ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಗೋವಾದ ಚಲನಚಿತ್ರ ಉತ್ಸವಕ್ಕಾಗಿ ತಯಾರಾಗಿ, ಹೊರಡೋಣ…!
ಈ ವರ್ಷ, ಅವಕಾಶ ತಪ್ಪಿಹೋಗದು! 55ನೇ ಐ.ಎಫ್.ಎಫ್.ಐ 2024ರ ಟಿಕೆಟ್ ನಿಮಗಾಗಿ ಕಾಯುತ್ತಿದೆ!
55ನೇ ಐ.ಎಫ್.ಎಫ್.ಐ 2024 ಇದರ ಪ್ರತಿನಿಧಿ ನೋಂದಣಿ ತೆರೆದಿದೆ
#IFFIwood, 22ನೇ ಅಕ್ಟೋಬರ್ 2024
ನವೆಂಬರ್ ತಿಂಗಳು ಹಬ್ಬದ ಉತ್ಸಾಹದೊಂದಿಗೆ ಬರುತ್ತಿದೆ…. , ಗೋವಾದ ಪಣಜಿಯಲ್ಲಿ 2024ರ ನವೆಂಬರ್ 20 ರಿಂದ 28, 2024 ರವರೆಗೆ ನಡೆಯಲಿರುವ ಚಲನಚಿತ್ರಗಳ ವಾರ್ಷಿಕ ಉತ್ಸವದಲ್ಲಿ – ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವ (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ – ಐ.ಎಫ್.ಎಫ್.ಐ) – ಅಂಗವಾಗಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಗೋವಾ ರಾಜ್ಯದ ಅರೇಬಿಯನ್ ಸಮುದ್ರ ಕಿನಾರೆಯ ಭವ್ಯವಾದ ಹಿನ್ನೆಲೆಯಿಂದ ಚಲನಚಿತ್ರಗಳ ಸಂತೋಷವನ್ನು ಆಚರಿಸಲು ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಮಿಗಳು ಇಲ್ಲಿ ಸೇರುತ್ತಾರೆ.
ನೀವು ಪ್ರಪಂಚದ ವಿವಿಧ ಮೂಲೆಗಳಿಂದ ಮತ್ತು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರಬಹುದು, ಆದರೆ ಐ.ಎಫ್.ಎಫ್.ಐ. ಚಲನಚಿತ್ರಗಳ ಮೇಲಿನ ಪ್ರೀತಿಗಾಗಿ ಒಟ್ಟಿಗೆ ಸೇರುವ ಅವಕಾಶವನ್ನು ನಿಮಗೆ ನೀಡುತ್ತದೆ. ಈ ಕಥೆ ಹೇಳುವ ಮತ್ತು ದೊಡ್ಡ ಪರದೆಯ ಮ್ಯಾಜಿಕ್ ನ ಉತ್ಸವ- ಸಂತೋಷ- ಸಂಭ್ರಮ-ಸಂಪರ್ಕವನ್ನು ಆಚರಿಸಲು, ಹಾಗೂ ಇಲ್ಲಿಗೆ ಬಂದು ಸೇರಲು ನಾವು ಪ್ರತಿಯೊಬ್ಬರನ್ನು ಆಹ್ವಾನಿಸುತ್ತೇವೆ. ನೀವು https://my.iffigoa.org/ ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಈ ವರ್ಷದ ಉತ್ಸವಕ್ಕೆ ಐ.ಎಫ್.ಎಫ್.ಐ. ಪ್ರತಿನಿಧಿಯಾಗಬಹುದು.
ಐ.ಎಫ್.ಎಫ್.ಐ. ಗೆ ಏಕೆ ಹಾಜರಾಗಬೇಕು?
