ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಜಾಲತಾಣದಲ್ಲಿ (ವೆಬ್ ನಲ್ಲಿ) ಹೆಚ್ಚಿನ ವೈವಿಧ್ಯತೆ, ಪ್ರವೇಶ ಲಭ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸುವಿಕೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಎನ್ಐಎಕ್ಸ್ಐ ಮತ್ತು ಐಸಿಎಎನ್ಎನ್ ಹೊಸ ಜಿಟಿಎಲ್ಡಿ ಕಾರ್ಯಕ್ರಮದಲ್ಲಿ ಭಾರತೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿದೆ
ಆನ್ ಲೈನ್ ಉಪಸ್ಥಿತಿ ಮತ್ತು ಸ್ಥಳೀಯ ಭಾಷಾ ಬೆಂಬಲದೊಂದಿಗೆ ಸ್ಥಳೀಯ ವ್ಯವಹಾರಗಳು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ; ".ಭಾರತ್" ನಂತಹ ಡೊಮೇನ್ ಗಳೊಂದಿಗೆ ಭಾರತದ ಜಾಗತಿಕ ದೃಗೋಚರತೆಗೆ ಉತ್ತೇಜನ ಸಿಗಲಿದೆ
ಐ.ಸಿ.ಎ.ಎನ್.ಎನ್. (ICANN) ನ ಅರ್ಜಿದಾರರ ಬೆಂಬಲ ಕಾರ್ಯಕ್ರಮವು ನವೆಂಬರ್ 19, 2024 ರಂದು ಪ್ರಾರಂಭವಾಗುತ್ತದೆ, ಹೊಸ ಜಿಟಿಎಲ್ ಡಿ ಅರ್ಜಿದಾರರಿಗೆ 85% ವರೆಗೆ ಶುಲ್ಕ ರಿಯಾಯಿತಿ ಲಭ್ಯ
Posted On:
06 NOV 2024 4:13PM by PIB Bengaluru
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿವೈ), ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್ಐಎಕ್ಸ್ಐ) ಮತ್ತು ಇಂಟರ್ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್ ನಂಬರ್ಸ್ (ಐಸಿಎಎನ್ಎನ್) ಸಹಯೋಗದೊಂದಿಗೆ, ಹೊಸ ಜೆನೆರಿಕ್ ಟಾಪ್-ಲೆವೆಲ್ ಡೊಮೇನ್ಸ್ (ಜಿ ಟಿ ಎಲ್ ಡಿ) ಉಪಕ್ರಮದ ಭಾಗವಾಗಿ ಐಸಿಎಎನ್ಎನ್ ಅರ್ಜಿದಾರರ ಬೆಂಬಲ ಕಾರ್ಯಕ್ರಮ (ಎ ಎಸ್ ಪಿ) ಕುರಿತು ದುಂಡುಮೇಜಿನ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ, ಪ್ರಮುಖ ಮಧ್ಯಸ್ಥಗಾರರು/ಭಾಗೀದಾರರು ಮತ್ತು ಉದ್ಯಮದ ಮುಖಂಡರು ಕಾರ್ಯಕ್ರಮದ ಪರಿಣಾಮವನ್ನು ಚರ್ಚಿಸಿದರು ಮತ್ತು ಅರ್ಹ ಸಂಸ್ಥೆಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು.
ಎನ್ ಐ ಎಕ್ಸ್ ಐ ಸಿಇಒ ಡಾ.ದೇವೇಶ್ ತ್ಯಾಗಿ, ಐಸಿಎಎನ್ಎನ್ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಮಿರನ್ ಗುಪ್ತಾ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ವಿಜ್ಞಾನಿ-ಎಫ್, ಶ್ರೀ ಟಿ ಸಂತೋಷ್ ಸೇರಿದಂತೆ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ ದುಂಡುಮೇಜಿನ ಸಭೆಯಲ್ಲಿ ಸುರಕ್ಷಿತ, ಆಂದೋಲನದೋಪಾದಿಯಲ್ಲಿ ಕಾರ್ಯನಿರ್ವಹಿಸುವ ಆನ್ಲೈನ್ ಸ್ಥಳಗಳನ್ನು ರಚಿಸುವಲ್ಲಿ ಜಿಟಿಎಲ್ಡಿಗಳ ಪಾತ್ರವನ್ನು ಪ್ರಮುಖವಾಗಿ ಎತ್ತಿ ತೋರಿಸಿದರು. . ಅರ್ಜಿ ಪ್ರಕ್ರಿಯೆ ಮತ್ತು ಅವಶ್ಯಕತೆಗಳ ಬಗ್ಗೆ ಪ್ರಶ್ನೆಗಳನ್ನು ಪರಿಹರಿಸಲು ಸಮ್ಮೇಳನವು ವೇದಿಕೆಯನ್ನು ಒದಗಿಸಿತು, ಸಂಭಾವ್ಯ ಅರ್ಜಿದಾರರು ಭಾಗವಹಿಸಲು ಸ್ಪಷ್ಟ ಮಾರ್ಗವನ್ನು ರೂಪಿಸಿರುವುದನ್ನು ಖಚಿತಪಡಿಸಿತು.
