ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ದೆಹಲಿಯ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಕಸಿತ ಭಾರತ ರಾಯಭಾರಿ ಯುವ ಸಂಪರ್ಕ ಕಾರ್ಯಕ್ರಮ; 2047ರ ವೇಳೆಗೆ ‘ವಿಕಸಿತ ಭಾರತ’ ಸಾಧಿಸುವಲ್ಲಿ ಯುವಕರ ಪಾತ್ರ ನಿರ್ಣಾಯಕ: ಡಾ. ಮನ್ಸುಖ್ ಮಾಂಡವಿಯಾ ಒತ್ತು


ರಾಷ್ಟ್ರೀಯ ಯುವ ಉತ್ಸವ 2025ರಲ್ಲಿ ವಿಕಸಿತ ಭಾರತದ ಯುವ ನಾಯಕರ ಸಂವಾದ - ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಮತ್ತು ಯುವ ನಾಯಕರೊಂದಿಗೆ ತೊಡಗಿಸಿಕೊಳ್ಳುವ 3,000 ಪ್ರತಿನಿಧಿಗಳು

ಮೈ ಭಾರತ್ ವೇದಿಕೆಯಲ್ಲಿ "ವಿಕಸಿತ ಭಾರತ ಕ್ವಿಜ್ ಚಾಲೆಂಜ್"ಗೆ ನೋಂದಾಯಿಸಲು ಮತ್ತು ತಮ್ಮ ಆಲೋಚನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಸ್ತುತಪಡಿಸಲು ಯುವಕರಿಗೆ ಆಹ್ವಾನ

"ಯಾವುದೇ ಕಾರ್ಯವು ತುಂಬಾ ಚಿಕ್ಕದಲ್ಲ"; ವೈಯಕ್ತಿಕ ಮತ್ತು ರಾಷ್ಟ್ರೀಯ ಯಶಸ್ಸಿಗಾಗಿ ಕಠಿಣ ಪರಿಶ್ರಮ ಹಾಕುವಂತೆ ಯುವಕರನ್ನು ಪ್ರೋತ್ಸಾಹಿಸಿದ ಡಾ. ಮಾಂಡವಿಯ

'ವಿಕಸಿತ ಭಾರತ'ಕ್ಕಾಗಿ ಭಾರತದ ಸಂಪ್ರದಾಯಗಳನ್ನು ಬಳಸಿಕೊಳ್ಳುವಂತೆ, ನಮ್ಮ ಪರಂಪರೆಯನ್ನು ಹೆಮ್ಮೆ ಪಡುವಂತೆ ಯುವಜನರಿಗೆ ಮನ್ಸುಖ್ ಕರೆ

Posted On: 26 NOV 2024 6:18PM by PIB Bengaluru

ದೆಹಲಿಯ ಕಮಲಾ ನೆಹರು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳುವ 'ವಿಕಸಿತ ಭಾರತ ರಾಯಭಾರಿ - ಯುವ ಸಂಪರ್ಕ' ಕಾರ್ಯಕ್ರಮದಲ್ಲಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು, ವಿಕಸಿತ ಭಾರತದ ದೃಷ್ಟಿಕೋನ ಸಾಕಾರಗೊಳಿಸುವಲ್ಲಿ ಯುವಕರ ಪ್ರಮುಖ ಪಾತ್ರ ನಿರ್ಣಾಯಕ ಎಂದು ಒತ್ತು ನೀಡಿದರು. 2047ರಲ್ಲಿ ಸ್ವಾತಂತ್ರ್ಯೋತ್ಸದ 100ನೇ ವರ್ಷ ಆಚರಿಸುವಾಗ, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಎತ್ತಿ ಹಿಡಿದ ಅವರು, ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಚಾಲನೆ ನೀಡುವಲ್ಲಿ ಯುವಕರು ನಿರ್ಣಾಯಕರಾಗಿದ್ದಾರೆ ಎಂದರು.

ರಾಷ್ಟ್ರವನ್ನು ಪರಿವರ್ತಿಸಲು, ನಾವು ಮೊದಲು ಯುವಕರನ್ನು ಪರಿವರ್ತಿಸುವತ್ತ ಗಮನ ಹರಿಸಬೇಕು. ಇದನ್ನು ಸಾಧಿಸಲು, ನಾವು ನಮ್ಮ ಯುವಕರನ್ನು ಹೆಚ್ಚು ಮಹತ್ವಾಕಾಂಕ್ಷೆಯ, ಆತ್ಮವಿಶ್ವಾಸ ಮತ್ತು ದೂರದೃಷ್ಟಿಯುಳ್ಳವರನ್ನಾಗಿ ಮಾಡಬೇಕು, ಅವರ ಆಕಾಂಕ್ಷೆಗಳನ್ನು 'ವಿಕಸಿತ ಭಾರತ'ದ ದೃಷ್ಟಿಯೊಂದಿಗೆ ಜೋಡಿಸಬೇಕು ಎಂದರು.

ಅವರು ಮೈ ಭಾರತ್ ವೇದಿಕೆಯನ್ನು ಯುವಜನರಿಗೆ ಸಮಗ್ರ, ಏಕಗವಾಕ್ಷಿ ವೇದಿಕೆಯಾಗಿ ಪರಿವರ್ತಿಸುವ ಯೋಜನೆಗಳನ್ನು ಹಂಚಿಕೊಂಡರು. ವ್ಯಾಪಕ ಶ್ರೇಣಿಯ ಸಂಪನ್ಮೂಲಗಳು, ಅವಕಾಶಗಳು ಮತ್ತು ಸಾಧನಗಳಿಗೆ ಸುಲಭ ಪ್ರವೇಶ ನೀಡುತ್ತದೆ. ಈ ವೇದಿಕೆಯು ಒಂದು-ನಿಲುಗಡೆ ತಾಣವಾಗಿ ಕಾರ್ಯ ನಿರ್ವಹಿಸುತ್ತದೆ, ಅಲ್ಲಿ ಯುವಕರು ವೃತ್ತಿಪರ ಬೆಳವಣಿಗೆಯನ್ನು ಅನ್ವೇಷಿಸಬಹುದು, ಮಾರ್ಗದರ್ಶಕರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ರಾಷ್ಟ್ರ ನಿರ್ಮಾಣದ ಪ್ರಯತ್ನಗಳಿಗೆ ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.

ವಿಕಸಿತ ಭಾರತ ಯುವ ನಾಯಕರ ಸಂವಾದ - ರಾಷ್ಟ್ರೀಯ ಯುವ ಉತ್ಲವ-2025 ಕುರಿತು ಮಾತನಾಡಿದ ಕೇಂದ್ರ ಸಚಿವರು, ಈ ವರ್ಷ ಯುವಜನೋತ್ಸವವು ಹೊಸ ಎತ್ತರವನ್ನು ತಲುಪಲಿದೆ. "ಸಾಂಪ್ರದಾಯಿಕ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ, ಇದು ವ್ಯಾಪಕ-ಪ್ರಮಾಣದ ಭಾಗವಹಿಸುವಿಕೆಯನ್ನು ಹೊಂದಿರುತ್ತದೆ, ಆಯ್ದ 3,000 ಯುವಕರು ದೆಹಲಿಯ ಭಾರತ್ ಮಂಟಪದಲ್ಲಿ ನೇರವಾಗಿ ಪ್ರಧಾನ ಮಂತ್ರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ವಿಶೇಷ ಅವಕಾಶ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಯುವ ನಾಯಕರು ಉತ್ಸವದಲ್ಲಿ ಸೇರುತ್ತಾರೆ, ಅಲ್ಲಿ ಅವರು ಯುವಕರೊಂದಿಗೆ ಸಂವಹನ ನಡೆಸುತ್ತಾರೆ, ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. 2047ರ ವೇಳೆಗೆ 'ವಿಕಸಿತ ಭಾರತ' ದೃಷ್ಟಿಕೋನಕ್ಕೆ ಸಕ್ರಿಯವಾಗಿ ಕೊಡುಗೆ ನೀಡಲು ಅವರನ್ನು ಪ್ರೇರೇಪಿಸುತ್ತಾರೆ, ಈ ಉಪಕ್ರಮವು ವಿಶಿಷ್ಟವಾದ ವೇದಿಕೆಯನ್ನು ಒದಗಿಸುತ್ತದೆ. ಯುವ ನಾಯಕರು ಮತ್ತು ಆದರ್ಶ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಅವರನ್ನು ಸಬಲೀಕರಣಗೊಳಿಸುತ್ತಾರೆ” ಎಂದು ಡಾ. ಮಾಂಡವೀಯ ಹೇಳಿದರು.