55ನೇ ಐ.ಎಫ್.ಎಫ್.ಐ. ನಲ್ಲಿ, 16 ಕ್ಯುರೇಟೆಡ್ ವಿಭಾಗಗಳಲ್ಲಿ ಪ್ರಪಂಚದಾದ್ಯಂತದ ಚಲನಚಿತ್ರಗಳ ವೈವಿಧ್ಯಮಯ ಶ್ರೇಣಿಯನ್ನು ನೀವು ವೀಕ್ಷಿಸಬಹುದು. ಹೃದಯಸ್ಪರ್ಶಿ ನಾಟಕಗಳು, ರೋಮಾಂಚಕ ಸಾಕ್ಷ್ಯಚಿತ್ರಗಳು ಅಥವಾ ನವೀನ ಕಿರುಚಿತ್ರಗಳಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಂಡಿದ್ದರೆ ಇದರಲ್ಲಿ ಭಾಗಿಯಾಗಿ. ಈ ಉತ್ಸವದಲ್ಲಿ ಪ್ರತಿಯೊಬ್ಬ ಚಲನಚಿತ್ರ ಪ್ರೇಮಿಗಳಿಗೂ ಆನಂದಿಸಲು ಏನಾದರೂ ಒಂದಿಷ್ಟು ವಿಶೇಷತೆ ಇರುತ್ತದೆ. ಹಲವಾರು ಚಲನಚಿತ್ರಗಳು ತಮ್ಮ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಥಮ ಪ್ರದರ್ಶನಗಳನ್ನು ಐ.ಎಫ್.ಎಫ್.ಐ.ನಲ್ಲಿ ಮಾಡುವುದರಿಂದ ಪ್ರತಿನಿಧಿಗಳು ಬೇರೆಯವರಿಗಿಂತ ಮೊದಲು ಇಂತಹ ಅನೇಕ ಚಲನಚಿತ್ರಗಳನ್ನು ವೀಕ್ಷಿಸಲು ವಿಶೇಷ ಅವಕಾಶವನ್ನು ಹೊಂದಿರುತ್ತಾರೆ.
ಇದು ಕೇವಲ ಚಲನಚಿತ್ರಗಳನ್ನು ನೋಡುವುದಲ್ಲ; ಕಥೆ ಹೇಳುವ ಕಲೆಯನ್ನೂ ಕಲಿಯುವ ಅವಕಾಶವಿದೆ!
ಐ.ಎಫ್.ಎಫ್.ಐ. - ತಮ್ಮ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಉತ್ಸುಕರಾಗಿರುವ ಪೌರಾಣಿಕ ಚಲನಚಿತ್ರ ನಿರ್ಮಾಪಕರು ಮತ್ತು ಉದ್ಯಮ ವೃತ್ತಿಪರರ ನೇತೃತ್ವದಲ್ಲಿ ಕಾರ್ಯಾಗಾರಗಳು ಮತ್ತು ಮಾಸ್ಟರ್ ತರಗತಿಗಳನ್ನು ನೀಡುತ್ತದೆ. ಉತ್ಸಾಹಭರಿತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಮತ್ತು, ನೀವು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಾಗಿದ್ದರೆ ನಿಮ್ಮ ಮುಂದಿನ ದೊಡ್ಡ ಯೋಜನೆಗಾಗಿ ಪ್ರೇರಣೆ ನೀಡುವ ಅವಕಾಶವನ್ನು ಬಳಸಿ, ಬೆಳೆಸಿಕೊಳ್ಳಿ.
ಚಲನಚಿತ್ರೋದ್ಯಮದ ಶೃಂಗಾರ, ಹೊಳಪು ಮತ್ತು ಗ್ಲಾಮರ್ ಅನ್ನು ನೇರವಾಗಿ ಅನುಭವಿಸಲು ನಿಮಗೆ ಅವಕಾಶವಿದೆ. ಹೆಸರಾಂತ ಚಲನಚಿತ್ರ ನಿರ್ಮಾಪಕರು, ನಟರು ಮತ್ತು ಉದ್ಯಮದ ಐಕಾನ್ ಗಳ ಶ್ರೇಣಿಯನ್ನು ಐ.ಎಫ್.ಎಫ್.ಐ. ಒಳಗೊಂಡಿದೆ. ತಮ್ಮ ಕೆಲಸ ಮತ್ತು ಸಿನಿಮಾದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲು ಸೇರುತ್ತಾರೆ. ಐ.ಎಫ್.ಎಫ್.ಐ. ಪ್ರತಿನಿಧಿಗಳು ಚಲನಚಿತ್ರ ನಿರ್ಮಾಪಕರು, ನಟರು ಮತ್ತು ಉದ್ಯಮದ ತಜ್ಞರನ್ನು ಭೇಟಿಯಾಗಲು ಮತ್ತು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ನೀವು ಇಷ್ಟಪಡುವ ಚಲನಚಿತ್ರಗಳನ್ನು ರೂಪಿಸುವ ಜನರೊಂದಿಗೆ ಉತ್ಸಾಹಭರಿತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.
