ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

“ಭಾರತ್ ಗೋಧಿ ಹಿಟ್ಟು ಮತ್ತು ಭಾರತ್ ಅಕ್ಕಿ” ಯ ಚಿಲ್ಲರೆ ಮಾರಾಟ ಹಂತ - II ರನ್ನು ಪ್ರಾರಂಭಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ


ಹಂತ - II ರ ಪ್ರಾರಂಭಿಕ ಹಂತದಲ್ಲಿ, 3.69 ಎಲ್.ಎಂ.ಟಿ ಗೋಧಿ ಮತ್ತು 2.91 ಎಲ್.ಎಂ.ಟಿ ಅಕ್ಕಿ ಚಿಲ್ಲರೆ ಮಾರಾಟಕ್ಕೆ ಲಭ್ಯವಾಯಿತು

ರಿಯಾಯಿತಿ ಬೆಲೆಯಲ್ಲಿ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ಬದ್ಧತೆಗೆ ಈ ಉಪಕ್ರಮವು ದೃಢೀಕರಣವಾಗಿದೆ: ಶ್ರೀ ಪ್ರಲ್ಹಾದ ಜೋಶಿ

Posted On: 05 NOV 2024 1:26PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಹಾಗೂ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ನವದೆಹಲಿಯಲ್ಲಿ ಎನ್.ಸಿ.ಸಿ ಎಫ್., ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ನ ಚಿಲ್ಲರೆ ಮಾರಾಟ ಮೊಬೈಲ್ ವ್ಯಾನ್ ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಭಾರತ್ ಅಟ್ಟಾ (ಗೋಧಿ ಹಿಟ್ಟು) ಮತ್ತು ಭಾರತ್ ರೈಸ್ ನ ಚಿಲ್ಲರೆ ಮಾರಾಟದ ಹಂತ - II ಕ್ಕೆ ಇಂದು ಚಾಲನೆ ನೀಡಿದರು. 

ಪ್ರತಿ ಕೆಜಿಗೆ ಗರಿಷ್ಟ ಮಾರಾಟ ಬೆಲೆ ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಗೆ ರೂ. 30 ಮತ್ತು ಭಾರತ್  ಅಕ್ಕಿಗೆ ರೂ. 34 ಆಗಿರುತ್ತದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಸಚಿವ ಶ್ರೀ ಜೋಶಿ ಅವರು, ರಿಯಾಯಿತಿ ಬೆಲೆಯಲ್ಲಿ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳ ಲಭ್ಯತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಬದ್ಧತೆಯ ಈ ಉಪಕ್ರಮವು ದೃಢೀಕರಣವಾಗಿದೆ ಎಂದು ಹೇಳಿದರು. ಭಾರತ್ ಬ್ರಾಂಡ್ ನ ಅಡಿಯಲ್ಲಿ ಅಕ್ಕಿ, ಹಿಟ್ಟು ಮತ್ತು ಬೇಳೆಗಳಂತಹ ಮೂಲ ಆಹಾರ ಪದಾರ್ಥಗಳ ಚಿಲ್ಲರೆ ಮಾರಾಟದ ಮೂಲಕ ನೇರ ಮಧ್ಯಸ್ಥಿಕೆಗಳು ಸ್ಥಿರ ಬೆಲೆ ಆಡಳಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಹಂತ - II ರ ಪ್ರಾರಂಭಿಕ ಹಂತದಲ್ಲಿ, 3.69 ಎಲ್.ಎಂ.ಟಿ ಗೋಧಿ ಮತ್ತು 2.91 ಎಲ್.ಎಂ.ಟಿ ಅಕ್ಕಿಯನ್ನು ಚಿಲ್ಲರೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಹಂತ - I ಸಮಯದಲ್ಲಿ, ಸುಮಾರು 15.20 ಎಲ್.ಎಂ.ಟಿ ಭಾರತ್ ಗೋಧಿ ಹಿಟ್ಟು ಮತ್ತು 14.58 ಎಲ್.ಎಂ.ಟಿ ಭಾರತ್ ಅಕ್ಕಿಯನ್ನು ಸಾಮಾನ್ಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯಗೊಳಿಸಲಾಯಿತು.

ಹಂತ-II ರಲ್ಲಿ ಎನ್.ಸಿ.ಸಿ.ಎಫ್., ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮತ್ತು ಇ-ಕಾಮರ್ಸ್ / ಬಿಗ್ ಚೈನ್ ರಿಟೇಲರ್ ಗಳ ಅಂಗಡಿಗಳು ಮತ್ತು ಮೊಬೈಲ್ ವ್ಯಾನ್ ಗಳಲ್ಲಿ ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಮತ್ತು ಭಾರತ್ ಅಕ್ಕಿ ಲಭ್ಯವಿರುತ್ತದೆ. ‘ಭಾರತ್’ ಬ್ರಾಂಡ್ ಗೋಧಿ ಹಿಟ್ಟು ಹಾಗೂ ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಪಂಜಾಬ್ ನಲ್ಲಿ ಭತ್ತದ ಸಂಗ್ರಹಣೆಯನ್ನು ನವೀಕರಿಸಿದ ಕೇಂದ್ರ ಸಚಿವರು, ಪಂಜಾಬ್ ನಲ್ಲಿ 184 ಎಲ್.ಎಂ.ಟಿ ಗುರಿಯ ಸಂಗ್ರಹಣೆ ಅಂದಾಜನ್ನು ಸಾಧಿಸಲು ಮತ್ತು ರೈತರಿಂದ ಮಂಡಿಗಳಿಗೆ ತರುವ ಪ್ರತಿಯೊಂದು ಧಾನ್ಯವನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. 4ನೇ ನವೆಂಬರ್ 2024 ರಂತೆ, ಒಟ್ಟು 104.63 ಎಲ್.ಎಂ.ಟಿ ಭತ್ತವು ಪಂಜಾಬ್ ಮಂಡಿಗಳಿಗೆ ಬಂದಿದೆ, ಅದರಲ್ಲಿ 98.42 ಎಲ್.ಎಂ.ಟಿ ಅನ್ನು ರಾಜ್ಯ ವಿತರಣಾ ಸಂಸ್ಥೆಗಳು ಮತ್ತು ಎಫ್ ಸಿ ಐ ಖರೀದಿಸಿದೆ. ಗ್ರೇಡ್ 'ಎ' ಭತ್ತಕ್ಕಾಗಿ ಭಾರತ ಸರ್ಕಾರ ನಿರ್ಧರಿಸಿದಂತೆ ಭತ್ತವನ್ನು ಕನಿಷ್ಟ ಮಾರಾಟ ಬೆಲೆ @ Rs 2320/- ನಲ್ಲಿ ಖರೀದಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಕೆ.ಎಂ.ಎಸ್ 2024-25 ರಲ್ಲಿ ಇಲ್ಲಿಯವರೆಗೆ ಭಾರತ ಸರ್ಕಾರವು ಖರೀದಿಸಿದ ಒಟ್ಟು ಭತ್ತವು ರೂ. 20557 ಕೋಟಿ ಮೌಲ್ಯ ಹೊಂದಿದ್ದು, ಇದರಿಂದ 5.38 ಲಕ್ಷ ರೈತರಿಗೆ ಲಾಭವಾಗಿದೆ ಮತ್ತು ಎಂ ಎಸ್ ಪಿ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ.

 

*****
 


(Release ID: 2070849) Visitor Counter : 41