ವಾರ್ತಾ ಮತ್ತು ಪ್ರಸಾರ ಸಚಿವಾಲಯ
"ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಸರಳಗೊಳಿಸುವುದು ಅವಶ್ಯಕ:" 55ನೇ ಐಎಫ್ಎಫ್ಐ ಮಾಸ್ಟರ್ ಕ್ಲಾಸ್ ನಲ್ಲಿ ಪ್ರಸೂನ್ ಜೋಶಿ
"ಚಲನಚಿತ್ರ ನಿರ್ಮಾಣವು ಕೇಂದ್ರೀಕೃತವಾಗಿ ಉಳಿಯಲು ಸಾಧ್ಯವಿಲ್ಲ ಮತ್ತು ಸಿಎಮ್ಒಟಿ ಕಥೆ ಹೇಳುವ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸುವ ಒಂದು ಹೆಜ್ಜೆಯಾಗಿದೆ"
"ಭಾರತದಿಂದ ನಿಜವಾದ ಕಥೆಗಳು ಹೊರಬರಬೇಕೆಂದು ನೀವು ಬಯಸಿದರೆ, ನೀವು ಚಲನಚಿತ್ರ ತಯಾರಿಕೆಯನ್ನು ದೇಶದ ದೂರದ ಮೂಲೆಗಳಲ್ಲಿನ ಜನರಿಗೆ ಲಭ್ಯವಾಗುವಂತೆ ಮಾಡಬೇಕು"
"ಮೌನವು ನಮ್ಮನ್ನು ಸಂಪರ್ಕಿಸುವ ಶಾಶ್ವತ ಶಬ್ದವಾಗಿದೆ. ಮೌನವೇ ಅಂತಿಮ ಭಾಷೆ”
ಪ್ರಾಯೋಗಿಕ ಮತ್ತು ಸೃಜನಶೀಲ ನಿರ್ಬಂಧಗಳು ನಮ್ಮ ಆಲೋಚನೆಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದರಿಂದ ನಮ್ಮ ಕಥೆಯ ಬಹಳಷ್ಟು ಕಲ್ಪನೆಗಳು ಅಕಾಲಿಕವಾಗಿ ಸಾಯುತ್ತವೆ. ಈ ರೀತಿಯಾಗಿ ಭಾರತವು ಕಥೆ ಶಿಶುಹತ್ಯೆ ನಡೆಯುವ ಸ್ಥಳವಾಗಿದೆ ಎಂದು ಖ್ಯಾತ ಲೇಖಕ ಮತ್ತು ಗೀತರಚನೆಕಾರ ಪ್ರಸೂನ್ ಜೋಶಿ ಹೇಳಿದರು. ಅವರು ಗೋವಾದಲ್ಲಿ ಇಂದು ಐಎಫ್ಎಫ್ಐ 2024 ರ ನೇಪಥ್ಯದಲ್ಲಿ ಮಾಸ್ಟರ್ ಕ್ಲಾಸ್ “ದಿ ಜರ್ನಿ ಫ್ರಮ್ ಸ್ಕ್ರಿಪ್ಟ್ ಟು ಸ್ಕ್ರೀನ್: ರೈಟಿಂಗ್ ಫಾರ್ ಫಿಲ್ಮ್ ಅಂಡ್ ಬಿಯಾಂಡ್” ನಲ್ಲಿ ಮಾತನಾಡುತ್ತಾ ಹೇಳಿದರು.
ಅವಕಾಶವು ನಮ್ಮ ಮನೆ ಬಾಗಿಲು ತಟ್ಟಿದಾಗ ಅಭ್ಯಾಸವನ್ನು ಪ್ರಾರಂಭಿಸಲು ಸಾಧ್ಯವಿಲ್ಲದ ಕಾರಣ ಕೌಶಲ್ಯ, ಕರಕುಶಲತೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರ ಹೊರತು ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಶ್ರೀ ಜೋಶಿ ಹೇಳಿದರು.
"ನಿಜವಾದ ವಿಷಯವು ಭಾಷೆಯಿಂದ ನಿರ್ಬಂಧಿಸಲ್ಪಟ್ಟಿಲ್ಲ ಮತ್ತು ಅತ್ಯುತ್ತಮ ಕಾವ್ಯವು ಮೌನದಲ್ಲಿ ಸಂಭವಿಸುತ್ತದೆ ಮತ್ತು ಮೌನವು ನಮ್ಮನ್ನು ಸಂಪರ್ಕಿಸುವ ಶಾಶ್ವತ ಶಬ್ದವಾಗಿದೆ ಎಂದು ನಾವು ಹೇಳಬಹುದು. ಮೌನವೇ ಅಂತಿಮ ಭಾಷೆ” ಎಂದು ಶ್ರೀ ಜೋಶಿ ಹೇಳಿದರು. ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ನಾವು ಸರಳಗೊಳಿಸಬೇಕಾಗಿದೆ. ಚಲನಚಿತ್ರಗಳು ಕುತೂಹಲವನ್ನು ಹೊಂದಿರಬಹುದು ಆದರೆ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲ ಎಂದವರು ಅಭಿಪ್ರಾಯಪಟ್ಟರು.
ಚಲನಚಿತ್ರದೆಡೆಗಿನ ಚಿಂತನೆಯ ಪಯಣದ ಬಗ್ಗೆ ವಿವರಿಸುವಾಗ, ಶ್ರೀ ಜೋಶಿ ಅವರು ತಮ್ಮ ಬಾಲ್ಯದ ಘಟನೆಗಳನ್ನು ವಿವರಿಸಿದರು, ಅದು ತಾರೆ ಜಮೀನ್ ಪರ್ ಚಲನಚಿತ್ರದಲ್ಲಿ ಅವರ ಹಾಡುಗಳಿಗೆ ಸ್ಫೂರ್ತಿಯಾಯಿತು. "ನೀವು ಆಳವಾಗಿ ವೈಯಕ್ತಿಕವಾದದ್ದನ್ನು ನಿರೂಪಿಸಿದಾಗ, ಅದು ಸಾರ್ವತ್ರಿಕವಾಗುತ್ತದೆ" ಎಂದು ಪ್ರಸೂನ್ ಜೋಶಿ ಹೇಳಿದರು.
