ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಡಿಜಿಟಲ್ ಆರೋಗ್ಯವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ನ  ಮೂರು ವರ್ಷಗಳ ಪರಿವರ್ತನಾತ್ಮಕ ಪ್ರಯಾಣ


67 ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು (ಎಬಿಎಚ್ಎ-ಅಭಾ) ರಚಿಸಲಾಗಿದೆ

42 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಎಬಿಎಚ್ಎಗೆ ಜೋಡಣೆ ಮಾಡಲಾಗಿದೆ

17,000 ಕ್ಕೂ ಹೆಚ್ಚು ಖಾಸಗಿ ಸೌಲಭ್ಯಗಳು ಸೇರಿದಂತೆ 1.3 ಲಕ್ಷಕ್ಕೂ ಹೆಚ್ಚು ಸೌಲಭ್ಯಗಳು ಎಬಿಡಿಎಂ-ಶಕ್ತವಾಗಿವೆ

3.3 ಲಕ್ಷ ಆರೋಗ್ಯ ಸೌಲಭ್ಯಗಳು ಮತ್ತು 4.7 ಲಕ್ಷ ಆರೋಗ್ಯ ವೃತ್ತಿಪರರು ರಾಷ್ಟ್ರೀಯ ಆರೋಗ್ಯ ಪೂರೈಕೆದಾರರ ನೋಂದಣಿಯಲ್ಲಿ ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ

Posted On: 27 SEP 2024 5:27PM by PIB Bengaluru

ದೃಢವಾದ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಸ್ಥಾಪಿಸುವ ಚಿಂತನೆಯೊಂದಿಗೆ  2021 ರ ಸೆಪ್ಟೆಂಬರ್ 27 ರಂದು ಪ್ರಾರಂಭಿಸಲಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಆರೋಗ್ಯ ಆರೈಕೆ  ಪ್ರವೇಶ, ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ರಾಷ್ಟ್ರದ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಉದ್ದೇಶದಿಂದ ಮೂರು ವರ್ಷಗಳ ಪರಿವರ್ತನಶೀಲ ಪ್ರಯಾಣವನ್ನು ಕೈಗೊಂಡಿದೆ. ಇದು ಡಿಜಿಟಲ್ ಆರೋಗ್ಯ ವಹಿವಾಟುಗಳಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ವನ್ನು ಬಳಸಿಕೊಳ್ಳುತ್ತದೆ.

ಉದ್ದೇಶವನ್ನು ರಾಷ್ಟ್ರೀಯ ಆರೋಗ್ಯ ನೀತಿ (2017) ಯಲ್ಲಿ ಕಾಣಬಹುದು, ಇದು ಪ್ರವೇಶ, ಕ್ಷೇಮ/ ಸ್ವಾಸ್ಥ್ಯ-ಕೇಂದ್ರಿತ ವಿಧಾನ ಮತ್ತು ಡಿಜಿಟಲ್ ತಂತ್ರಜ್ಞಾನಗಳಿಗೆ ನಿರ್ದಿಷ್ಟ ಗುರಿಗಳನ್ನು ಹೊಂದಿತ್ತು. ಇದರ ನಂತರ ವಿಶಿಷ್ಟ ಆರೋಗ್ಯ ಗುರುತಿಸುವಿಕೆಗಳು ಮತ್ತು ಪರಿಶೀಲಿಸಿದ ರಿಜಿಸ್ಟ್ರಿಗಳಂತಹ ಡಿಜಿಟಲ್ ಆರೋಗ್ಯದ ಘಟಕಗಳೊಂದಿಗೆ ರಾಷ್ಟ್ರೀಯ ಆರೋಗ್ಯ ಸ್ಟ್ಯಾಕ್ (2018) ಮತ್ತು ಎಬಿಡಿಎಂ ಅನುಷ್ಠಾನಕ್ಕೆ ಮಾರ್ಗದರ್ಶನವನ್ನು ಒದಗಿಸುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ನೀಲನಕ್ಷೆ (2019) ಯನ್ನು ತರಲಾಯಿತು.

