ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರೀಯ ಗಾಥೆಯಲ್ಲಿ ಈಶಾನ್ಯ ಭಾಗ ಇದೀಗ ಕೇಂದ್ರ ಸ್ಥಾನದಲ್ಲಿದೆ: ಒತ್ತಿ ಹೇಳಿದ ಉಪರಾಷ್ಟ್ರಪತಿಯವರು


ರಾಷ್ಟ್ರೀಯತೆ, ಆಧುನಿಕತೆ ಮತ್ತು ತಾಂತ್ರಿಕ ಅಭಿವೃದ್ಧಿ ಜೊತೆಗೆ ಆಧ್ಯಾತ್ಮಿಕತೆಯು ದೇಶದ ಪರಿವರ್ತನೆಗೆ ಅಗತ್ಯ: ಉಪರಾಷ್ಟ್ರಪತಿಯವರು

ಪ್ರೀತಿ, ಸಹಾನುಭೂತಿ ಮತ್ತು ಜವಾಬ್ದಾರಿಯಂತಹ ಅಂತರ್ಗತ ಗುಣಗಳನ್ನು ಆಧ್ಯಾತ್ಮಿಕತೆಯು ಹೊಂದಿದೆ ಎಂದು ಹೇಳಿದ ಉಪರಾಷ್ಟ್ರಪತಿಯವರು

ಹಿಂದೆಂದೂ ಊಹೆ ಮಾಡದ ಪೂರ್ವೋದಯದ ಹಂತ ಇದೀಗ ಅನಾವರಣಗೊಳ್ಳುತ್ತಿದೆ: ಉಪರಾಷ್ಟ್ರಪತಿಯವರು

ಭಾರತದ ಭೋಗೋಳಿಕತೆಯು ಆಧ್ಯಾತ್ಮಿಕ ಕೇಂದ್ರಗಳಿಂದ ಕೂಡಿದೆ : ಉಪರಾಷ್ಟ್ರಪತಿಯವರು

ದೈವಿಕ ಅನುಗ್ರಹದ ಸಾರವನ್ನು ಕೃಷ್ಣಗುರೂಜೀ ಸಾಕಾರಗೊಳಿಸಿದ್ದಾರೆ ಎಂದು ಹೇಳಿದ ಉಪರಾಷ್ಟ್ರಪತಿಯವರು

Posted On: 27 OCT 2024 6:15PM by PIB Bengaluru

“ರಾಷ್ಟ್ರೀಯ ಗಾಥೆಯಲ್ಲಿ ಈಶಾನ್ಯ ಭಾಗ ಇದೀಗ ಕೇಂದ್ರ ಸ್ಥಾನದಲ್ಲಿದೆ” ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ. ಭಾರತದ ರಾಷ್ಟ್ರೀಯ ನಿರೂಪಣೆಯಲ್ಲಿ ಈಶಾನ್ಯ ಪ್ರದೇಶದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಹಂತ ಹಂತವಾಗಿ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಈ ನೆಲದ ಜನತೆಯೂ ಸಹ ಹಿಂದೆಂದೂ ಊಹೆ ಮಾಡದ ಪೂರ್ವೋದಯದ ಹಂತ ಇದೀಗ ಅನಾವರಣಗೊಳ್ಳುತ್ತಿದೆ. ಈಶಾನ್ಯ ಭಾಗದ ಪರಿವರ್ತನೆ ಎಲ್ಲರನ್ನೊಳಗೊಂಡ ಭಾರತದ ಪ್ರಗತಿಯ ಚಾಲನಾ ಶಕ್ತಿಯು ಶಾಸನವಾಗಿದೆ ಎಂದು ಅವರು ಹೇಳಿದರು. “ದಶಕಗಳಿಂದ ಭಾಗವು ಅಭಿವೃದ್ದಿ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸುತ್ತಿತ್ತು. ಆದರೆ ಇಂದು ಸ್ಥಳ ನಿಜವಾಗಿಯೂ ಆದ್ಯತೆಯ ಪ್ರದೇಶವಾಗಿದೆ” ಎಂದು ಇಲ್ಲಿನ ಬೆಳವಣಿಗೆಗಳನ್ನು ಗಮನಿಸಿರುವುದಾಗಿ ಹೇಳಿದರು. ಪ್ರತಿಯೊಂದು ದಿನವೂ ತ್ವರಿತವಾಗಿ ಭಾಗ ಅಭಿವೃದ್ಧಿಯಾಗುತ್ತಿದ್ದು, ಇದು ಭೌತಿಕವಾಗಿ ಪ್ರತಿಫಲಿಸುತ್ತಿದೆ ಎಂದರು.

