ಸಂಪುಟ
(i) ಮಾಧವರಂನಿಂದ ಸಿಪ್ಕಾಟ್, (ii) ಲೈಟ್ ಹೌಸ್ ನಿಂದ ಪೂನಮಲ್ಲಿ ಬೈಪಾಸ್ ಮತ್ತು (iii) ಮಾಧವರಂನಿಂದ ಶೋಲಿಂಗನಲ್ಲೂರ್ ಎಂಬ ಮೂರು ಕಾರಿಡಾರ್ ಗಳನ್ನು ಒಳಗೊಂಡಿರುವ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತಕ್ಕೆ ಸಂಪುಟದ ಅನುಮೋದನೆ
ಎರಡನೇ ಹಂತವು 118.9 ಕಿ.ಮೀ ಹೊಸ ಮಾರ್ಗಗಳೊಂದಿಗೆ 128 ನಿಲ್ದಾಣಗಳನ್ನು ಒಳಗೊಂಡಿದ್ದು, ಚೆನ್ನೈನಲ್ಲಿ ಒಟ್ಟು 173 ಕಿ.ಮೀ ಮೆಟ್ರೋ ರೈಲು ಜಾಲವನ್ನು ಸಕ್ರಿಯಗೊಳಿಸುತ್ತದೆ
ಆರ್ಥಿಕ ಪರಿಣಾಮಗಳು 63,246 ಕೋಟಿ ರೂ.ಗಳಾಗಲಿವೆ
21 ಸ್ಥಳಗಳಲ್ಲಿ ಪ್ರಯಾಣಿಕ ಸ್ನೇಹಿ ಬಹು ಮಾದರಿ ಏಕೀಕರಣ
ಅನುಮೋದಿತ ಕಾರಿಡಾರ್ ಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಚೆನ್ನೈನ ಪಶ್ಚಿಮಕ್ಕೆ ಸಂಪರ್ಕಿಸುತ್ತವೆ
Posted On:
03 OCT 2024 8:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೂರು ಕಾರಿಡಾರ್ ಗಳನ್ನು ಒಳಗೊಂಡ ಚೆನ್ನೈ ಮೆಟ್ರೋ ರೈಲು ಯೋಜನೆ ಹಂತ-2ಕ್ಕೆ ಸಂಬಂಧಿಸಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಅನುಮೋದಿತ ಮಾರ್ಗಗಳ ಒಟ್ಟು ಉದ್ದ 128 ನಿಲ್ದಾಣಗಳೊಂದಿಗೆ 118.9 ಕಿ.ಮೀ.
ಯೋಜನೆಯು ಪೂರ್ಣಗೊಳ್ಳುವಾಗ ವೆಚ್ಚ 63,246 ಕೋಟಿ ರೂ.ಗಳಾಗಲಿದ್ದು, 2027 ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಎರಡನೇ ಹಂತವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಚೆನ್ನೈ ನಗರವು ಒಟ್ಟು 173 ಕಿ.ಮೀ ಮೆಟ್ರೋ
ರೈಲು ಜಾಲವನ್ನು ಹೊಂದಿರುತ್ತದೆ. ಎರಡನೇ ಹಂತದ ಯೋಜನೆಯು ಈ ಕೆಳಗಿನ ಮೂರು ಕಾರಿಡಾರ್ ಗಳನ್ನು ಒಳಗೊಂಡಿದೆ:
* ಕಾರಿಡಾರ್-(i): ಮಾಧವರಂನಿಂದ ಸಿಪ್ ಕಾಟ್ ವರೆಗೆ 45.8 ಕಿ.ಮೀ ಉದ್ದ, 50 ನಿಲ್ದಾಣಗಳು.
* ಕಾರಿಡಾರ್-(ii): ಲೈಟ್ ಹೌಸ್ ನಿಂದ ಪೂನಮಲ್ಲೆ ಬೈಪಾಸ್ ವರೆಗೆ 26.1 ಕಿ.ಮೀ ಉದ್ದ, 30 ನಿಲ್ದಾಣಗಳು, ಮತ್ತು
* ಕಾರಿಡಾರ್-(iii): ಮಾಧವರಂನಿಂದ ಶೋಲಿಂಗನಲ್ಲೂರಿನವರೆಗೆ 47 ಕಿ.ಮೀ ಉದ್ದ, 48 ನಿಲ್ದಾಣಗಳು.
ಎರಡನೇ ಹಂತವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಚೆನ್ನೈ ನಗರವು ಒಟ್ಟು 173 ಕಿ.ಮೀ ಮೆಟ್ರೋ ರೈಲು ಜಾಲವನ್ನು ಹೊಂದಿರುತ್ತದೆ.
