ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತೀಯ ಆಹಾರ ನಿಗಮ (ಎಫ್ ಸಿ ಐ) ತನ್ನ ಡಿಪೋಗಳಲ್ಲಿ ಆಧುನಿಕ ವಿಡಿಯೋ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಿದೆ
Posted On:
01 OCT 2024 1:10PM by PIB Bengaluru
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ 100 ದಿನಗಳ ಸಾಧನೆಗಳ ಭಾಗವಾಗಿ, ಭಾರತೀಯ ಆಹಾರ ನಿಗಮವು ತನ್ನ ಶೇಖರಣಾ ಡಿಪೋಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಈಗಿರುವ ಅನಲಾಗ್ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯಿಂದ ಆಧುನಿಕ ಐಪಿ ಆಧಾರಿತ ವ್ಯವಸ್ಥೆಯನ್ನಾಗಿ ನವೀಕರಿಸಲು ಪ್ರಾರಂಭಿಸಿದೆ.. ನಿಗಮದಒಡೆತನದಲ್ಲಿರುವ 561ಡಿಪೋಗಳಲ್ಲಿ ಸರಿಸುಮಾರು 23,750 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಪರಿವರ್ತನೆಯು ಶ್ಯಾಮನಗರದಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ನಡೆಸಿದ ಯಶಸ್ವಿ ಪ್ರೂಫ್ ಆಫ್ ಕಾನ್ಸೆಪ್ಟ್ (ಪಿಒಸಿ) ಕಾರ್ಯಕ್ರಮವನ್ನು ಆಧರಿಸಿದೆ. ಈ ಹೊಸ ಐಪಿ ಆಧಾರಿತ ವ್ಯವಸ್ಥೆಯ ಅನುಷ್ಠಾನವು ಹೆಚ್ಚಿನ ರೆಸಲ್ಯೂಶನ್ ಇಮೇಜಿಂಗ್, ಸುಧಾರಿತ ಸ್ಕೇಲೆಬಿಲಿಟಿ ಮತ್ತು ರಿಮೋಟ್ ಅಕ್ಸೆಸ್ ಮೂಲಕ ಮೇಲ್ವಿಚಾರಣಾ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಆಹಾರ ಧಾನ್ಯಗಳ ಖರೀದಿ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಭಾರತದ ಆಹಾರ ಧಾನ್ಯ ನಿರ್ವಹಣೆಗೆ ಭಾರತೀಯ ಆಹಾರ ನಿಗಮವು ಮುಖ್ಯವಾಗಿದೆ. ಈ ಸಾಮರ್ಥ್ಯವು ರಾಷ್ಟ್ರದ ಆಹಾರ ಭದ್ರತೆಯನ್ನು ಹೆಚ್ಚಿಸುವುದಲ್ಲದೆ ಕೃಷಿ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ನಿಗಮದ ಅನೇಕ ಕಾರ್ಯಗಳಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸರ್ಕಾರವು ಪ್ರಾರಂಭಿಸಿದ ವಿವಿಧ ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಸಂಗ್ರಹಣೆಯು ಅತ್ಯಗತ್ಯವಾಗಿದ್ದು ರಾಷ್ಟ್ರವ್ಯಾಪಿ ಬಫರ್ ಸ್ಟಾಕ್ಗಳನ್ನು ನಿರ್ವಹಿಸುವುದನ್ನು ಖಚಿತಪಡಿಸುತ್ತದೆ. 500 ಕ್ಕೂ ಹೆಚ್ಚು ನಿಗಮದ ಒಡೆತನದಲ್ಲಿರುವ ಡಿಪೋಗಳು ದೇಶಾದ್ಯಂತ ಹರಡಿಕೊಂಡಿವೆ, ಈ ಶೇಖರಣಾ ಕಾರ್ಯಾಚರಣೆಗಳ ಪರಿಣಾಮಕಾರಿ ಕಣ್ಗಾವಲು ಎಲ್ಲಾ ಸಮಯದಲ್ಲೂ ಅತ್ಯಗತ್ಯವಾಗಿದೆ.
ಕಳೆದ ಕೆಲವು ವರ್ಷಗಳಿಂದ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಣಾಮಕಾರಿ ಕಣ್ಗಾವಲನ್ನು ಖಚಿತಪಡಿಸಿಕೊಳ್ಳಲು ನಿಗಮದ ವಿವಿಧ ಡಿಪೋಗಳಲ್ಲಿ ಸ್ಥಾಪಿಸಿದೆ. 2013-14ರಲ್ಲಿ 61 ಡಿಪೋಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 2014-15ರಲ್ಲಿ ಅವುಗಳ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, 2018ರ ವೇಳೆಗೆ 446 ಸ್ವಂತ ಡಿಪೋಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ಒಟ್ಟು 516 ಎಫ್ ಸಿಐ ಡಿಪೋಗಳು ಸಿಸಿಟಿವಿ ಕಣ್ಗಾವಲಿನಲ್ಲಿವೆ. ಈ ಕ್ಯಾಮೆರಾಗಳ ಲೈವ್ ವೆಬ್ ಫೀಡ್ ಎಫ್ ಸಿಐ ಜಾಲತಾಣದಲ್ಲಿ "ನಿಮ್ಮ ಡಿಪೋವನ್ನು ನೋಡಿ"ಟ್ಯಾಬ್ ನಲ್ಲಿ ಲಭ್ಯವಿದೆ.
ಹೊಸ ಕಣ್ಗಾವಲು ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕ್ಯಾಮರಾ ಟ್ಯಾಂಪರಿಂಗ್ , ಕ್ಯಾಮೆರಾ ಫೀಲ್ಡ್ ಆಫ್ ವ್ಯೂ ಚೇಂಜ್, ಕ್ಯಾಮರಾ ಬ್ಲರ್/ಔಟ್ ಆಫ್ ಫೋಕಸ್, ಮೋಷನ್ ಡಿಟೆಕ್ಷನ್ ಮತ್ತು ಟ್ರಿಪ್ ವೈರ್ ಮುಂತಾದ ಆನ್ ಬೋರ್ಡ್ ಅನಾಲಿಟಿಕ್ಸ್ ವೈಶಿಷ್ಟ್ಯಗಳಿಗೆ ಸಹಾಯಕವಾಗಿದೆ ನಿಗಮದ ಪ್ರಧಾನ ಕಛೇರಿಯಲ್ಲಿ ಈ ಹೊಸ ಕಣ್ಗಾವಲು ವ್ಯವಸ್ಥೆಯು ಕೇಂದ್ರೀಕೃತ ಕಮಾಂಡ್ ಕಂಟ್ರೋಲ್ (ಸಿಸಿಸಿ) ಮತ್ತು ನೆಟ್ವರ್ಕ್ ಆಪರೇಟಿಂಗ್ ಸೆಂಟರ್ (ಎನ್ ಒ ಸಿ) ಅನ್ನು ಒಳಗೊಂಡಿರುತ್ತದೆ.
ಸ್ಥಾಪಿತ ವ್ಯವಸ್ಥೆಯ ಸಾಮರ್ಥ್ಯವನ್ನು ಕಮಾಂಡ್ ಕಂಟ್ರೋಲ್ ಸೆಂಟರ್ (ಸಿಸಿಸಿ) ಮೂಲಕ ಕೇಂದ್ರೀಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ, ಜೊತೆಗೆ ಬೇಡಿಕೆಯ ಆಧಾರದ ಮೇಲೆ ಘಟಿಸಬಹುದಾದ ದತ್ತಾಂಶವನ್ನು ಸಂಗ್ರಹಿಸುವ ಅವಕಾಶವಿದೆ. ಇದು ಸುಧಾರಿತ ವೀಡಿಯೋ ಅನಾಲಿಟಿಕ್ಸ್ ಮತ್ತು ಬಲಪಡಿಸಿದ ಭದ್ರತಾ ಕ್ರಮಗಳ ವಿವರಗಳನ್ನು ಸಹ ನೀಡುತ್ತದೆ, ಎಫ್ ಸಿ ಐ ತನ್ನ ಡಿಪೋಗಳಲ್ಲಿ ದಿನನಿತ್ಯದ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಪ್ರಸ್ತಾವಿತ ವ್ಯವಸ್ಥೆಯು ಪ್ರಾಯೋಗಿಕ ಆಧಾರದ ಮೇಲೆ ಪರಿಸರ ಮತ್ತು ತೇವಾಂಶ ಸಂವೇದಕಗಳನ್ನು ಒಳಗೊಂಡಿರುತ್ತದೆ, ಇದು ಅದರ ಕಾರ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ. ಈ ಸಂವೇದಕಗಳು ಪರಿಸರ ಪರಿಸ್ಥಿತಿಗಳ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತವೆ, ಅವುಗಳ ಪ್ರಭಾವವನ್ನು ನಿರ್ಣಯಿಸಲು ಮೌಲ್ಯಯುತವಾದ ದತ್ತಾಂಶವನ್ನು ಒದಗಿಸುತ್ತವೆ ಮತ್ತು ಭವಿಷ್ಯದಲ್ಲಿ ವ್ಯವಸ್ಥೆಯ ಕಾರ್ಯಕ್ಷಮತೆಗೆ ಸೂಕ್ತವಾದ ಪರಿಸ್ಥಿತಿಗಳನ್ನು ಖಚಿತಪಡಿಸುತ್ತವೆ.
*****
(Release ID: 2060953)
Visitor Counter : 31