ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ಪ್ರಾದೇಶಿಕ ಭಾಷೆಗಳನ್ನು ಉಳಿಸಲು ಸಿನಿಮಾ ಒಂದು ಶಕ್ತಿಶಾಲಿ ಸಾಧನವಾಗಿದೆ ಎಂದು ನಿರ್ದೇಶಕ ಚಂದನ್ ಸಿಂಗ್ ಹೇಳಿದ್ದಾರೆ


'ರೊಟ್ಟಿ ಕೂನ್ ಬನಾಸಿ?' ಭಾರತೀಯ ಕುಟುಂಬಗಳಲ್ಲಿ ಸಂಪ್ರದಾಯ ಮತ್ತು ಲಿಂಗ ಸಮಾನತೆಯ ನಡುವಿನ ಹೋರಾಟವನ್ನು ಎತ್ತಿ ತೋರಿಸುತ್ತದೆ

'ಬ್ರಹ್ಮಯುಗಂ' ಮಾನವನ ಮನಸ್ಸು ಮತ್ತು ಸಾಮಾಜಿಕ ಶ್ರೇಣಿಗಳ ಕಥಾಹಂದರವಾಗಿದೆ 

'ಬ್ರಹ್ಮಯುಗಂ' ಜಾನಪದದ ಭಯಾನಕ ಮತ್ತು ಪುರಾಣಗಳ ದ್ರೋಹ ಮತ್ತು ಅಲೌಕಿಕ ಶಕ್ತಿಗಳ ತಲ್ಲಣಗೊಳಿಸುವ ಅಂಶವನ್ನು ಹೊಂದಿದೆ

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐಎಫ್ಎಫ್ಐ) ಪ್ರಾದೇಶಿಕ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬೇರೂರಿರುವ ವೈವಿಧ್ಯಮಯ ಕಥೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಚಂದನ್ ಸಿಂಗ್ ನಿರ್ದೇಶನದ ರಾಜಸ್ಥಾನಿನ ಕುಟುಂಬ ನಾಟಕವಾದ 'ರೊಟ್ಟಿ ಕೂನ್ ಬನಾಸಿ?' ಮತ್ತು ರಾಹುಲ್ ಸದಾಶಿವನ್ ನಿರ್ದೇಶನದ ಮಲಯಾಳಂ ಜಾನಪದ ಭಯಾನಕ ಚಿತ್ರವಾದ 'ಬ್ರಹ್ಮಯುಗಂ' ಸಂಪ್ರದಾಯ, ಅಸ್ಮಿತೆ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಹುಡುಕುವ ವಿಭಿನ್ನ ನಿರೂಪಣೆಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿವೆ.

'ರೊಟ್ಟಿ ಕೂನ್ ಬನಾಸಿ?' ಪಿತೃಪ್ರಭುತ್ವದ ಪೀಳಿಗೆಯ ಪ್ರಭಾವವನ್ನು ತೋರಿಸುತ್ತದೆ. ಇದು ರಾಜಸ್ಥಾನಿ ಭಾಷೆಯ ನಾಟಕವಾಗಿದ್ದು, ಈ ಚಿತ್ರವು ತನ್ನ ತಂದೆಯ ಸಾಂಪ್ರದಾಯಿಕ ನಿರೀಕ್ಷೆಗಳು ಮತ್ತು ತನ್ನ ಹೆಂಡತಿಯನ್ನು ಬೆಂಬಲಿಸುವ ಬಯಕೆಯ ನಡುವೆ ಸಿಕ್ಕಿಬಿದ್ದ ಯುವಕನ ಕಥೆಯನ್ನು ಹೇಳುತ್ತದೆ. ಈ ಚಿತ್ರದ ಸೂಕ್ಷ್ಮ ಚಿತ್ರಣದ ಮೂಲಕ, ಪಿತೃಪ್ರಭುತ್ವದ ನಂಬಿಕೆಗಳು ಕುಟುಂಬವನ್ನು ಹೇಗೆ ರೂಪಿಸುತ್ತವೆ, ವಿಶೇಷವಾಗಿ ಮಹಿಳೆಯರು ಹೊರುವ ಅಸಮಾನ ಹೊರೆಯ ಮೇಲೆ ಎಂಬುದನ್ನು ಸಿಂಗ್ ಅವರು ಬೆಳಕು ಚೆಲ್ಲಿದ್ದಾರೆ.

