಗಡಿ) ಮ್ಯಾಪಿಂಗ್ ಗಳಿಗೆ ಬಳಸುವುದನ್ನು ಒಳಗೊಂಡಿರುತ್ತದೆ, ಇದು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸುಧಾರಿತ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಸಕಾಲಿಕ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.
ಆಪ್ಟಿಮೈಸೇಶನ್ ಕ್ರಮವು ಆಹಾರ ಧಾನ್ಯಗಳನ್ನು ಸಾಗಿಸಲು ಅತ್ಯಂತ ಪರಿಣಾಮಕಾರಿ ವಾಹನ ಮಾರ್ಗಗಳನ್ನು ಆಯ್ಕೆಮಾಡುವುದನ್ನು ಒಳಗೊಂಡಿರುತ್ತದೆ, ಇದರಿಂದಾಗಿ ಕಾರ್ಯಾಚರಣೆಯ ಸಂಶೋಧನೆಯನ್ನು ಬಳಸಿಕೊಂಡು ಸಮಯವನ್ನು ಉಳಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಕ್ರಮವು ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಆಹಾರ ಪೂರೈಕೆ ಸರಪಳಿಯನ್ನು ನಿರ್ಮಿಸುವತ್ತ ಪರಿವರ್ತಕ ಹೆಜ್ಜೆಯಾಗಿದೆ.
ಆಪ್ಟಿಮೈಸೇಶನ್ ಕ್ರಮವು ಒಂದು ವರ್ಷ ಪೂರ್ಣಗೊಂಡ ನಂತರ, 30 ರಾಜ್ಯಗಳಲ್ಲಿ ರೂಟ್ ಆಪ್ಟಿಮೈಸೇಶನ್ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲಾಗಿದೆ. ಫಲಿತಾಂಶಗಳು ಅದ್ಭುತ ಭರವಸೆಯನ್ನು ತೋರಿಸಿವೆ, ಸಾರಿಗೆ ವೆಚ್ಚವು ವರ್ಷಕ್ಕೆ ಸುಮಾರು 250 ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ 12 ರಾಜ್ಯಗಳಿಂದ 128 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ವರದಿಯಾಗಿದೆ. ಹೆಚ್ಚುವರಿಯಿಂದ ಕೊರತೆಯಿರುವ ರಾಜ್ಯಗಳಿಗೆ ಆಹಾರ ಧಾನ್ಯಗಳ ಚಲನೆಯ ಅಂತರರಾಜ್ಯ ಮಾರ್ಗದ ಆಪ್ಟಿಮೈಸೇಶನ್ ಅನ್ನು ರೈಲ್ವೇ ಇಲಾಖೆಯ ಸರಕು ಕಾರ್ಯಾಚರಣೆ ಮಾಹಿತಿ ವ್ಯವಸ್ಥೆ (ಎಫ್ ಒ ಐ ಎಸ್) ಯೊಂದಿಗೆ ಸಂಯೋಜಿಸುವ ಮೂಲಕ ಪೂರ್ಣಗೊಳಿಸಲಾಗಿದೆ.
ಸೂಕ್ತವಾದ ಆಯ್ಕೆಯ ಮೂಲಕ, ರಾಜ್ಯಗಳು ಸಾರಿಗೆಯ ದೂರವನ್ನು ಸುಮಾರು ಶೇ.15- 50 ರಷ್ಟು ಕಡಿಮೆಗೊಳಿಸುತ್ತವೆ.
ಈ ಕ್ರಮವು ಕಾರ್ಯಾಚರಣೆಯ ದಕ್ಷತೆ, ಹೆಚ್ಚುವರಿ ಲಾಜಿಸ್ಟಿಕ್ಸ್ ವೆಚ್ಚ ಮತ್ತು ಪಿಡಿಎಸ್ ಪೂರೈಕೆ ಸರಪಳಿಯಲ್ಲಿನ ಕಳ್ಳತನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮಾನವ ಮಧ್ಯಸ್ಥಿಕೆಗಳನ್ನು ಮಿತಿಗೊಳಿಸುತ್ತದೆ.
