ಗೃಹ ವ್ಯವಹಾರಗಳ ಸಚಿವಾಲಯ
ಛತ್ತೀಸ್ ಗಢದ ಜಗದಲ್ ಪುರದಲ್ಲಿ ನಡೆದ ಬಸ್ತಾರ್ ಒಲಿಂಪಿಕ್ಸ್ ನ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು
ಬಸ್ತಾರ್ ಒಲಿಂಪಿಕ್ಸ್ ಇಡೀ ಪ್ರದೇಶದ ಭರವಸೆಯ ಸಂಕೇತವಾಗಲಿದೆ, ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ನಕ್ಸಲಿಸಂನ ಸಂಪೂರ್ಣ ನಿರ್ಮೂಲನೆಗೆ ಬಲವಾದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ
ಬಸ್ತಾರ್ ರೂಪಾಂತರಗೊಳ್ಳುತ್ತಿದೆ, 2026ರಲ್ಲಿ ಮತ್ತೊಮ್ಮೆ ಬಸ್ತಾರ್ ಒಲಿಂಪಿಕ್ಸ್ ಆಯೋಜಿಸುವ ಹೊತ್ತಿಗೆ, ಪ್ರದೇಶವು ಆಳವಾದ ಬದಲಾವಣೆಗೆ ಒಳಗಾಗುತ್ತದೆ; ಈ ಕ್ರೀಡೆಗಳು "ಬದಲಾವಣೆ ಹಂತ" ದಿಂದ "ಸಂಪೂರ್ಣವಾಗಿ ಬದಲಾಗಿದೆ" ಎಂಬ ಹಂತದ ಪರಿವರ್ತನೆ ಕಾರ್ಯಗಳನ್ನು ಪ್ರಾರಂಭಿಸಿವೆ
ಬಸ್ತಾರ್ ಒಲಿಂಪಿಕ್ಸ್ ಈ ಪ್ರದೇಶದ ಶಾಂತಿ, ಭದ್ರತೆ, ಪ್ರಗತಿ ಮತ್ತು ನವೀಕೃತ ಆಕಾಂಕ್ಷೆಗಳಿಗೆ ಅಡಿಪಾಯ ಹಾಕುತ್ತದೆ
ಬಸ್ತಾರ್ ನ ಹುಡುಗಿಯೊಬ್ಬಳು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಾಗ, ಅದು ಹಿಂಸೆಯಲ್ಲ ಕೇವಲ ಅಭಿವೃದ್ಧಿ ಮಾತ್ರ ಎಂದು ಇಡೀ ಜಗತ್ತಿಗೆ ಸಂದೇಶವಾಗಲಿದೆ
ಬಸ್ತಾರ್ ನ ಬುಡಕಟ್ಟು ಮಕ್ಕಳಿಗೆ ಬಸ್ತಾರ್ ಒಲಿಂಪಿಕ್ಸ್ ಹೊಸ ಜಾಗತಿಕ ಕ್ಷಿತಿಜವನ್ನು ತೆರೆಯುತ್ತದೆ, ಮುಂಬರುವ ದಿನಗಳಲ್ಲಿ ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರಿಗೆ ಶಕ್ತಿ ನೀಡುತ್ತದೆ
ನಕ್ಸಲ್ ಹಿಂಸಾಚಾರದಿಂದ ಬಾಧಿತರಾಗಿರುವ ವಿಕಲಚೇತನರಿಗೆ ಗಾಲಿಕುರ್ಚಿ ಸ್ಪರ್ಧೆಯು ಬಸ್ತಾರ್ ನ ಕ್ಷಿಪ್ರ ಬೆಳವಣಿಗೆಯ ಪ್ರಬಲ ಸಂಕೇತವಾಗಿ ಹೊರಹೊಮ್ಮಿದೆ
ನಕ್ಸಲಿಸಂನ ಪ್ರಭಾವದಿಂದ ಹಿಂದುಳಿದಿರುವ ಬುಡಕಟ್ಟು ಪ್ರದೇಶಗಳು, ಹಳ್ಳಿಗಳು ಮತ್ತು ಯುವಕರ ಅಭಿವೃದ್ಧಿಗೆ ಕೇಂದ್ರದ ಮೋದಿ ಸರ್ಕಾರ ಬದ್ಧವಾಗಿದೆ
ಕಳೆದ ದಶಕದಲ್ಲಿ, ಸರ್ಕಾರವು ನಕ್ಸಲೀಯರ ವಿರುದ್ಧ ಭದ್ರತಾ ಕ್ರಮಗಳನ್ನು ಬಲಪಡಿಸಿದೆ ಮಾತ್ರವಲ್ಲದೆ ಶರಣಾಗಲು ಮತ್ತು ಮುಖ್ಯವಾಹಿನಿಗೆ ಮರಳಲು ಆಯ್ಕೆ ಮಾಡಿದವರಿಗೆ ಬೆಂಬಲವನ್ನು ಖಾತ್ರಿಪಡಿಸಿದೆ
ನಕ್ಸಲ್ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳಿಗಾಗಿ ಸುಮಾರು 15,000 ಕ್ಕೂ ಹೆಚ್ಚು ಹೆಚ್ಚುವರಿ ಮನೆಗಳನ್ನು ಒದಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಿರ್ಧಾರವು "ಅವರ ಸಂವೇದನೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಆಳವಾದ ಬದ್ಧತೆ"ಯನ್ನು ಪ್ರತಿಬಿಂಬಿಸುತ್ತದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಎಲ್ಲರಿಗೂ ಕ್ರೀಡೆ, ಶ್ರೇಷ್ಠತೆಗಾಗಿ ಕ್ರೀಡೆ" ಎಂಬ ದೃಷ್ಟಿಕೋನವನ್ನು ನಾವು ಬಸ್ತಾರ್ ನಲ್ಲಿ ಸಾಕಾರಗೊಳಿಸಲು ಬಯಸುತ್ತೇವೆ
ಮೂಲಸೌಕರ್ಯ, ಪ್ರವಾಸೋದ್ಯಮ, ಸಾರ್ವಜನಿಕ ಕಲ್ಯಾಣ ಮತ್ತು ಶಾಂತಿಯನ್ನು ಒಳಗೊಂಡ ಬಸ್ತಾರ್ 100% ಅಭಿವೃದ್ಧಿ ಶುದ್ಧತ್ವವನ್ನು ಸಾಧಿಸುತ್ತದೆ ಮತ್ತು ಛತ್ತೀಸ್‌ಗಢ ಶೀಘ್ರದಲ್ಲೇ ನಕ್ಸಲಿಸಂನಿಂದ ಮುಕ್ತವಾಗಲಿದೆ
Posted On:
15 DEC 2024 8:03PM by PIB Bengaluru
ಕಳೆದ 10 ವರ್ಷಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುಡಕಟ್ಟು ಸಮುದಾಯಗಳಿಗೆ ನೀರು, ಅರಣ್ಯ ಮತ್ತು ಭೂಮಿಯ ಭದ್ರತೆ, ಗೌರವ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವ ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸಿದ್ದಾರೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ಗಢದ ಜಗದಲ್ ಪುರದಲ್ಲಿ ನಡೆದ ಬಸ್ತಾರ್ ಒಲಿಂಪಿಕ್ಸ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಛತ್ತೀಸ್‌ಗಢ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ ಸಾಯಿ, ಉಪ ಮುಖ್ಯಮಂತ್ರಿ ಶ್ರೀ ವಿಜಯ್ ಶರ್ಮಾ, ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ " ಬಸ್ತಾರ್ ಒಲಿಂಪಿಕ್ಸ್ ಕೇವಲ ಇಲ್ಲಿ ಇರುವ 150,000 ಮಕ್ಕಳಿಗೆ ಸೀಮಿತವಾಗಿಲ್ಲ, ಆದರೆ ಬಸ್ತಾರ್‌ನ ಎಲ್ಲಾ ಏಳು ಜಿಲ್ಲೆಗಳಿಗೆ ಭರವಸೆಯ ಸಂಕೇತವಾಗಲಿದೆ. ಮುಂದಿನ ದಿನಗಳಲ್ಲಿ ಬಸ್ತಾರ್ ಒಲಿಂಪಿಕ್ಸ್ ಬಸ್ತಾರ್ ನ ಅಭಿವೃದ್ಧಿಯ ಸಾಹಸಗಾಥೆಯಾಗಲಿದೆ ಮತ್ತು ನಕ್ಸಲಿಸಂಗೆ ನಿರ್ಣಾಯಕ ಹೊಡೆತವನ್ನು ನೀಡಲಿದೆ, ಐತಿಹಾಸಿಕ ಬಸ್ತಾರ್ ಒಲಿಂಪಿಕ್ಸ್ 2024 ಇಂದು ಮುಕ್ತಾಯಗೊಳ್ಳಲಿದೆ" ಎಂದು ಹೇಳಿದರು.