ಇವುಗಳ ಜೊತೆಗೆ, ಐ.ಎಫ್.ಎಫ್.ಐ. ಮತ್ತೊಮ್ಮೆ 2024 ರ 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ', 'ಫಿಲ್ಮ್ ಬಜಾರ್' ಮತ್ತು 'ಸಿನಿ ಮೇಲಾ' ಆವೃತ್ತಿಗಳನ್ನು ಮರಳಿ ಮುಂಚೂಣಿಗೆ ತರುತ್ತದೆ. ಇದು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದಯೋನ್ಮುಖ ಪ್ರತಿಭೆ ಮತ್ತು ಇತರ ಎಲ್ಲ ಚಲನಚಿತ್ರಗಳಿಗೆ ಒಂದಡೆ ಸೇರುವ 'ಒನ್ ಸ್ಟಾಪ್ ಶಾಪ್' ಅವಕಾಶ ಮಾಡಿ ಮಾಡುತ್ತದೆ.
ಆದ್ದರಿಂದ, ಜೀವಮಾನದ ವಿಶೇಷ ಅನನ್ಯ ಅನುಭವಕ್ಕೆ ಸಿದ್ಧರಾಗಿ. ಈ ಅವಿಸ್ಮರಣೀಯ ಸಿನಿಮೀಯ ಪ್ರಯಾಣದ ಭಾಗವಾಗಲು ನಿಮ್ಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಐ.ಎಫ್.ಎಫ್.ಐ. ನಲ್ಲಿ ಪ್ರವೇಶ ಅವಕಾಶ
ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರಯತ್ನದಲ್ಲಿ, ಉತ್ಸವದ ಸ್ಥಳವನ್ನು ಅಡೆತಡೆ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ವಿವಿಧ ಸೌಕರ್ಯಗಳನ್ನು ಒಳಗೊಂಡಂತೆ ಪ್ರವೇಶಿಸಲು ವಿನ್ಯಾಸಗೊಳಿಸಲಾಗಿದೆ. ದಿವ್ಯಾಂಗಜನರ ವಿಶೇಷ ಅಗತ್ಯಗಳಿಗಾಗಿ ಸ್ಥಳದ ಮೂಲಸೌಕರ್ಯವನ್ನು ಸಹ ನವೀಕರಿಸಲಾಗಿದೆ. ಇ.ಎಸ್.ಜಿ ಮತ್ತು ಚಲನಚಿತ್ರಗಳನ್ನು ಪ್ರದರ್ಶಿಸುವ ಇತರ ಸ್ಥಳಗಳ ಆವರಣವನ್ನು ತಡೆರಹಿತವಾಗಿ ನಿರ್ಮಿಸಲಾಗಿದ್ದು, ಸ್ಥಳಾವಕಾಶ, ಹ್ಯಾಂಡ್ ರೈಲ್ಗಳು, ದಿವ್ಯಾಂಗರಿಗೆ ಸ್ನೇಹಿ ಸ್ಪರ್ಶ ಮಾರ್ಗಗಳು, ಪಾರ್ಕಿಂಗ್ ಸ್ಥಳಗಳು, ರಿಟ್ರೊಫಿಟ್ ಮಾಡಿದ ಶೌಚಾಲಯಗಳು, ಬ್ರೈಲ್ನಲ್ಲಿನ ಸೈನ್ಬೋರ್ಡ್ಗಳು ಇತ್ಯಾದಿಗಳನ್ನು ಒದಗಿಸಲಾಗಿದೆ, ಹಾಗಾಗಿ ಚಲನಚಿತ್ರಗಳನ್ನು ಆಚರಿಸಲು, ಯಾರೂ ಹಿಂದೆ ಉಳಿಯಬೇಕಾಗಿಲ್ಲ.
ಭಾಗವಹಿಸಲು ನೋಂದಣಿ ಹೇಗೆ?