ಈ ಉಪಕ್ರಮವು ಆರ್ಥಿಕ ಗೆಲುವು ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿದೆ. ಜಾಗತಿಕ ಆಹಾರ ಮೈಲುಗಳು- ಉತ್ಪಾದನೆಯಿಂದ ಬಳಕೆಯವರೆಗೆ ಆಹಾರ ಪ್ರಯಾಣದ ದೂರವನ್ನು ಪ್ರತಿನಿಧಿಸುತ್ತದೆ- ಒಟ್ಟು ಆಹಾರ ವ್ಯವಸ್ಥೆಯ ಹೊರಸೂಸುವಿಕೆಯ ಸುಮಾರು ಐದನೇ ಒಂದು ಭಾಗವಾಗಿದೆ. ಪ್ಯಾರಿಸ್ ಒಪ್ಪಂದ ಮತ್ತು ಅದರ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ) ಗುರಿಗಳ ಅಡಿಯಲ್ಲಿ ದೇಶದ ಹವಾಮಾನ ಬದಲಾವಣೆಯ ಬದ್ಧತೆಗಳೊಂದಿಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಭಾರತದ ಆಹಾರ ವಿತರಣಾ ಮಾರ್ಗಗಳನ್ನು ಉತ್ತಮಗೊಳಿಸುವುದು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಇಂಧನ ಬಳಕೆಯಲ್ಲಿನ ಕಡಿತವು ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಈ ಕ್ರಮವು ಹವಾಮಾನ-ಸ್ಮಾರ್ಟ್ ಪೂರೈಕೆ ಸರಪಳಿಗೆ ಭಾರತದ ಬದ್ಧತೆಯನ್ನು ಬಲಪಡಿಸುವುದು ಮಾತ್ರವಲ್ಲದೆ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ.
ಉಕ್ಕಿನ ಕಣಜಗಳು
ಆಹಾರ ಧಾನ್ಯಗಳ ಶೇಖರಣಾ ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ನವೀಕರಿಸುವ ದೃಷ್ಟಿಯಿಂದ ಮತ್ತು ಭಾರತದಲ್ಲಿ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಪಿಪಿಪಿ ಮಾದರಿಯಲ್ಲಿ ಉಕ್ಕಿನ ಕಣಜಗಳನ್ನು ನಿರ್ಮಿಸಲಾಗುತ್ತಿದೆ.
ಇದುವರೆಗೆ, ಒಟ್ಟು 23.25 ಎಲ್ ಎಂ ಟಿ ಸಾಮರ್ಥ್ಯದ ಕಣಜಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 6.5 ಎಲ್ ಎಂ ಟಿ ನಿರ್ಮಾಣ ಹಂತದಲ್ಲಿದೆ. ಈಗ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಹಬ್ ಮತ್ತು ಸ್ಪೋಕ್ ಮಾಡೆಲ್ ಸಿಲೋಸ್ ಅಡಿಯಲ್ಲಿ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ, ಅಲ್ಲಿ "ಹಬ್" ಕಣಜಗಳು ಮೀಸಲಾದ ರೈಲ್ವೆ ಸೈಡಿಂಗ್ ಮತ್ತು ಕಂಟೈನರ್ ಡಿಪೋ ಸೌಲಭ್ಯವನ್ನು ಹೊಂದಿವೆ. "ಸ್ಪೋಕ್" ಕಣಜಗಳಿಂದ ಹಬ್ ಕಣಜಗಳಿಗೆ ಸಾಗಣೆಯನ್ನು ರಸ್ತೆಯ ಮೂಲಕ ಕೈಗೊಳ್ಳಲಾಗುತ್ತದೆ, ಹಬ್ ನಿಂದ ಹಬ್ ಗೆ ಸಾಗಣೆಯು ರೈಲು ಮಾರ್ಗವಾಗಿದೆ. ಈ ಮಾದರಿಯ ಅಡಿಯಲ್ಲಿ, ಹಂತ-1 ರಲ್ಲಿ 34.8 ಎಲ್ ಎಂ ಟಿ ಸಾಮರ್ಥ್ಯದ 80 ಸ್ಥಳಗಳಲ್ಲಿ ಕಣಜಗಳ ನಿರ್ಮಾಣಕ್ಕೆ ಟೆಂಡರ್ ಗಳನ್ನು ನೀಡಲಾಗಿದೆ.
ಉಕ್ಕು ಕಣಜಗಳು ಸಾಂಪ್ರದಾಯಿಕವಾಗಿ ಗೋಧಿ ಶೇಖರಣೆಗೆ ಸೂಕ್ತವಾಗಿವೆ. ಪ್ರಾಯೋಗಿಕ ಆಧಾರದ ಮೇಲೆ, ಬಕ್ಸರ್ ಬಿಹಾರದಲ್ಲಿ ಅಕ್ಕಿ ಶೇಖರಣೆಗಾಗಿ 12500 ಎಂ ಟಿ ಉಕ್ಕಿನ ಕಣಜಗಳನ್ನು ನಿರ್ಮಿಸಲಾಗಿದೆ ಮತ್ತು ಫಲಿತಾಂಶಗಳ ಆಧಾರದ ಮೇಲೆ ಭವಿಷ್ಯದಲ್ಲಿ ಹೆಚ್ಚಿನ ಅಕ್ಕಿ ಕಣಜಗಳನ್ನು ನಿರ್ಮಿಸಲಾಗುವುದು.
ಸಕ್ಕರೆ ವಲಯ
ಭಾರತೀಯ ಸಕ್ಕರೆ ಉದ್ಯಮವು ಒಂದು ಪ್ರಮುಖ ಕೃಷಿ ಆಧಾರಿತ ಉದ್ಯಮವಾಗಿದ್ದು, ಇದು ಸುಮಾರು 5 ಕೋಟಿ ಕಬ್ಬಿನ ರೈತರು ಮತ್ತು ಅವರ ಕುಟುಂಬಗಳು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಉದ್ಯೋಗದಲ್ಲಿರುವ ಸುಮಾರು 5 ಲಕ್ಷ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಸಾರಿಗೆ, ಯಂತ್ರೋಪಕರಣಗಳ ವ್ಯಾಪಾರ ಸೇವೆ ಮತ್ತು ಕೃಷಿ ಒಳಹರಿವಿನ ಪೂರೈಕೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ಮತ್ತು ಅತಿ ದೊಡ್ಡ ಗ್ರಾಹಕ. ಇಂದು, ಭಾರತೀಯ ಸಕ್ಕರೆ ಉದ್ಯಮದ ವಾರ್ಷಿಕ ಉತ್ಪಾದನೆಯು 1.3 ಲಕ್ಷ ಕೋಟಿ ರೂ.ಗೂ ಹೆಚ್ಚು.
2023-24ರ ಸಕ್ಕರೆ ಋತುವಿನಲ್ಲಿ ದೇಶದಲ್ಲಿ 535 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು. ಕಬ್ಬಿನ ಸರಾಸರಿ ವಾರ್ಷಿಕ ಉತ್ಪಾದನೆಯು ಈಗ ಸುಮಾರು 5000 ಲಕ್ಷ ಮೆಟ್ರಿಕ್ ಟನ್ ಗಳಿಗೆ ಹೆಚ್ಚಿದೆ, ಇದು 2023-24 ರ ಸಕ್ಕರೆ ಋತುವಿನಲ್ಲಿ ಸುಮಾರು 24 ಎಲ್ ಎಂ ಟಿ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಪರಿವರ್ತಿಸಿದ ನಂತರ ಸುಮಾರು 320 ಎಲ್ ಎಂ ಟಿ ಸಕ್ಕರೆಯನ್ನು ಉತ್ಪಾದಿಸಲು ಬಳಸಲಾಗುತ್ತದೆ.