ಎಬಿಡಿಎಂನ ಪ್ರಮುಖ ಅಂಶಗಳು:

ನಾಗರಿಕರಿಗೆ ವಿಶಿಷ್ಟ ಆರೋಗ್ಯ ಗುರುತಿಸುವಿಕೆ: ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಬಲವಾದ ಮತ್ತು ವಿಶ್ವಾಸಾರ್ಹ ಗುರುತನ್ನು ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೆ ವಿಶಿಷ್ಟ ಆರೋಗ್ಯ ಎಬಿಎಚ್ಎ ಐಡಿ. (ಅಭಾ ಗುರುತಿನ ಕಾರ್ಡ್ )

ಹೆಲ್ತ್ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (ಎಚ್ಪಿಆರ್): ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಆರೋಗ್ಯ ಸೇವೆಗಳ ವಿತರಣೆಯಲ್ಲಿ ತೊಡಗಿರುವ ಎಲ್ಲಾ ಆರೋಗ್ಯ ವೃತ್ತಿಪರರ ಸಮಗ್ರ ಸಂಗ್ರಹ. ಇದು ಭಾರತದ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.

ಆರೋಗ್ಯ ಸೌಲಭ್ಯ ನೋಂದಣಿಗಳು (ಎಚ್ಎಫ್ಆರ್): ವಿವಿಧ ವೈದ್ಯ ಪದ್ಧತಿಗಳಲ್ಲಿ ರಾಷ್ಟ್ರದ ಆರೋಗ್ಯ ಸೌಲಭ್ಯಗಳ ಸಮಗ್ರ ಭಂಡಾರ. ಇದು ಆಸ್ಪತ್ರೆಗಳು, ಚಿಕಿತ್ಸಾಲಯಗಳು, ರೋಗನಿರ್ಣಯ ಪ್ರಯೋಗಾಲಯಗಳು ಮತ್ತು ಇಮೇಜಿಂಗ್ ಕೇಂದ್ರಗಳು, ಔಷಧಾಲಯಗಳು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡಿದೆ.

ಆರೋಗ್ಯ ಮಾಹಿತಿ ವಿನಿಮಯ ಮತ್ತು ಸಮ್ಮತಿ ವ್ಯವಸ್ಥಾಪಕ (ಎಚ್ಐಇ-ಸಿಎಂ): ನಾಗರಿಕರಿಗೆ ತಮ್ಮ ಆರೋಗ್ಯ ದಾಖಲೆಗಳನ್ನು ಸುರಕ್ಷಿತವಾಗಿ ಪ್ರವೇಶಿಸಲು ಮತ್ತು ಹಂಚಿಕೊಳ್ಳಲು ಅಧಿಕಾರ ನೀಡುತ್ತದೆ, ದತ್ತಾಂಶ (ಡೇಟಾ)  ವಿನಿಮಯವು ಮಾಹಿತಿಯುಕ್ತ ಸಮ್ಮತಿಯಿಂದ ನಡೆಸಲ್ಪಡುತ್ತದೆ ಎಂಬುದನ್ನೂ  ಖಚಿತಪಡಿಸುತ್ತದೆ.

ಏಕೀಕೃತ ಆರೋಗ್ಯ ಇಂಟರ್ಫೇಸ್ (ಯುಎಚ್ಐ): ಆರೋಗ್ಯ ಸೇವೆಗಳ ಆವಿಷ್ಕಾರ ಮತ್ತು ವಿತರಣೆಯನ್ನು ಸುಗಮಗೊಳಿಸುತ್ತದೆ, ಆ ಮೂಲಕ ಆರೋಗ್ಯ ಸಂವಹನಗಳನ್ನು ಸುವ್ಯವಸ್ಥಿತಗೊಳಿಸುತ್ತದೆ ಮತ್ತು ಸೇವಾ ಪ್ರವೇಶವನ್ನು ಸುಧಾರಿಸುತ್ತದೆ.