"ಪಿತೃಪ್ರಭುತ್ವದಲ್ಲಿ ತಂದೆ-ಮಗನ ಸಂಬಂಧದ ನಡುವೆ ಮಹಿಳೆಯರು ಬಲಿಪಶುಗಳಾಗಿದ್ದಾರೆ" ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ರಾಜಸ್ಥಾನದಲ್ಲಿ ತಮ್ಮ ಸ್ವಂತ ಅನುಭವಗಳಿಂದ ಪಡೆದ ಸಿಂಗ್, ಸಾಂಪ್ರದಾಯಿಕ ಕುಟುಂಬಗಳಲ್ಲಿ ಮಹಿಳೆಯರಿಗೆ ಸೀಮಿತ ಅವಕಾಶಗಳ ವಾಸ್ತವಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸಿ, ಬದಲಾವಣೆಗೆ ಕರೆ ನೀಡಿದ್ದಾರೆ.

ರಾಜಸ್ಥಾನಿ ಭಾಷೆಯಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸುತ್ತದೆ. "ಪ್ರಾದೇಶಿಕ ಭಾಷೆಯನ್ನು ಸಂರಕ್ಷಿಸಲು ಸಿನೆಮಾ ಒಂದು ಪ್ರಬಲ ಸಾಧನವಾಗಿದೆ. ರಾಜಸ್ಥಾನಿ ಭಾಷೆಯಲ್ಲಿ ರೊಟ್ಟಿ ಕೂನ್ ಬನಾಸಿ ಮಾಡುವ ಮೂಲಕ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ವಿಶಾಲ ಪ್ರೇಕ್ಷಕರಿಗೆ ಪ್ರದರ್ಶಿಸಲು ನಾನು ಪ್ರಯತ್ನಿಸಿದ್ದೇನೆ.

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುವ ಮತ್ತೊಂದು ಚಿತ್ರವೆಂದರೆ 'ಬ್ರಹ್ಮಯುಗಂ'. ಇದು  17ನೇ ಶತಮಾನದ ಮಲಬಾರ್ ಗೆ ವೀಕ್ಷಕರನ್ನು ಕೊಂಡೊಯ್ಯುತ್ತದೆ, ಜಾನಪದ ಭಯಾನಕ ಮತ್ತು ಪುರಾಣಗಳ ಉಳಿವು, ದ್ರೋಹ ಮತ್ತು ಅಲೌಕಿಕ ಶಕ್ತಿಗಳ ತಲ್ಲಣಗೊಳಿಸುವ ಕಥೆಯು ಇದರಲ್ಲಿ ನಿರೂಪಣೆಯಾಗಿದೆ.

ಈ ಚಿತ್ರವು ಪೋರ್ಚುಗೀಸ್ ಗುಲಾಮ ವ್ಯಾಪಾರಿಗಳಿಂದ ತಪ್ಪಿಸಿಕೊಳ್ಳುವ ಥೇವನ್ ಎಂಬ ವ್ಯಕ್ತಿಯ ಕಥೆಯಾಗಿದೆ. ಅವನು ಪರಿತ್ಯಕ್ತ ಮನೋರ್ ನ ಕೆಟ್ಟ ರಹಸ್ಯಗಳಲ್ಲಿ ಸಿಲುಕಿಕೊಳ್ಳುತ್ತಾನೆ. ಈ ಚಿತ್ರದ ಸಾರಾಂಶದಲ್ಲಿ ವರಾಹಿ ದೇವತೆಯಿಂದ ಮನೆಯ ಪೂರ್ವಜರಿಗೆ ಉಡುಗೊರೆಯಾಗಿ ನೀಡಲಾದ ಚತನ್ ಎಂಬ ರಾಕ್ಷಸನ ಪರಿಚಯವಿದೆ. ತಲೆಮಾರುಗಳಿಂದ, ಈ ರಾಕ್ಷಸನು ವಿನಾಶವನ್ನು ಉಂಟುಮಾಡುತ್ತಲೇ ಇರುತ್ತಾನೆ. ಈ ಚಿತ್ರವು ಅಧಿಕಾರ ಹೋರಾಟದಲ್ಲಿ ಕೊನೆಗೊಂಡು, ಅದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ನುಂಗಿಹಾಕುತ್ತದೆ.

'ಬ್ರಹ್ಮಯುಗಂ' ಕೇವಲ ಭಯಾನಕ ಚಿತ್ರವಲ್ಲದೆ, ಅಧಿಕಾರದ ಭ್ರಷ್ಟಾಚಾರ, ಮಾನವ ದೌರ್ಬಲ್ಯ ಮತ್ತು ದಬ್ಬಾಳಿಕೆಯ ಆವರ್ತಕ ಸ್ವರೂಪದ ಬಗ್ಗೆ ಉತ್ತಮ ನಿರೂಪಣೆಯಾಗಿದೆ. ಕಥೆಯ ಗೋಥಿಕ್ ವಾತಾವರಣ ಮತ್ತು ಸಂಕೀರ್ಣ ಕಥಾವಸ್ತುವು ಮಲಯಾಳಂ ಚಿತ್ರರಂಗದ ಅಸಾಧಾರಣ ನಿರೂಪಣೆಯಾಗಿದೆ. ಚಿತ್ರದ ವಿಷಯಗಳು ಪ್ರೇಕ್ಷಕರ ರಂಜಿಸುತ್ತವೆ, ಸಮಯ ಅಥವಾ ಸ್ಥಳವನ್ನು ಲೆಕ್ಕಿಸದೆ ಅಧಿಕಾರದ ಆಮಿಷವು ಹೇಗೆ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈ ಚಿತ್ರವು ತಿಳಿಸುತ್ತದೆ.