"ಕವಿತೆಯಲ್ಲಿ ನನ್ನ ಕಠಿಣ ಪದಗಳ ಬಳಕೆಯ ಬಗ್ಗೆ ನನ್ನ ತಾಯಿ ಪ್ರತಿಕ್ರಿಯಿಸುತ್ತಿದ್ದರು, ಇದು ನನ್ನ ಬರವಣಿಗೆಯ ಪ್ರಕ್ರಿಯೆಯನ್ನು ರೂಪಿಸಿತು, ಇದು ಓದುಗರಿಗೆ ತಟ್ಟುವ ವಿಷಯವನ್ನು ಬರೆಯಲು ನನಗೆ ಅನುವು ಮಾಡಿಕೊಟ್ಟಿತು ಮತ್ತು ಅದು ನನಗೆ ಮಾತ್ರ ತೃಪ್ತಿ ನೀಡುವಂತಹ ಸೀಮಿತ ವ್ಯಾಪ್ತಿಯಲ್ಲಿರದೆ, ಅದು ಇತರರಿಗೂ ತಟ್ಟಬೇಕು ಎಂದವರು ನುಡಿದರು.
ಸೃಜನಶೀಲ ಕ್ಷೇತ್ರದ ಮೇಲೆ ಎಐ ಪ್ರಭಾವದ ಬಗ್ಗೆ ಮಾತನಾಡುವಾಗ, ಗೀತರಚನೆಕಾರರು ಆಗಿರುವ ಶ್ರೀ ಜೋಶಿ "ನಾನು ಕೃತಕ ಬುದ್ಧಿಮತ್ತೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಇದು ಸೃಜನಶೀಲ ಕ್ಷೇತ್ರಗಳನ್ನು ಕೊನೆಯದಾಗಿ ತಲುಪಬೇಕಾಗಿತ್ತು, ಆದರೆ ಇದು ಸೃಜನಶೀಲ ಕ್ಷೇತ್ರಗಳ ಮೇಲೆ ಮೊದಲನೆಯ ಹಂತದಲ್ಲಿಯೇ ಪರಿಣಾಮ ಬೀರಿದೆ. ಗಣಿತದ ಮೇಲೆ ಕೇಂದ್ರೀಕರಿಸುವ ಯಾವುದೇ ವಿಷಯಗಳನ್ನು ಕೃತಕ ಬುದ್ಧಿಮತ್ತೆಯಿಂದ ಕರಗತ ಮಾಡಿಕೊಳ್ಳಬಹುದು ಎಂಬುದನ್ನು ನಾವು ನೆನಪಿನಲ್ಲಿಡಬೇಕು, ಆದಾಗ್ಯೂ, ಒಬ್ಬರ ಕವಿತೆ ಅಥವಾ ಕಥೆ ಕೆಲವು ಅಂತಿಮ ಸತ್ಯದಿಂದ ಹೊರಹೊಮ್ಮಿದ್ದರೆ, ಎಐ ಅದನ್ನು ಉತ್ಪಾದಿಸಲು ಸಾಧ್ಯವಿಲ್ಲ. ಎಐ ಪ್ರಬಲವಾಗುತ್ತಿರುವುದರಿಂದ ವಿಷಯ ಸೃಷ್ಟಿಕರ್ತರ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಸೃಷ್ಟಿಯ ಮೇಲಲ್ಲ ಎಂದು ಸಿಬಿಎಫ್ಸಿ ಅಧ್ಯಕ್ಷರು ಹೇಳಿದರು.
ಕಥೆ ಹೇಳುವಿಕೆಯು ಕೆಲವೇ ನಗರಗಳಿಗೆ ಮಾತ್ರ ಕೇಂದ್ರೀಕೃತವಾಗದಂತೆ ನಾವು ನೋಡಿಕೊಳ್ಳಬೇಕು ಮತ್ತು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ಸಿಎಂಒಟಿ) ಉಪಕ್ರಮವು ಗ್ರಾಮೀಣ ಪ್ರದೇಶಗಳಿಂದ ಕಥೆಗಾರರು ಹೊರಹೊಮ್ಮಲು ಅನುವು ಮಾಡಿಕೊಡುವ ಮೂಲಕ ಈ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಪ್ರಯತ್ನಿಸುತ್ತದೆ ಎಂದು ಶ್ರೀ ಜೋಶಿ ಹೇಳಿದರು. ಚಲನಚಿತ್ರ ನಿರ್ಮಾಪಕರು ಆ ಸ್ಥಳಗಳಿಂದ ಹೊರಹೊಮ್ಮದ ಹೊರತು ನಾವು ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಕಥೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲ. ಭಾರತದಿಂದ ನಿಜವಾದ ಕಥೆಗಳು ಹೊರಬರಬೇಕಾದರೆ ನೀವು ಚಲನಚಿತ್ರ ನಿರ್ಮಾಣವನ್ನು ದೇಶದ ದೂರದ ಮೂಲೆಯಲ್ಲಿರುವ ಜನರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಶ್ರೀ ಅನಂತ್ ವಿಜಯ್ ಮಾಸ್ಟರ್ ಕ್ಲಾಸ್ ಅನ್ನು ನಿರ್ವಹಿಸಿದರು.
*****
(Release ID: 2075886)
Visitor Counter : 6