ಪ್ರಯೋಜನಗಳು ಮತ್ತು ಬೆಳವಣಿಗೆಯ ವೃದ್ಧಿ:
ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತವು ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಎರಡನೇ ಹಂತವು ನಗರದ ಮೆಟ್ರೋ ರೈಲು ಜಾಲದ ಪ್ರಮುಖ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ.
ವರ್ಧಿತ ಸಂಪರ್ಕ: ಹಂತ-II ಸರಿಸುಮಾರು 118.9 ಕಿಮೀ ಹೊಸ ಮೆಟ್ರೋ ಮಾರ್ಗಗಳನ್ನು ಸೇರಿಸುತ್ತದೆ. ಹಂತ-II ರ ಕಾರಿಡಾರ್ಗಳು ಮಾಧವರಂ, ಪೆರಂಬೂರ್, ತಿರುಮಾಯಿಲೈ, ಅಡ್ಯಾರ್, ಶೋಲಿಂಗನಲ್ಲೂರ್, ಸಿಪ್ಕಾಟ್, ಕೋಡಂಬಾಕ್ಕಂ, ವಡಪಳನಿ, ಪೋರೂರ್, ವಿಲ್ಲಿವಕ್ಕಂ, ಅಣ್ಣಾ ನಗರ, ಸೇಂಟ್ ಥಾಮಸ್ ಮೌಂಟ್ ನಂತಹ ಪ್ರಮುಖ ಪ್ರಭಾವದ ಪ್ರದೇಶಗಳ ಮೂಲಕ ಹಾದುಹೋಗುತ್ತ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಚೆನ್ನೈಯನ್ನು ಜೋಡಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕಾ, ವಾಣಿಜ್ಯ, ವಸತಿ ಮತ್ತು ಸಾಂಸ್ಥಿಕ ಸಂಸ್ಥೆಗಳನ್ನು ಇದು ಸಂಪರ್ಕಿಸುತ್ತದೆ ಮತ್ತು ಈ ಕ್ಲಸ್ಟರ್ಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಪರಿಣಾಮಕಾರಿ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ ಹಾಗು ನಗರದ ವಿವಿಧ ಭಾಗಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಇದು ದಕ್ಷಿಣ ಚೆನ್ನೈ ಐಟಿ ಕಾರಿಡಾರ್ಗೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಶೋಲಿಂಗನಲ್ಲೂರ್ನಂತಹ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಿಗೆ ಸಂಪರ್ಕವನ್ನು ವಿಸ್ತರಿಸುತ್ತದೆ. ಶೋಲಿಂಗನಲ್ಲೂರನ್ನು ಎಲ್ಕಾಟ್ ( ELCOT ) ಮೂಲಕ ಸಂಪರ್ಕಿಸುವುದರಿಂದ, ಮೆಟ್ರೋ ಕಾರಿಡಾರ್ ಬೆಳೆಯುತ್ತಿರುವ IT ಉದ್ಯೋಗಿಗಳ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ.
ಸಂಚಾರ ದಟ್ಟಣೆ ಇಳಿಕೆ: ಮೆಟ್ರೋ ರೈಲು ಪರಿಣಾಮಕಾರಿ ಪರ್ಯಾಯ ರಸ್ತೆ ಸಾರಿಗೆಯಾಗಿ ಮತ್ತು ಎರಡನೇ ಹಂತವು ಚೆನ್ನೈ ನಗರದಲ್ಲಿ ಮೆಟ್ರೋ ರೈಲು ಜಾಲದ ವಿಸ್ತರಣೆಯೊಂದಿಗೆ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿರೀಕ್ಷೆಯಿದೆ ಮತ್ತು ನಗರದ ಹೆಚ್ಚು ಜನದಟ್ಟಣೆಯ ಮಾರ್ಗಗಳಲ್ಲಿ ವಿಶೇಷವಾಗಿ ಅದು ಪರಿಣಾಮ ಬೀರುತ್ತದೆ. ರಸ್ತೆ ಸಂಚಾರವನ್ನು ಕಡಿಮೆ ಮಾಡುವುದರಿಂದ ವಾಹನಗಳ ಸುಗಮ ಚಲನೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಹಾಗು ಒಟ್ಟಾರೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಇತ್ಯಾದಿಗಳಿಗೆ ಕಾರಣವಾಗಬಹುದು.
