ಸಹಕಾರ ಸಚಿವಾಲಯ
azadi ka amrit mahotsav

ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಜಾಗತಿಕ ಸಹಕಾರ ಸಮ್ಮೇಳನ 2024ಕ್ಕೆ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಚಾಲನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025ಕ್ಕೆ ಚಾಲನೆ ನೀಡಿದರು ಮತ್ತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು

2025 ಅನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವಾಗಿ ಆಚರಿಸುವ ವಿಶ್ವಸಂಸ್ಥೆಯ ನಿರ್ಧಾರವು ವಿಶ್ವದಾದ್ಯಂತದ ಲಕ್ಷಾಂತರ ಬಡ ಜನರಿಗೆ ಮತ್ತು ರೈತರಿಗೆ ವರದಾನವಾಗಿದೆ ಎಂಬುದನ್ನು ಸಾಬೀತುಪಡಿಸಲಿದೆ

ಪ್ರಧಾನಿ ಮೋದಿಯವರ "ಸಹಕಾರ್ ಸೆ ಸಮೃದ್ಧಿ" ದೃಷ್ಟಿಕೋನವು ಲಕ್ಷಾಂತರ ಹಳ್ಳಿಗಳು, ಮಹಿಳೆಯರು ಮತ್ತು ರೈತರ ಸಮೃದ್ಧಿಗೆ ದಾರಿ ಮಾಡಿಕೊಟ್ಟಿದೆ

ಸ್ವಾತಂತ್ರ್ಯದ 75 ವರ್ಷಗಳ ನಂತರ, ಭಾರತದ ಸಹಕಾರಿ ಚಳುವಳಿಯ ಪುನರುಜ್ಜೀವನವಾಗಿದೆ, ಇದು ಈ ಕ್ಷೇತ್ರದಲ್ಲಿ ಹೊಸ ಉತ್ಸಾಹವನ್ನು ತಂದಿದೆ

ಮೂರು ವರ್ಷಗಳ ನಂತರ, ಭಾರತದಲ್ಲಿ ಸಹಕಾರಿ ಸಂಸ್ಥೆ ಇಲ್ಲದೇ ಇರುವ ಒಂದೇ ಒಂದು ಗ್ರಾಮ ಪಂಚಾಯತ್ ಇರುವುದಿಲ್ಲ

"ಅಂತಾರಾಷ್ಟ್ರೀಯ ಸಹಕಾರಿ ವರ್ಷ"ದಲ್ಲಿ, ಮೋದಿ ಸರ್ಕಾರವು ಹೊಸ ಸಹಕಾರಿ ನೀತಿಯನ್ನು ತರುವ ಮೂಲಕ ಭಾರತದ ಸಹಕಾರಿ ಚಳವಳಿಗೆ ಹೊಸ ಆಯಾಮಗಳನ್ನು ತರಲಿದೆ

ಮೂರು ಹೊಸ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ರೈತರಿಗೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಅನುವು ಮಾಡಿಕೊಡುತ್ತವೆ

ಈ ವಲಯದಲ್ಲಿ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲು ಮತ್ತು ತಾಂತ್ರಿಕವಾಗಿ ಕೌಶಲ್ಯ ನೀಡಲು ಸಹಕಾರಿ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು

Posted On: 25 NOV 2024 7:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಜಾಗತಿಕ ಸಹಕಾರ ಸಮ್ಮೇಳನ 2024 ನ್ನು ಉದ್ಘಾಟಿಸಿದರು. ಇದೇ ಸಂದರ್ಭ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025ಕ್ಕೆ ಕೂಡಾ ಚಾಲನೆ ನೀಡಿದರು ಮತ್ತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಭೂತಾನ್ ಪ್ರಧಾನಿ, ಫಿಜಿ ಉಪ ಪ್ರಧಾನಿ, ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ (ಐಸಿಎ) ಅಧ್ಯಕ್ಷರು, ಸಹಕಾರ ಸಚಿವಾಲಯದ ಕಾರ್ಯದರ್ಶಿ ಮತ್ತು ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