ನ್ಯಾಷನಲ್ ಹೆಲ್ತ್ ಕ್ಲೈಮ್ ಎಕ್ಸ್ಚೇಂಜ್ (ಎಚ್ಸಿಎಕ್ಸ್): ವಿಮಾ ಪಾವತಿ ಪರಿಸರ ವ್ಯವಸ್ಥೆಯನ್ನು ಪ್ರಮಾಣೀಕರಿಸುತ್ತದೆ, ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ.

ಡೇಟಾ ಗೌಪ್ಯತೆ/ಖಾಸಗಿತನ ಮತ್ತು ಭದ್ರತೆ: ಆರೋಗ್ಯ-ಸಂಬಂಧಿತ ವೈಯಕ್ತಿಕ ಮಾಹಿತಿಯ ಭದ್ರತೆ, ರಹಸ್ಯ ಕಾಪಾಡುವಿಕೆ ಮತ್ತು ಗೌಪ್ಯತೆ ಉಪಕ್ರಮದ ಕೇಂದ್ರಬಿಂದುವಾಗಿದೆ. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023 (ಡಿಪಿಡಿಪಿ ಕಾಯ್ದೆ) ಗೆ ಅನುಗುಣವಾಗಿ, ಎಬಿಡಿಎಂನ ಸಂಯುಕ್ತ ವಾಸ್ತುಶಿಲ್ಪವು (ಸಂಯೋಜಿತ ವ್ಯವಸ್ಥೆಯು) ರೋಗಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿಯ ಭದ್ರತೆ, ಗೌಪ್ಯತೆ ಮತ್ತು ಸುರಕ್ಷಿತ ಹಂಚಿಕೆಯನ್ನು ಖಚಿತಪಡಿಸುತ್ತದೆ.

ಪರಸ್ಪರ ಕಾರ್ಯಸಾಧ್ಯತೆ: ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ವಿವಿಧ ಭಾಗೀದಾರರು/ಮಧ್ಯಸ್ಥಗಾರರ ನಡುವೆ ಸುರಕ್ಷಿತ ಡೇಟಾ ವಿನಿಮಯವನ್ನು ಸಕ್ರಿಯಗೊಳಿಸುವ ಮೂಲಕ ತಡೆರಹಿತ ಮತ್ತು ಪರಿಣಾಮಕಾರಿ ಆರೋಗ್ಯ ಆರೈಕೆ ವಿತರಣೆಯನ್ನು ಸುಗಮಗೊಳಿಸುತ್ತದೆ. ಹೆಚ್ಚುವರಿಯಾಗಿ, ಆರೋಗ್ಯ ಮಾಹಿತಿ ಸಮ್ಮತಿ ವ್ಯವಸ್ಥಾಪಕ/ನಿರ್ವಾಹಕ (ಎಚ್ಐಇ-ಸಿಎಂ), ರಾಷ್ಟ್ರೀಯ ಆರೋಗ್ಯ ಕ್ಲೈಮ್ ಎಕ್ಸ್ಚೇಂಜ್ (ಎನ್ಎಚ್ಸಿಎಕ್ಸ್) ಮತ್ತು ಏಕೀಕೃತ ಆರೋಗ್ಯ ಇಂಟರ್ಫೇಸ್ (ಯುಎಚ್ಐ) ಎಂಬ ಮೂರು ಗೇಟ್ವೇಗಳು ಪರಸ್ಪರ ಕಾರ್ಯಸಾಧ್ಯತೆಯನ್ನು ಸುಗಮಗೊಳಿಸುತ್ತವೆ.

ಪಾರದರ್ಶಕತೆ: ಇದು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು, ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರ/ಪ್ರೋಟೋಕಾಲ್ಗಳ ಅನುಸರಣೆಯನ್ನು ಸುಗಮಗೊಳಿಸಲು ಮತ್ತು ಸೇವೆಗಳ ಬೆಲೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆರೋಗ್ಯ ಸೇವೆಗಳಿಗೆ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿಗಳಿಗೆ ಆಯ್ಕೆಯನ್ನು ಒದಗಿಸುತ್ತದೆ.