"ಬಸ್ತಾರ್ ಇಂದು ಬದಲಾಗುತ್ತಿದೆ, ಆದರೆ 2026 ರಲ್ಲಿ ಪುನಃ ಬಸ್ತಾರ್ ಒಲಿಂಪಿಕ್ಸ್ ನಡೆಯಲಿದ್ದು, ನಮ್ಮ ಬಸ್ತಾರ್ ಬದಲಾಗಿದೆ ಎಂದು ನಾವು ಖಂಡಿತವಾಗಿ ಹೇಳಬಹುದು. ಈ ಕ್ರೀಡೆಗಳು "ಬದಲಾವಣೆ"ಯಿಂದ "ಸಂಪೂರ್ಣವಾಗಿ ಬದಲಾಗಿದೆ" ಎಂಬ ಪರಿವರ್ತನೆಯನ್ನು ಪ್ರಾರಂಭಿಸಿವೆ. ಬಸ್ತಾರ್ ಒಲಿಂಪಿಕ್ಸ್ ನ ಸಕಾರಾತ್ಮಕ ಶಕ್ತಿಯು ಲಕ್ಷಾಂತರ ಬುಡಕಟ್ಟು ಯುವಕರನ್ನು ತಪ್ಪು ದಾರಿಯಲ್ಲಿ ಹೋಗದಂತೆ ತಡೆಯುತ್ತದೆ, ಅವರನ್ನು ಸಕಾರಾತ್ಮಕ ಪ್ರಕ್ರಿಯೆಯೊಂದಿಗೆ ಸಂಪರ್ಕಿಸುತ್ತದೆ. ಭಾರತವು ಲಕ್ಷಾಂತರ ಗ್ರಾಮೀಣ ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕೆ ಒಂದು ಸಾಧನವಾಗಿದೆ" ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. " ಈ ಪ್ರದೇಶದಲ್ಲಿ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಹೊಸ ಭರವಸೆಗಳಿಗೆ ಬಸ್ತಾರ್ ಒಲಿಂಪಿಕ್ಸ್ ಅಡಿಪಾಯ ಹಾಕುತ್ತದೆ. ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತ ಗೆದ್ದಿರುವ ಪದಕಗಳಲ್ಲಿ ಅರ್ಧದಷ್ಟು ನಮ್ಮ ಬುಡಕಟ್ಟು ಕುಟುಂಬಗಳಿಂದ ಬಂದವರು ಸಾಧಿಸಿದ ಸಾಧನೆ ಆಗಿದೆ. ಬಸ್ತಾರ್ ಒಲಿಂಪಿಕ್ಸ್ ಮತ್ತು ಅದರ ಮೂಲಕ ಪ್ರಾರಂಭವಾದ ಅಭಿವೃದ್ಧಿಯು ಮುಂಬರುವ ದಿನಗಳಲ್ಲಿ ಬಸ್ತಾರ್ ನ ಬುಡಕಟ್ಟು ಮಕ್ಕಳಿಗೆ ವಿಶ್ವದ ದಿಗಂತವನ್ನು ತೆರೆಯಲಿದೆ. ನಕ್ಸಲ್ ಹಿಂಸಾಚಾರಕ್ಕೆ ಒಳಗಾದ ವಿಕಲಚೇತನರ ಗಾಲಿಕುರ್ಚಿ ಓಟವು ಬಸ್ತಾರ್ ನ ಅಭಿವೃದ್ಧಿಯ ಸಂಕೇತವಾಗಲಿದೆ" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
"ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಬಸ್ತಾರ್ ಎದುರಿಸುತ್ತಿದ್ದ ಸಮಯವನ್ನು ಮತ್ತು ಹಲವೆಡೆ ಶಾಲೆಗಳನ್ನು ಸುಟ್ಟುಹಾಕಲಾಯಿತು ಮತ್ತು ಔಷಧಾಲಯಗಳು ಮತ್ತು ಆಸ್ಪತ್ರೆಗಳನ್ನು ಮುಚ್ಚಲಾಯಿತು" ಮುಂತಾದ ಘಟನೆಗಳ ಕಾಲಘಟ್ಟವನ್ನು ಶ್ರೀ ಅಮಿತ್ ಶಾ ನೆನಪಿಸಿಕೊಂಡರು, "ಕಳೆದ ಕೆಲವು ವರ್ಷಗಳಲ್ಲಿ, ರಾಜ್ಯ ಸರ್ಕಾರವು ಬಸ್ತಾರ್ ನ ಹಳ್ಳಿಗಳನ್ನು ಪರಿವರ್ತಿಸಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ ಸಿಗುತ್ತಿರಲ್ಲ, ಅದರೆ ರಾಜ್ಯದಲ್ಲಿ ಅವರು ಪಕ್ಷ ಇತ್ತೀಚೆಗೆ ಪುನಃ ಸರ್ಕಾರ ರಚಿಸಿದಾಗ, ನಕ್ಸಲಿಸಂ ವಿರುದ್ಧದ ಕಠಿಣ ಅಭಿಯಾನ ಮತ್ತೆ ತೀವ್ರಗೊಂಡಿದೆ "ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. "ಕೇವಲ ಒಂದು ವರ್ಷದೊಳಗೆ 287 ನಕ್ಸಲೀಯರನ್ನು ತಟಸ್ಥಗೊಳಿಸಲಾಯಿತು, ಸುಮಾರು 1,000 ಮಂದಿಯನ್ನು ಬಂಧಿಸಲಾಯಿತು ಮತ್ತು 837 ಮಂದಿ ಶರಣಾದರು" ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
"ನಕ್ಸಲೀಯರು ಹಿಂಸಾಚಾರದ ಹಾದಿಯನ್ನು ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಬೇಕು ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು, ಛತ್ತೀಸ್ ಗಢದ ಪ್ರಗತಿಗೆ ಕೊಡುಗೆ ನೀಡಬೇಕು" ಎಂದು ಕೇಂದ್ರ ಗೃಹ ಸಚಿವರು ಒತ್ತಾಯಿಸಿದರು. "ಛತ್ತೀಸ್ ಗಢ ಸರ್ಕಾರವು ಇಡೀ ದೇಶದಲ್ಲಿ ಅತ್ಯಂತ ಆಕರ್ಷಕವಾದ ಶರಣಾಗತಿ ನೀತಿಯನ್ನು ಪರಿಚಯಿಸಿದೆ. ಛತ್ತೀಸ್‌ಗಢ ಸರ್ಕಾರವು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡರಿಂದಲೂ 300 ಕ್ಕೂ ಹೆಚ್ಚು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ರಾಜ್ಯದಾದ್ಯಂತ ಪ್ರತಿ ಹಳ್ಳಿಯಲ್ಲಿ ಜಾರಿಗೆ ತರಲು ಬದ್ಧವಾಗಿದೆ. ಹಳ್ಳಿಗಳನ್ನು ಸ್ವರ್ಗವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ‘ನಿಯಾದ್ ನೆಲ್ಲನಾರ್’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇಂದು, ಬಸ್ತಾರ್‌ನಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ, ವಿದ್ಯುತ್ ಒದಗಿಸಲಾಗಿದೆ, ಫೋನ್ ಸಂಪರ್ಕ ಲಭ್ಯವಿದೆ, ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಕುಡಿಯುವ ನೀರು ಲಭ್ಯವಿರುತ್ತದೆ ಮತ್ತು ಪ್ರತಿ ಬುಡಕಟ್ಟು ಜನರು ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಮೋದಿ ಸರ್ಕಾರವು 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದೆ" ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