ನೋಂದಣಿಗಾಗಿ, ಜಾಲತಾಣ https://my.iffigoa.org/ ಗೆ ಸಂಪರ್ಕ ಮಾಡಿ
ಚಲನಚಿತ್ರ ಉತ್ಸವ ಮುಗಿಯುವವರೆಗೂ ಐ.ಎಫ್.ಎಫ್.ಐ. ಯ 55 ನೇ ಆವೃತ್ತಿಗೆ ಪ್ರತಿನಿಧಿ ನೋಂದಣಿ ಮುಂದುವರಿಯುತ್ತದೆ. ಐ.ಎಫ್.ಎಫ್.ಐ. ಯ 55 ನೇ ಆವೃತ್ತಿಯ ವಿಭಾಗಗಳು ಈ ಕೆಳಗಿನಂತಿವೆ:
ಚಲನಚಿತ್ರ ವೃತ್ತಿಪರರು
• ನೋಂದಣಿ ಶುಲ್ಕ: ₹1180 (18% ಜಿ.ಎಸ್.ಟಿ. ಸೇರಿದಂತೆ)
• ಪ್ರಯೋಜನ/ಅವಕಾಶಗಳು: ಆನ್ಲೈನ್ ಮಾನ್ಯತೆ, ಹೆಚ್ಚುವರಿ ಟಿಕೆಟ್ ಮತ್ತು ಪ್ಯಾನೆಲ್ಗಳು ಮತ್ತು ಸ್ಕ್ರೀನಿಂಗ್ ಗಳಿಗೆ ಉಚಿತ ಪ್ರವೇಶ.
ಸಿನಿ ಉತ್ಸಾಹಿಗಳು
• ನೋಂದಣಿ ಶುಲ್ಕ: ₹1180 (18% ಜಿ.ಎಸ್.ಟಿ. ಸೇರಿದಂತೆ)
• ಪ್ರಯೋಜನ/ಅವಕಾಶಗಳು: ಆನ್ಲೈನ್ ಮಾನ್ಯತೆ ಮತ್ತು ಪ್ಯಾನೆಲ್ಗಳು ಮತ್ತು ಸ್ಕ್ರೀನಿಂಗ್ ಗಳಿಗೆ ಉಚಿತ ಪ್ರವೇಶ.
ಪ್ರತಿನಿಧಿ – ಸಿನಿಮಾ ವಿದ್ಯಾರ್ಥಿ
• ನೋಂದಣಿ ಶುಲ್ಕ: ₹0
• ಪ್ರಯೋಜನ/ಅವಕಾಶಗಳು: ಆನ್ಲೈನ್ ಮಾನ್ಯತೆ, ಪ್ಯಾನೆಲ್ಗಳು ಮತ್ತು ಸ್ಕ್ರೀನಿಂಗ್ಗಳಿಗೆ ಉಚಿತ ಪ್ರವೇಶ, ದಿನಕ್ಕೆ 4 ಟಿಕೆಟ್ಗಳ ಭತ್ಯೆ.
ಈ ವರ್ಗಗಳು ಸಿನಿಮಾ ವೃತ್ತಿಪರರು, ಸಿನಿಮಾ ಪ್ರೇಮಿಗಳು ಮತ್ತು ಸಿನಿಮಾ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವಿಭಿನ್ನ ಪ್ರಯೋಜನಗಳನ್ನು ನೀಡುತ್ತವೆ. ವಿದ್ಯಾರ್ಥಿಗಳು ದಿನಕ್ಕೆ 4 ಟಿಕೆಟ್ಗಳೊಂದಿಗೆ ವಿಶೇಷ ಪ್ರವೇಶವನ್ನು ಪಡೆದರೆ, ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಿಗೆ ಅವರಿಗೆ ವಿಶಾಲವಾದ ಮಾನ್ಯತೆ ಒದಗಿಸುವ ಮೂಲಕ, ಚಲನಚಿತ್ರ ವೃತ್ತಿಪರರು ದಿನಕ್ಕೆ ಒಂದು ಹೆಚ್ಚುವರಿ ಟಿಕೆಟ್ ಗೆ ಪ್ರವೇಶವನ್ನು ಹೊಂದಿರುತ್ತಾರೆ.