ಐಸಿಎಎನ್ಎನ್ (ICANN) ಅರ್ಜಿದಾರರ ಬೆಂಬಲ ಕಾರ್ಯಕ್ರಮದ ಬಗ್ಗೆ
ಐಸಿಎಎನ್ಎನ್ (ICANN) ಅರ್ಜಿದಾರರ ಬೆಂಬಲ ಕಾರ್ಯಕ್ರಮವು ಹೊಸ ಜಿಟಿಎಲ್ ಡಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಂಸ್ಥೆಗಳಿಗೆ, ವಿಶೇಷವಾಗಿ ಸೌಲಭ್ಯವಿಲ್ಲದ ಪ್ರದೇಶಗಳಿಂದ ಬರುವ ಸಂಸ್ಥೆಗಳಿಗೆ ಆರ್ಥಿಕ ಮತ್ತು ಇತರ ರೀತಿಯಲ್ಲಿ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು 2026 ರ ಏಪ್ರಿಲ್ ನಲ್ಲಿ ತೆರೆಯಲು ನಿರ್ಧರಿಸಲಾದ ವಿಶಾಲವಾದ ಹೊಸ ಜಿಟಿಎಲ್ಡಿ ಕಾರ್ಯಕ್ರಮದೊಂದಿಗೆ ಜೋಡಣೆಯಾಗಿದ್ದು, ಇದು ಇಂಟರ್ನೆಟ್ನ ನೇಮ್ಸ್ಪೇಸ್ ಅನ್ನು ವಿಸ್ತರಿಸುತ್ತದೆ, ಜಾಲತಾಣದಲ್ಲಿ (ವೆಬ್ನಲ್ಲಿ) ಹೆಚ್ಚಿನ ವೈವಿಧ್ಯತೆ ಮತ್ತು ಪ್ರವೇಶ ಲಭ್ಯತೆಯನ್ನು ಉತ್ತೇಜಿಸುತ್ತದೆ.
ಅಂತರ್ಗತ ಡಿಜಿಟಲ್ ಭೂದೃಶ್ಯಕ್ಕಾಗಿ
ಈ ಸಂದರ್ಭದಲ್ಲಿ ಮಾತನಾಡಿದ ಡಾ.ದೇವೇಶ್ ತ್ಯಾಗಿ, ಭಾರತದಲ್ಲಿ ಹೆಚ್ಚು ಅಂತರ್ಗತ ಇಂಟರ್ನೆಟ್ ವಾತಾವರಣವನ್ನು ನಿರ್ಮಿಸುವ ಎನ್ಐಎಕ್ಸ್ಐನ ಬದ್ಧತೆಯನ್ನು ಒತ್ತಿ ಹೇಳಿದರು. "ಐಸಿಎಎನ್ಎನ್ ಮತ್ತು ಎಂಇಐಟಿವೈ ಸಹಯೋಗದೊಂದಿಗೆ ಎನ್ಐಎಕ್ಸ್ಐ, ಹೊಸ ಜಿಟಿಎಲ್ಡಿ ಕಾರ್ಯಕ್ರಮದಂತಹ ಉಪಕ್ರಮಗಳ ಮೂಲಕ ಜಾಗತಿಕ ಡಿಜಿಟಲ್ ಭೂದೃಶ್ಯಕ್ಕೆ ಸೇರಲು ಭಾರತೀಯ ಸಂಸ್ಥೆಗಳನ್ನು ಬೆಂಬಲಿಸಲು ಸಮರ್ಪಿತವಾಗಿದೆ. ಇದು ಸ್ಥಳೀಯ ವ್ಯವಹಾರಗಳು ಮತ್ತು ಸಮುದಾಯಗಳು ತಮ್ಮ ಆನ್ಲೈನ್ ಉಪಸ್ಥಿತಿಯನ್ನು ಅರ್ಥಪೂರ್ಣ ರೀತಿಯಲ್ಲಿ ರೂಪಿಸಲು ಸಶಕ್ತಗೊಳಿಸುತ್ತದೆ ಎಂದು ನಾವು ನಂಬುತ್ತೇವೆ. ಹೆಚ್ಚುವರಿಯಾಗಿ, "ಹೊಸ ಜಿಟಿಎಲ್ಡಿ ಕಾರ್ಯಕ್ರಮ ಮತ್ತು ಸ್ಥಳೀಯ ಭಾಷೆಗಳಿಗೆ ಅಪ್ಲಿಕೇಶನ್ ಬೆಂಬಲದೊಂದಿಗೆ ದುಂಡುಮೇಜಿನ ಸಮ್ಮೇಳನದಲ್ಲಿ ಮಾತನಾಡುವಾಗ, ಮುಂಬರುವ ವರ್ಷದಲ್ಲಿ ನಾವು ಗಮನಾರ್ಹ ಪ್ರಗತಿಯ ಹಾದಿಯಲ್ಲಿರುತ್ತೇವೆ" ಎಂದು ಅವರು ಹೇಳಿದರು.