"ಕಳೆದ 10 ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನಕ್ಸಲಿಸಂ ಅನ್ನು ಎರಡು ರಂಗಗಳಲ್ಲಿ ನಿಭಾಯಿಸಿದೆ . ಒಂದೆಡೆ, ಹಿಂಸಾಚಾರದಲ್ಲಿ ತೊಡಗಿರುವ ನಕ್ಸಲೀಯರ ವಿರುದ್ಧ ಕಠಿಣವಾದ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ, ಅವರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲಾಗಿದೆ. ಮತ್ತೊಂದೆಡೆ ಶರಣಾದ ನಕ್ಸಲೀಯರಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಡೆದಿದೆ. ಅಭಿವೃದ್ಧಿಯ ಓಟದಲ್ಲಿ ಹಿಂದೆ ಬಿದ್ದಿರುವ "ನಕ್ಸಲಿಸಂ ಪೀಡಿತ ಪ್ರದೇಶ"ಗಳ ಅಭಿವೃದ್ಧಿಗೆ ಮೋದಿ ಸರಕಾರ ವಿಶೇಷ ಒತ್ತು ನೀಡಿದೆ. ಮೋದಿ ಸರ್ಕಾರದ ಪ್ರಯತ್ನದಿಂದಾಗಿ, 1983 ರಿಂದ ನಕ್ಸಲಿಸಂನಿಂದ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಸಾವುಗಳಲ್ಲಿ ಕಂಡು ಬಂದಿದ್ದ 73% ರಷ್ಟು ಮತ್ತು ನಾಗರಿಕರ ಸಾವು-ನೋವುಗಳಲ್ಲಿ 70% ಕಡಿಮೆಯಾಗಿದೆ " ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. ಮಾರ್ಚ್ 31, 2026 ರೊಳಗೆ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮೋದಿ ಸರ್ಕಾರದ ಬದ್ಧತೆಯನ್ನು ಕೇಂದ್ರ ಗೃಹ ಸಚಿವರು ಪುನರುಚ್ಚರಿಸಿದರು.
"ಒಮ್ಮೆ ನಕ್ಸಲಿಸಂ ನಿರ್ಮೂಲನೆಗೊಂಡರೆ, ಬಸ್ತಾರ್ ತನ್ನ ಹೇರಳವಾದ ನೈಸರ್ಗಿಕ ಸೌಂದರ್ಯದಿಂದಾಗಿ ಕಾಶ್ಮೀರಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಈ ಪ್ರದೇಶದಲ್ಲಿ ಸಹಕಾರಿ ಚೌಕಟ್ಟಿನೊಳಗೆ ಪ್ರವಾಸೋದ್ಯಮ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಮತ್ತು ಡೈರಿ ವಲಯವನ್ನು ಉತ್ತೇಜಿಸಲು ಮೋದಿ ಸರ್ಕಾರ ಗಮನಹರಿಸಿದೆ . ಹೆಚ್ಚುವರಿಯಾಗಿ, ಸರ್ಕಾರವು ಬುಡಕಟ್ಟು ರೈತರ ಭತ್ತವನ್ನು ಕ್ವಿಂಟಲ್ ಗೆ ರೂಪಾಯಿ 3,100 ಮೌಲ್ಯದಲ್ಲಿ ಖರೀದಿಸುವ ಮೂಲಕ ಅವರನ್ನು ಬೆಂಬಲಿಸಲು ಕೆಲಸ ಮಾಡುತ್ತಿದೆ. ರೈತರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುವುದನ್ನು ಮತ್ತು ಹಣವನ್ನು ನಕ್ಸಲಿಸಂ ಚಟುವಟಿಕೆಗಳಿಗೆ ತಿರುಗಿಸದಂತೆ ತೆಂಡು ಎಲೆಗಳ ಖರೀದಿಗೆ ಇದೇ ರೀತಿಯ ಯೋಜನೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು" ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಘೋಷಿಸಿದರು.
"ನಕ್ಸಲ್ ಹಿಂಸಾಚಾರದಿಂದ ಶರಣಾದ ಅಥವಾ ಅಂಗವಿಕಲರಾದ ಅಥವಾ ನಕ್ಸಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಲು ಸುಮಾರು 15,000 ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಈ ಮನೆ ಯೋಜನೆಯಲ್ಲಿ ಬಸ್ತಾರ್ ನಲ್ಲಿ 9,000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದು ನಕ್ಸಲಿಸಂ ಪೀಡಿತ ಪ್ರದೇಶಗಳ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗಿರುವ ಆಳವಾದ ಕಾಳಜಿ ಮತ್ತು ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಘೋಷಿಸಿದರು.
"2036ರಲ್ಲಿ ಭಾರತದಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿರುವಾಗ, ಇಂದಿನ ಈ ಬಸ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಲ್ಲಿ ಒಬ್ಬರು ದೇಶಕ್ಕಾಗಿ ಪದಕವನ್ನು ಗೆಲ್ಲುತ್ತಾರೆ ಮತ್ತು ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮುಖ್ಯ ಮಂತ್ರ "ಎಲ್ಲರಿಗೂ ಕ್ರೀಡೆ, ಶ್ರೇಷ್ಠತೆಗಾಗಿ ಕ್ರೀಡೆ" ಮತ್ತು ಬಸ್ತಾರ್ ನಲ್ಲಿ ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ. ಅಭಿವೃದ್ಧಿ, ಪ್ರವಾಸೋದ್ಯಮ, ಶಾಂತಿ ಮತ್ತು ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಬಸ್ತಾರ್ 100% ಶುದ್ಧತೆ, ಪರಿಪೂರ್ಣತೆ, ಶ್ರದ್ಧೆ ಹಾಗೂ ಬದ್ಧತೆಯನ್ನು ಸಾಧಿಸುತ್ತದೆ ಮತ್ತು ಛತ್ತೀಸ್ ಗಢ ಶೀಘ್ರದಲ್ಲೇ ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ" ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಭರವಸೆ ನೀಡಿದರು.
"ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀರು, ಅರಣ್ಯ ಮತ್ತು ಭೂಮಿಯ ರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ಭದ್ರತೆ, ಗೌರವ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ನಕ್ಸಲಿಸಂ ನಿರ್ಮೂಲನೆ ಮಾಡುವ ಮೂಲಕ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವಿರತವಾಗಿ ಶ್ರಮಿಸಿದ್ದಾರೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ನೂರಾರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸಲು ದೇಶಾದ್ಯಂತ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಿದ್ದಾರೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಜನ್ ಜಾತೀಯ ಗೌರವ್ ದಿವಸ್ (ಬುಡಕಟ್ಟು ಜನಾಂಗದ ಹೆಮ್ಮೆಯ ದಿನ) ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಘೋಷಿಸಿದರು. 2013-2014ರಲ್ಲಿ ಬುಡಕಟ್ಟು ಕಲ್ಯಾಣ ಬಜೆಟ್ 28,000 ಕೋಟಿ ರೂ.ಗಳಾಗಿದ್ದರೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ 2024-2025 ನೇ ಸಾಲಿಗೆ 1,33,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ತಿಳಿಸಿದರು.
