ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಐ.ಎಫ್.ಎಫ್.ಐ ಪ್ರಪಂಚದಾದ್ಯಂತದ ನಿರ್ದೇಶಕರು ಪ್ರಶಂಸೆ ಮಾಡಿದ ಗುರುತಿಸಲ್ಪಟ್ಟ, ಸ್ಥಿತಿಸ್ಥಾಪಕತ್ವ ಹೊಂದಿರುವ ಮತ್ತು ವಿಮೋಚನೆಯ ಮಹತ್ವ ಹೊಂದಿರುವ ಜಾಗತಿಕ ಚಿತ್ರಕಥೆಗಳನ್ನು ಹೊಂದಿದೆ
ಭೂತಾನ್, ಅಲ್ಬೇನಿಯಾ ಮತ್ತು ಇರಾನ್ ನ ವಿಶಿಷ್ಟ ಸಾಂಸ್ಕೃತಿಕ ನಿರೂಪಣೆಗಳ ಚಲನಚಿತ್ರಗಳು ಅಂತರಾಷ್ಟ್ರೀಯ ಪನೋರಮಾ ವಿಭಾಗದಲ್ಲಿ ಜೀವ ತುಂಬಿದವು
"ಭೂತಾನ್ ಸಂತೋಷದ ಭೂಮಿಯಾಗಿರಬಹುದು, ಆದರೆ ಪ್ರತಿ ಚಿತ್ರಕಥೆಗೂ ಅದರೊಳಗೊಂದು ಸಂಘರ್ಷ ಬೇಕು, ಸ್ವರ್ಗದಲ್ಲಿಯೂ ಸಹ" - ಚಾರ್ಮಿ ಚೆಡ್ಡಾ
"ಇತಿಹಾಸದ ಗುರುತುಗಳು ಪ್ರತಿ ಕುಟುಂಬದ ಮೇಲೆ ಕೆತ್ತಲಾಗಿದೆ; ಲೂನಾ ಪಾರ್ಕ್ ಆ ಕಥೆಗಳಿಗೆ ಗೌರವವಾಗಿದೆ" - ಫ್ಲೋರೆಂಕ್ ಪಾಪಾಸ್
"ಜನಸಮೂಹದಲ್ಲಿಯೂ ಸಹ, ಒಬ್ಬರು ಸಂಪೂರ್ಣವಾಗಿ ಏಕಾಂಗಿಯಾಗಿ ಅನುಭವಿಸಬಹುದು. ಅದು ನಮ್ಮ ಕಾಲದ ವಿರೋಧಾಭಾಸವಾಗಿದೆ" - ಮನ್ಸೂರ್ ವೊಸೌಗಿ
55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ -ಐ.ಎಫ್.ಎಫ್.ಐ), ಅಂತರಾಷ್ಟ್ರೀಯ ಪನೋರಮಾ ವಿಭಾಗದ ಅಡಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು ಮೂರು ಚಿಂತನ-ಪ್ರಚೋದಕ ಚಲನಚಿತ್ರಗಳನ್ನು ಪ್ರದರ್ಶಿಸಿದರು. ಭೂತಾನ್, ಅಲ್ಬೇನಿಯಾ ಮತ್ತು ಇರಾನ್ ನ ವಿಶಿಷ್ಟ ಕಥೆಗಳನ್ನು ಹೇಳುವ ಚಲನಚಿತ್ರಗಳನ್ನು ಪ್ರದರ್ಶಿಸಿದರು. ನಿರ್ದೇಶಕರಾದ ಚಾರ್ಮಿ ಚೆಡ್ಡಾ, ಫ್ಲೋರೆಂಕ್ ಪಾಪಾಸ್ ಮತ್ತು ಮನ್ಸೂರ್ ವೊಸೌಘಿ ಜಾಗತಿಕ ಪ್ರೇಕ್ಷಕರಿಗೆ ತಮ್ಮ ಆಳವಾದ ವೈಯಕ್ತಿಕ ನಿರೂಪಣೆಗಳನ್ನೂ ಸಹ ಪರಿಚಯಿಸಿದರು. ಇದು ಪ್ರತಿಯೊಂದೂ ವಿಶಿಷ್ಟ ಸಂಸ್ಕೃತಿಗಳು ಮತ್ತು ಮಾನವ ಅನುಭವಗಳಿಗೆ ನೂತನ ಅವಕಾಶಗಳನ್ನು ತೆರೆಯುತ್ತದೆ.

ಚಾರ್ಮಿ ಚೆಡ್ಡಾ ಅವರ ವಿತ್ ಲವ್ ಫ್ರಂ ಭೂತಾನ್ ಚಲನಚಿತ್ರವು, ಕುಟುಂಬ ಸಂಬಂಧಗಳು, ಸಾಂಸ್ಕೃತಿಕ ಗುರುತು ಮತ್ತು ಆಹಾರದ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವ ಅನನ್ಯ ಭೂತಾನೀಸ್ ವಿಧಾನದ ಭಾವನಾತ್ಮಕ ಪ್ರಯಾಣಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಆಹಾರ ಮಾನವಶಾಸ್ತ್ರದ ವಿದ್ಯಾರ್ಥಿನಿಯಾದ ಜಿಮ್ಮಿ ಎರಡು ದಶಕಗಳ ನಂತರ ಭೂತಾನ್ ಗೆ ಹಿಂದಿರುಗಿದ ನಂತರ ತನ್ನ ದೂರವಾದ ಅರ್ಧ-ಸಹೋದರಿ ಯಾಂಗ್ ಚೆನ್ ನೊಂದಿಗೆ ಮರುಸಂಪರ್ಕಿಸಲು ಪ್ರಯತ್ನಿಸುವ ಕಥೆಯನ್ನು ಈ ಚಲನಚಿತ್ರವು ಹೇಳುತ್ತದೆ. ದೇಶದ ನಿಕಟ ಸಮಾಜ ಮತ್ತು ವಿಕಸನಗೊಳ್ಳುತ್ತಿರುವ ಸಂಸ್ಕೃತಿಯು ನಿರೂಪಣೆಯ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ಚಾರ್ಮಿ ಚೆಡ್ಡಾ ವಿವರಿಸಿದರು. ರೋಮಾಂಚಕ ಕಥಾಹಂದರಕ್ಕೆ ಹೆಸರುವಾಸಿಯಾಗಿರುವ ನಿರ್ದೇಶಕರಾದ ಚಾರ್ಮಿ ಚೆಡ್ಡಾ ಅವರು, ಭೂತಾನ್ ನ ಉದಯೋನ್ಮುಖ ಚಲನಚಿತ್ರಗಳ ಬಗ್ಗೆ ಧ್ವನಿಗೂಡಿಸಲು ಐ.ಎಫ್.ಎಫ್.ಐ.ನಂತಹ ವೇದಿಕೆಗಳ ಅಗತ್ಯತೆಯ ಬಗ್ಗೆ ಭಾವೋದ್ರಿಕ್ತವಾಗಿ ಮಾತನಾಡಿದರು.

ಚಾರ್ಮಿ ಚೆಡ್ಡಾ ಅವರು ಭೂತಾನ್ ನ ಹೊಸ ಮತ್ತು ವೈವಿದ್ಯಮಯ ಚಲನಚಿತ್ರೋದ್ಯಮದ ಬಗ್ಗೆ ಮಾತನಾಡಿದ್ದಾರೆ, ಅದು ಪ್ರಸ್ತುತಪಡಿಸುವ ಅನನ್ಯ ಕಥೆ ಹೇಳುವ ಹೊಸ ಅವಕಾಶಗಳನ್ನು ಅವರು ವಿವರಿಸಿದರು. ಭೂತಾನ್ ಸಂಸ್ಕೃತಿಯು "ಪ್ರೀತಿ" ಎಂಬುದಕ್ಕೆ ನೇರ ಪದವನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು, ಅಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಆಹಾರವನ್ನು ಕೇಂದ್ರ ಮಾಧ್ಯಮವನ್ನಾಗಿ ಮಾಡುತ್ತಾರೆ-ಇದು ಅವರ ಚಲನಚಿತ್ರದ ಕಥಾಹಂದರದ ಮೂಲ ತಿರುಳನ್ನು ರೂಪಿಸಿದೆ. "ವಿತ್ ಲವ್ ಫ್ರಮ್ ಭೂತಾನ್" ಭೂತಾನ್ ಸಮಾಜದ ಸಾರವನ್ನು ಜೀವಂತಗೊಳಿಸುತ್ತದೆ, ಪ್ರೀತಿ, ಸಂಘರ್ಷ ಮತ್ತು ಸಾಂಸ್ಕೃತಿಕ ಗುರುತಿನ ವಿಷಯಗಳನ್ನು ಸಂಯೋಜಿಸುತ್ತದೆ" ಎಂದು ಚಾರ್ಮಿ ಚೆಡ್ಡಾ ಹೇಳಿದರು.
