ಉಕ್ಕು ಸಚಿವಾಲಯ
azadi ka amrit mahotsav

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಂದ ಭಾರತದ ಗ್ರೀನ್ ಸ್ಟೀಲ್ ಟ್ಯಾಕ್ಸಾನಮಿ ಬಿಡುಗಡೆ 

Posted On: 12 DEC 2024 6:17PM by PIB Bengaluru

2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ತೀವ್ರತೆಯ ಗುರಿಯೊಂದಿಗೆ ಉಕ್ಕಿನ ವಲಯವನ್ನು ಡಿಕಾರ್ಬನೈಸ್ (ಇಂಗಾಲರಹಿತ) ಮಾಡಲು ಭಾರತ ಬದ್ಧವಾಗಿದೆ. ಇದಕ್ಕಾಗಿ, ಕಡಿಮೆ ಕಲ್ಮಷ ಹೊರಸೂಸುವಿಕೆಯ ಉಕ್ಕಿನ ಕಡೆಗೆ ಭಾರತದ ಪ್ರಯಾಣದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಲು, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು , 12ನೇ ಡಿಸೆಂಬರ್ 2024 ರಂದು ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಕ್ಕಾಗಿ ಹಸಿರು ಉಕ್ಕಿನ ಟ್ಯಾಕ್ಸಾನಮಿಯನ್ನು (ಭಾರತಕ್ಕೆ ಹಸಿರು ಉಕ್ಕಿನ ವರ್ಗೀಕರಣ) ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮಾ, ಉಕ್ಕು ಸಚಿವಾಲಯದ ಅಧಿಕಾರಿಗಳು, ಇತರ ಸಂಬಂಧಪಟ್ಟ ಸಚಿವಾಲಯಗಳು, ಸಿ.ಪಿ.ಎಸ್.ಇಗಳು, ಉಕ್ಕಿನ ಉದ್ಯಮದ ಪ್ರತಿನಿಧಿಗಳು, ಚಿಂತಕರು, ಶಿಕ್ಷಣ ತಜ್ಞರು ಮತ್ತು ಯುರೋಪಿಯನ್ ಒಕ್ಕೂಟದ ನಿಯೋಗ ಸೇರಿದಂತೆ ಭಾರತದಲ್ಲಿ ಕೆಲವು ವಿದೇಶಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಾಗತಿಕವಾಗಿ, ಹಸಿರು ಉಕ್ಕಿನ ಯಾವುದೇ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವಿಲ್ಲ; ಹಸಿರು ಉಕ್ಕಿನ ಟ್ಯಾಕ್ಸಾನಮಿ ಬಿಡುಗಡೆ ಮಾಡಿದ ಮೊದಲ ರಾಷ್ಟ್ರ ಭಾರತವಾಗಿದೆ.

ಭಾರತಕ್ಕಾಗಿ ಹಸಿರು ಉಕ್ಕಿನ ವರ್ಗೀಕರಣವನ್ನು ಬಿಡುಗಡೆಯು ಉಕ್ಕು ಸಚಿವಾಲಯಕ್ಕೆ ಮಹತ್ವದ ಮೈಲಿಗಲ್ಲು ಮಾತ್ರವಲ್ಲದೆ, ಕಡಿಮೆ ಇಂಗಾಲದ ಆರ್ಥಿಕತೆಯತ್ತ ಸಾಗುವ ನಮ್ಮ ಸಾಮೂಹಿಕ ಧ್ಯೇಯಕ್ಕೆ ಮಹತ್ವದ ಮೈಲಿಗಲ್ಲು ಕೂಡ ಆಗಿದೆ ಎಂದು ಕೇಂದ್ರ ಉಕ್ಕು ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಸಿರು ಉಕ್ಕಿನ ವರ್ಗೀಕರಣದ ಬಿಡುಗಡೆಯು ಹಸಿರು ಉಕ್ಕಿನ ಮೇಲಿನ ರಾಷ್ಟ್ರೀಯ ಆಂದೋಲನವನ್ನು ಮುನ್ನಡೆಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ಉಕ್ಕು ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವರಾದ ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮಾ, ಹಸಿರು ಉಕ್ಕಿನ ವರ್ಗೀಕರಣದ ಪ್ರಾರಂಭವು ಉಕ್ಕಿನ ಉತ್ಪಾದನೆಯಲ್ಲಿ ಪರಿವರ್ತಕ ಚೌಕಟ್ಟನ್ನು ಪ್ರತಿನಿಧಿಸುತ್ತದೆ, ಇದು ಭಾರತದಲ್ಲಿ ಹಸಿರು ಉಕ್ಕನ್ನು ವ್ಯಾಖ್ಯಾನಿಸಲು, ಹೊಸತನವನ್ನು ಉತ್ತೇಜಿಸಲು ಮತ್ತು ಕಡಿಮೆ ಇಂಗಾಲದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ  ಎಂದು ಹೇಳಿದರು. 

ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಅವರು ಹಸಿರು ಉಕ್ಕಿನ ವರ್ಗೀಕರಣವನ್ನು ಅಳವಡಿಸಿಕೊಳ್ಳುವುದು ಒಂದು ಆಯ್ಕೆಯಲ್ಲ ಅದು ಪರಿಸರ ಸುಸ್ಥಿರತೆಯ ಗುರಿಗಳನ್ನು ಸಾಧಿಸಲು ಕಡ್ಡಾಯವಾಗಿದೆ ಎಂದು ಒತ್ತಿ ಹೇಳಿದರು. ಇದು ಭಾರತೀಯ ಉಕ್ಕು ವಲಯಕ್ಕೆ ಸವಾಲಾಗಲಿದೆ. ಆದಾಗ್ಯೂ, ಉದ್ಯಮದ ಎಲ್ಲಾ ಸಂಬಂಧಪಟ್ಟವರ ಸಹಾಯದಿಂದ ಸಚಿವಾಲಯವು 2030 ರ ವೇಳೆಗೆ ಪ್ರತಿ ಟನ್ಗೆ 2.2 tCO2 ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಹಸಿರು ಉಕ್ಕಿನ ವರ್ಗೀಕರಣವನ್ನು ಸಾಧಿಸುತ್ತದೆ, ಇದು ಜಾಗತಿಕ ಸ್ಪರ್ಧಾತ್ಮಕತೆ ಮತ್ತು ನಿರಂತರ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಹಸಿರು ಉಕ್ಕಿನ ವರ್ಗೀಕರಣದ ಪ್ರಮುಖ ಲಕ್ಷಣಗಳು -

1) ಹಸಿರುತನದ ಪ್ರಕಾರ CO2 (ಇಂಗಾಲದ ಡೈಆಕ್ಸೈಡ್) ಅಂಶವು ಹೊರಸೂಸುವಿಕೆಯ ತೀವ್ರತೆಯೊಂದಿಗೆ 2.2 ಟನ್ಗಳಿಗಿಂತ ಕಡಿಮೆಯಿರುವ CO2e ಪ್ರತಿ ಟನ್ ಸಿದ್ಧಪಡಿಸಿದ ಉಕ್ಕು(TFS) ಎಂದು ವ್ಯಾಖ್ಯಾನಿಸಲಾಗುತ್ತದೆ. 2.2 t-CO2e/TFS ಮಿತಿಗೆ ಹೋಲಿಸಿದರೆ ಉಕ್ಕಿನ ಸ್ಥಾವರದ ಹೊರಸೂಸುವಿಕೆಯ ತೀವ್ರತೆಯು ಎಷ್ಟು ಕಡಿಮೆಯಾಗಿದೆ ಎಂಬುದರ ಆಧಾರದ ಮೇಲೆ ಉಕ್ಕಿನ ಹಸಿರುತನವನ್ನು ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ.
2) ಹಸಿರುತನದ ಆಧಾರದ ಮೇಲೆ, ಹಸಿರು ಉಕ್ಕನ್ನು ಈ ಕೆಳಗಿನಂತೆ ಮೌಲ್ಯಮಾಪನ ಮಾಡಲಾಗುತ್ತದೆ:
 