ಎಬಿಡಿಎಂನ ಪ್ರಮುಖ ಉಪಕ್ರಮಗಳು:

ಸ್ಕ್ಯಾನ್ ಮಾಡಿ ಮತ್ತು ಹಂಚಿಕೊಳ್ಳಿ: ರೋಗಿಗಳು ಸೌಲಭ್ಯದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಅವರ ಜನಸಂಖ್ಯಾ ವಿವರಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲು ಕ್ಯೂಆರ್ ಕೋಡ್ ಆಧಾರಿತ ಒಪಿಡಿ ನೋಂದಣಿ ಸೇವೆ. ಇದು ನೋಂದಣಿ ಕೌಂಟರ್ ನಲ್ಲಿ ಉದ್ದನೆಯ ಸರತಿ ಸಾಲುಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಪೂರ್ಣ ಹಾಗು ನಿಖರವಲ್ಲದ ಡೇಟಾದ ಪ್ರವೇಶವನ್ನು ಕಡಿಮೆ ಮಾಡುತ್ತದೆ. ಇದು 5 ಕೋಟಿಗೂ ಹೆಚ್ಚು ಒಪಿಡಿ ಟೋಕನ್ಗಳನ್ನು ದಾಖಲಿಸಿದೆ, ಕಾಯುವ ಸಮಯವನ್ನು ಒಂದು ಗಂಟೆಯಿಂದ ಅರ್ಧ ಗಂಟೆಗೆ ಗಮನಾರ್ಹವಾಗಿ ಕಡಿಮೆ ಮಾಡಿದೆ, ಜೊತೆಗೆ 2.5 ಕೋಟಿ ಮಾನವ-ಗಂಟೆಗಳನ್ನು ಉಳಿಸಿದೆ.

ಡಿಜಿಟಲ್ ಆರೋಗ್ಯ ಪ್ರೋತ್ಸಾಹಕ ಯೋಜನೆ (ಡಿಎಚ್ಐಎಸ್): ಎಬಿಡಿಎಂ ಪರಿಸರ ವ್ಯವಸ್ಥೆಯಲ್ಲಿ ಭಾಗವಹಿಸಲು ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಅಳವಡಿಸಿಕೊಳ್ಳಲು ಆರ್ಥಿಕ ಪ್ರೋತ್ಸಾಹವನ್ನು 2023 ರ ಜನವರಿ 1 ರಿಂದ ಅಳವಡಿಸಲಾಯಿತು. ಇದು 4 ಕೋಟಿಗಳವರೆಗೆ ಪ್ರೋತ್ಸಾಹವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ ಮತ್ತು ಖಾಸಗಿ ಹಾಗು ಸಾರ್ವಜನಿಕ ಭಾಗೀದಾರರಲ್ಲಿ/ಆಟಗಾರರಲ್ಲಿ ಗಮನಾರ್ಹ ಆಕರ್ಷಣೆಯನ್ನು ಗಳಿಸಿದೆ. ಈ ಉಪಕ್ರಮವು ಡಿಜಿಟಲ್ ಆರೋಗ್ಯ ಪದ್ಧತಿಗಳ ಅಳವಡಿಕೆ ಮತ್ತು ಅನುಷ್ಠಾನವನ್ನು ಪ್ರೋತ್ಸಾಹಿಸುತ್ತಿದೆ.

ಖಾಸಗಿ ವಲಯದ ಅಳವಡಿಕೆಗೆ ಮೈಕ್ರೋಸೈಟ್ಗಳು: ಎಬಿಡಿಎಂ ಅಳವಡಿಕೆಯಲ್ಲಿ ವಿವಿಧ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿರುವ ಮೈಕ್ರೋಸೈಟ್ ಉಪಕ್ರಮ, ವಿಶೇಷವಾಗಿ ಖಾಸಗಿ ವಲಯದ ಪೂರೈಕೆದಾರರಿಗೆ, 106 ಮೈಕ್ರೋಸೈಟ್ಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ, ಇದು ಆರಂಭಿಕ ಗುರಿಯಾದ 100 ಅನ್ನು ಮೀರಿದೆ.

