ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಗೋವಾದಲ್ಲಿ ನಡೆದ ‘ಡೇ ಅಟ್ ಸೀ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರಪತಿಯವರು 

Posted On: 07 NOV 2024 8:48PM by PIB Bengaluru

ಇಂದು (ನವೆಂಬರ್ 7, 2024) ಗೋವಾದಲ್ಲಿ ನಡೆದ 'ಡೇ ಅಟ್ ಸೀ' ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದರು.  ಐ.ಎನ್‌.ಎಸ್. ವಿಕ್ರಾಂತ್ ಹಡಗಿನಲ್ಲಿ ನಡೆದ ಅವರ 'ಡೇ ಅಟ್ ಸೀ' ಕಾರ್ಯಕ್ರಮದ ಸಂದರ್ಭದಲ್ಲಿ, ಅವರು ಮಿಗ್ 29 ಕೆ ಟೇಕ್-ಆಫ್ ಮತ್ತು ಲ್ಯಾಂಡಿಂಗ್, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ಕಾರ್ಯಾಚರಣೆಗಳಿಂದ ಕ್ಷಿಪಣಿ ಫೈರಿಂಗ್ ಡ್ರಿಲ್‌ಗಳು ಸೇರಿದಂತೆ ಹಲವಾರು ನೌಕಾ ಕಾರ್ಯಾಚರಣೆಗಳನ್ನು  ವೀಕ್ಷಿಸಿದರು.  ಅವರಿಗೆ ಭಾರತೀಯ ನೌಕಾಪಡೆಯ ಪಾತ್ರ ಮತ್ತು ಚಾರ್ಟರ್ ಸೇವಾ ಕಾರ್ಯಗಳು ಮತ್ತು ಕಾರ್ಯಾಚರಣೆಗಳ ಪರಿಕಲ್ಪನೆಯ ಬಗ್ಗೆ ಕೂಲಂಕುಷವಾಗಿ ವಿವರಿಸಲಾಯಿತು.  ಅವರು ಐ.ಎನ್‌.ಎಸ್. ವಿಕ್ರಾಂತ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

"ಸಮುದ್ರದಲ್ಲಿನ ಹಡಗಿನಲ್ಲಿ ಮಾಡಿದ ತನ್ನ ಭಾಷಣದಲ್ಲಿ ಅಧ್ಯಕ್ಷರು, ಭಾರತವು ಹಲವಾರು ಸಾವಿರ ವರ್ಷಗಳ ಶ್ರೀಮಂತ ಕಡಲ ಇತಿಹಾಸವನ್ನು ಹೊಂದಿದೆ" ಎಂದು ಹೇಳಿದರು. ಇದನ್ನು ಎಲ್ಲಾ ವಿಧದ ಮಾಧ್ಯಮ ವ್ಯವಸ್ಥೆಯ ಘಟಕಗಳಿಗೆ ತತ್ ಸಮಯ ಪ್ರಸಾರ ಮೂಲಕ ಹಡಗಿನಿಂದ ನೇರ ಪ್ರಸಾರ ಮಾಡಲಾಯಿತು. "ಈ ಸ್ಥಳವು, ಎಲ್ಲಾ ಸೌಕರ್ಯಗಳ ಜೊತೆಗೆ ಅನುಕೂಲಕರ ಸಮುದ್ರ ಕಿನಾರೆಯ ಭೌಗೋಳಿಕತೆಯಿಂದ ಕೂಡ ಆಶೀರ್ವದಿಸಲ್ಪಟ್ಟಿದೆ.  7500 ಕಿಲೋಮೀಟರ್ ಉದ್ದದ ಕರಾವಳಿಯೊಂದಿಗೆ, ಭಾರತದ ಕಡಲ ಭೂಗೋಳವು ಆರ್ಥಿಕ ಬೆಳವಣಿಗೆ, ಪ್ರಾದೇಶಿಕ ಸಂಪರ್ಕ ಮತ್ತು ಕಾರ್ಯತಂತ್ರದ ಪ್ರಭಾವಕ್ಕೆ ಹಲವಾರು ಅವಕಾಶಗಳನ್ನು ಒದಗಿಸುತ್ತದೆ.  ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ಪ್ರಯಾಣದಲ್ಲಿ ನಾವು ಆಧುನಿಕವಾಗಿ ಹತೋಟಿಗೆ ತರಬೇಕಾದ ಬೃಹತ್ ಸಾಗರ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ" ಎಂದು ರಾಷ್ಟ್ರಪತಿಯವರು  ಹೇಳಿದರು.

