ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ ಎಫ್ ಎಫ್ ಐ) 'ವೆಂಕ್ಯ', 'ಭೂತಪೋರಿ' ಮತ್ತು 'ಆರ್ಟಿಕಲ್ 370' ಚಿತ್ರಗಳ ಮೂಲಕ ಶಕ್ತಿಯುತ ಕಥೆಗಳ ಪ್ರದರ್ಶನ
ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯು ವ್ಯಕ್ತಿಗಳಲ್ಲಿ, ಅಪರಾಧಿಗಳಲ್ಲಿ ಹೇಗೆ ಬದಲಾವಣೆಯನ್ನು ತರುತ್ತದೆ ಎಂಬುದನ್ನು ‘ವೆಂಕ್ಯ’ಚಿತ್ರ ತೋರಿಸುತ್ತದೆ: ಸಾಗರ್ ಪುರಾಣಿಕ್, ನಿರ್ದೇಶಕ
'ಭೂತಪೋರಿ' ಒಂದು ಹಾರರ್ ಕಥೆಗಿಂತ ಹೆಚ್ಚು; ಇದು ಮಾನವ ಚಟುವಟಿಕೆಗಳಿಂದ ಪ್ರಭಾವಿತವಾದ ಭೂತದ ಕಥೆ: ಸೌಕಾರ್ಯ ಘೋಷಾಲ್, ನಿರ್ದೇಶಕ
'ಆರ್ಟಿಕಲ್ 370' ರಾಜಕೀಯ ವ್ಯವಸ್ಥೆಯ ಬಗ್ಗೆ ಪ್ರೇಕ್ಷಕರಿಗೆ ತಿಳುವಳಿಕೆ ನೀಡಲು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ಪ್ರಯತ್ನಿಸುತ್ತದೆ: ಆದಿತ್ಯ ಸುಹಾಸ್ ಜಂಬಾಳೆ, ನಿರ್ದೇಶಕ
ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ ಎಫ್ ಎಫ್ ಐ) 'ಭಾರತೀಯ ಪನೋರಮಾ-ಫೀಚರ್ ಫಿಲ್ಮ್' ವಿಭಾಗದಲ್ಲಿ ಮೂರು ಮಹತ್ವದ ಚಲನಚಿತ್ರಗಳನ್ನು ಪ್ರದರ್ಶಿಸಿತು: ಕನ್ನಡ ಚಲನಚಿತ್ರ 'ವೆಂಕ್ಯ', ಬಂಗಾಳಿ ಚಲನಚಿತ್ರ 'ಭೂತಪೋರಿ' ಮತ್ತು ಹಿಂದಿ ಚಲನಚಿತ್ರ 'ಆರ್ಟಿಕಲ್ 370' ಪ್ರದರ್ಶನಗಂಡ ಸಿನಿಮಾಗಳು. ಈ ಚಲನಚಿತ್ರಗಳು ಕೇವಲ ಕಥೆ ಹೇಳುವಿಕೆಯನ್ನು ಮೀರಿವೆ ಮತ್ತು ಸ್ವಯಂ-ಶೋಧನೆ, ವಿಮೋಚನೆ, ದೇಶಭಕ್ತಿ ಮತ್ತು ತ್ಯಾಗ, ಹಾಗೆಯೇ ಪ್ರೀತಿ, ಜೀವನ ಮತ್ತು ಮರಣಾನಂತರದ ಜೀವನದ ಸಂಕೀರ್ಣ ಭಾವನಾತ್ಮಕ ಪ್ರಯಾಣವನ್ನು ಆಳವಾಗಿ ಅಧ್ಯಯನ ಮಾಡುತ್ತವೆ.
ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ 'ವೆಂಕ್ಯ' ನಿರ್ದೇಶಕ ಸಾಗರ್ ಪುರಾಣಿಕ್ ಅವರು ಚಲನಚಿತ್ರ ನಿರ್ಮಾಣದ ಸವಾಲುಗಳ ಬಗ್ಗೆ ಚರ್ಚಿಸಿದರು. ವೆಂಕ್ಯನ ಪಾತ್ರವು ಕತ್ತಲೆಯಿಂದ ಬೆಳಕಿಗೆ ವಿಕಸನಗೊಳ್ಳುತ್ತದೆ ಎಂದು ಅವರು ವಿವರಿಸಿದರು, ಪಾತ್ರದ ಸಂಕೀರ್ಣತೆಯನ್ನು ಎತ್ತಿ ತೋರಿಸಿದರು. ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದ ತೊಂದರೆಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಪುರಾಣಿಕ್, ಇದನ್ನು ಪ್ರವಾಹದ ಹೆಚ್ಚುವರಿ ಸವಾಲು ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ವಿವರಿಸಿದರು ಹಾಗೂ ಸ್ಥಳೀಯ ಆಡಳಿತದಿಂದ ದೊರೆತ ಸಹಕಾರವನ್ನು ಶ್ಲಾಘಿಸಿದರು. ಸ್ಥಳಗಳ ಆಯ್ಕೆಗೆ ಸಂಬಂಧಿಸಿದಂತೆ, ಸಹಜ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯು ವ್ಯಕ್ತಿಗಳನ್ನು, ಅಪರಾಧಿಗಳನ್ನೂ ಸಹ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.
12 ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು 'ವೆಂಕ್ಯ' ನಿರ್ಮಾಪಕ ಪವನ್ ಒಡೆಯರ್ ಹೇಳಿದರು. ಇದು ಭಾರತದ ರೋಮಾಂಚಕ ಸಾಂಸ್ಕೃತಿಕ ವೈವಿಧ್ಯತೆಯ ಒಂದು ನೋಟವನ್ನು ನೀಡುತ್ತದೆ. ಚಿತ್ರದ ಸಾರಕ್ಕೆ ಹೊಂದಿಕೆಯಾಗುವ ರೋಮಾಂಚಕ, ವರ್ಣರಂಜಿತ ನಿಸರ್ಗ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಆಧಾರದ ಮೇಲೆ ಚಿತ್ರೀಕರಣಕ್ಕಾಗಿ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
'ಭೂತಪೋರಿ' ನಿರ್ದೇಶಕ ಸೌಕಾರ್ಯ ಘೋಷಾಲ್ ಮಾತನಾಡಿ, ಇದೊಂದು ವಿಶಿಷ್ಟ ಹಾರರ್ ಕಥೆಗಿಂತಲೂ ಮಿಗಿಲಾಗಿದೆ. ಇದು ಮಾನವ ಚಟುವಟಿಕೆಗಳಿಂದ ಆಳವಾಗಿ ಪ್ರಭಾವಿತವಾಗಿರುವ ಪ್ರೇತದ ಜೀವನ ಚರಿತ್ರೆಯನ್ನು ಆಧರಿಸಿದೆ. ಇದು ಮರಣಾನಂತರದ ಜೀವನದ ಪರಿಕಲ್ಪನೆಯನ್ನು ಆಧರಿಸಿದೆ. ಅಂತಹ ಅನೇಕ ಭಾರತೀಯ ಚಲನಚಿತ್ರಗಳು ಹಾಲಿವುಡ್ ನಿಂದ ಪ್ರಭಾವಿತವಾಗಿವೆ, ಆದರೆ ಭೂತದ ನಿಜವಾದ ಭಾರತೀಯ ಕಥೆಯನ್ನು ರಚಿಸುವುದು ತಮ್ಮ ಗುರಿಯಾಗಿತ್ತು ಎಂದು ಅವರು ಹೇಳಿದರು.
'ಭೂತಪೋರಿ' ಚಿತ್ರದ ವಸ್ತ್ರ ವಿನ್ಯಾಸಕಿ ಪೂಜಾ ಚಟರ್ಜಿ, ಬಂಗಾಳಿ ಸಾಹಿತ್ಯದಲ್ಲಿ ಕಂಡುಬರುವ ವೇಷಭೂಷಣಗಳ ವಿವರಣೆಯಿಂದ ವಿನ್ಯಾಸಕ್ಕೆ ಸ್ಫೂರ್ತಿ ಸಿಕ್ಕಿತು ಎಂದು ಹೇಳಿದರು. ಪರದೆಯ ಮೇಲೆ ನೈಜ ಪಾತ್ರವನ್ನು ರಚಿಸಲು ಅವರು ಈ ಉಲ್ಲೇಖಗಳನ್ನು ಬಳಸಿದ್ದಾರೆ.
'ಆರ್ಟಿಕಲ್ 370' ನಿರ್ದೇಶಕ ಆದಿತ್ಯ ಸುಹಾಸ್ ಜಂಬಾಳೆ ತಮ್ಮ ಸಿನಿಮಾದ ರಾಜಕೀಯ ಥ್ರಿಲ್ಲರ್ ವಿಷಯದ ಬಗ್ಗೆ ಮಾತನಾಡಿದರು. ಸಾಕಷ್ಟು ಸಂಶೋಧನೆಯ ನಂತರ ಈ ಚಿತ್ರವನ್ನು ನಿರ್ಮಿಸಲಾಯಿತು ಎಂದರು. ಪ್ರೇಕ್ಷಕರಿಗೆ ರಾಜಕೀಯ ವ್ಯವಸ್ಥೆಯನ್ನು ತಿಳಿಸಿ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ಚಿತ್ರದ ಉದ್ದೇಶ ಎಂದರು. ಚಿತ್ರದ ವಿಷಯದ ಕುರಿತು ಮಾತನಾಡಿದ ಅವರು, ಇದು ಬಲವಂತದ ರಾಷ್ಟ್ರೀಯತೆಯನ್ನು ಉತ್ತೇಜಿಸುವುದಿಲ್ಲ, ಆದರೆ ಪಾತ್ರಗಳನ್ನು ನೈಜವಾಗಿ ಚಿತ್ರಿಸುತ್ತದೆ ಎಂದು ಹೇಳಿದರು. ಯುವ ಚಲನಚಿತ್ರ ನಿರ್ಮಾಪಕರು ತಮ್ಮ ಛಾಪು ಮೂಡಿಸಲು ಭಾರತದ ಎಲ್ಲಾ ಪ್ರದೇಶಗಳಲ್ಲಿ ಚಲನಚಿತ್ರ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಜಂಬಾಳೆ ಒತ್ತಿ ಹೇಳಿದರು.
'ಆರ್ಟಿಕಲ್ 370' ರ ಲೇಖಕಿ ಮೋನಾಲ್ ಠಾಕೂರ್, ಸಿನಿಮಾದ ಸಂಶೋಧನಾ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು ಮತ್ತು ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ತನಿಖಾ ಪತ್ರಕರ್ತರನ್ನು ಸಂಪರ್ಕಿಸಿದ್ದೇನೆ ಎಂದು ಹೇಳಿದರು. ಚಿತ್ರದ ರಾಜಕೀಯ ಮತ್ತು ಸಂಸದೀಯ ಅಂಶಗಳನ್ನು ಮಾಹಿತಿ ಮತ್ತು ಮನರಂಜನೆಯ ಎರಡೂ ರೀತಿಯಲ್ಲಿ ರೂಪಿಸಲಾಗಿದೆ ಎಂದು ವಿವರಿಸಿದರು. ಮೋನಾಲ್ ಠಾಕೂರ್ ಅವರು ಕಾಶ್ಮೀರದಲ್ಲಿ ಚಿತ್ರೀಕರಣದ ಸವಾಲುಗಳ ಬಗ್ಗೆ ಮಾತನಾಡಿದರು ಮತ್ತು ಸ್ಥಳೀಯ ಪೊಲೀಸರ ಸಹಕಾರವನ್ನು ಶ್ಲಾಘಿಸಿದರು. ಅಲ್ಲಿನ ಚಿತ್ರೀಕರಣದ ಅನುಭವ ನಿಜಕ್ಕೂ ಮಾಂತ್ರಿಕವಾಗಿತ್ತು ಎಂದು ಬಣ್ಣಿಸಿದರು.
ಚಲನಚಿತ್ರಗಳ ಬಗ್ಗೆ
ವೆಂಕ್ಯ: ಗೊಂದಲಮಯ ಹುಬ್ಬಳ್ಳಿಯಲ್ಲಿ, ತನ್ನ ಆಸ್ತಿ ಹಕ್ಕುಗಳನ್ನು ಪಡೆಯಲು ಮತ್ತು ಆರ್ಥಿಕ ನಾಶದಿಂದ ಪಾರಾಗಲು ಹೆಣಗಾಡುತ್ತಿರುವ ಗೂಂಡಾ ವೆಂಕ್ಯ ತನ್ನ ದೂರವಾಗಿರುವ ಸಹೋದರ ಗಣ್ಯನನ್ನು ಹುಡುಕಲು ಪ್ರಯತ್ನಿಸುತ್ತಾನೆ. ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು, ವೆಂಕ್ಯಾ ಭಾರತದಾದ್ಯಂತ ಪ್ರಯಾಣವನ್ನು ಪ್ರಾರಂಭಿಸುತ್ತಾನೆ, ಅದರ ವೈವಿಧ್ಯಮಯ ಸಂಸ್ಕೃತಿಗಳು, ಹಗರಣಗಳು ಮತ್ತು ವಿಭಿನ್ನ ರೀತಿಯ ಅಪರಿಚಿತರನ್ನು ಎದುರಾಗುತ್ತಾನೆ. ದಾರಿಯುದ್ದಕ್ಕೂ, ತನ್ನ ವೈಯಕ್ತಿಕ ಬೆಳವಣಿಗೆ ಮತ್ತು ವಿಮೋಚನೆಯನ್ನು ಅನುಭವಿಸುತ್ತಾನೆ, ಅಂತಿಮವಾಗಿ ಅದು ಅವನ ಕುಟುಂಬ ಮತ್ತು ನಮ್ರತೆಯಲ್ಲಿ ಪ್ರತಿಬಿಂಬಿತವಾಗುತ್ತದೆ.