ಕೇಂದ್ರದ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬುಡಕಟ್ಟು ಪ್ರದೇಶಗಳು, ಗ್ರಾಮಗಳು ಮತ್ತು ಅಭಿವೃದ್ಧಿಯ ಓಟದಲ್ಲಿ ಹಿಂದೆ ಉಳಿದಿರುವ ಬುಡಕಟ್ಟು ಯುವಕರ ಅಭಿವೃದ್ಧಿಗೆ ಸಂಪೂರ್ಣ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
"ಈ ಹಿಂದೆ ಜಿಲ್ಲಾ ಖನಿಜ ನಿಧಿಯನ್ನು ಪ್ರಾಥಮಿಕವಾಗಿ ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು, ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ನಿಧಿಯ ಗಮನಾರ್ಹ ಭಾಗವನ್ನು ಬುಡಕಟ್ಟು ಹಳ್ಳಿಗಳ ಅಭಿವೃದ್ಧಿಗೆ ಮರುನಿರ್ದೇಶಿಸಲಾಗಿದೆ. ಕಳೆದ 10 ವರ್ಷಗಳಿಂದ ಹೆಚ್ಚುವರಿಯಾಗಿ ರೂ. 97,000 ಕೋಟಿ ಬುಡಕಟ್ಟು ಪ್ರದೇಶಗಳಿಗೆ ಮೀಸಲಿಡಲಾಗಿದೆ. ಈ ಅವಧಿಯಲ್ಲಿ ಹಿಂದಿನ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ನಿರ್ಮಿಸಿದ ಸಂಖ್ಯೆಗಿಂತ 27 ಪಟ್ಟು ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಅಂದರೆ 708 ಶಾಲೆಗಳನ್ನು ಮೋದಿ ಸರ್ಕಾರವು ರೂ. 6,400 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಹಾಗೂ, ಜನಜಾತಿಯ ಆದರ್ಶ ಗ್ರಾಮ ಯೋಜನೆಗೆ 7,000 ಕೋಟಿ ರೂ., ಮತ್ತು ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಗಾಗಿ 15,000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ, ಮತ್ತು ಜನ್ ಜಾತೀಯ ಉನ್ನತ್ ಗ್ರಾಮ ಯೋಜನೆ ಅಡಿಯಲ್ಲಿ 63,000 ಹಳ್ಳಿಗಳಲ್ಲಿ 5 ಕೋಟಿ ಬುಡಕಟ್ಟು ಜನರಿಗೆ ಸಮಗ್ರ ಸೌಲಭ್ಯಗಳನ್ನು ಒದಗಿಸಲಾಗಿದೆ" ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.
"ಬಸ್ತಾರ್‌ನಲ್ಲಿ ಶಾಂತಿ ಸ್ಥಾಪಿಸುವುದು, ಅದರ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡು ಅದರ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ" ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಒತ್ತಿ ಹೇಳಿದರು. "ಎಲ್ಲೆಡೆ ಉತ್ತಮ ರಸ್ತೆಗಳ ನಿರ್ಮಾಣ, ರೈಲುಮಾರ್ಗಗಳ ಅಳವಡಿಕೆ, ವಿದ್ಯುತ್ ಮತ್ತು ನೀರು ಒದಗಿಸುವ ಮೂಲಕ ಮಾತ್ರ ಇದನ್ನು ಸಾಧಿಸಲು ಸಾಧ್ಯ, ಮತ್ತು ಮುಖ್ಯವಾಗಿ, ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆಯಾದ ನಂತರ ಮಾತ್ರ ಶಾಂತಿ ಸ್ಥಾಪನೆ ಸಾಕಾರಗೊಳ್ಳುತ್ತದೆ"ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.
*****
(Release ID: 2084668)
Visitor Counter : 27