ದುಂಡುಮೇಜಿನ ಸಭೆಯು ಅರ್ಹ ಸಂಸ್ಥೆಗಳಿಗೆ ಮಾಹಿತಿ ನೀಡುವ ಅಧಿವೇಶನವಾಗಿ ಕಾರ್ಯನಿರ್ವಹಿಸಿತು, ಅರ್ಜಿ ಪ್ರಕ್ರಿಯೆ ಮತ್ತು ಎಎಸ್ಪಿ ಮೂಲಕ ಲಭ್ಯವಿರುವ ಬೆಂಬಲದ ಬಗ್ಗೆ ಮಾರ್ಗದರ್ಶನ ನೀಡಿತು. ಪ್ರತಿನಿಧಿಗಳು ಜಿಟಿಎಲ್ಡಿಗಳ ಅನುಕೂಲಗಳನ್ನು ಸಹ ಪ್ರಸ್ತಾಪಿಸಿದರು, ಇದು ಜಾಲತಾಣದ (ವೆಬ್ಸೈಟ್ನ) ಉದ್ದೇಶ ಅಥವಾ ಧ್ಯೇಯವನ್ನು ಸೂಚಿಸಲು ಡೊಮೇನ್ ಹೆಸರಿನ ಕೊನೆಯಲ್ಲಿ ಸೇರಿಸಲಾಗುವ ಮೂರು-ಅಕ್ಷರ ಸ್ಟ್ರಿಂಗ್ಗಳನ್ನು (ಉದಾಹರಣೆಗೆ, .org ಅಥವಾ .com) ಒಳಗೊಂಡಿದ್ದು, ಜಿಟಿಎಲ್ ಡಿಗಳ ಮುಂಬರುವ ವಿಸ್ತರಣೆಯೊಂದಿಗೆ, ಈ ಕಾರ್ಯಕ್ರಮವು ಸಂಸ್ಥೆಗಳಿಗೆ ತಮ್ಮ ಗುರಿಗಳಿಗೆ ಹೊಂದಿಕೆಯಾಗುವ ಅನನ್ಯ/ವಿಶಿಷ್ಟ ಆನ್ ಲೈನ್ ಗುರುತುಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಭಾರತದ ಡಿಜಿಟಲ್ ಹೆಜ್ಜೆಗುರುತನ್ನು ವಿಸ್ತರಿಸಲು ಹೊಸ ಜಿ ಟಿ ಎಲ್ ಡಿ ಕಾರ್ಯಕ್ರಮ
ಜ್ಞಾನ ಪಾಲುದಾರರಾಗಿ, ಐಸಿಎಎನ್ಎನ್ (ICANN) ಕಾರ್ಯಕ್ರಮದ ಚೌಕಟ್ಟು ಮತ್ತು ಹೊಸ ಜಿಟಿಎಲ್ ಡಿಗೆ ಅರ್ಜಿ ಸಲ್ಲಿಸುವಲ್ಲಿ ಒಳಗೊಂಡಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿತು. ಐಸಿಎಎನ್ಎನ್ (ICANN) ನಲ್ಲಿ ಪಾಲುದಾರರ ಪಾಲ್ಗೊಳ್ಳುವಿಕೆಯ ವಿಭಾಗದ ಉಪಾಧ್ಯಕ್ಷ ಮತ್ತು ಏಷ್ಯಾ ಪೆಸಿಫಿಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಮಿರನ್ ಗುಪ್ತಾ, "ಕಾರ್ಪೊರೇಟ್ ಮತ್ತು ಲಾಭರಹಿತ ಸಂಸ್ಥೆಗಳು ಅರ್ಜಿದಾರರ ಬೆಂಬಲ ಕಾರ್ಯಕ್ರಮವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಐಸಿಎಎನ್ ಎನ್ ಒಳನೋಟಗಳನ್ನು ಹಂಚಿಕೊಳ್ಳುತ್ತದೆ. ಒಟ್ಟಾಗಿ, ನಾವು ನಮ್ಮ ಇಂಟರ್ನೆಟ್ ಸಮುದಾಯವನ್ನು ಬಲಪಡಿಸಬಹುದು!” ಎಂದರು.
ಎಂಇಐಟಿವೈನ ವಿಜ್ಞಾನಿ ಶ್ರೀ ಟಿ.ಸಂತೋಷ್ ಅವರು "ಅರ್ಜಿದಾರರ ಬೆಂಬಲ ಕಾರ್ಯಕ್ರಮ (ಎಎಸ್ಪಿ) ಭಾರತಕ್ಕೆ ಒಂದು ಅಮೂಲ್ಯ ಅವಕಾಶವಾಗಿದ್ದು, ಜಾಗತಿಕ ಇಂಟರ್ನೆಟ್ ಆಡಳಿತ ವೇದಿಕೆಗಳಲ್ಲಿ ಭಾರತೀಯ ಮಧ್ಯಸ್ಥಗಾರರ ಹೆಚ್ಚಿನ ಭಾಗವಹಿಸುವಿಕೆಗಾಗಿ ಸಕ್ರಿಯವಾಗಿ ಅನುಸರಿಸಬೇಕು" ಎಂದು ಒತ್ತಿ ಹೇಳಿದರು. “ ಜಿಟಿಎಲ್ಡಿ ಅವಕಾಶಗಳನ್ನು ಅನ್ವೇಷಿಸಲು, ವಿಶೇಷವಾಗಿ ಲ್ಯಾಟಿನ್-ಮಾತನಾಡದ ಭಾರತೀಯ ಪ್ರೇಕ್ಷಕರೊಂದಿಗೆ ಅಂತರರಾಷ್ಟ್ರೀಕೃತ ಡೊಮೇನ್ ನೇಮ್ಸ್ (ಐಡಿಎನ್) ಮೂಲಕ ಸಂಪರ್ಕ ಸಾಧಿಸಲು ಎನ್ಜಿಒಗಳು ಮತ್ತು ಪ್ರತಿಷ್ಠಾನಗಳು ಎಎಸ್ಪಿಯೊಂದಿಗೆ ಜೊತೆಗೂಡಬೇಕು” ಎಂದು ಅವರು ಸಲಹೆ ನೀಡಿದರು.
ಶ್ರೀ ಸಂತೋಷ್ ಅವರು ಐಸಿಎಎನ್ಎನ್ (ICANN) ದಾಖಲೀಕರಣ ಮತ್ತು ನೀತಿ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ".ಭಾರತ್" ನಂತಹ ಡೊಮೇನ್ ಗಳು ಭಾರತದ ಜಾಗತಿಕ ಗೋಚರತೆಯನ್ನು ಹೆಚ್ಚಿಸುತ್ತವೆ ಎಂಬುದರತ್ತ ಬೆಟ್ಟು ಮಾಡಿದರು. ಹೊಸ ಜಿ ಟಿ ಎಲ್ ಡಿ ಕಾರ್ಯಕ್ರಮವು ಸಂಸ್ಥೆಗಳಿಗೆ ಬಹುಭಾಷಾ ಡೊಮೇನ್ ಸ್ಟ್ರಿಂಗ್ ಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ, ಇದು ಭಾರತದ ಡಿಜಿಟಲ್ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ ಎಂದು ಅವರು ವಾದಿಸಿದರು.
ಹೊಸ ಜಿ ಟಿ ಎಲ್ ಡಿ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿರುವ ಭಾರತೀಯ ಸಂಸ್ಥೆಗಳಿಗೆ ಹೆಚ್ಚಿನ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿರುವ ಎಂಇಐಟಿವೈ, ನಿಕ್ಸಿ (NIXI) ಮತ್ತು ಐಸಿಎಎನ್ ಎನ್ ನಡುವೆ ಚಾಲ್ತಿಯಲ್ಲಿರುವ ಸಹಕಾರದ ಬದ್ಧತೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಂಡಿತು.
