ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಸಿಲೋ ಯೋಜನೆಗಳೊಂದಿಗೆ ಸಂಗ್ರಹಣೆ ಮತ್ತು ಸಾರಿಗೆ ಮೂಲಸೌಕರ್ಯವನ್ನು ಬಲಪಡಿಸಲಿರುವ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)
Posted On:
27 SEP 2024 11:34AM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ 100 ದಿನಗಳ ಸಾಧನೆಗಳ ಭಾಗವಾಗಿ, ಭಾರತೀಯ ಆಹಾರ ನಿಗಮವು (ಎಫ್.ಸಿ.ಐ) ಸಾರ್ವಜನಿಕರು ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ ಅಡಿಯಲ್ಲಿ ಹಲವಾರು ಅತ್ಯಾಧುನಿಕ ಸಿಲೋ ಯೋಜನೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಯೋಜನೆಗಳು ಭಾರತದ ಆಹಾರ ಧಾನ್ಯ ಪೂರೈಕೆ ಸರಪಳಿಯನ್ನು ಆಧುನೀಕರಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತವೆ, ಹಾಗೂ ಸಮಗ್ರ ಮತ್ತು ಸಮರ್ಥನೀಯ ಸಂಗ್ರಹಣೆ ಮತ್ತು ಅಗತ್ಯ ಸರಕುಗಳ ಚಲನೆಯನ್ನು ಖಚಿತಪಡಿಸುತ್ತವೆ.
ಭಾರತೀಯ ಆಹಾರ ನಿಗಮವು (ಎಫ್.ಸಿ.ಐ.) ದೇಶದ ವಿವಿಧ ಪ್ರದೇಶಗಳಲ್ಲಿರುವ ನೆಲೆಗೊಂಡಿರುವ ತಮ್ಮ ಮೂಲಸೌಕರ್ಯಕ್ಕೆ ನೂತನ ಕಾರ್ಯತಂತ್ರವಾಗಿ ಆರು ಸಿಲೋ ಯೋಜನೆಗಳ ಕಾರ್ಯಾಚರಣೆಯು ಇತ್ತೀಚಿನ ಸೇರ್ಪಡೆಯಾಗಿದೆ. ಡಿಸೈನ್, ಬಿಲ್ಡ್, ಫೈನಾನ್ಸ್, ಓನ್ ಮತ್ತು ಆಪರೇಟ್ (ಡಿ.ಬಿ.ಎಫ್.ಒ.ಒ) ಅಥವಾ ಡಿಸೈನ್, ಬಿಲ್ಡ್, ಫೈನಾನ್ಸ್, ಆಪರೇಟ್ ಮತ್ತು ಟ್ರಾನ್ಸ್ಫರ್ (ಡಿ.ಬಿ.ಎಫ್.ಒ.ಟಿ.) ಆಧಾರದ ಮೇಲೆ ನಿರ್ಮಿಸಲಾದ ಈ ಸಿಲೋ ಯೋಜನೆಗಳನ್ನು ಖಾಸಗಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.
ಸಿಲೋ ಯೋಜನೆಗಳ ಪ್ರಮುಖ ಮುಖ್ಯಾಂಶಗಳು:
1. ದರ್ಭಾಂಗಾ ಸೈಲೋ ಪ್ರಾಜೆಕ್ಟ್ (ಬಿಹಾರ):
ಅದಾನಿ ಅಗ್ರಿ ಲಾಜಿಸ್ಟಿಕ್ಸ್ (ದರ್ಭಾಂಗಾ) ಲಿಮಿಟೆಡ್ ಸಂಸ್ಥೆಯಿಂದ ಡಿ.ಬಿ.ಎಫ್.ಒ.ಒ ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ, ಈ ಯೋಜನೆಯು 50,000 ಎಂಟಿ ಸಂಗ್ರಹಣಾ ಸಾಮರ್ಥ್ಯ ಮತ್ತು ಮೀಸಲಾದ ರೈಲ್ವೆ ಸೈಡಿಂಗ್ ಅನ್ನು ಒಳಗೊಂಡಿದೆ. ಇದು ಏಪ್ರಿಲ್ 2024 ರಲ್ಲಿ ಕಾರ್ಯಾರಂಭಗೊಂಡಿತು ಮತ್ತು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
2. ಸಮಸ್ತಿಪುರ್ ಸೈಲೋ ಪ್ರಾಜೆಕ್ಟ್ (ಬಿಹಾರ):
ದರ್ಬಂಗಾ ಯೋಜನೆಯಂತೆಯೇ, ಸಮಸ್ತಿಪುರದಲ್ಲಿರುವ ಈ ಸಿಲೋವನ್ನು 50,000 ಎಂಟಿ ಸಾಮರ್ಥ್ಯದೊಂದಿಗೆ ಅದಾನಿ ಅಗ್ರಿ ಲಾಜಿಸ್ಟಿಕ್ಸ್ (ಸಮಸ್ತಿಪುರ) ಲಿಮಿಟೆಡ್ ಸಂಸ್ಥೆಅಭಿವೃದ್ಧಿಪಡಿಸಿದೆ. ಮೇ 2024 ರಲ್ಲಿ ಈ ಯೋಜನೆ ಪೂರ್ಣಗೊಂಡಿತು, ಸೌಲಭ್ಯವು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
3. ಸಹನೆವಾಲ್ ಸಿಲೋ ಪ್ರಾಜೆಕ್ಟ್ (ಪಂಜಾಬ್):
ಲೀಪ್ ಅಗ್ರಿ ಲಾಜಿಸ್ಟಿಕ್ಸ್ (ಲುಧಿಯಾನ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಡಿ.ಬಿ.ಎಫ್.ಒ.ಟಿ. ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯು 50,000 ಎಂಟಿ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪಂಜಾಬ್ನಲ್ಲಿ ಧಾನ್ಯ ಸಂಗ್ರಹಣೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಸ್ಥಳೀಯ ರೈತರಿಗೆ ಬೆಂಬಲ ನೀಡುತ್ತದೆ. ಯೋಜನೆಯು ಮೇ 2024 ರಲ್ಲಿ ಪೂರ್ಣಗೊಂಡಿತು.
4. ಬರೋಡಾ ಸಿಲೋ ಪ್ರಾಜೆಕ್ಟ್ (ಗುಜರಾತ್):
50,000 ಎಂಟಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ, ಬರೋಡಾ ಸಿಲೋವನ್ನು ಮೇ 2024 ರಲ್ಲಿ ಲೀಪ್ ಅಗ್ರಿ ಲಾಜಿಸ್ಟಿಕ್ಸ್ (ಬರೋಡಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಾಚರಣೆಯಲ್ಲಿದೆ, ಪ್ರದೇಶದಲ್ಲಿ ಧಾನ್ಯ ಸಂಗ್ರಹ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ.
5. ಚೆಹೆರಟ್ಟಾ ಸಿಲೋ ಪ್ರಾಜೆಕ್ಟ್ (ಪಂಜಾಬ್):
50,000 ಎಂಟಿ ಸಂಗ್ರಹ ಸಾಮರ್ಥ್ಯದೊಂದಿಗೆ, ಈ ಅಮೃತಸರ ಸಿಲೋ ಸೌಲಭ್ಯವನ್ನು ಎನ್.ಸಿ.ಎಂ.ಎಲ್. ಛೆಹ್ರೆಟ್ಟಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿದೆ, ಮೇ 2024 ರಲ್ಲಿ ಪೂರ್ಣಗೊಂಡಿತು, ಮತ್ತು ಕಾರ್ಯಾಚರಣೆಯಲ್ಲಿದೆ, ಹಾಗೂ ಇದು ಈಗ ಈ ಪ್ರದೇಶದ ರೈತರಿಂದ ಸಂಗ್ರಹಿಸಿದ ಧಾನ್ಯಗಳಿಗೆ ಅಗತ್ಯ ಸಂಗ್ರಹಣೆಯನ್ನು ಒದಗಿಸುತ್ತದೆ.
6. ಬಟಾಲಾ ಸಿಲೋ ಪ್ರಾಜೆಕ್ಟ್ (ಪಂಜಾಬ್):
ಗುರುದಾಸ್ಪುರದಲ್ಲಿ ನೆಲೆಗೊಂಡಿರುವ ಬಟಾಲಾ ಸಿಲೋ ಯೋಜನೆಯು ಎನ್.ಸಿ.ಎಂ.ಎಲ್ ಬಟಾಲಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ. ಜೂನ್ 2024 ರಲ್ಲಿ ಪೂರ್ಣಗೊಂಡಿತು. 50,000 ಎಂಟಿ ಸಾಮರ್ಥ್ಯದೊಂದಿಗೆ, ಇದು ಈ ಪ್ರದೇಶದಲ್ಲಿ ಎಫ್ಸಿಐ ಯ ಶೇಖರಣಾ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಹಲವಾರು ಸ್ಥಳೀಯ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.
ಈ ಸಿಲೋಗಳು ಕೆಳಗೆ ನಮೂದಿಸಿದಂತೆ ಹಲವಾರು ನಿರ್ಣಾಯಕ ವಿಧಾನಗಳಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಆಹಾರ ನಿಗಮದ (ಎಫ್ಸಿಐ) ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ:
I. ವರ್ಧಿತ ಶೇಖರಣಾ ಸಾಮರ್ಥ್ಯ
II. ಉತ್ತಮ ಸಂರಕ್ಷಣೆ
III. ಕಡಿಮೆಯಾಗುವ ನಷ್ಟಗಳು
IV. ಸಮರ್ಥ ನಿರ್ವಹಣೆ ಮತ್ತು ಬೃಹತ್ ಸಂಗ್ರಹಣೆ
V. ಸ್ವಯಂಚಾಲಿತ ವ್ಯವಸ್ಥೆಗಳು
VI ಸಂಗ್ರಹಿಸಿದ ಧಾನ್ಯಗಳ ಉತ್ತಮ ಗುಣಮಟ್ಟದ ನಿಯಂತ್ರಣವನ್ನು ಸಕ್ರಿಯಗೊಳಿಸುತ್ತದೆ.
VII. ಸಂಯೋಜಿತ ರೈಲು ಮತ್ತು ರಸ್ತೆ ಸಾರಿಗೆ ಸಂಪರ್ಕಗಳೊಂದಿಗೆ ನಿರ್ಮಿಸಲಾಗಿದೆ,
VIII. ಯಾಂತ್ರೀಕೃತ ಬೃಹತ್ ಲೋಡಿಂಗ್ ಮತ್ತು ಇಳಿಸುವಿಕೆಗಾಗಿ ವಿನ್ಯಾಸಗೊಳಿಸಲಾದ ಸೌಲಭ್ಯಗಳು
IX. ಕಡಿಮೆ ನಿರ್ವಹಣಾ ವೆಚ್ಚಗಳು
ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಗ್ರಹಣೆ ಮತ್ತು ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ನಷ್ಟವನ್ನು ಕಡಿಮೆ ಮಾಡಲು ಎಫ್ಸಿಐ ಸಂಸ್ಥೆಯಿಂದ ವ್ಯಾಪಕ ಪ್ರಯತ್ನಗಳು ನಡೆಯುತ್ತಿದ್ದು, ಈ ಸಿಲೋ ಯೋಜನೆಗಳು ಮತ್ತು ಸಾರಿಗೆ ಉಪಕ್ರಮಗಳು ಇದರ ಭಾಗವಾಗಿದೆ. ಸಿಲೋ ಯೋಜನೆಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಧಾನ್ಯಗಳ ಉತ್ತಮ ಸಂರಕ್ಷಣೆ, ನಷ್ಟವನ್ನು ಕಡಿಮೆ ಮಾಡುವುದು ಮತ್ತು ಸುಧಾರಿತ ಸಂಗ್ರಹಣೆ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತರಿಗೆ ಬೆಂಬಲ ನೀಡುತ್ತವೆ.
*****
(Release ID: 2059430)
Visitor Counter : 35