ಭೂತಪೋರಿ: ಈ ಹಾರರ್ ಚಿತ್ರದಲ್ಲಿ ಸತ್ತ ಮಹಿಳೆಯ ಪ್ರಕ್ಷುಬ್ಧ ಆತ್ಮವು ತನ್ನ ಸಾವಿನ ರಹಸ್ಯವನ್ನು ಬಹಿರಂಗಪಡಿಸಲು ಚಿಕ್ಕ ಹುಡುಗನೊಂದಿಗೆ ಸೇರುತ್ತದೆ. ಅವರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅವರು ಜೀವನ, ಸಾವು ಮತ್ತು ಮರಣಾನಂತರದ ಜೀವನವನ್ನು ಅನ್ವೇಷಿಸುವ ಭಾವನಾತ್ಮಕ ಪ್ರಯಾಣವನ್ನು ಪ್ರಾರಂಭಿಸಿದಾಗ ಅವರು ಅನಿರೀಕ್ಷಿತ ಬಂಧವನ್ನು ರೂಪಿಸುತ್ತಾರೆ. ರೋಮಾಂಚಕ ತಿರುವುಗಳೊಂದಿಗೆ ಹೃದಯಸ್ಪರ್ಶಿ ಕ್ಷಣಗಳನ್ನು ಸಂಯೋಜಿಸುವ ಚಿತ್ರವು ಜೀವಂತವಿರುವವರ ಮತ್ತು ಸತ್ತವರ ಅನನ್ಯ ಅನ್ವೇಷಣೆಯೊಂದಿಗೆ ಆಕರ್ಷಿಸುತ್ತದೆ.
ಆರ್ಟಿಕಲ್ 370: "2016 ರಲ್ಲಿ ಕಾಶ್ಮೀರದಲ್ಲಿ ಅಶಾಂತಿಯ ನಂತರ, ಭಯೋತ್ಪಾದನೆಯ ವಿರುದ್ಧ ಹೋರಾಡಲು ಮತ್ತು ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ಈ ಪ್ರದೇಶದಲ್ಲಿ ಸಂಘರ್ಷವನ್ನು ನಡೆಸುತ್ತಿರುವ ಆಡಳಿತವನ್ನು ಕೊನೆಗೊಳಿಸಲು ರಹಸ್ಯ ಕಾರ್ಯಾಚರಣೆಯನ್ನು ರಾಜೇಶ್ವರಿ ಸ್ವಾಮಿನಾಥನ್ ಅವರು ನೇಮಿಸಿದ ಯುವ ಏಜೆಂಟ್ ಜುನಿ ಹಕ್ಸರ್ ಗೆ ಪ್ರಧಾನಿ ಕಾರ್ಯಾಲಯವು ನೀಡುತ್ತದೆ. ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ನಂತರ, ಜುನಿಯನ್ನು ಕೆಳಗಿಳಿಸಲಾಯಿತು ಮತ್ತು ದೆಹಲಿಯಲ್ಲಿ ಸಲಾವುದ್ದೀನ್ ಜಲಾಲ್ ಅವರನ್ನು ಕಾವಲು ಕಾಯಲು ನಿಯೋಜಿಸಲಾಯಿತು. ಪರ್ವೀನಾ ಅಂದ್ರಾಬಿಯವರ ಟೀಕೆಯ ನಂತರ, ಜುನಿ ಕಾಶ್ಮೀರಕ್ಕೆ ಮರಳುತ್ತಾಳೆ, ಅಲ್ಲಿ ಅವಳು ಕಲ್ಲು ತೂರಾಟದ ಘಟನೆಗೆ ಹಣವನ್ನು ಒದಗಿಸುವ ಜಾಲವನ್ನು ಬಹಿರಂಗಪಡಿಸುತ್ತಾಳೆ, ಅವಳ ಮಿಷನ್ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧದ ಸಂಕೀರ್ಣ ಹೋರಾಟವಾಗಿ ಬದಲಾಗುತ್ತದೆ.
ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:
*****
(Release ID: 2077835)
Visitor Counter : 35