ಗೃಹ ವ್ಯವಹಾರಗಳ ಸಚಿವಾಲಯ
ಇಂದು ಛತ್ತೀಸ್ ಗಢದ ಜಗದಲ್ ಪುರದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿದ ಜನರನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭೇಟಿಯಾದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ ಹಸು ಅಥವಾ ಎಮ್ಮೆ ನೀಡುವ ಮೂಲಕ ಹೈನುಗಾರಿಕೆ ಸಹಕಾರ ಸಂಘ ಆರಂಭಿಸಲಾಗುತ್ತಿದೆ
ಹಿಂಸಾಚಾರದಲ್ಲಿ ತೊಡಗಿರುವವರನ್ನು ಕೊಲ್ಲುವುದು ಉತ್ತಮ ಮಾರ್ಗವಲ್ಲ, ಬದಲಾಗಿ ಶಸ್ತ್ರಾಸ್ತ್ರ ಹಿಡಿದವರನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕು
ಛತ್ತೀಸ್ ಗಢ ಸರ್ಕಾರವು ಶಸ್ತ್ರಾಸ್ತ್ರ ತೊರೆಯುವ ನೀರಿಗಾಗಿ ಅತ್ಯುತ್ತಮ ಶರಣಾಗತಿ ನೀತಿಯನ್ನು ಮಾಡಿದ್ದು, ಅದನ್ನು ಇಡೀ ದೇಶದಲ್ಲಿ ಪುನರಾವರ್ತಿಸಿ ಬಳಸುವ ಮೂಲಕ, ದೇಶದಾದ್ಯಂತ ಶಸ್ತ್ರಾಸ್ತ್ರ ತ್ಯಜಿಸುವ ಯುವಕರಿಗೆ ಸಮಾಜದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು
ಹಿಂಸಾಚಾರದಲ್ಲಿ ತೊಡಗಿರುವ ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಕೇಂದ್ರ ಗೃಹ ಸಚಿವರು ಮನವಿ ಮಾಡಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳಲ್ಲಿ ಬಸ್ತಾರ್ ಪ್ರದೇಶ ಮೊದಲ ಆದ್ಯತೆಯಾಗಿದೆ
ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಜನರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ನಂಬಿದ್ದಾರೆ, ಅವರ ವಿಶ್ವಾಸಕ್ಕೆ ಕೇಂದ್ರ ಸರ್ಕಾರ ಎಂದೂ ಭಂಗ ಬರುವುದಿಲ್ಲ, ಇಂತಹವರನ್ನು ಕಂಡರೆ ಇತರ ಅದೆಷ್ಟೋ ಯುವಕರು ಶ
Posted On:
15 DEC 2024 8:36PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ಗಢದ ಜಗದಲ್ ಪುರದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿದ ಜನರನ್ನು ಭೇಟಿ ಮಾಡಿದರು. ಕಾರ್ಯಕ್ರಮದಲ್ಲಿ ಛತ್ತೀಸ್ ಗಢ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ ಸಾಯಿ ಮತ್ತು ಉಪಮುಖ್ಯಮಂತ್ರಿ ಶ್ರೀ ವಿಜಯ್ ಶರ್ಮಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
![072A1850 (1).JPG](https://static.pib.gov.in/WriteReadData/userfiles/image/image001XB0D.jpg)