"ಜಾಗತಿಕ ಭೌಗೋಳಿಕ-ರಾಜಕೀಯ ಮತ್ತು ಭದ್ರತಾ ಪರಿಸರದಲ್ಲಿ, ವಿಶೇಷವಾಗಿ ಕಡಲ ಕ್ಷೇತ್ರದಲ್ಲಿ ನಡೆಯುತ್ತಿರುವ ಒಳ -ಹೊರ ಹರಿವು, ಈ ಪ್ರದೇಶದಲ್ಲಿ ಮತ್ತು ಅದರಾಚೆಗೆ ನಮ್ಮ ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಮುಂದುವರಿಸಲು ನಮ್ಮ ನೌಕಾ ಶಕ್ತಿಯನ್ನು ಬಲಪಡಿಸುವುದನ್ನು ನಾವು ಮುಂದುವರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಭಾರತೀಯ ನೌಕಾಪಡೆಯ ಸನ್ನದ್ಧತೆ ಮತ್ತು ದೃಢವಾದ ಬದ್ಧತೆಯ ಮೂಲಕ ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ಖಾತ್ರಿಪಡಿಸಿದೆ. ಭಾರತದ ಎರಡನೇ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ ಐ.ಎನ್‌.ಎಸ್ ಅರಿಘಾಟ್‌ ನ ಕಾರ್ಯಾರಂಭ, ಮತ್ತು ಸುಧಾರಿತ ಮುಂಚೂಣಿ ಯುದ್ಧನೌಕೆಗಳು ಮತ್ತು ಅತ್ಯಾಧುನಿಕ ನೌಕಾ ಮೂಲಸೌಕರ್ಯಗಳ ಸೇರ್ಪಡೆಯೊಂದಿಗೆ ಐ.ಎನ್‌.ಎಸ್ ವಿಕ್ರಾಂತ್‌ ನ ಸೇರ್ಪಡೆ ಮತ್ತು ಕಾರ್ಯಾಚರಣೆಯೊಂದಿಗೆ ಭಾರತದ ಸಮುದ್ರಯಾನವು ಗಮನಾರ್ಹವಾದ ಮಹತ್ವ ಹಾಗೂ ಉತ್ತೇಜನವನ್ನು ಪಡೆದಿದೆ. ಈ ಸಾಧನೆಗಳು ಭಾರತದ ಅಸಾಧಾರಣ ಪ್ರಾದೇಶಿಕ ಶಕ್ತಿಯ ಸ್ಥಾನಮಾನವನ್ನು ಭದ್ರಪಡಿಸಿವೆ" ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

"ಇಂದು ಎಲ್ಲಾ ಕೆಲಸ, ಕಾರ್ಯ, ಶ್ರೇಣಿಗಳಲ್ಲಿ ಮತ್ತು ಪಾತ್ರಗಳಲ್ಲಿ ಮಹಿಳೆಯರ ಪ್ರವೇಶವನ್ನು ಕಾಣಬಹುದು. ಆದರೆ, ಇದೆಲ್ಲವನ್ನು ಮೀರಿ, ಭಾರತೀಯ ನೌಕಾಪಡೆಯು ನಮ್ಮ ಮಹಿಳಾ ಸಮುದ್ರ ಯೋಧರ ಸಂಪೂರ್ಣ ಯುದ್ಧ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ" ಎಂಬ ಮಾಹಿತಿ ತಿಳಿದು ಭಾರತದ ರಾಷ್ಟ್ರಪತಿಯವರು ಸಂತೋಷಪಟ್ಟರು. "ಭಾರತೀಯ ನೌಕಾಪಡೆಯು ತನ್ನ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ಯುದ್ಧನೌಕೆಗೆ ನೇಮಿಸಿದೆ. ನೌಕಾಪಡೆಯ ವಿಮಾನಗಳನ್ನು ಮಹಿಳೆಯರೇ ಪೈಲಟ್ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಭಾರತೀಯ ನೌಕಾಪಡೆಯು ತನ್ನ ಮೊದಲ ಮಹಿಳಾ ಹೆಲಿಕಾಪ್ಟರ್ ಪೈಲಟ್ ಅನ್ನು ಸಹ ಪಡೆದುಕೊಂಡಿದೆ. ಲಿಂಗ ಸಮಾನತೆ, ಅವಕಾಶ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಭಾರತೀಯ ನೌಕಾಪಡೆಯ ಪ್ರಯತ್ನಗಳಲ್ಲಿ ಈ ಸಾಧನೆಗಳು ಮಹತ್ವದ್ದಾಗಿವೆ" ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

ರಾಷ್ಟ್ರಪತಿಯವರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

*****


(Release ID: 2072066) Visitor Counter : 21