ಗುವಾಹತಿಯ ಪಶು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಕೃಷ್ಣಗುರು ಅಂತಾರಾಷ್ಟ್ರೀಯ ಧಾರ್ಮಿಕ ಯುವ ಸೋಸೈಟಿಯ 21 ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, “ದೇಶದ ಪರಿವರ್ತನೆಗಾಗಿ ನೀವು ಯಾವುದೇ ಸಂದರ್ಭದಲ್ಲೂ ಧಾರ್ಮಿಕತೆಯಿಂದ ದೂರ ಇರಬಾರದು ಎಂಬ ತತ್ವವನ್ನು ಅಳವಡಿಸಿಕೊಂಡಲ್ಲಿ ಅದು ನಿಮಗೆ ಸಹಾಯ ಮಾಡುತ್ತದೆ. ಕೃಷ್ಣಗುರೂಜಿ ಅವರು ಧಾರ್ಮಿಕತೆಯ ಹಾದಿ ತೋರಿದ್ದಾರೆ ಮತ್ತು ಮಾರ್ಗದಿಂದ ದೂರ ಸರಿಯುವುದು ತಪ್ಪಾಗುತ್ತದೆ. ಈ ಹಾದಿಯಲ್ಲಿ ರಾಷ್ಟ್ರೀಯತೆ, ಆಧುನಿಕತೆ ಮತ್ತು ತಾಂತ್ರಿಕ ಅಭಿವೃದ್ಧಿ ಜೊತೆಗೆ ಆಧ್ಯಾತ್ಮಿಕತೆಯು ದೇಶದ ಪರಿವರ್ತನೆಗೆ ಅಗತ್ಯ ಎಂದುನ್ನು ಮನಗಾಣಬೇಕು. ಈ ಪ್ರಸ್ತಾಪಿಸಿರುವ ಮೂರು ವಿಚಾರಗಳು ಹಲವಾರು ವರ್ಷಗಳ ಹಿಂದೆಯೇ ದಾಖಲಾಗಿರುವಂತಹದ್ದು. “ವಿಶ್ವಗುರು ಎಂಬುದು ಜಗತ್ತಿನ ಪರಮೋಚ್ಛ ಆರ್ಥಿಕ ಶಕ್ತಿಯಾಗಿದ್ದು, ಇದನ್ನು ಯಾರೊಬ್ಬರೂ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಇದು ನಮ್ಮ ಭುಜಗಳ ಮೇಲಿರುತ್ತದೆ” ಎಂದು ಹೇಳಿದರು.

ಕೃಷ್ಣಗುರೂಜಿ ಅವರ ಬೋಧನೆಗಳ ಪರಿಣಾಮಗಳನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, "ಕೃಷ್ಣಗುರೂಜೀ ದೈವಿಕ ಅನುಗ್ರಹದ ಸಾರವನ್ನು ಸಾಕಾರಗೊಳಿಸುತ್ತಾರೆ, ಅವರ ಪ್ರೀತಿ, ಸೇವೆ ಮತ್ತು ಮಾನವೀಯತೆಯ ಬೋಧನೆಗಳಿಂದ ಅವರು ಭಕ್ತರ ಹೃದಯಗಳನ್ನು ಬೆಳಗಿಸುತ್ತಾರೆ." "ನಿಮ್ಮನ್ನು ಮೀರಿ ಯೋಚಿಸಿ, ಸಮುದಾಯಕ್ಕಾಗಿ ಯೋಚಿಸಿ, ರಾಷ್ಟ್ರಕ್ಕಾಗಿ ಯೋಚಿಸಿ" ಎಂದು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದ ಕೃಷ್ಣಗುರೂಜಿಯವರ ಬೋಧನೆಗಳನ್ನು ಉಪರಾಷ್ಟ್ರಪತಿಯವರು ಮತ್ತಷ್ಟು ಒತ್ತಿ ಹೇಳಿದರು. ಭಾರತವು ಒಂದು ವಿಶಿಷ್ಟ ದೇಶವಾಗಿದೆ, "ಇಲ್ಲಿನ ಭೌಗೋಳಿಕತೆಯು ಆಧ್ಯಾತ್ಮಿಕತೆಯ ಕೇಂದ್ರಗಳಿಂದ ಕೂಡಿದೆ" ಎಂದು ಅವರು ಹೇಳಿದರು. ಇದು ರಾಷ್ಟ್ರದ ಸಹಾನುಭೂತಿ, ಏಕತೆ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಸಮರ್ಪಣೆಯ ಪರಂಪರೆಯನ್ನು ಬಲಪಡಿಸುತ್ತದೆ ಎಂದರು.