ಎ.ಎಸ್.ಪಿ. (ASP) ಬಗ್ಗೆ
ಐಸಿಎಎನ್ಎನ್ (ICANN) ನ ಅರ್ಜಿದಾರರ ಬೆಂಬಲ ಕಾರ್ಯಕ್ರಮ (ಎ ಎಸ್ ಪಿ) ಹೊಸ ಜಿ ಟಿ ಎಲ್ ಡಿ ಕಾರ್ಯಕ್ರಮವನ್ನು ಸೀಮಿತ ಹಣಕಾಸು ಸಂಪನ್ಮೂಲಗಳನ್ನು ಹೊಂದಿರುವ ಅರ್ಜಿದಾರರಿಗೆ ಹೆಚ್ಚು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿದೆ, 85% ವರೆಗೆ ಶುಲ್ಕ ಕಡಿತ, ತರಬೇತಿ, ಹಣಕಾಸು ಅಥವಾ ವೆಚ್ಚದ ಹೊರೆಯಿಲ್ಲದೆ ಒದಗಿಸಲಾಗುವ ವೃತ್ತಿಪರ ಸೇವೆಗಳು (ಪ್ರೊ ಬೋನೊ ಸೇವೆಗಳು) ಮತ್ತು ಸಲಹೆಗಾರರಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಅರ್ಹ ಘಟಕಗಳಲ್ಲಿ ಲಾಭರಹಿತ ಸಂಸ್ಥೆಗಳು, ಐಜಿಒಗಳು, ಸ್ಥಳೀಯ ಸಂಸ್ಥೆಗಳು, ಸಾಮಾಜಿಕ ಪರಿಣಾಮದ ವ್ಯವಹಾರಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಸಣ್ಣ ವ್ಯವಹಾರಗಳು ಸೇರಿವೆ. ಎ ಎಸ್ ಪಿ 2024ರ ನವೆಂಬರ್ 19 ರಂದು ಪ್ರಾರಂಭವಾಗುತ್ತದೆ, ಅರ್ಜಿಗಳಿಗೆ 12 ತಿಂಗಳ ವಿಂಡೋವನ್ನು ರೋಲಿಂಗ್ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ಎಎಸ್ಪಿ ಪ್ರತಿ ಅರ್ಜಿದಾರರಿಗೆ ಒಂದು ಜಿಟಿಎಲ್ಡಿ ಅಪ್ಲಿಕೇಶನನ್ನು ಒಳಗೊಂಡಿದೆ, ಪ್ರಯೋಜನವನ್ನು ಗರಿಷ್ಠಗೊಳಿಸಲು ಸಂಪನ್ಮೂಲಗಳನ್ನು ಮೊದಲೇ ನೀಡಲಾಗುತ್ತದೆ. ಸರ್ಕಾರಗಳು ನೇರವಾಗಿ ಅರ್ಹತೆ ಪಡೆದಿರುವುದಿಲ್ಲ ಆದರೆ ಅರ್ಹ ಘಟಕಗಳೊಂದಿಗೆ ಪಾಲುದಾರರಾಗಬಹುದು. ಬೆಂಬಲಿತ ಅರ್ಜಿದಾರರು ಸಂಭಾವ್ಯ ಸ್ವಾಧೀನಕ್ಕೆ ಮೂರು ವರ್ಷ ಕಾಯಬೇಕು ಮತ್ತು ಈ ಅವಧಿಯೊಳಗೆ ತಮ್ಮ ನೋಂದಣಿ ಒಪ್ಪಂದವನ್ನು ಬೇರೆಡೆಗೆ ನಿಯೋಜಿಸಿದರೆ ದಂಡವನ್ನು ಎದುರಿಸಬೇಕಾಗುತ್ತದೆ. ಮಾರ್ಗದರ್ಶನಕ್ಕಾಗಿ, ಐಸಿಎಎನ್ಎನ್ ಪ್ರೊ ಬೊನೊ ಸೇವಾ ಪೂರೈಕೆದಾರರ ಪಟ್ಟಿಯನ್ನು ಒದಗಿಸುತ್ತದೆ, ಆದರೆ ಅರ್ಜಿದಾರರು ನೇರವಾಗಿ ಪೂರೈಕೆದಾರರನ್ನು ಸಂಪರ್ಕಿಸಬೇಕು.
*****
(Release ID: 2071360)
Visitor Counter : 15