ಪ್ರತಿನಿಧಿಗಳು ಆನ್ಲೈನ್ ಮಾನ್ಯತೆಯನ್ನು ಪಡೆಯುತ್ತಾರೆ, ಹಬ್ಬದ ಸಮಯದಲ್ಲಿ ಎಲ್ಲಾ ಕಾರ್ಯಕ್ರಮಗಳು ಮತ್ತು ಅವರುಗಳಿಗೆ ಎಲ್ಲ ಸ್ಥಳಗಳಿಗೆ ಸುವ್ಯವಸ್ಥಿತ ಪ್ರವೇಶ ಅವಕಾಶ ಲಭ್ಯವಿದೆ. ನಿಮ್ಮ ವೈಯಕ್ತಿಕಗೊಳಿಸಿದ ಡ್ಯಾಶ್ಬೋರ್ಡ್ ಅನ್ನು ಪ್ರವೇಶಿಸಲು ಜಾಲತಾನದ ನಿಮ್ಮ ನನ್ನ- ಐ.ಎಫ್.ಎಫ್.ಐ. ಖಾತೆಯ ಪುಟಗಳನ್ನು https://my.iffigoa.org/ ರಚಿಸಿ, ಅಲ್ಲಿ ನೀವು ಟಿಕೆಟ್ ಗಳನ್ನು ಬುಕ್ ಮಾಡಬಹುದು ಮತ್ತು ಹಬ್ಬದ ವೇಳಾಪಟ್ಟಿಗಳನ್ನು ಪರಿಶೀಲಿಸಬಹುದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಸಮಸ್ಯೆಗಳನ್ನು ಹೊಂದಿದ್ದರೆ, registration@iffigoa.org ಸಂಪರ್ಕಿಸಿ.
ಕೂಡಲೇ ನೋಂದಾಯಿಸಿಕೊಳ್ಳಿ ಮತ್ತು ಚಲನಚಿತ್ರ ಕಲೆಯನ್ನು ಒಟ್ಟಾಗಿ ಆಚರಿಸೋಣ.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಸ್ಥಾಪನೆಯಾದ – ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವ (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ – ಐ.ಎಫ್.ಎಫ್.ಐ) - ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಇದರ ಪ್ರಾರಂಭದಿಂದಲೂ, ಐ.ಎಫ್.ಎಫ್.ಐ ಚಲನಚಿತ್ರಗಳು, ಅವುಗಳ ಆಕರ್ಷಕ ಕಥೆಗಳು ಮತ್ತು ಅವುಗಳ ಹಿಂದೆ ಇರುವ ಪ್ರತಿಭಾವಂತ ವ್ಯಕ್ತಿಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಉತ್ಸವವು ಚಲನಚಿತ್ರಗಳ ಬಗ್ಗೆ ಆಳವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಉತ್ತೇಜಿಸಲು ಮತ್ತು ಹರಡಲು ಪ್ರಯತ್ನಿಸುತ್ತದೆ. ಜನರಲ್ಲಿ ತಿಳುವಳಿಕೆ ಮತ್ತು ಸೌಹಾರ್ದತೆಯ ಸೇತುವೆಗಳನ್ನು ನಿರ್ಮಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.
ಚಲನಚಿತ್ರಗಳ ಬಗ್ಗೆ ಆಸಕ್ತಿ, ಆಳವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಉತ್ತೇಜಿಸಲು , ಪಸರಿಸಲು ಮತ್ತು ಹರಡಿಸಲು, ಜನರಲ್ಲಿ ತಿಳುವಳಿಕೆ ಮತ್ತು ಸೌಹಾರ್ದದ ಸೇತುವೆಗಳನ್ನು ನಿರ್ಮಿಸಲು ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಶ್ರೇಷ್ಠತೆಯ ಕಾಲಾತ್ಮಕ ರೂಪವನ್ನು ಹೊಸ ಎತ್ತರಗಳನ್ನು ತಲುಪಿಸಲು, ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಪ್ರೇರೇಪಿಸಲು ಈ ಉತ್ಸವವು ಪ್ರಯತ್ನಿಸುತ್ತದೆ. ಐ.ಎಫ್.ಎಫ್.ಐ ಅನ್ನು ವಾರ್ಷಿಕವಾಗಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಎಂಟರ್ ಟೈನ್ಮೆಂಟ್ ಸೊಸೈಟಿ ಆಫ್ ಗೋವಾ, ಗೋವಾ ಸರ್ಕಾರ ಮತ್ತು ಅತಿಥೇಯ ರಾಜ್ಯದ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ.
55ನೇ ಐ.ಎಫ್.ಎಫ್.ಐ ಯ ಇತ್ತೀಚಿನ ಬೆಳವಣಿಗೆಗಳ ಕುರಿತ ಮಾಹಿತಿಗಾಗಿ, ಚಲನಚಿತ್ರ ಉತ್ಸವದ ಜಾಲತಾಣ http://www.iffigoa.org ಗೆ ಭೇಟಿ ನೀಡಿ.
*****
(Release ID: 2067281)
Visitor Counter : 33