ಧಾರ್ಮಿಕತೆಯ ಅಂತರ್ಗತ ಗುಣಗಳನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ಸೌಹಾರ್ದತೆ ಮತ್ತು ನ್ಯಾಯದಂತಹ ಗುಣಗಳನ್ನು ಉತ್ತೇಜಿಸುವಂತೆ ಒತ್ತಾಯಿಸಿದರು. “ಧಾರ್ಮಿಕತೆ ಎಂಬುದು ಒಳಗಿಂದಲೇ ನಿರ್ಮಾಣವಾದ ಗುಣಗಳು ಎಂಬುದನ್ನು ನನ್ನ ಸ್ನೇಹಿತರು ಮರೆಯಬಾರದು. ಪ್ರೀತಿ, ಸಹಾನುಭೂತಿ, ತಾಳ್ಮೆ, ಸಹನೆ, ಕ್ಷಮೆ ಮತ್ತು ಜವಾಬ್ದಾರಿಯ ಪ್ರಜ್ಞೆಯ ಮೌಲ್ಯಗಳನ್ನು ಪ್ರಚಾರ ಮಾಡುವಾಗ, ನಾವು ಶಾಂತಿಯುತ ಮತ್ತು ನ್ಯಾಯಯುತ ಜಗತ್ತಿಗೆ ಇಂತಹ ಬೀಜಗಳನ್ನು ಬಿತ್ತುತ್ತೇವೆ ಎಂದರು.

ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಪುಟಿದೇಳುವ ಮತ್ತು ನಿಸ್ವಾರ್ಥ ಸೇವೆಯ ಇತಿಹಾಸವನ್ನು ಉಪರಾಷ್ಟ್ರಪತಿ ವಿಶೇಷವಾಗಿ ಪ್ರಸ್ತಾಪಿಸಿದರು. “ನಮ್ಮ ಇತಿಹಾಸದುದ್ದಕ್ಕೂ, ನಮಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ. ನಮ್ಮ ಮಹಾನ್ ನಾಯಕರು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳು ಯಾವಾಗಲೂ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಬೆಂಬಲಿಸಿದ್ದಾರೆ, ಅದು ಕೋವಿಡ್-19 ಸಾಂಕ್ರಾಮಿಕ, ಭೂಕಂಪ ಅಥವಾ ಇನ್ನಾವುದೇ ವಿಪತ್ತು ಆಗಿರಲಿ, ನಮ್ಮ ದೇವಾಲಯಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳು ಪರಿಹಾರ ನೀಡಲು ಮುಂದೆ ಬಂದಿವೆ" ಎಂದರು.