"ವಿಕಸಿತ ಭಾರತ ಯುವ ನಾಯಕರ ಸಂವಾದ" ಮೊದಲ ಹಂತದ ರಸಪ್ರಶ್ನೆ ಸ್ಪರ್ಧೆಯು ಈಗ ಮೈ ಭಾರತ್ ವೇದಿಕೆಯಲ್ಲಿ ಲೈವ್ ಆಗಿದೆ ಎಂದು ಡಾ. ಮಾಂಡವೀಯ ಘೋಷಿಸಿದರು. ಯುವಕರು ತಮ್ಮ ಪ್ರತಿಭೆ ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುವ ಈ ಅತ್ಯಾಕರ್ಷಕ ಅವಕಾಶದಲ್ಲಿ ನೋಂದಾಯಿಸಿ ಮತ್ತು ಭಾಗವಹಿಸುವಂತೆ ಅವರು ಒತ್ತಾಯಿಸಿದರು.

"ಯಾವುದೇ ಕಾರ್ಯವು ಚಿಕ್ಕದಾಗಿರುವುದಿಲ್ಲ", ಅದರ ಸ್ವರೂಪ ಅಥವಾ ಪ್ರಮಾಣವನ್ನು ಲೆಕ್ಕಿಸದೆ ಪ್ರತಿ ಅವಕಾಶವನ್ನು ಆತ್ಮವಿಶ್ವಾಸದಿಂದ ಬಳಸಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸಿದರು. ಸಮರ್ಪಣೆಯೊಂದಿಗೆ ಸಮೀಪಿಸಿದಾಗ ಸಣ್ಣ ಪ್ರಯತ್ನಗಳು ಸಹ ಯಶಸ್ಸನ್ನು ಸಾಧಿಸುವಲ್ಲಿ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

‘ವಕಸಿತ ಭಾರತ’ದ ಗುರಿ ಸಾಧಿಸಲು ನಮ್ಮ ಸಂಪ್ರದಾಯಗಳ ಶಕ್ತಿಯನ್ನು ಬಳಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಜಗತ್ತು ಭಾರತದ ಶ್ರೀಮಂತ ಸಂಪ್ರದಾಯಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದೆ, ಈಗ ನಾವು ಅವುಗಳ ಬಗ್ಗೆ ಹೆಮ್ಮೆಪಡುವ, ಅವುಗಳ ಮೌಲ್ಯವನ್ನು ಗೌರವಿಸುವ ಮತ್ತು ನಮ್ಮ ಪ್ರಗತಿಗೆ ಅಡಿಪಾಯವಾಗಿ ಬಳಸಿಕೊಳ್ಳುವ ಸಮಯ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಮತ್ತು ವೃತ್ತಿಪರ ಲಾನ್ ಬೌಲರ್, 2023ರ ಅರ್ಜುನ ಪ್ರಶಸ್ತಿ ಪುರಸ್ಕೃತೆ ಪಿಂಕಿ ಸಿಂಗ್ ಅವರು, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಇತರೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ತನ್ನ ಸ್ಫೂರ್ತಿದಾಯಕ ಪ್ರಯಾಣ ಹಂಚಿಕೊಂಡ ಅವರು, ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಧಿಸುವಲ್ಲಿ ಏಕಾಗ್ರತೆ ಮತ್ತು ಪರಿಶ್ರಮ ಹಾಕಬೇಕು ಒತ್ತಾಯಿಸಿದರು.

ಸುಸ್ಥಿರತೆಯ ಬದ್ಧತೆಯನ್ನು ಬಲಪಡಿಸುವ 'ಏಕ್ ಪೆಡ್ ಮಾ ಕೆ ನಾಮ್' ಉಪಕ್ರಮದ ಅಡಿಯಲ್ಲಿ ಕೇಂದ್ರ ಸಚಿವರು ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಿದರು.

75ನೇ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸಚಿವರು, ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಒಟ್ಟಾಗಿ ಸಂವಿಧಾನದ ಪೀಠಿಕೆ ಓದುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ತತ್ವಗಳನ್ನು ಗೌರವಿಸಿದರು.

ಯುವ ನಾಯಕರ ಪ್ರಶ್ನೋತ್ತರ ಮತ್ತು ಸಂವಾದದೊಂದಿಗೆ ಕಲಾಪ ಮುಕ್ತಾಯಗೊಂಡಿತು. ಅಲ್ಲಿ ಕೇಂದ್ರ ಸಚಿವರು ಭಾರತದ ಸಾಂಪ್ರದಾಯಿಕ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮತ್ತು ವಿದ್ಯಾರ್ಥಿಗಳು ವಿಕಸಿತ ಭಾರತ್‌ನ ದೃಷ್ಟಿಕೋನಕ್ಕೆ ಹೇಗೆ ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಒದಗಿಸಿದರು.

 

*****


(Release ID: 2078404) Visitor Counter : 80