  • ಫೈವ್ ಸ್ಠಾರ್ ಗ್ರೀನ್ -ರೇಟೆಡ್ ಸ್ಟೀಲ್: 1.6 t-CO2e/tfs ಗಿಂತ ಕಡಿಮೆ ಹೊರಸೂಸುವಿಕೆಯ ತೀವ್ರತೆಯ ಉಕ್ಕು.
  • ಫೋರ್ ಸ್ಟಾರ್ ಗ್ರೀನ್ -ರೇಟೆಡ್ ಸ್ಟೀಲ್:1.6 ಮತ್ತು 2.0 t-CO2e/tfs ನಡುವಿನ ಹೊರಸೂಸುವಿಕೆಯ ತೀವ್ರತೆಯ ಉಕ್ಕು.
  • ತ್ರೀ ಸ್ಟಾರ್ ಗ್ರೀನ್ -ರೇಟೆಡ್ ಸ್ಟೀಲ್: 2.0 ಮತ್ತು 2.2 t-CO2e/tfs ನಡುವೆ ಹೊರಸೂಸುವಿಕೆಯ ತೀವ್ರತೆಯ ಉಕ್ಕು.

2.2 t-CO2e/tfs ಗಿಂತ ಹೆಚ್ಚಿನ ಹೊರಸೂಸುವಿಕೆಯ ತೀವ್ರತೆಯನ್ನು ಹೊಂದಿರುವ ಸ್ಟೀಲ್ ಹಸಿರು ರೇಟಿಂಗಿಗೆ ಅರ್ಹವಾಗಿರುವುದಿಲ್ಲ.

3) ಹಸಿರು ಉಕ್ಕಿನ ಸ್ಟಾರ್ ರೇಟಿಂಗ್ ಅನ್ನು ವ್ಯಾಖ್ಯಾನಿಸುವ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ.

4) ಹೊರಸೂಸುವಿಕೆಯ ವ್ಯಾಪ್ತಿಯು ಸ್ಕೋಪ್ 1, ಸ್ಕೋಪ್ 2 ಮತ್ತು ಸೀಮಿತ ಸ್ಕೋಪ್ 3, ಪೂರ್ಣಗೊಂಡ ಉಕ್ಕಿನ ಉತ್ಪಾದನೆಯವರೆಗೆ ಒಳಗೊಂಡಿರುತ್ತದೆ. ಸ್ಕೋಪ್ 3 ಹೊರಸೂಸುವಿಕೆಗಳು ಒಟ್ಟುಗೂಡಿಸುವಿಕೆ (ಸಿಂಟರ್ರಿಂಗ್, ಪೆಲೆಟ್ ತಯಾರಿಕೆ, ಕೋಕ್ ತಯಾರಿಕೆ ಸೇರಿದಂತೆ), ಲಾಭದಾಯಕತೆ ಮತ್ತು ಖರೀದಿಸಿದ ಕಚ್ಚಾ ವಸ್ತುಗಳು ಮತ್ತು  ಮಧ್ಯಂತರ ಉತ್ಪನ್ನಗಳಲ್ಲಿ ಸಾಕಾರಗೊಂಡ ಹೊರಸೂಸುವಿಕೆಯನ್ನು ಒಳಗೊಂಡಿರುತ್ತದೆ, ಆದರೆ ಉಕ್ಕು ಸ್ಥಾವರದ ಗೇಟ್ಗಳ ಒಳಗೆ ಮತ್ತು ಹೊರಗೆ ಎರಡೂ ಅಪ್ಸ್ಟ್ರೀಮ್ ಗಣಿಗಾರಿಕೆ, ಡೌನ್ಸ್ಟ್ರೀಮ್ ಹೊರಸೂಸುವಿಕೆ ಮತ್ತು ಸಾರಿಗೆ ಹೊರಸೂಸುವಿಕೆಯನ್ನು ಒಳಗೊಂಡಿರುವುದಿಲ್ಲ.  

5) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕೆಂಡರಿ ಸ್ಟೀಲ್ ಟೆಕ್ನಾಲಜಿ (NISST) ಮಾಪನ, ವರದಿ ಮತ್ತು ಪರಿಶೀಲನೆ (MRV) ಗಾಗಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉಕ್ಕಿನ ಹಸಿರುತನ ಪ್ರಮಾಣಪತ್ರಗಳು ಮತ್ತು ಸ್ಟಾರ್ ರೇಟಿಂಗ್ಗಳನ್ನು ನೀಡುತ್ತದೆ.
6)ಪ್ರಮಾಣಪತ್ರವನ್ನು ವಾರ್ಷಿಕ  ಆಧಾರದ (ಆರ್ಥಿಕ ವರ್ಷ)ಮೇಲೆ ನೀಡಲಾಗುತ್ತದೆ. ಒಂದು ವೇಳೆ ಉಕ್ಕು ಸ್ಥಾವರಗಳು ಎಂ ಆರ್ ವಿಯನ್ನು ಹೆಚ್ಚಾಗಿ ಆರಿಸಿಕೊಂಡರೆ, ಅಗತ್ಯಕ್ಕೆ ಅನುಗುಣವಾಗಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪ್ರಮಾಣಪತ್ರವನ್ನು ನೀಡಬಹುದು.

ಟ್ಯಾಕ್ಸಾನಮಿ ಬಿಡುಗಡೆ ಜೊತೆಗೆ, ಹಸಿರು ಉಕ್ಕಿನ ಕರಡು ರಾಷ್ಟ್ರೀಯ ಮಿಷನ್ (ಎನ್.ಎಂ.ಜಿ.ಎಸ್.) ಮತ್ತು ಕರಡು ಹಸಿರು ಉಕ್ಕಿನ ಸಾರ್ವಜನಿಕ ಸಂಗ್ರಹಣೆ ನೀತಿ (ಜಿ.ಎಸ್.ಪಿ.ಪಿ.ಪಿ) ಕುರಿತು ಭಾಗೀದಾರರ ಸಮಾಲೋಚನೆಯನ್ನು ಕಾರ್ಯಕ್ರಮದಲ್ಲಿ ನಡೆಸಲಾಯಿತು. ಭಾಗೀದಾರರಿಂದ ಸ್ವೀಕರಿಸಲಾದ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಮತ್ತು ಎನ್.ಎಂ.ಜಿ.ಎಸ್. ಮತ್ತು ಜಿ.ಎಸ್.ಪಿ.ಪಿ.ಪಿ ಅನ್ನು ಅಂತಿಮಗೊಳಿಸುವ ಸಮಯದಲ್ಲಿ ಸಂಯೋಜಿಸಲಾಗುವುದು ಎಂದು ಸಚಿವಾಲಯವು ಭರವಸೆ ನೀಡಿತು.

ಉಕ್ಕು ಸಚಿವಾಲಯವು ಸುಸ್ಥಿರತೆ ಮತ್ತು ನಾವೀನ್ಯತೆಗೆ ತನ್ನ ಬದ್ಧತೆಯಲ್ಲಿ ಅಚಲವಾಗಿದೆ. ಭಾರತದ ಉಕ್ಕು ಉದ್ಯಮವು ಉದ್ಯಮಕ್ಕೆ   ಸಂಬಂಧಿಸಿದ ಎಲ್ಲರ ಸಹಯೋಗ ಮತ್ತು ಬೆಂಬಲದೊಂದಿಗೆ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪರಿವರ್ತಕ ಪಾತ್ರವನ್ನು ವಹಿಸಲು ಸಿದ್ಧವಾಗಿದೆ.

ಉಕ್ಕು ಸಚಿವಾಲಯದ ನಿರ್ದೇಶಕರಾದ ಶ್ರೀಮತಿ ನೇಹಾ ವರ್ಮಾ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. 

 

*****


(Release ID: 2083994) Visitor Counter : 24


Read this release in: English , Hindi , Tamil