ಭಾರತದ ಪ್ರಾಚೀನ ಪಠ್ಯದ ಮಹತ್ವವನ್ನು ಪ್ರಸ್ತಾಪಿಸಿದ ಅವರು, “ಈ ಗ್ರಂಥಗಳು – ಅಂದರೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಮತ್ತು ವೇದಗಳು - ನಮಗೆ ಏನನ್ನು ನೆನಪಿಸುತ್ತವೆ?. ಆ ಕ್ರಿಯೆಯು ಉನ್ನತ ಉದ್ದೇಶದಿಂದ ಮಾರ್ಗದರ್ಶಿಸಲ್ಪಡಬೇಕು, ನಮಗೆ ಮಾತ್ರವಲ್ಲದೆ ಇತರರಿಗೆ ಮತ್ತು ನಮ್ಮ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಂದೇಶವು ಇಂದು ಆಳವಾಗಿ ಪ್ರತಿಧ್ವನಿಸುತ್ತದೆ” ಎಂದು ಹೇಳಿದರು.

ಪೂರ್ವ ಭಾಗಕ್ಕೆ ಸಂಬಂಧಿಸಿದ ನಮ್ಮ ಕಳಕಳಿ ನಮ್ಮ ವಿದೇಶಾಂಗ ನೀತಿಯನ್ನು ಎತ್ತರಕ್ಕೆ ಏರಿಸಿದೆ. “ಪೂರ್ವದತ್ತ ನೋಡು ಎಂಬುದು 90 ರ ದಶಕದಲ್ಲಿ ಬಂದ ದೃಷ್ಟಿಕೋನವಾಗಿದ್ದು, ಇದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತ್ತಷ್ಟು ಪರಿಣಾಮಕಾರಿ ಆಯಾಮದೊಂದಿಗೆ ಪೂರ್ವದತ್ತ ನೋಡು-ಪೂರ್ವದತ್ತ ಕಾರ್ಯಗತಗೊಳಿಸು ಎಂದು ಪರಿವರ್ತನೆ ತಂದಿದ್ದಾರೆ. ಇದರ ಅರ್ಥವೆಂದರೆ ಭಾರತ ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಅತ್ಯಂತ ಆಳವಾಗಿ ತೊಡಗಿಕೊಂಡಿದೆ” ಎಂದರು. ಪೂರ್ವದತ್ತ ನೋಡು ನೀತಿಯಿಂದಾಗಿ ಭಾರತ ದಕ್ಷಿಣ ಏಷ್ಯಾ ದೇಶಗಳ ಜೊತೆ ತನ್ನ ಬಾಂಧವ್ಯವನ್ನು ಬಲಗೊಳಿಸಿಕೊಂಡಿದ್ದು, ಇದೇ ರೀತಿ ಈಶಾನ್ಯ ಭಾರತದಲ್ಲಿ ಕಾರ್ಯತಂತ್ರ ಮತ್ತು ಆರ್ಥಿಕವಾಗಿ ಮಹತ್ವವನ್ನು ಹೆಚ್ಚಿಸಿದೆ” ಎಂದರು.

“ಈ ಪೂರ್ವದತ್ತ ನೋಡು – ಪೂರ್ವದತ್ತ ಕಾರ್ಯಗತಗೊಳಿಸು ನೀತಿಯಿಂದಾಗಿ, ನಾವು ಆಗ್ನೇಯ ಏಷ್ಯಾದ ದೇಶಗಳನ್ನು ತಲುಪುತ್ತಿದ್ದೇವೆ, ಇದರಿಂದ ಈಶಾನ್ಯ ಭಾಗ ಪ್ರಾಮುಖ್ಯತೆಯನ್ನು ಗಳಿಸಿದೆ. ಇಂದು, ಈಶಾನ್ಯ ಭಾರತವು ಅವಕಾಶದ ಸ್ಥಳವಾಗುತ್ತಿದೆ, ಈಶಾನ್ಯವನ್ನು ರೋಮಾಂಚಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿ ರೂಪಿಸುವಲ್ಲಿ ನೀತಿಯ ಪರಿವರ್ತಕ ಪಾತ್ರದ ಬಗ್ಗೆ ”ಉಪ ರಾಷ್ಟ್ರಪತಿಯವರು ಒತ್ತಿ ಹೇಳಿದರು.