ಅಲ್ಬೇನಿಯಾದ್ಲಿ, 1997 ರ ನಂತರದ ಕಮ್ಯುನಿಸ್ಟ್ ಸಂಭವಿಸಿದ ಅಶಾಂತಿಯ ಸಮಯದಲ್ಲಿ ನಡೆದ ಘಟನಾವಳಿಗಳ ಆಧಾರದ ಫ್ಲೋರೆಂಕ್ ಪಾಪಾಸ್ ಅವರ ಪಾಲಿಗೆ ಲೂನಾ ಪಾರ್ಕ್ ಆಳವಾದ ವೈಯಕ್ತಿಕ ಚಲನಚಿತ್ರವಾಗಿದೆ. ಅವರ ಬಾಲ್ಯದ ನೆನಪುಗಳಿಂದ ಪ್ರೇರಿತರಾದ ಫ್ಲೋರೆಂಕ್ ಪಾಪಾಸ್, ತಾಯಿ ಮತ್ತು ಮಗ ರಾಷ್ಟ್ರವನ್ನು ಕುಸಿತದ ಅಂಚಿನಲ್ಲಿ ಮುಂದೆ ಸಾಗಿಸುವ ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಪ್ರಕ್ಷುಬ್ಧ ಅವಧಿಯಲ್ಲಿ ಅಲ್ಬೇನಿಯನ್ ಕುಟುಂಬಗಳ ಸ್ಥಿತಿಸ್ಥಾಪಕತ್ವವನ್ನು ಚಲನಚಿತ್ರವು ಸೆರೆಹಿಡಿಯುತ್ತದೆ. ಐತಿಹಾಸಿಕ ಪ್ರತಿಬಿಂಬವನ್ನು ನಿಕಟ ಕಥೆ ಹೇಳುವಿಕೆಯೊಂದಿಗೆ ಸಂಯೋಜಿಸುತ್ತದೆ. ಈ ಹಿಂದೆ ತನ್ನ ಕೆಲಸಕ್ಕಾಗಿ ಹಲವಾರು ಪುರಸ್ಕಾರಗಳನ್ನು ಗೆದ್ದಿರುವ ಫ್ಲೋರೆಂಕ್ ಪಾಪಾಸ್ ಅವರು, ಚಲನಚಿತ್ರವು ತನ್ನ ಕುಟುಂಬದ ಪ್ರಯಾಣವನ್ನು ಮಾತ್ರವಲ್ಲದೆ ಒಂದು ಪೀಳಿಗೆಯ ಸಾಮೂಹಿಕ ಸ್ಮರಣೆಯನ್ನು ಹೇಗೆ ಪ್ರತಿನಿಧಿಸುತ್ತದೆ ಎಂಬುದನ್ನು ಚಲನಚಿತ್ರದಲ್ಲಿ ಹಂಚಿಕೊಂಡಿದ್ದಾರೆ. ಈ ಚಲನಚಿತ್ರವು ಅಲ್ಬೇನಿಯಾದ ಅತ್ಯಂತ ಸವಾಲಿನ ಅವಧಿಗಳಲ್ಲಿ ಒಂದಾದ ಕೌಟುಂಬಿಕ ಬಂಧಗಳು ಮತ್ತು ಸಾಮಾಜಿಕ ಪ್ರಕ್ಷುಬ್ಧತೆಯ ಮೇಲೆ ಬೆಳಕು ಚೆಲ್ಲುವ, ನಾಗರಿಕ ಹಿಂಸೆಯನ್ನು ನ್ಯಾವಿಗೇಟ್ ಮಾಡುವ ತಾಯಿ ಮತ್ತು ಆಕೆಯ ಹದಿಹರೆಯದ ಮಗ ಅನುಸರಿಸುತ್ತದೆ. "ಈ ಕಥೆಯು ವೈಯಕ್ತಿಕ ಆದರೆ ಸಾರ್ವತ್ರಿಕವಾಗಿದೆ, ನನ್ನ ಸ್ವಂತ ಬಾಲ್ಯದ ಅನುಭವಗಳಿಂದ ಚಿತ್ರಿಸಲಾಗಿದೆ. ಇದು ಅವ್ಯವಸ್ಥೆಯ ನಡುವೆ ಕುಟುಂಬಗಳು ಮತ್ತು ವ್ಯಕ್ತಿಗಳ ಸ್ಥಿತಿಸ್ಥಾಪಕತ್ವವನ್ನು ಹೇಳುತ್ತದೆ." ಎಂದು ಅವರು ವ್ಯಕ್ತಪಡಿಸಿದ್ದಾರೆ