1.JPG

ಕಾರ್ಯಕ್ರಮದಲ್ಲಿ ಮಾತನಾಡಿದ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, 2025 ನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವಾಗಿ ಆಚರಿಸುವ ವಿಶ್ವಸಂಸ್ಥೆಯ ನಿರ್ಧಾರವು ಸಮಯೋಚಿತ ಹೆಜ್ಜೆಯಾಗಿದೆ ಮತ್ತು ಇದು ವಿಶ್ವದಾದ್ಯಂತದ ಲಕ್ಷಾಂತರ ಬಡ ಜನರು ಮತ್ತು ರೈತರಿಗೆ ಆಶೀರ್ವಾದವಾಗಲಿದೆ  ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಂತಾರಾಷ್ಟ್ರೀಯ ಸಹಕಾರಿ ವರ್ಷ-2025ನ್ನು ಉದ್ಘಾಟಿಸಿರುವುದು ಮತ್ತು ಭಾರತದಲ್ಲಿ ಐಸಿಎಯ ಅಂತಾರಾಷ್ಟ್ರೀಯ ಸಹಕಾರ ಸಮ್ಮೇಳನದ ಆತಿಥ್ಯ ವಹಿಸಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ "ಸಹಕಾರ್ ಸೆ ಸಮೃದ್ಧಿ" ಎಂಬ ಸ್ಪಷ್ಟ ಕರೆಯನ್ನು ನೀಡಿದ್ದರು, ಇದು ಸಮಾವೇಶದ ಧ್ಯೇಯವಾಕ್ಯದ ಸಾರವನ್ನು ಪ್ರತಿಬಿಂಬಿಸುತ್ತದೆ, ಇದು ಲಕ್ಷಾಂತರ ಗ್ರಾಮಗಳು, ಮಹಿಳೆಯರು ಮತ್ತು ರೈತರ ಸಮೃದ್ಧಿಗೆ ದಾರಿ ಮಾಡಿಕೊಟ್ಟಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಿಂದಿನ 3 ವರ್ಷಗಳಲ್ಲಿ, ಭಾರತದ ಸಹಕಾರಿ ಕ್ಷೇತ್ರದಲ್ಲಿ ಅನೇಕ ಹೊಸ ಚಟುವಟಿಕೆಗಳು ನಡೆದಿವೆ ಮತ್ತು ಸ್ವಾತಂತ್ರ್ಯದ 75 ವರ್ಷಗಳ ನಂತರ, ಭಾರತದ ಸಹಕಾರಿ ಆಂದೋಲನವು ಪುನರುಜ್ಜೀವನವನ್ನು ಅನುಭವಿಸಿದೆ, ಅದರೊಂದಿಗೆ ಹೊಸ ಉತ್ಸಾಹವನ್ನು ತಂದಿದೆ ಎಂದು ಅವರು ಹೇಳಿದರು.

ಮುಂದಿನ 3 ವರ್ಷಗಳಲ್ಲಿ, 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (ಪಿಎಸಿಎಸ್) ಮೂಲಕ, ಭಾರತದಲ್ಲಿ ಸಹಕಾರಿ ಸೊಸೈಟಿ ಇಲ್ಲದೆ ಇರುವ  ಒಂದೇ ಒಂದು ಗ್ರಾಮ ಪಂಚಾಯತ್ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ  ಸಹಕಾರ ಸಚಿವರು ಹೇಳಿದರು. ಪಿಎಸಿಎಸ್ ಗಳನ್ನು ಆಧುನಿಕ, ತಂತ್ರಜ್ಞಾನ-ಶಕ್ತ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ರಚಿಸಲಾದ 3 ಹೊಸ ಸಹಕಾರಿ ಸಂಸ್ಥೆಗಳ ಮೂಲಕ, ಭಾರತದ ರೈತರು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗೆ ತಮ್ಮ ಪ್ರವೇಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ (ಎನ್ಸಿಇಎಲ್), ರಾಷ್ಟ್ರೀಯ ಸಹಕಾರಿ ಸಾವಯವ ನಿಯಮಿತ (ಎನ್ಸಿಒಎಲ್) ಮತ್ತು ಭಾರತೀಯ ಬೀಜ್ ಸಹಕಾರಿ ಸಮಿತಿ ಲಿಮಿಟೆಡ್ (ಬಿಬಿಎಸ್ಎಸ್ಎಲ್) ಮುಂಬರುವ ದಿನಗಳಲ್ಲಿ ವಿಶ್ವ ವ್ಯಾಪಾರದಲ್ಲಿ ರೈತರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಲ್ಲದೆ, ಸಣ್ಣ ರೈತರು ವಿಶ್ವದ ಎಲ್ಲಾ ಮಾರುಕಟ್ಟೆಗಳನ್ನು ಹೇಗೆ ತಲುಪಬಹುದು ಎಂಬುದರ ಕುರಿತು ವಿಶ್ವದಾದ್ಯಂತದ ಸಹಕಾರಿ ಸಂಸ್ಥೆಗಳನ್ನು ಪ್ರೇರೇಪಿಸಲು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು. ಭಾರತೀಯ ರೈತರ ರಸಗೊಬ್ಬರ ಸಹಕಾರಿ (ಇಫ್ಕೊ), ಕೃಷಿಕ್ ಭಾರತಿ ಸಹಕಾರಿ (ಕ್ರಿಬ್ಕೊ) ಮತ್ತು ಅಮುಲ್ ವಿಶ್ವದಾದ್ಯಂತ ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿವೆ ಹಾಗು ಅದೇ ರೀತಿ ಮೂರು ಸಹಕಾರಿ ಸಂಸ್ಥೆಗಳು ವಿಶ್ವದ ಸಹಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಮಾರ್ಗದರ್ಶನ ನೀಡುತ್ತವೆ ಎಂದೂ ಶ್ರೀ ಶಾ ಹೇಳಿದರು.

