ರೈಲ್ವೇ ಸಚಿವಾಲಯ
10 ವಂದೇ ಭಾರತ್ ಸ್ಲೀಪರ್ ರೈಲುಗಳು ನಿರ್ಮಾಣ ಹಂತದಲ್ಲಿವೆ; 200 ವಂದೇ ಭಾರತ್ ಸ್ಲೀಪರ್ ರೇಕ್ ಗಳ ತಯಾರಿಕೆಯನ್ನು ತಂತ್ರಜ್ಞಾನ ಪಾಲುದಾರರಿಗೆ ಹಸ್ತಾಂತರಿಸಲಾಗಿದೆ: ಶ್ರೀ ಅಶ್ವಿನಿ ವೈಷ್ಣವ್
ವಿಶ್ವ ದರ್ಜೆಯ ಪ್ರಯಾಣದ ಅನುಭವಕ್ಕಾಗಿ, ಭಾರತೀಯ ರೈಲ್ವೇಯು ಏಪ್ರಿಲ್ 2018 ರಿಂದ LHB ಕೋಚ್‌ಗಳನ್ನು ಮಾತ್ರ ತಯಾರಿಸುತ್ತಿದೆ; 2014-24ರ ಅವಧಿಯಲ್ಲಿ ಉತ್ಪಾದಿಸಲಾದ LHB ಬೋಗಿಗಳ ಸಂಖ್ಯೆ 2004-14ಕ್ಕೆ ಹೋಲಿಸಿದರೆ 16 ಪಟ್ಟು ಹೆಚ್ಚಾಗಿದೆ: ಕೇಂದ್ರ ರೈಲ್ವೆ ಸಚಿವರು
"ಸುಗಮ್ಯ ಭಾರತ್ ಅಭಿಯಾನ"ದ ಭಾಗವಾಗಿ, ಭಾರತೀಯ ರೈಲ್ವೆ ಹೆಚ್ಚಿನ ಮೇಲ್/ಎಕ್ಸ್ ಪ್ರೆಸ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳಲ್ಲಿ ದಿವ್ಯಾಂಗರು ಮತ್ತು ಚಲನಶೀಲತೆ ಕಡಿಮೆ ಇರುವ ಪ್ರಯಾಣಿಕರಿಗೆ ಸಮಗ್ರ ಸೌಲಭ್ಯಗಳನ್ನು ಒದಗಿಸುತ್ತದೆ: ಶ್ರೀ ವೈಷ್ಣವ್
Posted On:
18 DEC 2024 7:29PM by PIB Bengaluru
ದೇಶದಲ್ಲಿ ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ಈಗಾಗಲೇ 10 ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಮೊದಲ ಮೂಲಮಾದರಿಯನ್ನು ಈಗಾಗಲೇ ತಯಾರಿಸಲಾಗಿದ್ದು, ಅದನ್ನು ಕ್ಷೇತ್ರ ಪ್ರಯೋಗಗಳಿಗೆ ಒಳಪಡಿಸಲಾಗುವುದು. ಇದರ ಜೊತೆಗೆ, 200 ವಂದೇ ಭಾರತ್ ಸ್ಲೀಪರ್ ರೇಕ್ ಗಳ ನಿರ್ಮಾಣ ಒಪ್ಪಂದವನ್ನು ತಂತ್ರಜ್ಞಾನ ಪಾಲುದಾರರಿಗೆ ನೀಡಲಾಗಿದೆ. ಆದರೆ, ಈ ರೈಲುಗಳು ಯಾವಾಗ ಸೇವೆಗೆ ಲಭ್ಯವಾಗುತ್ತವೆ ಎಂಬುದು ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದರ ಮೇಲೆ ಅವಲಂಬಿತವಾಗಿದೆ. 2 ಡಿಸೆಂಬರ್ 2024 ರಂತೆ ದೇಶಾದ್ಯಂತ ಭಾರತೀಯ ರೈಲ್ವೆಯ ಬ್ರಾಡ್ ಗೇಜ್ ವಿದ್ಯುದ್ದೀಕರಿಸಿದ ಮಾರ್ಗಗಳಲ್ಲಿ 136 ವಂದೇ ಭಾರತ್ ರೈಲುಗಳು ಕಡಿಮೆ ಮತ್ತು ಮಧ್ಯಮ ದೂರದ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿವೆ.
ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಮಂಡಿಸಿದ ಹೇಳಿಕೆಯಲ್ಲಿ, ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ನೀಡುವ ಸಲುವಾಗಿ, ಭಾರತೀಯ ರೈಲ್ವೆಯ ಬ್ರಾಡ್ ಗೇಜ್ ಎಲೆಕ್ಟ್ರಿಫೈಡ್ ನೆಟ್‌ವರ್ಕ್ ನಲ್ಲಿ ಚೇರ್ ಕಾರ್‌ಗಳನ್ನು ಹೊಂದಿರುವ 136 ವಂದೇ ಭಾರತ್ ರೈಲು ಸೇವೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು; ಅಕ್ಟೋಬರ್ 2024 ರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಒಟ್ಟಾರೆ ಆಕ್ಯುಪೆನ್ಸಿ 100% ಕ್ಕಿಂತ ಹೆಚ್ಚಾಗಿದೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ, ಕೇಂದ್ರ ಸಚಿವರು ಏಪ್ರಿಲ್ 2018 ರಿಂದ ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳು LHB ಬೋಗಿಗಳನ್ನು ಮಾತ್ರ ಉತ್ಪಾದಿಸುತ್ತಿವೆ ಎಂದು ಹೇಳಿದರು. ಈ ಬೋಗಿಗಳ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2014-24ರ ಅವಧಿಯಲ್ಲಿ ತಯಾರಿಸಲಾದ LHB ಬೋಗಿಗಳ ಸಂಖ್ಯೆ 2004-14ರ ಅವಧಿಯಲ್ಲಿ ತಯಾರಿಸಿದ ಸಂಖ್ಯೆಗಿಂತ (2,337) 16 ಪಟ್ಟು ಹೆಚ್ಚು (36,933). ಭಾರತೀಯ ರೈಲ್ವೆ (IR) LHB ಬೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದೆ, ಇವುಗಳು ಆಂಟಿ ಕ್ಲೈಂಬಿಂಗ್ ವ್ಯವಸ್ಥೆ, ವೈಫಲ್ಯ ಸೂಚನಾ ವ್ಯವಸ್ಥೆಯೊಂದಿಗೆ ಏರ್ ಸಸ್ಪೆನ್ಷನ್ ಮತ್ತು ಕಡಿಮೆ ತುಕ್ಕು ಹಿಡಿಯುವ ಶೆಲ್ ನಂತಹ ವೈಶಿಷ್ಟ್ಯಗಳೊಂದಿಗೆ ತಾಂತ್ರಿಕವಾಗಿ ಉತ್ತಮವಾಗಿವೆ.
"ಸುಗಮ್ಯ ಭಾರತ್ ಅಭಿಯಾನ"ದ ಭಾಗವಾಗಿ, ಭಾರತೀಯ ರೈಲ್ವೆಗಳು ದಿವ್ಯಾಂಗರು ಮತ್ತು ಚಲನಶೀಲತೆ ಕಡಿಮೆ ಇರುವ ಪ್ರಯಾಣಿಕರಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿವೆ. 2016 ರ ದಿವ್ಯಾಂಗರ ಹಕ್ಕುಗಳ ಕಾಯಿದೆಯ ಮಾರ್ಗಸೂಚಿಗಳ ಅಡಿಯಲ್ಲಿ, ರ್ಯಾಂಪ್ (ಇಳಿಜಾರು) ಗಳು, ಪ್ರವೇಶಿಸಬಹುದಾದ ಪಾರ್ಕಿಂಗ್, ಬ್ರೈಲ್ ಮತ್ತು ಸ್ಪರ್ಶ ಸಂಕೇತಗಳು, ಕಡಿಮೆ ಎತ್ತರದ ಕೌಂಟರ್ ಗಳು ಮತ್ತು ಲಿಫ್ಟ್ ಗಳು/ಎಸ್ಕಲೇಟರ್ ಗಳಂತಹ ಸಮಗ್ರ ಸೌಲಭ್ಯಗಳನ್ನು ಒದಗಿಸಲಾಗಿದೆ. ನವೆಂಬರ್ 2024 ರವರೆಗೆ, ಭಾರತೀಯ ರೈಲ್ವೆಗಳು 399 ನಿಲ್ದಾಣಗಳಲ್ಲಿ 1,512 ಎಸ್ಕಲೇಟರ್ ಗಳನ್ನು ಮತ್ತು 609 ನಿಲ್ದಾಣಗಳಲ್ಲಿ 1,607 ಲಿಫ್ಟ್ ಗಳನ್ನು ಸ್ಥಾಪಿಸಿದೆ. ಇದು ಹಿಂದಿನ ದಶಕಕ್ಕೆ ಹೋಲಿಸಿದರೆ ಗಮನಾರ್ಹ ಬೆಳವಣಿಗೆಯಾಗಿದೆ - ಕ್ರಮವಾಗಿ 9 ಮತ್ತು 14 ಪಟ್ಟು ಹೆಚ್ಚಳವಾಗಿದೆ. ಇದಲ್ಲದೆ, ವಿಶಾಲವಾದ ಪ್ರವೇಶದ್ವಾರಗಳು, ಪ್ರವೇಶಿಸಬಹುದಾದ ಶೌಚಾಲಯಗಳು ಮತ್ತು ವೀಲ್ ಚೇರ್ ಪಾರ್ಕಿಂಗ್ ಹೊಂದಿರುವ ಮೀಸಲಾದ ಬೋಗಿಗಳು ಹೆಚ್ಚಿನ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ಲಭ್ಯವಿದೆ, ಆದರೆ ವಂದೇ ಭಾರತ್ ರೈಲುಗಳು ಸ್ವಯಂಚಾಲಿತ ಬಾಗಿಲುಗಳು, ಗುರುತಿಸಲಾದ ಸ್ಥಳಗಳು ಮತ್ತು ದಿವ್ಯಾಂಗರಿಗೆ ಬ್ರೈಲ್ ಸಂಕೇತಗಳಂತಹ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಪ್ರವೇಶವನ್ನು ನೀಡುತ್ತವೆ.
*****
(Release ID: 2085932)
Visitor Counter : 20