ಮನ್ಸೂರ್ ವೊಸೌಘಿ ಅವರ ಬ್ಯಾರೆನ್ ಚಲನಚಿತ್ರವು ಒಂಟಿತನದ ನಿರ್ಜನತೆ ಮತ್ತು ವಿಮೋಚನೆಯ ಶಕ್ತಿಯನ್ನು ಪರಿಶೋಧಿಸುತ್ತದೆ. ಇರಾನಿನ ನಾಟಕವು ಯಾಹ್ಯಾ ಎಂಬ ನಿಗೂಢ ಭೂತಕಾಲದ ವ್ಯಕ್ತಿಯನ್ನು ಅನುಸರಿಸುತ್ತದೆ. ಒಬ್ಬ ಬುದ್ಧಿವಂತ ಯುವತಿಯೊಂದಿಗಿನ ಮುಖಾಮುಖಿಯು ಅವನ ಆಂತರಿಕ ರಾಕ್ಷಸರನ್ನು ಎದುರಿಸಲು ಸಹಾಯ ಮಾಡುತ್ತದೆ. ವೊಸೌಘಿ ಚಲನಚಿತ್ರವನ್ನು ಆಧುನಿಕ ಪ್ರತ್ಯೇಕತೆಯ ಧ್ಯಾನ ಎಂದು ವಿವರಿಸಿದರು. ಇದು ಮಾನವ ಸ್ಥಿತಿಯನ್ನು ಪ್ರತಿಬಿಂಬಿಸಲು ಭೌಗೋಳಿಕತೆಯನ್ನು ಹೇಗೆ ಮೀರುತ್ತದೆ ಎಂಬುದನ್ನು ಚಲನಚಿತ್ರವು ಒತ್ತಿಹೇಳುತ್ತದೆ. ಇರಾನ್ನಲ್ಲಿ ಸ್ವತಂತ್ರ ಚಲನಚಿತ್ರ ನಿರ್ಮಾಣದ ಸವಾಲುಗಳ ಮೇಲೆ ಅವರು ಬೆಳಕು ಚೆಲ್ಲಿದರು. ಆಳವಾದ ಹಾಗೂ ಪ್ರತಿಧ್ವನಿಸುವ ಕಥೆಗಳನ್ನು ಹೇಳುವಲ್ಲಿ ಸೃಜನಶೀಲ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.
ನಿರ್ಜನ ಸ್ಥಳದಲ್ಲಿ, ಒಂಟಿ ಕಾರಿನಲ್ಲಿ ವಾಸಿಸುವ ಮತ್ತು ಹಣಕ್ಕಾಗಿ ಮಹಿಳೆಯರ ಕೂದಲನ್ನು ಕತ್ತರಿಸುವ ಮೂಲಕ ಬದುಕುಳಿಯುವ, ಶೋಷಣೆಯಿಂದ ತಪ್ಪಿಸಿಕೊಳ್ಳುವ ಯುವತಿಯೊಬ್ಬಳ ಕಥೆ ಚಲನಚಿತ್ರ ಹೇಳುತ್ತದೆ. ನಿರ್ಜನ ಹಾದಿಯನ್ನು ದಾಟಿದಾಗ ಯಾಹ್ಯಾ ಅವರ ಜೀವನವು ಬದಲಾಗುತ್ತದೆ ಎಮಬುದನ್ನು ಮನ್ಸೂರ್ ವೊಸೌಘಿ ತನ್ನ ಚಲನಚಿತ್ರದಲ್ಲಿ ಹೇಳಿದ್ದಾರೆ. ಚಲನಚಿತ್ರವು ಒಂಟಿತನ, ಬದುಕುಳಿಯುವಿಕೆ ಮತ್ತು ಸ್ವಯಂ ಅನ್ವೇಷಣೆಯ ವಿಷಯಗಳನ್ನು ಕಾವ್ಯಾತ್ಮಕವಾಗಿ ಸೆರೆಹಿಡಿಯುತ್ತದೆ. "ಈ ಚಲನಚಿತ್ರವು ಸಂಪರ್ಕಿತವಾದ ಆದರೆ ಪ್ರತ್ಯೇಕವಾದ ಜಗತ್ತಿನಲ್ಲಿ ಅನೇಕ ಮುಖಗಳ ಮೂಕ ಯುದ್ಧಗಳನ್ನು ಪ್ರತಿಬಿಂಬಿಸುತ್ತದೆ. ಯಾಹ್ಯಾ ಅವರ ಪ್ರಯಾಣವು ಬಂಜರು ಪರಿಸರದ ನಡುವೆ ವಿಮೋಚನೆಯ ಹುಡುಕಾಟದ ಸಂಕೇತವಾಗಿದೆ."