2.jpeg

ಮೂರು ವರ್ಷಗಳ ಹಿಂದೆ ಸಹಕಾರ ಸಚಿವಾಲಯದ ರಚನೆಯ ನಂತರ, ಸಹಕಾರಿಗಳ ಸಂಪೂರ್ಣ ಕಾನೂನು ಚೌಕಟ್ಟನ್ನು ಬಲಪಡಿಸಲಾಗಿದೆ, ಶ್ವೇತ ಕ್ರಾಂತಿ 2.0 ಮತ್ತು ನೀಲಿ ಕ್ರಾಂತಿಯೂ ಪ್ರಾರಂಭವಾಗಿದೆ, ಇದರಲ್ಲಿ ಸಹಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 3 ವರ್ಷಗಳಲ್ಲಿ ಸಹಕಾರಿ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಗ್ರ ಬದಲಾವಣೆಗಳಾಗಿವೆ ಎಂದರು. ಮುಂಬರುವ ದಿನಗಳಲ್ಲಿ, ನಾವು ಸಹಕಾರಿ ವಿಶ್ವವಿದ್ಯಾಲಯವನ್ನು ಸಹ ಸ್ಥಾಪಿಸಲಿದ್ದೇವೆ, ಅದರ ಮೂಲಕ ತರಬೇತಿ ಪಡೆದ ಮತ್ತು ತಂತ್ರಜ್ಞಾನ-ಶಕ್ತ ಮಾನವ ಸಂಪನ್ಮೂಲವನ್ನು ರೂಪಿಸಲಾಗುವುದು ಎಂದು ಶ್ರೀ ಶಾ ಹೇಳಿದರು. "ಅಂತಾರಾಷ್ಟ್ರೀಯ ಸಹಕಾರಿ ವರ್ಷ"ದಲ್ಲಿ, ಮೋದಿ ಸರ್ಕಾರವು ಹೊಸ ಸಹಕಾರಿ ನೀತಿಯನ್ನು ಪರಿಚಯಿಸುವ ಮೂಲಕ ಭಾರತದ ಸಹಕಾರಿ ಚಳವಳಿಗೆ ಹೊಸ ಆಯಾಮಗಳನ್ನು ತರಲಿದೆ ಎಂದೂ ಅವರು ನುಡಿದರು.

3.JPG

ಸಹಕಾರಿ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ, ಪ್ರತಿ ಗ್ರಾಮ ಮತ್ತು ರೈತರನ್ನು ಸಹಕಾರಿ ಆಂದೋಲನದೊಂದಿಗೆ ಸಂಪರ್ಕಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹಾಗು  ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು  ಹೇಳಿದರು. ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಮತ್ತು ಸಹಕಾರಿ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಕಳೆದ ಮೂರು ವರ್ಷಗಳಲ್ಲಿ ಸಹಕಾರಿ ಸಂಸ್ಥೆಗಳ ವ್ಯಾಪ್ತಿಯನ್ನು ಪ್ರತಿಯೊಬ್ಬ ವ್ಯಕ್ತಿ ಮತ್ತು ವಲಯಕ್ಕೆ ವಿಸ್ತರಿಸಲು ಮಹತ್ವದ ಕೆಲಸ ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಸಹಕಾರಿ ಆಂದೋಲನವು ಗ್ರಾಮಗಳು, ರೈತರು, ಮಹಿಳೆಯರು ಮತ್ತು ದೀನದಲಿತರ ಸಬಲೀಕರಣಕ್ಕೆ ಹಲವಾರು ಮಾರ್ಗಗಳನ್ನು ತೆರೆದಿದೆ ಎಂದು ಅವರು ಒತ್ತಿ ಹೇಳಿದರು. ಈ ಆಂದೋಲನದ ಮೂಲಕ, ಪ್ರಧಾನಿ ಮೋದಿ ಅವರು ಕಲ್ಪಿಸಿದ "ಸಹಕಾರ್ ಸೆ ಸಮೃದ್ಧಿ" ಗುರಿಯನ್ನು ಮುಂಬರುವ ದಿನಗಳಲ್ಲಿ ಸಾಧಿಸಬಹುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದ ಅಂತಾರಾಷ್ಟ್ರೀಯ ಸಹಕಾರಿ ವರ್ಷವು ವಿಶ್ವದಾದ್ಯಂತ ಲಕ್ಷಾಂತರ ಬಡವರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಅವರು ಘನತೆ ಹಾಗು ಗೌರವದಿಂದ ಬದುಕಲು ಅನುವು ಮಾಡಿಕೊಡುತ್ತದೆ ಎಂದೂ ಅವರು ಹೇಳಿದರು.

 

*****


(Release ID: 2077339) Visitor Counter : 51


Read this release in: English , Urdu , Marathi , Hindi