ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅನ್ಯರ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಮನಿ ಲಾಂಡರಿಂಗ್ ಅನ್ನು ವ್ಯವಸ್ಥಿತ ಸೇವೆಯಾಗಿ ಮಾಡುವ ಟ್ರಾನ್ಸ್‌ನ್ಯಾಷನಲ್ ಆರ್ಗನೈಸ್ಡ್ ಸೈಬರ್ ಕ್ರಿಮಿನಲ್‌ ಗಳ ಅಕ್ರಮ ಪಾವತಿ ಗೇಟ್‌ವೇ ಕಾರ್ಯಚಟುವಟಿಕೆಗಳ ವಿರುದ್ಧ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಕ್ರೈಮ್ ಕೋ ಆರ್ಡಿನೇಶನ್ ಸೆಂಟರ್ (ಐ4ಸಿ) ಎಚ್ಚರಿಕೆ ನೀಡಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲಯ ಸೈಬರ್ ಸುರಕ್ಷಿತ ಭಾರತವನ್ನು ರಚಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ

ಟ್ರಾನ್ಸ್-ನ್ಯಾಷನಲ್ ಅಪರಾಧಿಗಳು ಅನ್ಯರ / ಬಾಡಿಗೆ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅಕ್ರಮ ಡಿಜಿಟಲ್ ಪಾವತಿ ಗೇಟ್‌ವೇಗಳನ್ನು ರಚಿಸಿದ್ದಾರೆ ಎಂದು ಗುಜರಾತ್ ಪೋಲೀಸ್ ಮತ್ತು ಆಂಧ್ರಪ್ರದೇಶ ಪೊಲೀಸರ ರಾಷ್ಟ್ರವ್ಯಾಪಿ ದಾಳಿಗಳು ಗುರುತಿಸಿವೆ.

ಅನ್ಯರ / ಬಾಡಿಗೆ ಬ್ಯಾಂಕ್ ಖಾತೆಗಳ ಮೂಲಕ ರೂಪಿಸುವ ಈ ಅಕ್ರಮ ಮೂಲಸೌಕರ್ಯಗಳು ಮನಿ ಲಾಂಡರಿಂಗ್ ಅನ್ನು ಸೇವೆಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ, ಸೈಬರ್ ಅಪರಾಧಗಳ ಬಹು ಸ್ವಭಾವದ ಆದಾಯವನ್ನು ಪಾವತಿ ಮಾಡಲು ಬಳಸಲಾಗುತ್ತದೆ.

ತಮ್ಮ ಬ್ಯಾಂಕ್ ಖಾತೆಗಳನ್ನು / ಕಂಪನಿ ನೋಂದಣಿ ಪ್ರಮಾಣಪತ್ರ / ಉದ್ಯಮ ಆಧಾರ್ ನೋಂದಣಿ ಪ್ರಮಾಣಪತ್ರವನ್ನು ಯಾರಿಗೂ ಅನ್ಯರಿಗೆ ಬಳಕೆಗಾಗಿ ನೀಡದಂತೆ/ ಮಾರಾಟ ಮಾಡದಂತೆ / ಬಾಡಿಗೆಗೆ ನೀಡದಂತೆ ಎಲ್ಲಾ ನಾಗರಿಕರಿಗೂ ಐ4ಸಿ ಸಲಹೆ ನೀಡುತ್ತದೆ

ಅಂತಹ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಅಕ್ರಮ ಹಣವು ಬಂಧನವೂ ಸೇರಿದಂತೆ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು

ಅಕ್ರಮ ಪಾವತಿ ಗೇಟ್‌ವೇಗಳನ್ನು ಸ್ಥಾಪಿಸಲು ಬಳಸಲಾಗುವ ಬ್ಯಾಂಕ್ ಖಾತೆಗಳ ದುರುಪಯೋಗವನ್ನು ಗುರುತಿಸಲು ಬ್ಯಾಂಕ್‌ಗಳು ಅಗತ್ಯ ಪರಿಶೀಲನೆಗಳನ್ನು ಮಾಡಬಹುದು

ಜನರು ಯಾವುದೇ ಸೈಬರ್ ಕ್ರೈಮ್ ಅನ್ನು ಅರಿತ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಅಥವಾ www.cybercrime.gov.in ನಲ್ಲಿ ವರದಿ ಮಾಡಬೇಕು ಮತ್ತು ಮಾಹಿತಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ “ಸೈಬರ್‌ ದೋಸ್ತ್” ಚಾನಲ್‌ಗಳನ್ನು ವೀಕ್ಷಿಸಬಹುದು.

