ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಇಂಧನ ಸಹಕಾರಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿ ಮೂರು ದಿನಗಳ ಜರ್ಮನಿ ಪ್ರವಾಸ ಪೂರ್ಣಗೊಳಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ
Posted On:
09 OCT 2024 5:43PM by PIB Bengaluru
ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು 2024 ರ ಅಕ್ಟೋಬರ್ 6 ರಿಂದ 9 ರ ವರೆಗೆ ಮೂರು ದಿನಗಳ ಜರ್ಮನಿ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹ್ಯಾಂಬರ್ಗ್ ನಲ್ಲಿ ಸಸ್ಟೈನಬಿಲಿಟಿ ಕಾನ್ಫರೆನ್ಸ್ (ಎಚ್.ಎಸ್.ಸಿ) ನೊಂದಿಗೆ ಹೊಂದಿಕೆಯಾದ ಈ ಭೇಟಿಯು ಜಾಗತಿಕ ಸುಸ್ಥಿರತೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಬದ್ಧತೆಯನ್ನು ಒತ್ತಿ ಹೇಳಿತು ಮತ್ತು ಇಂಧನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಪ್ರಮುಖ ಚರ್ಚೆಗಳನ್ನು ಸುಗಮಗೊಳಿಸಿತು
ಅಕ್ಟೋಬರ್ 7 ರಂದು ಸಚಿವರು ಹ್ಯಾಂಬರ್ಗ್ ನಲ್ಲಿ ಸಸ್ಟೈನಬಿಲಿಟಿ ಕಾನ್ಫರೆನ್ಸ್ ನಲ್ಲಿ ಪ್ರಮುಖ ಭಾಷಣ ಮಾಡಿ, ಅಲ್ಲಿ ಅವರು 100 ಮಂದಿ ಸದಸ್ಯರನ್ನೊಳಗೊಂಡ ಅಂತಾರಾಷ್ಟ್ರೀಯ ಸೌರ ಮೈತ್ರಿ ಒಳಗೊಂಡಂತೆ ಇಂಧನ ಮತ್ತು ಇಂಧನ ಪರಿವರ್ತನೆಯ ಉಪಕ್ರಮಗಳು, ಜಾಗತಿಕ ನವೀಕೃತ ಇಂಧನ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಅವರು ಅನಾವರಣಗೊಳಿಸಿದರು. ಕಳೆದ ದಶಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ ಮತ್ತು ನಾಯಕತ್ವದಡಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ನಿರ್ಣಾಯಕ ಪ್ರಗತಿ ಸಾಧಿಸಿದೆ. ಸುಸ್ಥಿರತೆಯಲ್ಲಿ ಭಾರತದ ಬದ್ಧತೆಯನ್ನು ಸಚಿವರು ಒತ್ತಿ ಹೇಳಿದರು, ವಿಶೇಷವಾಗಿ ಹಸಿರು ಹಡಗು ಕ್ಷೇತ್ರಗಳಲ್ಲಿ, ಮತ್ತು ಜಾಗತಿಕ ಇಂಧನ ಪರಿವರ್ತನೆಯಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸಲು ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವಂತೆ ಕರೆ ನೀಡಿದರು
ಈ ಭೇಟಿಯ ಸಂದರ್ಭದಲ್ಲಿ ಶ್ರೀ ಜೋಶಿ ಅವರು ಜಾಗತಿಕ ನಾಯಕರ ಜೊತೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ [ಯು.ಎನ್.ಡಿ.ಪಿ] ವಿಭಾಗದ ಆಡಳಿತಾಧಿಕಾರಿ ಶ್ರೀ ಅಚಿಮ್ ಸ್ಟೈನೆರ್ ಅವರನ್ನು ಭೇಟಿ ಮಾಡಿದ್ದು, ಭಾರತದ ನವೀಕರಿಸಬದಾದ ಇಂಧನ ವಲಯದ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಅವರು ಕೇಂದ್ರೀಕರಿಸಿದರು ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಭವಿಷ್ಯದ ಪಾಲುದಾರಿಕೆ ಕುರಿತು ಸಮಾಲೋಚನೆ ನಡೆಸಿದರು. ಸಚಿವರು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ [ಬಿಎಂಝಡ್] ಸಚಿವರಾದ ಶ್ರೀಮತಿ ಸ್ವೆಂಜಾ ಶ್ಚುಲ್ಝೆ ಅವರನ್ನು ಭೇಟಿಯಾಗಿ ಹಸಿರು ಇಂಧನ ಮತ್ತು ಸುಸ್ಥಿರತೆ ಕ್ಷೇತ್ರದಲ್ಲಿ ಹಂಚಿಕೆಯ ಆದ್ಯತೆ ಕುರಿತಂತೆ ಚರ್ಚಿಸಿದರು.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಜರ್ಮನಿಯ ಚಾನ್ಸೆಲರ್ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಸಂವಾದ ನಡೆಸಿದರು
ಎಚ್.ಎಸ್.ಸಿ ನೇಪಥ್ಯದಲ್ಲಿ ಶ್ರೀ ಜೋಶಿ ಅವರು ಜರ್ಮನಿಯ ಚಾನ್ಸಲರ್ ಶ್ರೀ ಓಲಾಫ್ ಸ್ಕೋಲ್ಝ್ ಅವರೊಂದಿಗೆ ಸಂತಸವನ್ನು ಹಂಚಿಕೊಂಡರು. ಈಜಿಪ್ಟ್ ನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವರಾದ ಶ್ರೀ ಕರಿಮ್ ಬಡಾವಿ ಅವರನ್ನು ಭೇಟಿ ಮಾಡಿದರು ಮತ್ತು ಸಹಕಾರ ವರ್ಧನೆ ಕುರಿತು ಚರ್ಚಿಸಿದರು. ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀಮತಿ ರೋಬೆರ್ಟಾ ಕಸಾಲಿ ಅವರನ್ನು ಭೇಟಿ ಮಾಡಿದರು ಮತ್ತು ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗಳ ಕುರಿತು ಚರ್ಚಿಸಿದರು. ಉಜ್ಬೇಕಿಸ್ತಾನದ ಉಪ ಪ್ರಧಾನಿ ಮತ್ತು ಆರ್ಥಿಕತೆ ಹಾಗೂ ಹಣಕಾಸು ಸಚಿವರಾದ ಡಾ. ಜಮ್ಶೀಡ್ ಖೋಡ್ಜೇವ್ ಅವರೊಂದಿಗೆ ಜಾಗತಿಕ ಇಂಧನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಇಂಧನ ಪರಿವರ್ತನೆಯ ಮಾರ್ಗಗಳ ಕುರಿತು ಹೆಚ್ಚಿನ ಸಮಾಲೋಚನೆ ನಡೆಸಿದರು.
ಬ್ರಿಟನ್ ನ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನೆಲಿಯೆಸೆ ಡೊಡ್ಡ್ಸ್ ಅವರನ್ನು ಭೇಟಿ ಮಾಡಿದರು ಮತ್ತು ಶುದ್ಧ ಮತ್ತು ಹೆಚ್ಚಿನ ಸುಸ್ಥಿರ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಕುರಿತಂತೆ ಚರ್ಚೆ ನಡೆಸಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ [ಐಎಂಎಫ್] ಅಧ್ಯಕ್ಷರಾದ ಶ್ರೀ ಕೃಸ್ಟಲಿನ ಜೋರ್ಗೇವ ಅವರೊಂದಿಗೆ ಜಾಗತಿಕ ಸುಸ್ಥಿರ ಯೋಜನೆಗಳಲ್ಲಿ ಅಂತರರಾಷ್ಟ್ರೀಯ ಬೆಂಬಲದಲ್ಲಿ ಐಎಂಎಫ್ ಪಾತ್ರ ಕುರಿತು ಸಮಾಲೋಚಿಸಿದರು ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಶ್ರೀ ಅಜಯ್ ಬಂಗಾ ಅವರ ಜೊತೆ ಬಾಹ್ಯಾಕಾಶ ಹಸಿರು ಇಂಧನ ವಲಯದ ಬಗ್ಗೆ ಚರ್ಚೆ ನಡೆಸಿದರು.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಜರ್ಮನಿಯ ಉಪಕುಲಪತಿ ಮತ್ತು ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮಗಳ ಫೆಡರಲ್ ಸಚಿವ ಡಾ. ರಾಬರ್ಟ್ ಹ್ಯಾಬೆಕ್ ಅವರೊಂದಿಗೆ
ಬರ್ಲೀನ್ ನಲ್ಲಿ ಕೇಂದ್ರ ಸಚಿವರಾದ ಶ್ರೀ ಜೋಶಿ ಅವರನ್ನು ಜರ್ಮನಿ ವೈಸ್ ಚಾನ್ಸಲರ್ ಮತ್ತು ಒಕ್ಕೂಟ ಸಚಿವರಾದ ಡಾ. ರೊಬೆರ್ಟ್ ಹೆಬೆಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಡಾ. ಹ್ಯಾಬೆಕ್ ಅವರು ಜರ್ಮನ್ ನ ಆರ್ಥಿಕ ವ್ಯವಹಾರಗಳ ಒಕ್ಕೂಟದ ಸಚಿವರಾಗಿದ್ದು, ಹವಾಮಾನ ಕುರಿತ ಕ್ರಮಗಳಿಗೆ ವಿಶೇಷ ಮಾರ್ಗದರ್ಶನ ನೀಡಿದರು. ಡಾ ಹ್ಯಾಬೆಕ್ ಅವರು ಕೇಂದ್ರ ಸಚಿವರಾದ ಶ್ರೀ ಜೋಶಿ ಅವರಿಗೆ ಕಳೆದ 10 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅದ್ಭುತ ಬೆಳವಣಿಗೆಯಾಗಿರುವುದನ್ನು ಒಪ್ಪಿಕೊಂಡರು ಮತ್ತು ನವೀಕರಿಸಬಹುದಾದ ಇಂಧನ ಅಭಿಯಾನದಿಂದ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಕಡೆಗೆ ಭಾರತದ ಪ್ರಯಾಣದ ಬಗ್ಗೆ ಬಹಳ ಆಶಾವಾದಿಯಾಗಿದ್ದರು ಎಂದು ಶ್ರೀ ಜೋಶಿ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
"#ಎಚ್.ಎಸ್.ಸಿ2024 ರ ನೇಪಥ್ಯದಲ್ಲಿ ಜರ್ಮನಿಯ ವೈಸ್ ಚಾನ್ಸಲರ್ ಮತ್ತು ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆಯ ಒಕ್ಕೂಟದ ಮಂತ್ರಿ ಡಾ. ರಾಬರ್ಟ್ ಹ್ಯಾಬೆಕ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ನವೀಕರಿಸಬಹುದಾದ ಇಂಧನದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ನಾವು ಫಲಪ್ರದ ಚರ್ಚೆಯನ್ನು ಮಾಡಿದ್ದೇವೆ. ಸಭೆಯಲ್ಲಿ ಹಸಿರು ಜಲಜನಕ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಚರ್ಚೆ ನಡೆಸಲಾಯಿತು. ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿದೆ ಎಂಬುದನ್ನು ಗಮನಿಸಲು ನಾವು ಸಂತೋಷಪಟ್ಟಿದ್ದೇವೆ. ಮುಂಬರುವ ವರ್ಷಗಳಲ್ಲಿ ಭಾರತವು ಜರ್ಮನಿಗೆ ಹಸಿರು ಜಲಜನಕ ವಲಯದಲ್ಲಿ ವಿಶ್ವಾಸಾರ್ಹ ಮೂಲವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಬರ್ಲಿನ್ ಪ್ರವಾಸದ ಸಂದರ್ಭದಲ್ಲಿ ಶ್ರೀ ಜೋಶಿ ಅವರು ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಅನಿವಾಸಿ ಸದಸ್ಯರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರು ಜರ್ಮನಿಯ ಆರ್ಥಿಕತೆಗೆ ಅವರ ಕೊಡುಗೆಗಳನ್ನು ಮತ್ತು ಭಾರತದ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು.
ಸೆಪ್ಟೆಂಬರ್, 2024 ರಲ್ಲಿ ನಡೆದ ರೀ ಇನ್ವೆಸ್ಟ್ RE-INVEST 2024ರ ಸಭೆಯಲ್ಲಿ ಭಾರತ ಮತ್ತು ಜರ್ಮನಿ ನವೀಕರಿಸಬಹುದಾದ ಶಕ್ತಿಗಳಲ್ಲಿ ಹೂಡಿಕೆಗಾಗಿ ಭಾರತ-ಜರ್ಮನಿ ವೇದಿಕೆಗಳನ್ನು ಪ್ರಾರಂಭಿಸಲಾಯಿತು. ನವೀಕರಿಸಬಹುದಾದ ಶಕ್ತಿಯಲ್ಲಿ ಎರಡು ದೇಶಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಇದು ತೋರಿಸುತ್ತದೆ. ವೇದಿಕೆ ಮತ್ತಷ್ಟು ವ್ಯಾಪಾರ ಅವಕಾಶಗಳನ್ನು ಮತ್ತು ಬಂಡವಾಳದ ಹೆಚ್ಚುತ್ತಿರುವ ಬೇಡಿಕೆಗಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ತಂತ್ರಜ್ಞಾನ ವರ್ಗಾವಣೆಯನ್ನು ಬೆಂಬಲಿಸುತ್ತದೆ ಮತ್ತು ನವೀಕೃತ ಇಂಧನ ಕ್ಷೇತ್ರದಲ್ಲಿ ನವೀನ ತಾಂತ್ರಿಕ ಪರಿಹಾರಗಳ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ
ಶ್ರೀ ಜೋಶಿ ಅವರು ಜರ್ಮನಿಯ ಭೇಟಿಯು ನವೀಕರಿಸಬಹುದಾದ ಇಂಧನ ಸಹಕಾರ ಮತ್ತು ಇಂಧನ ಪರಿವರ್ತನೆಯ ಉಪಕ್ರಮಗಳಲ್ಲಿ ಭಾರತದ ನಾಯಕತ್ವವನ್ನು ಹೆಚ್ಚಿಸುವ ಬದ್ಧತೆಯೊಂದಿಗೆ ಮುಕ್ತಾಯವಾಯಿತು. ಪ್ರವಾಸದ ಸಮಯದಲ್ಲಿ ನಡೆದ ಸಭೆಗಳು ಮತ್ತು ಸಂವಾದಗಳು ಇಂಧನ ಪರಿವರ್ತನೆಯಲ್ಲಿ ಆಳವಾದ ಸಹಯೋಗಕ್ಕೆ ಬಲವಾದ ಅಡಿಪಾಯವನ್ನು ಹಾಕಿವೆ, ಸುಸ್ಥಿರ ಭವಿಷ್ಯದ ಅನ್ವೇಷಣೆಯಲ್ಲಿ ಜಾಗತಿಕ ನಾಯಕನಾಗಿ ಭಾರತದ ಪಾತ್ರವನ್ನು ಇದು ಬಲಪಡಿಸುತ್ತದೆ.
(Release ID: 2063613)
Visitor Counter : 68