ಮಾಧ್ಯಮರಂಗದವರು, ವೃತ್ತಿಪರರು ಮತ್ತು ಚಿತ್ರಪ್ರೇಮಿಗಳೊಂದಿಗೆ ನಿರ್ದೇಶಕರು ವಿಶ್ಲೇಷಣಾ ರೀತಿಯ ಸಂವಾದದಲ್ಲಿ ತೊಡಗಿಸಿಕೊಂಡರು. ಚಲನಚಿತ್ರಗಳ ಹಿಂದಿರುವ ಸವಾಲುಗಳು ಮತ್ತು ಸ್ಫೂರ್ತಿಗಳನ್ನು ಚರ್ಚಿಸಿದರು. ಚಾರ್ಮಿ ಚೆಡ್ಡಾ ಅವರು ಭೂತಾನ್ನ ಉದಯೋನ್ಮುಖ ಚಲನಚಿತ್ರ ನಿರ್ಮಾಣ ಸಂಸ್ಕೃತಿಯನ್ನು ಒತ್ತಿಹೇಳಿದರು, ಹಿಮಾಲಯ ಪ್ರದೇಶದ ಅಧಿಕೃತ ಕಥೆಗಳನ್ನು ಹೇಳುವ ಪ್ರಾಮುಖ್ಯತೆಯನ್ನು ಚಿತ್ರಗಳ ಮೂಲಕ ತೋರಿಸಿದರು. ಫ್ಲೋರೆಂಕ್ ಪಾಪಾಸ್ ತನ್ನ ಸ್ವಂತ ಕುಟುಂಬ ಮತ್ತು ಅಲ್ಬೇನಿಯಾದ ಐತಿಹಾಸಿಕ ಸನ್ನಿವೇಶದಿಂದ ಸ್ಫೂರ್ತಿ ಪಡೆದ ತನ್ನ ಚಿತ್ರದ ಆಳವಾದ ವೈಯಕ್ತಿಕ ಸ್ವರೂಪವನ್ನು ವಿವರಿಸಿದರು. ಮನ್ಸೂರ್ ವೊಸೌಘಿ ಅವರು ಇರಾನ್ನಲ್ಲಿ ಸ್ವತಂತ್ರ ಚಲನಚಿತ್ರ ನಿರ್ಮಾಪಕರು ಎದುರಿಸುತ್ತಿರುವ ತೊಂದರೆಗಳನ್ನು ಪ್ರತಿಬಿಂಬಿಸಿದರು.
ಸೃಜನಶೀಲ ಸ್ವಾತಂತ್ರ್ಯ ಮತ್ತು ಆರ್ಥಿಕ ನಿರ್ಬಂಧಗಳ ನಡುವಿನ ಸಮತೋಲನವನ್ನು ಭಾಗವಹಿಸಿದ ಸಭಾಮಂದಿ ಗಮನಿಸಿದರು. ಭಾಗವಹಿಸಿದ ಪ್ರಸಿದ್ಧ ನಿರ್ದೇಶಕರೆಲ್ಲರೂ ಒಟ್ಟಾಗಿ ಐಎಫ್ಎಫ್ಐಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವೈವಿಧ್ಯಮಯ ಕಥೆ ಹೇಳುವಿಕೆಗಾಗಿ ಜಾಗತಿಕ ವೇದಿಕೆಯಾಗಿ ಐಎಫ್ಎಫ್ಐ ಪಾತ್ರವನ್ನು ಶ್ಲಾ ಘಿಸಿದರು. ಈ ರೀತಿಯ ಚಲನಚಿತ್ರಗಳ ಮೂಲಕ, ಸಾಂಸ್ಕೃತಿಕ ವಿಭಜನೆಗಳನ್ನು ಜೋಡಿಸುವ ಹಾಗೂ ಸೇತುವೆ ಮಾಡುವ ಮತ್ತು ಸಾರ್ವತ್ರಿಕ ಭಾವನೆಗಳೊಂದಿಗೆ ಪ್ರೇಕ್ಷಕರನ್ನು ಸಂಪರ್ಕಿಸುವ ಚಲನಚಿತ್ರದ ಅನನ್ಯ ಶಕ್ತಿಯನ್ನು ಎಲ್ಲರೂ ಪುನರುಚ್ಚರಿಸಿದರು.
ಪತ್ರಿಕಾಗೋಷ್ಠಿಯ ಪೂರ್ಣ ವಿವರಗಳನ್ನು ಇಲ್ಲಿ ವೀಕ್ಷಿಸಬಹುದು:
*****
(Release ID: 2078880)
Visitor Counter : 25