ಎಂಡ್ ಟು ಎಂಡ್ (ಆರಂಭದಿಂದ ಕೊನೆಯವರೆಗೆ) ಎಬಿಡಿಎಂ ಪೈಲಟ್ ಅಳವಡಿಕೆ: ಎಂಡ್-ಟು-ಎಂಡ್ ಎಬಿಡಿಎಂ ಅಳವಡಿಕೆಯ ಮೂಲಕ ವಿವಿಧ ಸೌಲಭ್ಯ ಹಂತಗಳಲ್ಲಿ ದೇಶಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಸೌಲಭ್ಯಗಳನ್ನು ಡಿಜಿಟಲೀಕರಣಗೊಳಿಸುವುದು ಈ ಚಾಲನಾ ಯೋಜನೆಯ (ಪೈಲಟ್ನ)  ಉದ್ದೇಶವಾಗಿದೆ. ಈ ಸೌಲಭ್ಯಗಳನ್ನು ಮಾದರಿ ಎಬಿಡಿಎಂ ಸೌಲಭ್ಯಗಳಾಗಿ ಮಾಡುವುದು ಇದರ ಆದ್ಯತೆಯಾಗಿದೆ, ಇದು ಭವಿಷ್ಯದ ಡಿಜಿಟಲೀಕರಣ ಪ್ರಯತ್ನಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. 2024ರ ಜುಲೈ 27ರ ಹೊತ್ತಿಗೆ, ಒಟ್ಟು 131 ಆರೋಗ್ಯ ಸೌಲಭ್ಯಗಳನ್ನು ಭಾಗವಹಿಸಲು ಆಯ್ಕೆ ಮಾಡಲಾಗಿದೆ.

ಎಬಿಡಿಎಂನ ಸಾಧನೆಗಳು:

67 ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು (ಎಬಿಎಚ್ಎ) ರಚಿಸಲಾಗಿದೆ, ಇದು ನಾಗರಿಕರಿಗೆ ಆರೋಗ್ಯ ದಾಖಲೆಗಳ ಸುರಕ್ಷಿತ ಪ್ರವೇಶ ಮತ್ತು ಹಂಚಿಕೆಗಾಗಿ ವಿಶಿಷ್ಟ ಡಿಜಿಟಲ್ ಆರೋಗ್ಯ ಐಡಿಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, 42 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಎಬಿಎಚ್ಎಗೆ ಸಂಪರ್ಕಿಸಲಾಗಿದೆ, ಇದು ವೈದ್ಯಕೀಯ ಇತಿಹಾಸಗಳಿಗೆ ತಡೆರಹಿತ ಪ್ರವೇಶವನ್ನು ಶಕ್ತಗೊಳಿಸುತ್ತದೆ ಮತ್ತು ಆರೋಗ್ಯ ವಿತರಣೆಯನ್ನು ಹೆಚ್ಚಿಸುತ್ತದೆ.

ಇದು ಪ್ರಾರಂಭವಾದಾಗಿನಿಂದ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ಭಾಗೀದಾರರನ್ನು ಒಳಗೊಳ್ಳುವ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಪ್ರಯೋಗಾಲಯಗಳು, ಔಷಧಾಲಯಗಳು, ಡಿಜಿಟಲ್ ಪರಿಹಾರ ಕಂಪನಿಗಳು ಸೇರಿದಂತೆ 236 ಕ್ಕೂ ಹೆಚ್ಚು ಖಾಸಗಿ ಘಟಕಗಳು ಎಬಿಡಿಎಂ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಲ್ಪಟ್ಟಿವೆ, ಪರಸ್ಪರ ಕಾರ್ಯಸಾಧ್ಯತೆಯನ್ನು ಸಾಧಿಸಲು ಕೈಜೋಡಿಸಿವೆ.  ಸಾರ್ವಜನಿಕ ವಲಯ, ಎ.ಐ.ಐ.ಎಂ.ಎಸ್. (ಏಮ್ಸ್)  ದಿಲ್ಲಿ  ಮತ್ತು ಏಮ್ಸ್ ಭೋಪಾಲ್ ನಂತಹ ಸಂಸ್ಥೆಗಳು ಸ್ಕ್ಯಾನ್ ಮತ್ತು ಶೇರ್ ಒಪಿಡಿ ನೋಂದಣಿಗಳನ್ನು ರಚಿಸುವಲ್ಲಿ ಉನ್ನತ ಸಾಧನೆ ತೋರಿವೆ. ಈ ಪ್ರಯತ್ನಗಳು, ವಿವಿಧ ಪ್ರಮುಖ ಖಾಸಗಿ ಆರೋಗ್ಯ ಸರಪಳಿಗಳ ಕೊಡುಗೆಗಳೊಂದಿಗೆ ಎಬಿಡಿಎಂನ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡಿವೆ. ಪ್ರಸ್ತುತ, 17,000 ಕ್ಕೂ ಹೆಚ್ಚು ಖಾಸಗಿ ಸೌಲಭ್ಯಗಳು ಸೇರಿದಂತೆ 1.3 ಲಕ್ಷಕ್ಕೂ ಹೆಚ್ಚು ಸೌಲಭ್ಯಗಳು ಎಬಿಡಿಎಂ-ಶಕ್ತವಾಗಿವೆ.

ನೋಂದಾಯಿತ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯಗಳ ಸಮಗ್ರ ಸಂಗ್ರಹ/ಭಂಡಾರವಾದ ರಾಷ್ಟ್ರೀಯ ಆರೋಗ್ಯ ಆರೈಕೆ ಪೂರೈಕೆದಾರರ ನೋಂದಣಿ (ಎನ್ಎಚ್ಪಿಆರ್) ಪ್ರಾರಂಭದೊಂದಿಗೆ, 3.3 ಲಕ್ಷ ಆರೋಗ್ಯ ಸೌಲಭ್ಯಗಳು ಮತ್ತು 4.7 ಲಕ್ಷ ಆರೋಗ್ಯ ವೃತ್ತಿಪರರು ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ನೋಂದಣಿ (ಎನ್ಎಂಸಿ) ಮತ್ತು ರಾಷ್ಟ್ರೀಯ ದಂತ ಮಂಡಳಿಗಾಗಿ ರಾಷ್ಟ್ರೀಯ ದಂತ ನೋಂದಣಿ (ಎನ್ಡಿಆರ್) ನಂತಹ ಪೋರ್ಟಲ್ ಗಳನ್ನು ಅಭಿವೃದ್ಧಿಪಡಿಸಿದೆ.

ಪರಿವರ್ತನೆಯತ್ತ ಪಯಣ:

ಡಿಜಿಟಲ್ ಆರೋಗ್ಯ ರಕ್ಷಣಾ/ಆರೈಕೆ  ಸೇವೆಗಳನ್ನು ಹೆಚ್ಚಿಸಲು ಹಲವಾರು ಪಾಲುದಾರಿಕೆಗಳನ್ನು ಬಳಸಿಕೊಳ್ಳುವ ಮೂಲಕ ಎಬಿಡಿಎಂ ಪರಿವರ್ತನೆಯನ್ನು ಹೆಚ್ಚಿಸಲು ಮತ್ತು ಅದರ ಹೆಜ್ಜೆಗುರುತುಗಳನ್ನು ಹೆಚ್ಚಿಸಲು ಸಾಧ್ಯವಾಗಿದೆ. ಆರೋಗ್ಯ ರಕ್ಷಣೆಗಾಗಿ ಕೃತಕ ಬುದ್ಧಿಮತ್ತೆಯಲ್ಲಿ ಡಿಜಿಟಲ್ ಸಾರ್ವಜನಿಕ ಸರಕುಗಳ ಅಭಿವೃದ್ಧಿಗಾಗಿ ಐಐಟಿ ಕಾನ್ಪುರದೊಂದಿಗೆ ಸಹಕರಿಸುವುದರಿಂದ ಹಿಡಿದು ಡಿಜಿಟಲ್ ಆರೋಗ್ಯ ಶಿಕ್ಷಣವನ್ನು ವೈದ್ಯಕೀಯ ಪಠ್ಯಕ್ರಮಕ್ಕೆ ಅಳವಡಿಸಲು  ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಎಂಯುಎಚ್ಎಸ್) ದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವವರೆಗೆ, ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರವನ್ನು/ಪರಿವರ್ತನೆಯನ್ನು  ತರಲು ಸಂಸ್ಥೆ ತನ್ನ ಪ್ರಯತ್ನಗಳನ್ನು ವಿಸ್ತರಿಸಿದೆ. ಹೆಚ್ಚುವರಿಯಾಗಿ, ಡಿಜಿಟಲ್ ಆರೋಗ್ಯ ಕಲಿಕೆಯ ದೃಷ್ಟಿಯಿಂದ, ಡಿಜಿಟಲ್ ಆರೋಗ್ಯ ಪದ್ಧತಿ/ಅಭ್ಯಾಸಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಭಾಗೀದಾರರಿಗೆ/ಮಧ್ಯಸ್ಥಗಾರರಿಗೆ ತರಬೇತಿ ಮತ್ತು ಸಂವೇದನಾಶೀಲತೆಯನ್ನು ಮೂಡಿಸುವ  ಮೂಲಕ ಎಬಿಡಿಎಂ ಪರಿವರ್ತನೆಗೆ ಚಾಲನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ವಾಟ್ಸಾಪ್ ಚಾಟ್ಬಾಟ್ ಅನ್ನು ಪರಿಚಯಿಸಿದೆ, ಇದು ಎಬಿಡಿಎಂನಲ್ಲಿ ಭಾಗಿಯಾಗಿರುವ ಮಧ್ಯಸ್ಥಗಾರರಿಗೆ ತರಬೇತಿ ನೀಡಲು ಬಳಕೆದಾರ ಸ್ನೇಹಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದಲ್ಲದೆ, ವಿವಿಧ ಸಂಘ-ಸಂಸ್ಥೆಗಳು ಮತ್ತು ಉಪಕ್ರಮಗಳು ಡಿಜಿಟಲ್ ಆರೋಗ್ಯವನ್ನು ಆರೋಗ್ಯ ರಕ್ಷಣೆಯ ನಿರ್ಣಾಯಕ ಅಂಶವಾಗಿ ಏಕೀಕರಿಸುವುದನ್ನು  ಪ್ರತಿಪಾದಿಸುತ್ತಿವೆ. ಉದಾಹರಣೆಗೆ, ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಆಫ್ ಹಾಸ್ಪಿಟಲ್ಸ್ (ಎನ್ಎಬಿಎಚ್-ನಭಾ) ಭಾರತದಲ್ಲಿ ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳ ಅಳವಡಿಕೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿರುವ ಎಚ್ಐಎಸ್ / ಇಎಂಆರ್ ವ್ಯವಸ್ಥೆಗಳಿಗೆ ಸಂಬಂಧಿಸಿದ ತನ್ನ ಡಿಜಿಟಲ್ ಆರೋಗ್ಯ ಮಾನದಂಡಗಳ ಮೊದಲ ಆವೃತ್ತಿಯನ್ನು ಪ್ರಾರಂಭಿಸಿತು. ಇದಲ್ಲದೆ, ಇ ಸ್ವಾಸ್ಥ್ಯ ಧಾಮ್ ಪೋರ್ಟಲ್ ಅನ್ನು ಎಬಿಡಿಎಂನೊಂದಿಗೆ ಸಂಯೋಜಿಸಲಾಗಿದೆ, ಅದರ ಪ್ರಯೋಜನಗಳನ್ನು ಚಾರ್ ಧಾಮ್ ಯಾತ್ರಿಗಳಿಗೆ ವಿಸ್ತರಿಸಲಾಗಿದೆ.

ಎಬಿಡಿಎಂ ತಡೆರಹಿತ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಕಲ್ಪಿಸುತ್ತದೆ, ಅಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನು ತನ್ನದೇ ಆದ ಆರೋಗ್ಯ ದಾಖಲೆಗಳಿಗೆ ಪ್ರವೇಶವನ್ನು ಹೊಂದಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೆ ವಿಶಿಷ್ಟವಾದ ಆರೋಗ್ಯ ಅಭಾ ಐಡಿ, ಬಲವಾದ ಮತ್ತು ವಿಶ್ವಾಸಾರ್ಹ ಗುರುತನ್ನು ಸ್ಥಾಪಿಸುತ್ತದೆ, ಇದು ವಿವಿಧ ಆರೋಗ್ಯ ಆರೈಕೆ ಪೂರೈಕೆದಾರರು ಮತ್ತು ಸಂಸ್ಥೆಗಳಲ್ಲಿ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಎಬಿಎಚ್ಎ ಮೂಲಕ, ನಾಗರಿಕರು ನೋಂದಣಿಗಾಗಿ ಆರೋಗ್ಯ ಸೌಲಭ್ಯಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸುವುದರಿಂದ ಹಿಡಿದು ವೈದ್ಯರ ಭೇಟಿಯನ್ನು ಸುಗಮಗೊಳಿಸುವವರೆಗೆ ಹಲವಾರು ಡಿಜಿಟಲ್ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಮಿಷನ್ ಅಡಿಯಲ್ಲಿ, ಡಿಜಿಟಲ್ ಆರೋಗ್ಯ ಪದ್ಧತಿಗಳನ್ನು/ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಆರೋಗ್ಯ ವೃತ್ತಿಪರರಿಗೆ ಕ್ಲಿನಿಕಲ್ ಡೆಸಿಷನ್ ಸಪೋರ್ಟ್ ಸಿಸ್ಟಮ್ (ಸಿಡಿಎಸ್ಎಸ್) ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಉಪಕ್ರಮವು ಕ್ಲಿನಿಕಲ್ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸುವುದು, ರೋಗಿಯ ಫಲಿತಾಂಶಗಳನ್ನು ಸುಧಾರಿಸುವುದು ಮತ್ತು ಆರೋಗ್ಯ ಆರೈಕೆ ವಿತರಣೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಇದು ಆರೋಗ್ಯ ಆರೈಕೆ ಪೂರೈಕೆದಾರರಿಗೆ ರೋಗಿಯ ಇತಿಹಾಸಗಳಿಗೆ ಸುಲಭ ಪ್ರವೇಶವನ್ನು ಅನುಮತಿಸುತ್ತದೆ, ಹೆಚ್ಚು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ, ಇದು ಉತ್ತಮ ರೋಗನಿರ್ಣಯ ಮತ್ತು ಚಿಕಿತ್ಸೆಯ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ತನ್ನ ಪಾಲುದಾರರಿಗೆ ಟ್ರಿನಿಟಿ ಆಫ್ ರಿಜಿಸ್ಟ್ರಿಗಳು (ಎಬಿಎಚ್ಎ, ಎಚ್ಪಿಆರ್ ಮತ್ತು ಎಚ್ಎಫ್ಆರ್) ಮತ್ತು ಟ್ರಿನಿಟಿ ಆಫ್ ಗೇಟ್ವೇಸ್ (ಎಚ್ಐಇಸಿಎಂ, ಯುಎಚ್ಐ ಮತ್ತು ಎನ್ಎಚ್ಸಿಎಕ್ಸ್) ಮೂಲಕ ಸತ್ಯದ/ವಾಸ್ತವದ  ಏಕೈಕ ಮೂಲವನ್ನು ರಚಿಸುವ ಮೂಲಕ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಭಾರತದ ಆರೋಗ್ಯ ಆರೈಕೆಯ ಭೂದೃಶ್ಯವನ್ನು ಪರಿವರ್ತಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ.

 

*****


(Release ID: 2060167) Visitor Counter : 32


Read this release in: English , Urdu , Hindi , Marathi