ಪರಿಸರ ಪ್ರಯೋಜನಗಳು: ಎರಡನೇ ಹಂತದ ಮೆಟ್ರೋ ರೈಲು ಯೋಜನೆಯ ಸೇರ್ಪಡೆ ಮತ್ತು ಚೆನ್ನೈ ನಗರದಲ್ಲಿ ಒಟ್ಟಾರೆ ಮೆಟ್ರೋ ರೈಲು ಜಾಲದ ಹೆಚ್ಚಳದೊಂದಿಗೆ, ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಸಾರಿಗೆಗೆ ಹೋಲಿಸಿದರೆ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಆರ್ಥಿಕ ಬೆಳವಣಿಗೆ: ಪ್ರಯಾಣದ ಸಮಯದಲ್ಲಿ ಇಳಿಕೆ ಮತ್ತು ನಗರದ ವಿವಿಧ ಭಾಗಗಳಿಗೆ ಸುಧಾರಿತ ಪ್ರವೇಶವು ವ್ಯಕ್ತಿಗಳು ತಮ್ಮ ಕೆಲಸದ ಸ್ಥಳಗಳನ್ನು ಹೆಚ್ಚು ದಕ್ಷತೆಯುಕ್ತವಾಗಿ/ಪರಿಣಾಮಕಾರಿಯಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಎರಡನೇ ಹಂತದ ನಿರ್ಮಾಣ ಮತ್ತು ಕಾರ್ಯಾಚರಣೆಯು ನಿರ್ಮಾಣ ಕಾರ್ಮಿಕರಿಂದ ಹಿಡಿದು ಆಡಳಿತ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಲ್ಲದೆ, ವರ್ಧಿತ ಸಂಪರ್ಕವು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ, ವಿಶೇಷವಾಗಿ ಹಿಂದೆ ಕಡಿಮೆ ಪ್ರವೇಶಿಸಬಹುದಾದ ಪ್ರದೇಶಗಳಲ್ಲಿ ಆದರೆ ಈಗ ಹೊಸ ಮೆಟ್ರೋ ನಿಲ್ದಾಣಗಳ ಬಳಿಯ ಪ್ರದೇಶಗಳಲ್ಲಿ, ಹೂಡಿಕೆ ಮತ್ತು ಅಭಿವೃದ್ಧಿಯನ್ನು ಆಕರ್ಷಿಸುತ್ತದೆ.
ಸಾಮಾಜಿಕ ಪರಿಣಾಮ: ಚೆನ್ನೈನಲ್ಲಿ ಎರಡನೇ ಹಂತದ ಮೆಟ್ರೋ ರೈಲು ಜಾಲದ ವಿಸ್ತರಣೆಯು ಸಾರ್ವಜನಿಕ ಸಾರಿಗೆಗೆ ಹೆಚ್ಚು ಸಮಾನ ಪ್ರವೇಶವನ್ನು ಒದಗಿಸುತ್ತದೆ, ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಾರಿಗೆ ಅಸಮಾನತೆಯನ್ನು ಕಡಿಮೆ ಮಾಡುತ್ತದೆ, ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ಉನ್ನತ ಜೀವನದ ಗುಣಮಟ್ಟಕ್ಕೆ ಕೊಡುಗೆ ನೀಡುತ್ತದೆ.
ಎರಡನೇ ಹಂತದ ಚೆನ್ನೈ ಮೆಟ್ರೋ ರೈಲು ಯೋಜನೆಯು ನಗರದ ಪರಿವರ್ತಕ ಅಭಿವೃದ್ಧಿಗೆ ಹಾದಿಯಾಗಲಿದೆ. ಇದು ವರ್ಧಿತ ಸಂಪರ್ಕ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ, ಪರಿಸರ ಪ್ರಯೋಜನಗಳು, ಆರ್ಥಿಕ ಬೆಳವಣಿಗೆ ಮತ್ತು ಸುಧಾರಿತ ಜೀವನದ ಗುಣಮಟ್ಟವನ್ನು ತಲುಪಿಸುವ ಭರವಸೆ ನೀಡುತ್ತದೆ. ಪ್ರಮುಖ ನಗರ ಸವಾಲುಗಳನ್ನು ಎದುರಿಸುವ ಮೂಲಕ ಮತ್ತು ಭವಿಷ್ಯದ ವಿಸ್ತರಣೆಗೆ ಅಡಿಪಾಯವನ್ನು ಒದಗಿಸುವ ಮೂಲಕ, ಹಂತ -2 ನಗರದ ಅಭಿವೃದ್ಧಿ ಪಥ ಮತ್ತು ಸುಸ್ಥಿರತೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
*****
(Release ID: 2061798)
Visitor Counter : 57
Read this release in:
Odia
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam