ಹಣಕಾಸು ಸಚಿವಾಲಯ
ಇಟಾನಗರದಲ್ಲಿ ಈಶಾನ್ಯ ಪ್ರದೇಶದ 7 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಕಾರ್ಯಕ್ಷಮತೆ ಪರಾಮರ್ಶೆ ಸಭೆ ನಡೆಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಕೃಷಿ, ತೋಟಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಾಲ ನೀಡುವ ಬಗ್ಗೆ ಗಮನ ಕೇಂದ್ರೀಕರಿಸಬೇಕು: ಶ್ರೀಮತಿ ನಿರ್ಮಲಾ ಸೀತಾರಾಮನ್
Posted On:
30 SEP 2024 9:16PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ಸೀತಾರಾಮನ್ ಅವರು ಅರುಣಾಚಲ ಪ್ರದೇಶದ ಇಟಾನಗರದಲ್ಲಿಂದು ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳನ್ನು ಒಳಗೊಂಡ ಈಶಾನ್ಯ ಪ್ರದೇಶದ 7 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಕಾರ್ಯಕ್ಷಮತೆ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹಣಕಾಸು ಸೇವೆಗಳ ಇಲಾಖೆ(ಡಿಎಫ್ಎಸ್)ಯ ಕಾರ್ಯದರ್ಶಿ ಶ್ರೀ ಎಂ. ನಾಗರಾಜು, ಆರ್|ಆರ್|ಬಿಗಳು ಮತ್ತು ಪ್ರಾಯೋಜಕ ಬ್ಯಾಂಕ್‌ಗಳ ಅಧ್ಯಕ್ಷರು(ಎಸ್|ಬಿಐ ಅಧ್ಯಕ್ಷರು ಮತ್ತು ಪಿಎನ್|ಬಿ ವ್ಯವಸ್ಥಾಪಕ ನಿರ್ದೇಶಕರು), ಡಿಎಫ್ಎಸ್ ಹಿರಿಯ ಅಧಿಕಾರಿಗಳು, ಆರ್|ಬಿಐ, ನಬಾರ್ಡ್ ಮತ್ತು ಸಿಡ್ಬಿ ಪ್ರತಿನಿಧಿಗಳು ಮತ್ತು 7 ರಾಜ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪರಾಮರ್ಶೆ ಸಭೆಯಲ್ಲಿ, ಈಶಾನ್ಯದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್|ಗಳ ಆರ್ಥಿಕ ಕಾರ್ಯಕ್ಷಮತೆಯ ಸುಧಾರಣೆ ಮತ್ತು 2022ರಲ್ಲಿ ನಿಯಮಿತ ಪರಾಮರ್ಶೆ ಪ್ರಾರಂಭಿಸಿದಾಗಿನಿಂದ ಆಗಿರುವ ಆರ್|ಆರ್|ಬಿಗಳ ತಂತ್ರಜ್ಞಾನ ಉನ್ನತೀಕರಣದ ಬಗ್ಗೆ ಅಧಿಕಾರಿಗಳು ಕೇಂದ್ರ ಹಣಕಾಸು ಸಚಿವರಿಗೆ ವಿವರ ನೀಡಿದರು.
2024ರ ಆರ್ಥಿಕ ಸಾಲಿನಲ್ಲಿ 15%ನಲ್ಲಿ ಇರುವ ಕ್ರೋಡೀಕೃತ ಗಂಡಾಂತರ ಸಂಭಾವ್ಯ ಬಂಡವಾಳ ಸ್ವತ್ತಿನ ಅನುಪಾತ(Capital To Risk(Weighted) Assets Ratio-ಸಿಆರ್|ಎಆರ್) ಆರೋಗ್ಯಕರ ಮಟ್ಟದಲ್ಲಿದೆ. 2023 ಆರ್ಥಿಕ ಸಾಲಿನಲ್ಲಿ ಇದ್ದ 11 ಕೋಟಿ ರೂ. ನಷ್ಟದಿಂದ ಹೊರಬಂದು 205 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭದಾಯಕತೆ ಸುಧಾರಿಸಿದೆ. ಒಟ್ಟು ಅನುತ್ಪಾದಕ ಆಸ್ತಿ(ಜಿಎನ್|ಪಿಎ))ಯ ಪ್ರಮಾಣ 2022ರಲ್ಲಿ ಇದ್ದ 15.6%ನಿಂದ 2024ರಲ್ಲಿ 7.3%ಗೆ ಸುಧಾರಿಸಿದೆ.
ಗ್ರಾಮೀಣ ಆರ್ಥಿಕತೆ ಬೆಂಬಲಿಸುವಲ್ಲಿ ಆರ್ ಆರ್ ಬಿಗಳ ನಿರ್ಣಾಯಕ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಆರ್ ಆರ್ ಬಿಗಳು, ತಮ್ಮ ಪ್ರಾಯೋಜಕ ಬ್ಯಾಂಕ್‌ಗಳ ಸಕ್ರಿಯ ಬೆಂಬಲದೊಂದಿಗೆ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮುದ್ರಾ, ಪಿಎಂ ವಿಶ್ವಕರ್ಮ ಇತ್ಯಾದಿಗಳಿಗೆ ಹೆಚ್ಚಿನ ಸಾಲ ವಿತರಣೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವರು ಒತ್ತಾಯಿಸಿದರು. ಕೃಷಿ, ತೋಟಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಾದ ಹಂದಿ ಸಾಕಣೆ, ಮೇಕೆ ಸಾಕಣೆ, ರೇಷ್ಮೆ ಕೃಷಿ, ಮೀನುಗಾರಿಕೆ ಇತ್ಯಾದಿಗಳಿಗೆ ಹೆಚ್ಚಿನ ಸಾಲ ನೀಡಲು ಗಮನ ಹರಿಸಬೇಕು ಎಂದು ಹೇಳಿದರು. ಈಶಾನ್ಯ ಪ್ರದೇಶದಲ್ಲಿ ಎಫ್|ಪಿಒ(ರೈತ ಉತ್ಪಾದಕ ಸಂಸ್ಥೆಗಳು)ಗಳನ್ನು ಉತ್ತೇಜಿಸುವಂತೆ ಸಚಿವರು ನಬಾರ್ಡ್‌ಗೆ ನಿರ್ದೇಶನ ನೀಡಿದರು.
ಈಶಾನ್ಯ ರಾಜ್ಯಗಳಲ್ಲಿ ತೋಟಗಾರಿಕೆ, ಪುಷ್ಪೋದ್ಯಮ, ರೇಷ್ಮೆ ಮತ್ತು ಪಶುಸಂಗೋಪನೆಯ ಸಾಮರ್ಥ್ಯ ಸಾಧ್ಯತೆ ಅನ್ವೇಷಿಸಲು ಆರ್ ಆರ್ ಬಿಗಳು ಸೇರಿದಂತೆ ವಿಶೇಷ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಎಸ್ಎಲ್ ಬಿಸಿ) ಸಭೆಗಳನ್ನು ನಡೆಸುವಂತೆ ಸಚಿವರು ಎಲ್ಲ ಪಾಲುದಾರರನ್ನು ಒತ್ತಾಯಿಸಿದರು. ಕೃಷಿ ಸಾಲ ಯೋಜನೆ ವಿಸ್ತರಿಸಲು ಭೂ ದಾಖಲೆಗಳ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಬೇಕು, ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಲ ಹೆಚ್ಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಸಂಚಾರಿ ಪಶುವೈದ್ಯಕೀಯ ಘಟಕಗಳು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಸಚಿವರಿಗೆ ರಾಜ್ಯಗಳಿಗೆ ಒತ್ತಾಯಿಸಿದರು.
ಈಶಾನ್ಯ ಪ್ರದೇಶದ ಪ್ರತಿಯೊಬ್ಬ ಅರ್ಹ ಫಲಾನುಭವಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ(ಪಿಎಂಜೆಡಿವೈ) ಅಡಿ ಬರಬೇಕು ಎಂದು ಸೀತಾರಾಮನ್ ಸೂಚನೆ ನೀಡಿದರು.
ರಾಜ್ಯಗಳ “ಒಂದು ಜಿಲ್ಲೆ, ಒಂದು ಉತ್ಪನ್ನ(ಒಡಿಒಪಿ)” ಮಾರಾಟಗಾರರಿಗೆ ಸಾಲ ವಿಸ್ತರಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವಾಲಯ(ಡಿಒಎನ್ಇಆರ್) ಮತ್ತು ಈಶಾನ್ಯ ಪ್ರದೇಶಗಳ ಮಂಡಳಿ(ಎನ್ಇಸಿ-ನಾರ್ತ್ ಈಸ್ಟರ್ನ್ ಕೌನ್ಸಿಲ್)ಯೊಂದಿಗೆ ಸಭೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವರು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದರು. ಎಲ್ಲಾ ಆರ್‌ಆರ್‌ಬಿಗಳು ಎಂಎಸ್‌ಎಂಇ ಚಟುವಟಿಕೆಗಳಿಗೆ ಹೊಂದಿಕೆಯಾಗುವ ಸೂಕ್ತವಾದ ಎಂಎಸ್‌ಎಂಇ ಉತ್ಪನ್ನಗಳನ್ನು ರೂಪಿಸಬೇಕು. ಉತ್ಪನ್ನಗಳ ಸಾಂದ್ರತೆ ಅಥವಾ ಉತ್ಪಾದಕತೆ ಹೆಚ್ಚಿಸಲು ವೈಯಕ್ತಿಕ ಮತ್ತು ಸ್ಥಳೀಯ ಸಂಪರ್ಕ ಹೆಚ್ಚಿಸಿಕೊಳ್ಳಬೇಕು ಎಂದು ಸೀತಾರಾಮನ್ ಸಲಹೆ ನೀಡಿದರು.
ಪ್ರಾಯೋಜಕ ಬ್ಯಾಂಕ್‌ಗಳು ಮತ್ತು ನಬಾರ್ಡ್‌ನ ಅಗತ್ಯ ಬೆಂಬಲದೊಂದಿಗೆ ಆರ್‌ಆರ್‌ಬಿಗಳು ವಿಶೇಷವಾಗಿ ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಬ್ಯಾಂಕಿಂಗ್ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಹೊಸ ಬ್ಯಾಂಕಿಂಗ್ ಟಚ್‌ಪಾಯಿಂಟ್(ಶಾಖೆ)ಗಳನ್ನು ತೆರೆಯುವಂತೆ ನಿರ್ದೇಶನ ನೀಡಲಾಯಿತು.
*****
(Release ID: 2060607)
Visitor Counter : 24