Posted On: 28 OCT 2024 7:49PM by PIB Bengaluru

ಮನಿ ಲಾಂಡರಿಂಗ್ ಅನ್ನು ಸೇವೆಯಾಗಿ ಸುಗಮಗೊಳಿಸುವ ಟ್ರಾನ್ಸ್‌ನ್ಯಾಷನಲ್ ಆರ್ಗನೈಸ್ಡ್ ಸೈಬರ್ ಕ್ರಿಮಿನಲ್‌ಗಳು ಅನ್ಯರ / ಬಾಡಿಗೆ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ರಚಿಸಲಾದ ಅಕ್ರಮ ಪಾವತಿ ಗೇಟ್‌ವೇಗಳ ವಿರುದ್ಧ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (ಐ4ಸಿ) ನೂತನ ನಿಯಂತ್ರಣ ಕ್ರಮ ಪದ್ಧತಿಯನ್ನು ಹೊರಡಿಸಿದೆ. ಗುಜರಾತ್ ಪೋಲೀಸ್ (ಎಫ್‌ಐಆರ್ 0113/2024) ಮತ್ತು ಆಂಧ್ರಪ್ರದೇಶ ಪೊಲೀಸರು (ಎಫ್‌ಐಆರ್ 310/2024) ನಡೆಸಿದ ಇತ್ತೀಚಿನ ರಾಷ್ಟ್ರವ್ಯಾಪಿ ದಾಳಿಗಳು ಟ್ರಾನ್ಸ್-ನ್ಯಾಷನಲ್ ಕ್ರಿಮಿನಲ್‌ಗಳು ಅನ್ಯರ/ಬಾಡಿಗೆ್ಯ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಅಕ್ರಮ ಡಿಜಿಟಲ್ ಪಾವತಿ ಗೇಟ್‌ವೇಗಳನ್ನು ರಚಿಸಿದ್ದಾರೆ ಎಂದು ಬಹಿರಂಗಪಡಿಸಿವೆ. ಅನ್ಯರ/ಬಾಡಿಗೆ್ಯ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಮಾಡುವ ಈ ಅಕ್ರಮ ಮೂಲಸೌಕರ್ಯಗಳು ಮನಿ ಲಾಂಡರಿಂಗ್ ಅನ್ನು ಒಂದು ಸೇವೆಯಾಗಿ ಸುಗಮಗೊಳಿಸುವುದು ಮಾತ್ರವಲ್ಲದೆ, ಸೈಬರ್ ಅಪರಾಧಗಳ ಬಹು ಸ್ವರೂಪದ ಆದಾಯಗಳ ಪಾವತಿ ವ್ಯವಸ್ಥೆಯಾಗಿ ಮಾಡಲು ಬಳಸಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಎಲ್ಲಾ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ಸೈಬರ್ ಸುರಕ್ಷಿತ ಭಾರತವನ್ನು ರಚಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ರಾಜ್ಯ ಪೊಲೀಸ್ ಏಜೆನ್ಸಿಗಳಿಂದ ಪಡೆದ ಮಾಹಿತಿ ಮತ್ತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ವಿಶ್ಲೇಷಣೆಯ ಪ್ರಕಾರ, ಈ ಕೆಳಗಿನ ವಿವರಗಳನ್ನು ಗುರುತಿಸಲಾಗಿದೆ:

I. ಚಾಲ್ತಿ ಖಾತೆಗಳು ಮತ್ತು ಉಳಿತಾಯ ಖಾತೆಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪರಿಶೀಲಿಸಲಾಗಿದೆ; ಮುಖ್ಯವಾಗಿ ಟೆಲಿಗ್ರಾಮ್ ಮತ್ತು ಫೇಸ್‌ಬುಕ್‌ನಿಂದ. ಈ ಖಾತೆಗಳು ನಕಲಿ ಕಂಪನಿಗಳು / ಎಂಟರ್‌ಪ್ರೈಸ್ ಅಥವಾ ವ್ಯಕ್ತಿಗಳಿಗೆ ಸೇರಿವೆ.
II. ಈ ಅನ್ಯರ/ನಕಲಿ/ಬಾಡಿಗೆ ಖಾತೆಗಳನ್ನು ವಿದೇಶದಿಂದ ದೂರದಿಂದಲೇ ನಿಯಂತ್ರಿಸಲಾಗುತ್ತದೆ.

• III. ನಕಲಿ ಹೂಡಿಕೆ ಹಗರಣ ಸೈಟ್‌ಗಳು, ಕಡಲಾಚೆಯ ಬೆಟ್ಟಿಂಗ್ ಮತ್ತು ಜೂಜಿನ ವೆಬ್‌ಸೈಟ್‌ಗಳು, ನಕಲಿ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು ಮುಂತಾದ ಅಕ್ರಮ ಪ್ಲಾಟ್‌ಫಾರ್ಮ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸಲು ಕ್ರಿಮಿನಲ್ ಸಿಂಡಿಕೇಟ್‌ ಗಳಿಗೆ ಈ ಅನ್ಯರ/ನಕಲಿ/ಬಾಡಿಗೆ ಖಾತೆಗಳನ್ನು ಬಳಸಿಕೊಂಡು ಅಕ್ರಮ ಪಾವತಿ ಗೇಟ್‌ವೇ ವ್ಯವಸ್ಥೆಗಳನ್ನು ರಚಿಸಲಾಗುತ್ತದೆ.

• IV. ಅಪರಾಧದ ಆದಾಯವನ್ನು ಸ್ವೀಕರಿಸಿದ ತಕ್ಷಣ , ಆ ಹಣವನ್ನು ತಕ್ಷಣವೇ ಮತ್ತೊಂದು ಮರೆಮಾಚಿದ ಖಾತೆಗೆ ವರ್ಗಾವಣೆ /ಲೇಯರ್ ಮಾಡಲಾಗುತ್ತದೆ. ಬ್ಯಾಂಕ್‌ ಗಳು ನೀಡುವ ಬೃಹತ್ ಪಾವತಿ ಸೌಲಭ್ಯವನ್ನು ಇದಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ

ಕಾರ್ಯಾಚರಣೆಯ ಸಮಯದಲ್ಲಿ ಗುರುತಿಸಲಾದ ಕೆಲವು ಪಾವತಿ ಗೇಟ್‌ವೇಗಳೆಂದರೆ ಪೀಸ್ ಪೇ ಆರ್.ಟಿ.ಎಕ್ಸ್.‌ ಪೇ, ಪೊಕ್ಕೊ ಪೇ, ‌ ಆರ್.ಪಿ. ಪೇ ಇತ್ಯಾದಿಗಳಾಗಿವೆ. ಈ ಗೇಟ್‌ವೇಗಳು ಮನಿ ಲಾಂಡರಿಂಗ್ ಅನ್ನು ಸೇವೆಯಾಗಿ ಒದಗಿಸುತ್ತವೆ ಮತ್ತು ವಿದೇಶಿ ಪ್ರಜೆಗಳಿಂದ ಇವುಗಳು ನಿರ್ವಹಿಸಲ್ಪಡುತ್ತವೆ.

ತಮ್ಮ ಬ್ಯಾಂಕ್ ಖಾತೆಗಳು/ಕಂಪನಿ ನೋಂದಣಿ ಪ್ರಮಾಣಪತ್ರ/ಉದ್ಯಮ್ ಆಧಾರ್ ನೋಂದಣಿ ಪ್ರಮಾಣಪತ್ರವನ್ನು ಬಳಕೆಗಾಗಿ ಯಾರಿಗೂ ನೀಡದಂತೆ / ಮಾರಾಟ ಮಾಡದಂತೆ/ಬಾಡಿಗೆ ಮಾಡದಂತೆ ಎಲ್ಲಾ ನಾಗರಿಕರಿಗೆ ಐ4ಸಿ ಸಲಹೆ ನೀಡಿದೆ. ಅಂತಹ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಅಕ್ರಮ ಹಣವು ಬಂಧನ ಸೇರಿದಂತೆ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು. ಅಕ್ರಮ ಪಾವತಿ ಗೇಟ್‌ವೇಗಳನ್ನು ಸ್ಥಾಪಿಸಲು ಬಳಸುವ ಬ್ಯಾಂಕ್ ಖಾತೆಗಳ ದುರುಪಯೋಗವನ್ನು ಗುರುತಿಸಲು ಬ್ಯಾಂಕ್‌ಗಳು ಪರಿಶೀಲನಾ ವ್ಯವಸ್ಥೆಗಳನ್ನು ನಿಯೋಜಿಸಬಹುದು. ನಾಗರಿಕರು ಯಾವುದೇ ಸೈಬರ್ ಕ್ರೈಮ್ ಅನ್ನು ಅರಿತ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಅಥವಾ www.cybercrime.gov.in ನಲ್ಲಿ ವರದಿ ಮಾಡಬೇಕು ಮತ್ತು ಸಾಮಾಜಿಕ ಮಾಧ್ಯಮದಲ್ಲಿ “ಸೈಬರ್‌ ದೋಸ್ತ್‌ ” ಚಾನಲ್‌ಗಳು / ಖಾತೆಯನ್ನು ಬಳಸಿ, ಅನುಸರಿಸಬೇಕು.
 

*****


(Release ID: 2069088) Visitor Counter : 33