ಸರ್ಕಾರ ಕೈಗೊಂಡಿರುವ ರೈತರ ಪರವಾದ ಕ್ರಮಗಳ ಫಲವಾಗಿ ಹಿಂದಿನ ಸಕ್ಕರೆ ಹಂಗಾಮಿನ ಸುಮಾರು ಶೇ.99.9 ಕಬ್ಬಿನ ಬಾಕಿಯನ್ನು ಇತ್ಯರ್ಥಗೊಳಿಸಲಾಗಿದೆ. 2023-24 ರ ಸಕ್ಕರೆ ಹಂಗಾಮಿಗೆ, 1,11,627 ಕೋಟಿ ರೂಪಾಯಿಗಳ ಕಬ್ಬಿನ ಬಾಕಿಯಲ್ಲಿ ಸುಮಾರು 1,09,744 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಮತ್ತು ಕೇವಲ 1,883 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಹೀಗಾಗಿ ರೈತರಿಗೆ ಶೇ.98ಕ್ಕೂ ಹೆಚ್ಚು ಕಬ್ಬಿನ ಬಾಕಿ ಪಾವತಿಸಲಾಗಿದ್ದು, ಕಬ್ಬಿನ ಬಾಕಿ ಕಡಿಮೆ ಉಳಿದಿದೆ.
ಎಥೆನಾಲ್ ಮಿಶ್ತಿತ ಪೆಟ್ರೋಲ್ ಕಾರ್ಯಕ್ರಮ
ಎಥೆನಾಲ್ ಒಂದು ಕೃಷಿ-ಆಧಾರಿತ ಉತ್ಪನ್ನವಾಗಿದ್ದು, ಇದನ್ನು ಪೆಟ್ರೋಲ್ ನೊಂದಿಗೆ ಇಂಧನವಾಗಿ ಮಿಶ್ರಣ ಮಾಡಲು ಮತ್ತು ಹ್ಯಾಂಡ್ ಸ್ಯಾನಿಟೈಜರ್ ತಯಾರಿಕೆ ಸೇರಿದಂತೆ ಇತರ ಅನೇಕ ಕೈಗಾರಿಕಾ ಬಳಕೆಗಳಿಗೆ ಬಳಸಲಾಗುತ್ತದೆ. ಇದನ್ನು ಸಕ್ಕರೆ ಉದ್ಯಮದ ಉಪ-ಉತ್ಪನ್ನವಾದ ಮೊಲಾಸಸ್ ಮತ್ತು ಪಿಷ್ಟ ಆಹಾರ ಧಾನ್ಯಗಳಿಂದ ಉತ್ಪಾದಿಸಲಾಗುತ್ತದೆ. ಕಬ್ಬಿನ ಹೆಚ್ಚುವರಿ ಉತ್ಪಾದನೆಯ ವರ್ಷಗಳಲ್ಲಿ, ಬೆಲೆಗಳು ಕುಸಿದಿರುವಾಗ, ಸಕ್ಕರೆ ಉದ್ಯಮವು ರೈತರಿಗೆ ಕಬ್ಬಿನ ಬೆಲೆಯನ್ನು ಸಕಾಲಿಕವಾಗಿ ಪಾವತಿಸಲು ಮತ್ತು ಹೆಚ್ಚುವರಿ ಸಕ್ಕರೆಯ ಸಮಸ್ಯೆಯನ್ನು ಪರಿಹರಿಸಲು ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಮತ್ತು ಅವರಿಗೆ ಸಹಾಯ ಮಾಡುವ ಮೂಲಕ ಸಕ್ಕರೆ ಕಾರ್ಖಾನೆಗಳ ಹಣದ ಹರಿವು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಕಬ್ಬಿನ ಬಾಕಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು, ಹೆಚ್ಚುವರಿ ಕಬ್ಬನ್ನು ಎಥೆನಾಲ್ ಗೆ ತಿರುಗಿಸಲು ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಭಾರತ ಸರ್ಕಾರವು ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ, ಇದರಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತವೆ. ಇಬಿಪಿ ಕಾರ್ಯಕ್ರಮದ ಅಡಿಯಲ್ಲಿ, 2025 ರ ವೇಳೆಗೆ ಪೆಟ್ರೋಲ್ ಜೊತೆಗೆ ಎಥೆನಾಲ್ ಅನ್ನು ಶೇ.20 ರಷ್ಟು ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
2014 ರ ವರೆಗೆ, ಮೊಲಾಸಸ್ ಆಧಾರಿತ ಡಿಸ್ಟಿಲರಿಗಳ ಎಥೆನಾಲ್ ಬಟ್ಟಿ ಇಳಿಸುವಿಕೆಯ ಸಾಮರ್ಥ್ಯವು 200 ಕೋಟಿ ಲೀಟರ್ ಗಳಿಗಿಂತ ಕಡಿಮೆಯಿತ್ತು. ಎಥೆನಾಲ್ ಪೂರೈಕೆ ವರ್ಷದಲ್ಲಿ 2013-14 ರಲ್ಲಿ ಒಎಂಸಿಗಳಿಗೆ ಎಥೆನಾಲ್ ಪೂರೈಕೆಯು ಕೇವಲ ಶೇ.1.53 ರಷ್ಟು ಮಿಶ್ರಣದ ಮಟ್ಟಗಳೊಂದಿಗೆ ಕೇವಲ 38 ಕೋಟಿ ಲೀಟರ್ ಆಗಿತ್ತು. ಆದರೆ, ಕಳೆದ 10 ವರ್ಷಗಳಲ್ಲಿ ಸರ್ಕಾರವು ಮಾಡಿದ ನೀತಿ ಬದಲಾವಣೆಗಳಿಂದಾಗಿ, ಮೊಲಾಸಸ್ ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯವು ಕ್ರಮವಾಗಿ 941 ಕೋಟಿ ಲೀಟರ್ ಮತ್ತು 744 ಕೋಟಿ ಲೀಟರ್ ಗಳಿಗೆ ಹೆಚ್ಚಾಗಿದೆ.
2023-24ರ ಎಥೆನಾಲ್ ಪೂರೈಕೆ ವರ್ಷದಲ್ಲಿ (ನವೆಂಬರ್-ಅಕ್ಟೋಬರ್) ಶೇ.14.6 ಮಿಶ್ರಣವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆಯ ಅಸ್ತಿತ್ವದಲ್ಲಿರುವ ಸಾಮರ್ಥ್ಯವು (30.11.2024 ರಂತೆ) 1685 ಕೋಟಿ ಲೀಟರ್ ಗಳಿಗೆ (744 ಕೋಟಿ ಲೀಟರ್ ಧಾನ್ಯ ಆಧಾರಿತ ಮತ್ತು 941 ಕೋಟಿ ಲೀಟರ್ ಮೊಲಾಸಸ್ ಆಧಾರಿತ ಡಿಸ್ಟಿಲರಿಗಳು) ಹೆಚ್ಚಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಯಶಸ್ವಿ ಅನುಷ್ಠಾನವು ವಿವಿಧ ಅಂಶಗಳಲ್ಲಿ ಬಹು ಪ್ರಯೋಜನಗಳಿಗೆ ಕಾರಣವಾಗಿದೆ:
- ಎಥೆನಾಲ್ ಮಾರಾಟವು ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಹಣದ ಹರಿವಿಗೆ ಮತ್ತು ಕಬ್ಬಿನ ರೈತರಿಗೆ ತ್ವರಿತ ಪಾವತಿಗೆ ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ (2014-15 ರಿಂದ 2023-24) ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮಾರಾಟದಿಂದ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿವೆ, ಇದು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ.
- ಹಸಿರು ಮನೆ ಅನಿಲಗಳ (ಜಿ ಎಚ್ ಜಿ) ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರವು ತನ್ನ ಗುರಿಗಳನ್ನು ಪೂರೈಸಲು ಬದ್ಧವಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯು ಕಾರ್ಬನ್ ಮೊನೊ ಆಕ್ಸೈಡ್ ಮತ್ತು ಇತರ ಹೈಡ್ರೋಕಾರ್ಬನ್ ಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಸಾರಿಗೆಯಲ್ಲಿ ಹೆಚ್ಚುತ್ತಿರುವ ಎಥೆನಾಲ್ ಬಳಕೆಯು ಭಾರತೀಯ ಸಾರಿಗೆ ಕ್ಷೇತ್ರವನ್ನು ಹಸಿರು ಮತ್ತು ಪರಿಸರ ಸ್ನೇಹಿಯಾಗಿ ಬದಲಾಯಿಸುತ್ತದೆ.
- ಈ ಪರಿಣಾಮಕಾರಿ ಸರ್ಕಾರದ ನೀತಿಯ ಪರಿಣಾಮವಾಗಿ, 40,000 ಕೋಟಿ ರೂ, ಗೂ ಹೆಚ್ಚು ಮೌಲ್ಯದ ಹೂಡಿಕೆ ಅವಕಾಶಗಳು ಹೊರಹೊಮ್ಮಿದವು, ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಡಿಸ್ಟಿಲರಿಗಳ ಸ್ಥಾಪನೆಗೆ ಕಾರಣವಾಯಿತು ಮತ್ತು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಿತು.
ಸಕ್ಕರೆ ವಲಯದಲ್ಲಿ ಡಿಜಿಟಲೀಕರಣ
ವ್ಯವಹಾರವನ್ನು ಸುಲಭಗೊಳಿಸಲು, ಪಾರದರ್ಶಕತೆಯನ್ನು ತರಲು ಮತ್ತು ಸಕ್ಕರೆ ಕಾರ್ಖಾನೆಗಳನ್ನು ಸುಗಮಗೊಳಿಸಲು ಮತ್ತು ಇಡೀ ವ್ಯವಸ್ಥೆಯ ಸಮಗ್ರ ಡಿಜಿಟಲೀಕರಣಕ್ಕೆ ಹಾಗೂ ಸಕ್ಕರೆ ಕಾರ್ಖಾನೆಗಳು ಮತ್ತು ಎಥೆನಾಲ್ ಉದ್ಯಮದ ಎಲ್ಲಾ ಸಂಬಂಧಿತ ಡೇಟಾವನ್ನು ಒಂದೇ ಸ್ಥಳದಲ್ಲಿ ಹೊಂದಲು, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (ಎನ್ ಎಸ್ ಡಬ್ಲ್ಯು ಎಸ್) ಯಲ್ಲಿ ಮೀಸಲಾದ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಎನ್ ಎಸ್ ಡಬ್ಲ್ಯು ಎಸ್‌ಪೋರ್ಟಲ್ ನಲ್ಲಿ ಸಕ್ಕರೆ ಕಾರ್ಖಾನೆಗಳ ಸ್ವಯಂಚಾಲಿತ ವಿವಿಧ ಅನುಸರಣೆಗೆ ಡಿ ಎಫ್ ಪಿ ಡಿ ಯು ಇನ್ವೆಸ್ಟ್ ಇಂಡಿಯಾದ ಸಹಯೋಗದಲ್ಲಿದೆ. ಅಲ್ಲದೆ, ಮಾಸಿಕ ಮಾಹಿತಿಯನ್ನು ಸಹ ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ಸುಮಾರು 535 ಸಕ್ಕರೆ ಕಾರ್ಖಾನೆಗಳು ಮಾಸಿಕ ಆಧಾರದಲ್ಲಿ ಅದನ್ನು ಸಲ್ಲಿಸುತ್ತಿವೆ. ಇದಲ್ಲದೆ, ನೈಜ-ಸಮಯದ ಡೇಟಾ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಡೇಟಾ ನಿಖರತೆಯನ್ನು ಸುಧಾರಿಸಲು ಮತ್ತು ಅನಗತ್ಯ ಡೇಟಾ ಮತ್ತು ಮಾನವ ಹಸ್ತಕ್ಷೇಪವನ್ನು ತೊಡೆದುಹಾಕಲು, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (ಎನ್ ಎಸ್ ಡಬ್ಲ್ಯು ಎಸ್) ಯಲ್ಲಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಮೂಲಕ ಮಾಸಿಕ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
*****
(Release ID: 2087302)
Visitor Counter : 44