ಉಕ್ಕು ಸಚಿವಾಲಯ
azadi ka amrit mahotsav g20-india-2023

ಸರ್ಕಾರಿ ಹರ್ಕೇಶ್ ನಗರ ಶಾಲೆಯಲ್ಲಿ  ಕೇಂದ್ರ ಉಕ್ಕು ಸಚಿವಾಲಯವು "ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ (4ಎಸ್)" ಅಭಿಯಾನ ಆಯೋಜಿಸಿದ್ದು, ವಿದ್ಯಾರ್ಥಿಗಳ ಸ್ವಚ್ಛತೆಯ ಬದ್ಧತೆಗಾಗಿ‌ ಅವರನ್ನು ಪೃಥಕ್ ಫೌಂಡೇಶನ್‌ ನೊಂದಿಗೆ ಜೊತೆಸೇರಿ ಗೌರವಿಸಿದೆ


"ಸ್ವಚ್ಚತೆಯೇ ಸೇವೆ (ಸ್ವಚ್ಛತಾ ಹಿ ಸೇವಾ)" ಅಭಿಯಾನದಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಕಲಾಚಿತ್ರ ಮೂಲಕ ಪ್ರದರ್ಶಿಸಿದರು

Posted On: 01 OCT 2024 11:49AM by PIB Bengaluru

ಕೇಂದ್ರ ಉಕ್ಕು ಸಚಿವಾಲಯವು , ಸೈಲ್‌ ಮತ್ತು ಪೃಥಕ್ ಫೌಂಡೇಶನ್‌ನ ಸಹಯೋಗದೊಂದಿಗೆ ಓಖ್ಲಾ ಘಟ್ಟ-2ರ ಹರ್ಕೇಶ್ ನಗರದ ಸರಕಾರ ಹುಡುಗರ/ಹುಡುಗಿಯರ ಹಿರಿಯ ಪ್ರೌಢ ಶಾಲೆಯಲ್ಲಿ ಸ್ವಚ್ಚತೆಯೇ ಸೇವೆ (ಸ್ವಚ್ಛತಾ ಹಿ ಸೇವಾ ) 2024 ರ ಭಾಗವಾಗಿ " ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ (4ಎಸ್) ಅಭಿಯಾನ" ವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಉಕ್ಕು ಸಚಿವಾಲಯದ ಉಪ ಕಾರ್ಯದರ್ಶಿ ಶ್ರೀ ಸುಭಾಷ್ ಕುಮಾರ್,  ಪೃಥಕ್ ಫೌಂಡೇಶನ್ ಅಧ್ಯಕ್ಷ ಶ್ರೀ ಅಭಯ್ ರಾಜ್ ಸಿಂಗ್, ಜಿಜಿಎಸ್.ಎಸ್.ಎಸ್. ನ ಪ್ರಾಂಶುಪಾಲರಾದ ಶ್ರೀಮತಿ ಶೀತಲ್ ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

"ಸ್ವಚ್ಚತೆಯೇ ಸೇವೆ (ಸ್ವಚ್ಛತಾ ಹಿ ಸೇವಾ)" ಎಂಬ ಪರಿಕಲ್ಪನೆಯಲ್ಲಿ ಶಾಲೆಯ 200 ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಕಲ್ಪನೆಗಳನ್ನು ಕಲಾಚಿತ್ರ ಮೂಲಕ ಪ್ರದರ್ಶಿಸಿದರು.

ಈ ವರ್ಷ ಸ್ವಾತಂತ್ರ್ಯ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛತೆಯು ದೈನಂದಿನ ಜೀವನದ ಮೂಲಭೂತ ಅಂಶವಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ಒತ್ತಿಹೇಳಿದರು. ರಾಷ್ಟ್ರದಾದ್ಯಂತ ಸ್ವಚ್ಛತೆಯ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡುತ್ತದೆ. ಈ ವರ್ಷದ ಪರಿಕಲ್ಪನೆಯಾಧ- ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ (4ಎಸ್) 2024, ನಡವಳಿಕೆಯ ಬದಲಾವಣೆಯನ್ನು ಉತ್ತೇಜಿಸುವ ಕಡೆಗೆ ಮೂಲಭೂತ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ (4ಎಸ್) 2024 ಅಭಿಯಾನವನ್ನು ಮೂರು ಪ್ರಮುಖ ಸ್ತಂಭಗಳ ಸುತ್ತಲೂ ನಿರ್ಮಿಸಲಾಗಿದೆ, ಅವುಗಳೆಂದರೆ, (i) ಸ್ವಚ್ಚತೆಯ ಪಾಲುಗಾರಿಕೆ (ಸ್ವಚ್ಛತಾ ಕಿ ಭಾಗಿದರಿ); (ii) ಸಂಪೂರ್ಣ ಸ್ವಚ್ಛತೆ; ಮತ್ತು (iii) ಸಫಾಯಿ ಮಿತ್ರ ಸುರಕ್ಷಾ ಶಿಬಿರ

"ಇಡೀ ಪೃಥಕ್ ಫೌಂಡೇಶನ್ ಕುಟುಂಬದ ಪರವಾಗಿ, ಕಾರ್ಯಕ್ರಮ ಅನುಷ್ಠಾನಕ್ಕೆ , ಸಾಗಣೆ ವ್ಯವಸ್ಥೆ ಮತ್ತು ಸುಗಮ ಕಾರ್ಯಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಪೃಥಕ್ ಫೌಂಡೇಶನ್ ಅನ್ನು ಪೋಷಕ ಪಾಲುದಾರರಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೇಂದ್ರ ಉಕ್ಕು ಸಚಿವಾಲಯ ಮತ್ತು ಎಸ್. ಎ. ಐ. ಎಲ್. ತಂಡಕ್ಕೆ ನಾವು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇವೆ” ಎಂದು ಪೃಥಕ್ ಫೌಂಡೇಶನ್ ಅಧ್ಯಕ್ಷರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.  

ಡ್ರಾಯಿಂಗ್ ಪೋಸ್ಟರ್‌ ಗಳ ಜೊತೆಗೆ ಸಹಿ ಮಾಡಿದ ಪ್ರಮಾಣಪತ್ರಗಳನ್ನು ಪೃಥಕ್ ಫೌಂಡೇಶನ್‌ ಗೆ ನೀಡಲಾಯಿತು.

 

 *****
 



(Release ID: 2061017) Visitor Counter : 8


Read this release in: Telugu , English , Urdu , Hindi , Tamil