ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1 ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಗೆ ಪೂರ್ವಭಾವಿಯಾಗಿ ವೇಗವನ್ನು ಪಡೆಯುತ್ತಿದೆ


ಕ್ರಿಯೇಟರ್ ಎಕಾನಮಿಗೆ ಸೇರಿಕೊಳ್ಳಿ: ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಗಾಗಿ ಈಗಲೇ ನೋಂದಾಯಿಸಿಕೊಳ್ಳಿ ಮತ್ತು ಜಾಗತಿಕ ವೇದಿಕೆಯಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ದೇಶಾದ್ಯಂತ 10,000 ನೋಂದಣಿಗಳನ್ನು ದಾಟಿದೆ, ಇದು ದೇಶಾದ್ಯಂತ ಇರುವ ಭಾರಿ ಉತ್ಸಾಹವನ್ನು ಸೂಚಿಸುತ್ತದೆ

ರಾಷ್ಟ್ರವ್ಯಾಪಿ ರೋಡ್ ಶೋಗಳು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಗಾಗಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತವೆ, ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯಮ ವೃತ್ತಿಪರರನ್ನು ಸಬಲೀಕರಣಗೊಳಿಸುತ್ತವೆ

Posted On: 04 NOV 2024 4:38PM by PIB Bengaluru

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆಯ (ವೇವ್ಸ್) ಪೂರ್ವಭಾವಿಯಾಗಿ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1 (ಸಿಐಸಿ) ಗೆ ಅಭೂತಪೂರ್ವ ಪ್ರತಿಕ್ರಿಯೆಯನ್ನು ಲಭಿಸಿರುವುದನ್ನು ಘೋಷಿಸಲು ಸಂತೋಷಪಡುತ್ತದೆ. ವೇವ್ಸ್ ಧ್ಯೇಯವನ್ನು ಆಧರಿಸಿ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೃಜನಶೀಲ ಅಭಿವ್ಯಕ್ತಿ ಮತ್ತು ನಾವೀನ್ಯತೆಗೆ ವೇದಿಕೆಯನ್ನು ಒದಗಿಸುವ ಮೂಲಕ ಚಿಂತನಾಕ್ರಮದ ದೃಷ್ಟಿಕೋನಕ್ಕೆ ಜೀವ ತುಂಬುತ್ತದೆ.

ಸಿಐಸಿ ಭಾರತದ ಸೃಷ್ಟಿಕರ್ತರ ಆರ್ಥಿಕತೆಯ ಮೇಲೆ ಆಳವಾದ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ, ವಿಷಯ ಸೃಷ್ಟಿಕರ್ತರು ಮತ್ತು ನಾವೀನ್ಯಕಾರರನ್ನು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಅವರ ಕೌಶಲ್ಯಗಳನ್ನು ಹಣಗಳಿಸಲು ಮತ್ತು ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಸಬಲೀಕರಣಗೊಳಿಸುತ್ತದೆ. ಇದು ಜಾಗತಿಕವಾಗಿ ಭಾರತದ ಮೃದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಭಾರತದ ಉದಯೋನ್ಮುಖ ಸೃಜನಶೀಲ ಪ್ರತಿಭೆಗಳಿಗೆ ಉಡಾವಣಾ ಪ್ಯಾಡ್ (ವೇದಿಕೆಯಾಗಿ) ಆಗಿ ಕಾರ್ಯನಿರ್ವಹಿಸುತ್ತದೆ, ಅವರನ್ನು ಜಾಗತಿಕ ಮನ್ನಣೆಯತ್ತ ಕೊಂಡೊಯ್ಯುತ್ತದೆ.

ಎಲ್ಲಾ ಸವಾಲುಗಳಿಗೆ ನೋಂದಣಿಗಳು ವೇವ್ಸ್ ವೆಬ್‌ಸೈಟ್ ಲ್ಲಿ ತೆರೆಯಲ್ಪಟ್ಟಿವೆ: https://wavesindia.org/challenges-2025

ಸಿಐಸಿ: ನಾವೀನ್ಯತೆಗಾಗಿ ವೈವಿಧ್ಯಮಯ ವೇದಿಕೆ

2024ರ ಆಗಸ್ಟ್ 22 ರಂದು ಪ್ರಾರಂಭವಾದ ಸಿಐಸಿ ದೇಶಾದ್ಯಂತ ಮತ್ತು ಜಾಗತಿಕವಾಗಿ ಗಮನಾರ್ಹ ಆಕರ್ಷಣೆಯನ್ನು ಗಳಿಸಿದೆ, ಟ್ರೂತ್ ಟೆಲ್ ಹ್ಯಾಕಥಾನ್, ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ಶಿಪ್, ಎಸ್ಪೋರ್ಟ್ಸ್ ಟೂರ್ನಮೆಂಟ್, ಟ್ರೈಲರ್ ಮೇಕಿಂಗ್ ಸ್ಪರ್ಧೆ, ಥೀಮ್ ಮ್ಯೂಸಿಕ್ ಸ್ಪರ್ಧೆ, ಎಕ್ಸ್ಆರ್ ಕ್ರಿಯೇಟರ್ ಹ್ಯಾಕಥಾನ್, ಎ.ಐ. ಅವತಾರ್ ಕ್ರಿಯೇಟರ್ ಚಾಲೆಂಜ್, ಅನಿಮೆ ಚಾಲೆಂಜ್ ಸೇರಿದಂತೆ 27 ಸವಾಲುಗಳು ಇದರಲ್ಲಿವೆ.

ಸವಾಲುಗಳು ಮಾಧ್ಯಮ ಮತ್ತು ಮನರಂಜನಾ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ, ವಿಶೇಷವಾಗಿ ಪ್ರಸಾರ, ಜಾಹೀರಾತು, ಸಂಗೀತ, ಎವಿಜಿಸಿ-ಎಕ್ಸ್, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ, ಚಲನಚಿತ್ರಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಇತರ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿವೆ.

 

ಸಿಐಸಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ

ರಾಷ್ಟ್ರವ್ಯಾಪಿ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು, ಕೈಗಾರಿಕಾ ಸಂಘಗಳ ಸಹಯೋಗದೊಂದಿಗೆ ಹಲವಾರು ಯಶಸ್ವಿ ರೋಡ್ ಶೋಗಳನ್ನು ನಡೆಸಲಾಗಿದೆ. 2024ರ ಸೆಪ್ಟೆಂಬರ್ 20 ರಂದು ಹೈದರಾಬಾದಿನಲ್ಲಿ, ಇಂಡಿಯಾ ಗೇಮ್ ಡೆವಲಪರ್ ಕಾನ್ಫರೆನ್ಸ್ (ಐಜಿಡಿಸಿ) ಬೆಂಬಲದೊಂದಿಗೆ 50 ಉದ್ಯಮ ವೃತ್ತಿಪರರು ಸೇರಿದಂತೆ 250 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸೆಪ್ಟೆಂಬರ್ 28 ರಂದು ನಡೆದ ಚೆನ್ನೈ ವೇಗಾಸ್ ಫೆಸ್ಟ್ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿತು, ಎಫ್ಐಸಿಸಿಐ ಸಹಯೋಗದೊಂದಿಗೆ ಎವಿಜಿಸಿ ವಲಯದ ಮಹತ್ವವನ್ನು ಒತ್ತಿಹೇಳಿತು. ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಂಇಎಐ) ಮತ್ತು ಎಬಿಎಐ ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಜಂಟಿಯಾಗಿ ಆಯೋಜಿಸಿದ್ದ ಅಕ್ಟೋಬರ್ 5 ರಂದು ನಡೆದ ಬೆಂಗಳೂರು ರೋಡ್ ಶೋ 40-50 ಉದ್ಯಮದ ಮುಖಂಡರು ಮತ್ತು ಸಂಘಗಳ ನಡುವೆ ಮೌಲ್ಯಯುತ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತದಾದ್ಯಂತ ಮುಂಬರುವ ಮಾಧ್ಯಮ ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿದ್ದು, ವ್ಯಾಪಕ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವ ಮೂಲಕ ಮತ್ತು ಭಾರತದ ಸೃಜನಶೀಲ ಉದ್ಯಮಗಳಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಸೀಸನ್ -1 ಮತ್ತು ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ.

ಇಲ್ಲಿಯವರೆಗೆ, ಸವಾಲುಗಳಿಗೆ ಸಂಬಂಧಿಸಿ 10,000 ಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕೃತವಾಗಿವೆ. ಸಂಖ್ಯೆಗಳು ಪ್ರತಿದಿನ ಹೆಚ್ಚುತ್ತಿವೆ. ಇದರ ಯಶಸ್ಸಿನ ಆಧಾರದ ಮೇಲೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತದಾದ್ಯಂತ ಹಲವಾರು ರೋಡ್ ಶೋಗಳನ್ನು ಆಯೋಜಿಸಲು ಯೋಜಿಸುತ್ತಿದೆ, ಯುವಜನರು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಸ್ಥಾಪಿಸಿದೆ. ಈ ಔಟ್ರೀಚ್ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಸೃಷ್ಟಿಕರ್ತರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತವೆ. ಡಿಜಿಟಲ್ ಮಾಧ್ಯಮ, ಎವಿಜಿಸಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಸೃಜನಶೀಲ ಕ್ಷೇತ್ರಗಳ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ವೇವ್ಸ್ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲು, ಸಚಿವಾಲಯವು ವ್ಯಾಪಕವಾದ ಔಟ್ರೀಚ್ ಅಭಿಯಾನವನ್ನು ಯೋಜಿಸುತ್ತಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮ ಸಹಯೋಗಗಳು, ಭಾರತದಾದ್ಯಂತ ಸರಿಸುಮಾರು 28 ಸ್ಥಳಗಳಲ್ಲಿ ದೇಶೀಯ ರೋಡ್ ಶೋಗಳು ಮತ್ತು ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಕೊರಿಯಾ ಮತ್ತು ಜಪಾನ್ ನಲ್ಲಿ ಅಂತಾರಾಷ್ಟ್ರೀಯ ರೋಡ್ ಶೋಗಳು ಸೇರಿವೆ. ಈ ಕಾರ್ಯಕ್ರಮಗಳು ಸಹಯೋಗವನ್ನು ಉತ್ತೇಜಿಸುತ್ತವೆ, ಉತ್ಸಾಹವನ್ನು ಸೃಷ್ಟಿಸುತ್ತವೆ ಮತ್ತು ಜಾಗತಿಕ ಭಾಗವಹಿಸುವಿಕೆಯನ್ನು ಆಕರ್ಷಿಸುತ್ತವೆ.

 

*****


(Release ID: 2070725) Visitor Counter : 21