ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಪ್ರಧಾನಮಂತ್ರಿ-ಸೂರ್ಯ ಘರ್ ಯೋಜನೆ ಅಡಿಯಲ್ಲಿ ₹500 ಕೋಟಿಯ ‘ನವೀನ ಯೋಜನೆಗಳ’ ಘಟಕಕ್ಕಾಗಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಯೋಜನೆಯ ಮಾರ್ಗಸೂಚಿಗಳ ಪ್ರಕಟಣೆ
Posted On:
11 OCT 2024 5:28PM by PIB Bengaluru
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಪ್ರಧಾನಮಂತ್ರಿ-ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ ಅಡಿಯಲ್ಲಿ 'ನವೀನ ಯೋಜನೆಗಳ' ಅನುಷ್ಠಾನಕ್ಕಾಗಿ ಯೋಜನೆಯ ಮಾರ್ಗಸೂಚಿಗಳನ್ನು 8ನೇ ಅಕ್ಟೋಬರ್ 2024 ರಂದು ಪ್ರಕಟಿಸಿದೆ.
ಯೋಜನಾ ಘಟಕ 'ಇನ್ನೋವೇಟಿವ್ ಪ್ರಾಜೆಕ್ಟ್ಸ್' ಅಡಿಯಲ್ಲಿ, ಮೇಲ್ಛಾವಣಿ ಸೌರ ತಂತ್ರಜ್ಞಾನಗಳು, ವ್ಯವಹಾರ ಮಾದರಿಗಳು ಮತ್ತು ಸಂಯೋಜಿಸುವ ತಂತ್ರಗಳಲ್ಲಿ ಪ್ರಗತಿಯನ್ನು ಉತ್ತೇಜಿಸಲು ₹500 ಕೋಟಿಯನ್ನು ಮೀಸಲಿಡಲಾಗಿದೆ. ಬ್ಲಾಕ್ ಚೇನ್ ಆಧಾರಿತ ಪೀರ್-ಟು-ಪೀರ್ ಸೋಲಾರ್ ಟ್ರೇಡಿಂಗ್, ಸ್ಮಾರ್ಟ್ ಮೆಟೀರಿಯಲ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿ ಸಂಗ್ರಹಣೆಯೊಂದಿಗೆ ಸಂಯೋಜಿಸಲ್ಪಟ್ಟ ಮೇಲ್ಛಾವಣಿ ಸೌರಶಕ್ತಿಯಂತಹ ಮುಂತಾದ ಮುಂಬರುವ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಹೊಸ ಪರಿಕಲ್ಪನೆಗಳ ಮಾರ್ಗದರ್ಶನ ಮಾಡುವಲ್ಲಿ ಸ್ಟಾರ್ಟ್ಅಪ್ಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ಘಟಕವು ಪ್ರಯತ್ನಿಸುತ್ತದೆ.
ಇದನ್ನು ಮುಂದಕ್ಕೆ ಕೊಂಡೊಯ್ಯಲು, ಸಚಿವಾಲಯವು ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ ಮತ್ತು ಜಂಟಿ ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗಗಳನ್ನು ಪ್ರೋತ್ಸಾಹಿಸುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ (ಎನ್ ಐಎಸ್ ಇ) ನವೀನ ಯೋಜನೆಗಳ ಘಟಕಕ್ಕಾಗಿ ಸ್ಕೀಮ್ ಇಂಪ್ಲಿಮೆಂಟೇಶನ್ ಏಜೆನ್ಸಿ (ಎಸ್ ಐ ಎ) ಆಗಿ ಕಾರ್ಯನಿರ್ವಹಿಸುತ್ತದೆ. ಆಯ್ದ ಯೋಜನೆಗಳು ಯೋಜನಾ ವೆಚ್ಚದ 60% ಅಥವಾ ₹30 ಕೋಟಿ, ಯಾವುದು ಕಡಿಮೆಯೋ ಅದರ ಹಣಕಾಸಿನ ನೆರವು ಪಡೆಯುತ್ತದೆ. ಹೆಚ್ಚುವರಿಯಾಗಿ, ಮತ್ತಷ್ಟು ನಾವೀನ್ಯತೆಯ ಪ್ರಗತಿಯನ್ನು ಪ್ರೋತ್ಸಾಹಿಸಲು ₹1 ಕೋಟಿಯವರೆಗಿನ ಬಹುಮಾನಗಳ ಜೊತೆಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು.
ಸೌರ ಮೇಲ್ಛಾವಣಿ ಸಾಮರ್ಥ್ಯದ ಪಾಲನ್ನು ಹೆಚ್ಚಿಸುವ ಮತ್ತು ತಮ್ಮ ಸ್ವಂತ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ವಸತಿ ಮನೆಗಳಿಗೆ ಹಕ್ಕನ್ನು ನೀಡುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ಟ್ ಬಿಜ್ಲಿ (PM-Surya Ghar: Muft Bijli Yojana) ಯೋಜನೆಯನ್ನು 29 ಫೆಬ್ರವರಿ 2024 ರಂದು ಅನುಮೋದಿಸಿತು. ಈ ಯೋಜನೆಯು 75,021 ಕೋಟಿ ರೂ.ಗಳ ವೆಚ್ಚವನ್ನು ಹೊಂದಿದೆ ಮತ್ತು 2026-27ರ ಹಣಕಾಸು ವರ್ಷದವರೆಗೆ ಜಾರಿಯಾಗಲಿದೆ. ಯೋಜನೆಯ ಮಾರ್ಗಸೂಚಿಗಳನ್ನು ಇಲ್ಲಿ ನೋಡಬಹುದು
*****
(Release ID: 2064282)
Visitor Counter : 41