'ರೊಟ್ಟಿ ಕೂನ್ ಬನಾಸಿ' ಮತ್ತು 'ಬ್ರಹ್ಮಯುಗಂ' ಎರಡೂ ಪ್ರಾದೇಶಿಕ ಸಿನೆಮಾಗಳಾಗಿದ್ದು, ಇವು ಪರಿವರ್ತಕ ಶಕ್ತಿಯನ್ನು ಎತ್ತಿ ತೋರಿಸುತ್ತವೆ. ರೊಟ್ಟಿ ಕೂನ್ ಬನಾಸಿ ಪಿತೃಪ್ರಧಾನ ಸಮಾಜದಲ್ಲಿ ಲಿಂಗ ಸಮಾನತೆಯ ಒತ್ತಡದ ವಿಷಯದತ್ತ ಗಮನ ಸೆಳೆದರೆ, ಬ್ರಹ್ಮಯುಗಂ ಮಾನವನ ಮನಸ್ಸು ಮತ್ತು ಸಾಮಾಜಿಕ ಶ್ರೇಣಿಗಳನ್ನು ನಿರೂಪಿಸಿ ಅಲೌಕಿಕ ದೃಷ್ಟಿಕೋನವನ್ನು ನೀಡುತ್ತದೆ.

ಪ್ರಾದೇಶಿಕ ಧ್ವನಿಗಳನ್ನು ಬೆಳಕಿಗೆ ತರುವಲ್ಲಿ ಐಎಫ್ಎಫ್ಐನಂತಹ ವೇದಿಕೆಗಳ ಮಹತ್ವವನ್ನು ಚಂದನ್ ಸಿಂಗ್ ಹೀಗೆ ಹೇಳಿದ್ದಾರೆ. "ಐಎಫ್ಎಫ್ಐನಂತಹ ಉತ್ಸವಗಳು ಈ ತರಹದ ಚಲನಚಿತ್ರಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಅವಕಾಶವನ್ನು ನೀಡುತ್ತವೆ. ನಮ್ಮ ಪ್ರದೇಶಗಳಲ್ಲಿ ಕೇಳಲಾಗದ ಕಥೆಗಳತ್ತ ಗಮನ ಸೆಳೆಯಲು ಅವು ಸಹಾಯ ಮಾಡುತ್ತವೆ." ಅಂತೆಯೇ, ಬ್ರಹ್ಮಯುಗಂ ಜಾನಪದದ ಸಾರ್ವತ್ರಿಕ ಆಕರ್ಷಣೆಯನ್ನು ಪ್ರದರ್ಶಿಸುತ್ತದೆ, ಪ್ರಾದೇಶಿಕ ಕಥೆಗಳು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಎಂದು ಸಾಬೀತುಪಡಿಸುತ್ತದೆ.

ಎರಡೂ ಚಲನಚಿತ್ರಗಳು, ಪ್ರಕಾರ ಮತ್ತು ಶೈಲಿಯಲ್ಲಿ ಬಹಳ ಭಿನ್ನವಾಗಿದ್ದರೂ, ಅರ್ಥಪೂರ್ಣ ಸಂಭಾಷಣೆಗಳನ್ನು ಹೊಂದಿವೆ. ಒಟ್ಟಾರೆ, ಈ ಚಲನಚಿತ್ರಗಳು ಭಾರತೀಯ ಸಿನೆಮಾದ ವಿಕಸನಕ್ಕೆ ಉದಾಹರಣೆಯಾಗಿವೆ. ಪ್ರಾದೇಶಿಕ ಚಿತ್ರಗಳು ಅವುಗಳ ಕಥೆ, ಕಲಾತ್ಮಕತೆ ಮತ್ತು ಸಾಂಸ್ಕೃತಿಕ ಮಹತ್ವಕ್ಕಾಗಿ ಮಾನ್ಯತೆ ಪಡೆಯುತ್ತಿವೆ.

ಪ್ರೆಸ್ ಕಾನ್ಫರೆನ್ಸ್ ಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:

 

*****

iffi reel

(Release ID: 2076533) Visitor Counter : 46