ಈಶಾನ್ಯ ಭಾಗದ ಜಿಲ್ಲೆಗಳ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವ ಹೆಚ್ಚುತ್ತಿರುವ ಬಗ್ಗೆ ಶ್ರೀ ಧನ್ ಕರ್ ಅವರು ಹೆಮ್ಮೆ ವ್ಯಕ್ತಪಡಿಸಿದರು. “ಈಶಾನ್ಯದ ವಿಶಿಷ್ಟ ಗುರುತು ಮತ್ತು ಸಂಸ್ಕೃತಿಯ ಅಂಗೀಕಾರ ಹೆಚ್ಚುತ್ತಿದೆ. ಇತ್ತೀಚಿಗೆ, ಬಂಗಾಳಿ, ಮರಾಠಿ, ಪಾಲಿ ಮತ್ತು ಪ್ರಾಕೃತದ ಜೊತೆಗೆ ಅಸ್ಸಾಮಿಯನ್ನು ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿ ಗುರುತಿಸುವುದರೊಂದಿಗೆ ದೀರ್ಘಕಾಲದ ಅಗತ್ಯವನ್ನು ಪೂರೈಸಿದ ಹೆಮ್ಮೆಯ ಕ್ಷಣವನ್ನು ನಾವು ನೋಡಿದ್ದೇವೆ ಎಂದರು. 

ಅಸ್ಸಾಂಗೆ ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. "ಈ ಮನ್ನಣೆಯು ಅಸ್ಸಾಂ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ದೇಶೀಯ ವಸ್ತ್ರಗಳನ್ನು ಹಂಚಿಕೊಳ್ಳಲು ಮತ್ತಷ್ಟು ಅನುವು ಮಾಡಿಕೊಡುತ್ತದೆ. ಅದರ ಪ್ರಭಾವ ಮತ್ತು ಸಾಂಸ್ಕೃತಿಕ ಸಂಪತ್ತನ್ನು ದೇಶದಾದ್ಯಂತ ವಿಸ್ತರಿಸುತ್ತದೆ." ಅವರು ಹೇಳಿದರು, "ಈ ಪ್ರದೇಶದ ಅಲೌಕಿಕ ಸೌಂದರ್ಯವು ಆತ್ಮಾವಲೋಕನ ಮತ್ತು ಧ್ಯಾನಕ್ಕೆ ಅನುಕೂಲಕರವಾದ ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ, ಆಧ್ಯಾತ್ಮಿಕತೆಯ ಆಳವಾದ ಪರಿಶೋಧನೆ ಮತ್ತು ಜೀವನದ ಪರಸ್ಪರ ಸಂಬಂಧಕ್ಕಾಗಿ ಹೆಚ್ಚಿನ ಮೆಚ್ಚುಗೆಯನ್ನು ತಾಣ ನೀಡುತ್ತದೆ." ಎಂದರು.

“ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಪ್ರದೇಶಕ್ಕೆ 3.37 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇದು ಕೇವಲ ಸಂಖ್ಯೆಯಲ್ಲ, ರಸ್ತೆಗಳು, ರೈಲ್ವೆ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ಗಣನೀಯ ಪ್ರಗತಿಯಾಗಿದ್ದು, ಇದರೊಂದಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆ ಕಂಡಿದೆ” ಎಂದು ವ್ಯಾಪಕ ಪ್ರಮಾಣದಲ್ಲಿ ಪರಿವರ್ತನೆಯಾಗುತ್ತಿರುವ ಕುರಿತಂತೆ ಅಂಕಿ ಅಂಶಗಳನ್ನು ನೀಡುವ ಮೂಲಕ ಶ್ರೀ ಜಗದೀಪ್ ಧನ್ ಕರ್ ಅವರು ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂನ ಗೌರವಾನ್ವಿತ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ಬಿಟಿಆರ್ ಸಿಇಎಂ ಪ್ರಮೋದ್ ಬೋರೋ, ಭಕ್ತಿಮಾತ್ರಿ ಕುಂತಲ ಪಟೋವರಿಗೌಸಾಮಿ, ಕೃಷ್ಣಗುರು ಇಂಟರ್‌ನ್ಯಾಶನಲ್ ಸ್ಪಿರಿಚ್ಯುವಲ್ ಯೂತ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕಮಲಾ ಗೊಗೋಯ್ ಮತ್ತು ಇತರ ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****

 

 


(Release ID: 2069037) Visitor Counter : 20