ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗ್ರೆನಡಾದ ಪ್ರಧಾನಮಂತ್ರಿಯವರ ಭೇಟಿ
प्रविष्टि तिथि:
21 NOV 2024 10:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೆನಡಾದ ಪ್ರಧಾನಿ ಶ್ರೀ. ಡಿಕನ್ ಮಿಚೆಲ್ ಅವರನ್ನು ನವೆಂಬರ್ 20 ರಂದು ಗಯಾನಾದ ಜಾರ್ಜ್ಟೌನ್ ನಲ್ಲಿ 2ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ಜೊತೆಜೊತೆಗೆ ಭೇಟಿಯಾದರು.
ಕ್ಯಾರಿಕಾಮ್ ನ ಅಧ್ಯಕ್ಷತೆ ವಹಿಸಿಕೊಂಡಿದ್ದಕ್ಕಾಗಿ ಮತ್ತು 2ನೇ ಭಾರತ-CARICOM ಶೃಂಗಸಭೆಯಲ್ಲಿ ಚರ್ಚೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ್ದಕ್ಕಾಗಿ ಪ್ರಧಾನಿ ಮಿಚೆಲ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ), ಆರೋಗ್ಯ ರಕ್ಷಣೆ, ಸಾಮರ್ಥ್ಯ ನಿರ್ಮಾಣ ಮತ್ತು ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ ವಲಯಗಳಲ್ಲಿ ಅಭಿವೃದ್ಧಿ ಸಹಕಾರದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ಬೆಂಬಲಕ್ಕಾಗಿ ಮಿಚೆಲ್ ಅವರು ಪ್ರಧಾನಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಾಗತಿಕ ದಕ್ಷಿಣದ ಭಾರತದ ನಾಯಕತ್ವಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
*****
(रिलीज़ आईडी: 2075815)
आगंतुक पटल : 37
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam