ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಇಂದು ಲೋಕಸಭೆಯಲ್ಲಿ ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ, 2024 ರ ಅಂಗೀಕಾರದ ಮಹತ್ವಪೂರ್ಣ ಕ್ರಮ ಕೈಗೊಂಡದ್ದಕ್ಕಾಗಿ ಕೇಂದ್ರ ಗೃಹ  ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಕೃತಜ್ಞತೆ ಸಲ್ಲಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ನೇತೃತ್ವದಲ್ಲಿ ಭಾರತವು ವಿಪತ್ತುಗಳ ಸಮಯದಲ್ಲಿ ಶೂನ್ಯ ಸಾವುನೋವುಗಳನ್ನು ಸಾಧಿಸುವ ಹಾದಿಯಲ್ಲಿ ಮುನ್ನಡೆಯುತ್ತಿದೆ

ನಮ್ಮ ನಾಗರಿಕರನ್ನು ಯಾವುದೇ ರೀತಿಯ ವಿಪತ್ತಿನಿಂದ ರಕ್ಷಿಸಲು ನಮ್ಮ ವಿಪತ್ತು ನಿರ್ವಹಣಾ ಪಡೆಗಳಿಗೆ ಅಧಿಕಾರ ನೀಡುವ ಮೂಲಕ ವಿಪತ್ತು-ನಿರೋಧಕ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನದ ಪರಿಕಲ್ಪನೆಯಂತೆ ಕಾನೂನನ್ನು ಸೂಕ್ತ ರೀತಿಯಲ್ಲಿ ಬದಲಾಯಿಸುವ ನೂತನ ನಿಬಂಧನೆಗಳು ಹೊಸ ಪ್ರಚೋದನೆ ನೀಡುತ್ತವೆ ಮತ್ತು ಪ್ರೋತ್ಸಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ

ಪ್ರತಿಕ್ರಿಯಾತ್ಮಕ ರೀತಿಯಲ್ಲಿ ವಿಪತ್ತು ನಿರ್ವಹಣೆಗೆ ಪೂರ್ವಭಾವಿ ವಿಧಾನಗಳಿಗೆ  ಆದ್ಯತೆ ನೀಡುವ ಮೂಲಕ ಪ್ರತಿ ನಾಗರಿಕನ ಸುರಕ್ಷತೆಗೆ ಮಸೂದೆ ದಾರಿ ಮಾಡಿಕೊಡುತ್ತದೆ

Posted On: 12 DEC 2024 9:31PM by PIB Bengaluru

ಇಂದು ಲೋಕಸಭೆಯಲ್ಲಿ ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ, 2024 ರ ಅಂಗೀಕಾರದ ಮಹತ್ವದ ಕ್ರಮಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ತಮ್ಮ ಎಕ್ಸ್ ತಾಣದಲ್ಲಿನ ಸಂದೇಶದಲ್ಲಿ, ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ನಾಯಕತ್ವದಲ್ಲಿ ಭಾರತವು ವಿಪತ್ತುಗಳ ಸಮಯದಲ್ಲಿ ಶೂನ್ಯ ಸಾವುನೋವುಗಳನ್ನು ಸಾಧಿಸುವ ಹಾದಿಯಲ್ಲಿ ಮುನ್ನಡೆಯುತ್ತಿದೆ.  ಈ ದಿಶೆಯಲ್ಲಿ, ಲೋಕಸಭೆಯು ಇಂದು ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 ಅನ್ನು ಅಂಗೀಕರಿಸಿತು. ಈ ಮಹತ್ವದ ಕ್ರಮಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮ ನಾಗರಿಕರನ್ನು ಯಾವುದೇ ರೀತಿಯ ವಿಪತ್ತಿನಿಂದ ರಕ್ಷಿಸಲು ನಮ್ಮ ವಿಪತ್ತು ನಿರ್ವಹಣಾ ಪಡೆಗಳಿಗೆ ಅಧಿಕಾರ ನೀಡುವ ಮೂಲಕ ವಿಪತ್ತು-ನಿರೋಧಕ ಭಾರತವನ್ನು ನಿರ್ಮಿಸುವ ಮೋದಿ ಜಿ ಅವರ ದೃಷ್ಟಿಕೋನದ ಪರಿಕಲ್ಪನೆಯಂತೆ ಕಾನೂನನ್ನು ಸೂಕ್ತ ರೀತಿಯಲ್ಲಿ ಬದಲಾಯಿಸುವ ನಿಬಂಧನೆಗಳು   ಪ್ರಚೋದನೆಯಾಗಿ ಕಾರ್ಯನಿರ್ವಹಿಸುತ್ತವೆ.  ಪ್ರತಿಕ್ರಿಯಾತ್ಮಕ ರೀತಿಯಲ್ಲಿ ವಿಪತ್ತು ನಿರ್ವಹಣೆಗೆ ಪೂರ್ವಭಾವಿ ವಿಧಾನಕ್ಕೆ ಆದ್ಯತೆ ನೀಡುವ ಮೂಲಕ ಪ್ರತಿ ನಾಗರಿಕನ ಸುರಕ್ಷತೆಗೆ ಮಸೂದೆ ದಾರಿ ಮಾಡಿಕೊಡುತ್ತದೆ." ಎಂದು ತಿಳಿಸಿದ್ದಾರೆ.

 

 


 *****


(Release ID: 2084135) Visitor Counter : 8