ಸಭೆಯ ನಂತರದ ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ ಅವರು "2019ರಲ್ಲಿ ಕಾಶ್ಮೀರ, ಈಶಾನ್ಯ ಮತ್ತು ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿನ ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿದು, ಹಿಂಸಾಚಾರದಲ್ಲಿ ತೊಡಗುವ ಮೂಲಕ ಮತ್ತು ತಮ್ಮ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿತಗೊಳಿಸುವುದರ ಮೂಲಕ ತಮ್ಮ ಜೀವನವನ್ನು ಹಾಳುಮಾಡುತ್ತಿದ್ದರು" ಎಂದು ಹಿಂದಿನ ಆ ಕಾಲಘಟ್ಟವನ್ನು ವಿವಸಿದರು. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಶಸ್ತ್ರಾಸ್ತ್ರ ತ್ಯಜಿಸಲು ಮತ್ತು ಸಮಾಜದಲ್ಲಿ ಅವರನ್ನು ಮತ್ತೆ ಸಂಯೋಜಿಸಲು ಇಚ್ಛಿಸುವವರಿಗೆ ಅವಕಾಶವನ್ನು ಒದಗಿಸುವ ನಿರ್ಧಾರವನ್ನು ಮಾಡಲಾಗಿದೆ. 2019 ರಿಂದ 2024 ರವರೆಗೆ ಈಶಾನ್ಯದಲ್ಲಿ 9,000 ಕ್ಕೂ ಹೆಚ್ಚು ವ್ಯಕ್ತಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಶರಣಾಗಿದ್ದಾರೆ. ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿ ಅನೇಕ ಯುವಕರು ಇದೇ ರೀತಿ ಮುಖ್ಯವಾಹಿನಿಗೆ ಸೇರಿದ್ದಾರೆ ಮತ್ತು ಈಗ ಭಾರತ ಸರ್ಕಾರವು ಈ ರೀತಿಯ ಶರಣಾದ ವ್ಯಕ್ತಿಗಳ ಮತ್ತು ನಕ್ಸಲಿಸಂನ ಪ್ರಭಾವದಿಂದ ಬಳಲುತ್ತಿರುವವರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಯನ್ನು ರೂಪಿಸುತ್ತಿದೆ" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹಲವಾರು ಯೋಜನೆಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. "ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 15,000 ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ. ಹೆಚ್ಚುವರಿಯಾಗಿ, ಈ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆ ನೀಡುವ ಮೂಲಕ ಡೈರಿ ಸಹಕಾರ ಸಂಘಗಳನ್ನು ಸ್ಥಾಪಿಸುವ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸುತ್ತಿದೆ" ಎಂದು ಗೃಹ ಸಚಿವರು ವಿವಿಧ ಯೋಜನೆಗಳ ಮಾಹಿತಿ ನೀಡಿದರು.
"ಕಳೆದ ವರ್ಷ ಛತ್ತೀಸ್ ಗಢದಲ್ಲಿ ನೂತನ ಸರ್ಕಾರ ರಚನೆಯಾದ ನಂತರ ರಾಜ್ಯವನ್ನು ನಕ್ಸಲಿಸಂ ಮುಕ್ತಗೊಳಿಸಲು ಸಂಕಲ್ಪ ಮಾಡಲಾಗಿತ್ತು. ಸಮಾಜದಲ್ಲಿ ಕೇವಲ ಹಿಂಸಾಚಾರವೇ ಎಂದಿಗೂ ಪರಿಹಾರವಲ್ಲ, ಶಸ್ತ್ರಾಸ್ತ್ರ ಹಿಡಿದವರನ್ನು ಮತ್ತೆ ಸಮಾಜಕ್ಕೆ ಸೇರಿಸಿಕೊಳ್ಳಬೇಕು" ಎಂದು ಕೇಂದ್ರ ಸಚಿವರು ಹೇಳಿದರು. "ಛತ್ತೀಸ್ ಗಢ ಸರ್ಕಾರದ ಶರಣಾಗತಿ ನೀತಿಯನ್ನು ಅತ್ಯುತ್ತಮವಾದದ್ದು" ಎಂದು ಸಚಿವರು ಶ್ಲಾಘಿಸಿದರು, ಮತ್ತು ಈ ಉತ್ತಮ ಮಾದರಿಯನ್ನು ರಾಷ್ಟ್ರವ್ಯಾಪಿ ಪುನರಾವರ್ತಿಸುವ ಉದ್ದೇಶವನ್ನು ಸಚಿವರು ವ್ಯಕ್ತಪಡಿಸಿದರು, ಹಾಗೂ "ಶಸ್ತ್ರಾಸ್ತ್ರ ತ್ಯಜಿಸಿದ ಯುವಕರಿಗೆ ಪುನರ್ವಸತಿ ಕಲ್ಪಿಸುವ ಮತ್ತು ಸಮಾಜದ ಮುಖ್ಯವಾಹಿನಿಗೆ ಮರಳಲು ಸಹಾಯ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ" ಎಂದು ಕೂಡ ಹೇಳಿದರು.
![072A1682 (1).JPG](https://static.pib.gov.in/WriteReadData/userfiles/image/image002ODRW.jpg)
"ಹಿಂಸಾಚಾರದಲ್ಲಿ ತೊಡಗಿರುವ ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು" ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಒತ್ತಾಯಿಸಿದರು. ಬಸ್ತಾರ್ ಒಲಿಂಪಿಕ್ಸ್ ಕುರಿತು ಮಾತನಾಡಿದ ಅವರು, "ಬಸ್ತಾರ್ ನ ಪ್ರತಿಭಾವಂತ ಯುವಕರು ಭಾರತದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ. ಬಸ್ತಾರ್ ನ ಮಕ್ಕಳನ್ನು 2025 ರಿಂದ 2036ರ ಒಲಿಂಪಿಕ್ಸ್ ನವರೆಗೆ ಪದಕ ಗೆಲ್ಲುವ ಸಾಮರ್ಥ್ಯವನ್ನು ರೂಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಬಸ್ತಾರ್ ನ ಹುಡುಗಿ 2036 ರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ, ಅದು ಪ್ರಬಲ ಪ್ರತಿಕ್ರಿಯೆಯಾಗಿ ದೇಶದಾದ್ಯಂತ ಕಾರ್ಯನಿರ್ವಹಿಸುತ್ತದೆ. ನಕ್ಸಲಿಸಂ ಮತ್ತು ಹಿಂಸೆಯಲ್ಲ , ಕೇವಲ ಅಭಿವೃದ್ಧಿಯೇ ಯಶಸ್ಸಿನ ಹಾದಿ ಎಂಬ ಜಾಗತಿಕ ಸಂದೇಶವನ್ನು ರವಾನಿಸುತ್ತದೆ" ಎಂದು ಹೇಳಿದರು.
![072A1872 (1).JPG](https://static.pib.gov.in/WriteReadData/userfiles/image/image003EJ7P.jpg)
![072A1853 (1).JPG](https://static.pib.gov.in/WriteReadData/userfiles/image/image004TB66.jpg)
"ಈಗ ಕೇವಲ ಕೆಲವು ಪ್ರದೇಶಗಳು ಮಾತ್ರ ನಕ್ಸಲಿಸಂ ಬಾಧಿತವಾಗಿ ಇನ್ನೂ ಉಳಿದಿವೆ. ಹಿಂಸಾಚಾರದಲ್ಲಿ ತೊಡಗಿರುವವರೂ ಕೂಡ ನಮ್ಮವರೇ" ಎಂದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. "ರಾಜ್ಯದ ನಾಗರಿಕರಿಗೆ ಶಾಲೆಗಳು, ಡಿಸ್ಪೆನ್ಸರಿಗಳು, ಆಸ್ಪತ್ರೆಗಳು, ಉಚಿತ ಆಹಾರ ಧಾನ್ಯಗಳು, ವಿದ್ಯುತ್, ಶೌಚಾಲಯಗಳು ಮತ್ತು ಶುದ್ಧ ನೀರು ಮುಂತಾದ ಅಗತ್ಯ ಸೇವೆಗಳ ಅಗತ್ಯವಿದೆ ಮತ್ತು ಪ್ರತಿ ಹಳ್ಳಿಗೆ ಈ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಛತ್ತೀಸ್ ಗಢ ಸರ್ಕಾರದ ಮೇಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಸ್ತಾರ್ ಮೊದಲ ಆದ್ಯತೆಯಾಗಿದೆ" ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಸರ್ಕಾರದ ಆಶಯ ಪ್ರಸ್ತಾಪಿಸಿದರು. "ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿದವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇಟ್ಟಿದ್ದು, ವಿಶ್ವಾಸಕ್ಕೆ ಧಕ್ಕೆಯಾಗುವುದಿಲ್ಲ" ಎಂದು ಭರವಸೆ ನೀಡಿದರು. "ಈ ಶರಣಾದ ಮತ್ತು ಪುನರ್ವ್ಯವಸ್ಥೆ ಪಡೆದ ವ್ಯಕ್ತಿಗಳನ್ನು ಕಂಡರೆ ಇನ್ನೂ ಅನೇಕ ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶಾಂತಿ ಮತ್ತು ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಳ್ಳುತ್ತಾರೆ" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದರು.
*****
(Release ID: 2084844)
Visitor Counter : 9