ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಕೇವಲ ಹಣಕಾಸಿನ ಸಂಪನ್ಮೂಲಗಳ ಬದ್ಧತೆ ಮತ್ತು ಆರ್&ಡಿ ಗೆ ಕೇವಲ ಮಾತಿನಿಂದ ಆಗುವುದಿಲ್ಲ; ಸ್ಪಷ್ಟವಾದ ಫಲಿತಾಂಶಗಳ ಮೇಲೆ ಗಮನ ಹರಿಸಬೇಕು: ಉಪರಾಷ್ಟ್ರಪತಿ


“ಪ್ರಧಾನಮಂತ್ರಿಯವರ ಹೃದಯ ಮತ್ತು ಆತ್ಮವು ವೈಜ್ಞಾನಿಕ ಸಮುದಾಯದೊಂದಿಗೆ  ಆಳವಾಗಿ ಬದ್ಧವಾಗಿದೆ"
 
ವಿಜ್ಞಾನಿಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸ್ಥಳದಲ್ಲಿ ಅನುಕೂಲಕರ ಪರಿಸರ ವ್ಯವಸ್ಥೆ ಇರುತ್ತದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು

ಸಂಶೋಧನೆ ಮತ್ತು ಅಭಿವೃದ್ಧಿಯ ಕೊಡುಗೆಗಳು ಗಣನೀಯವಾಗಿರಬೇಕು  ಅಲಂಕಾರಕ್ಕಾಗಿ ಇರಬಾರದು: ಉಪರಾಷ್ಟ್ರಪತಿ 

ಮೃದು ರಾಜತಾಂತ್ರಿಕತೆ ಮತ್ತು ಭದ್ರತೆಯು  ಸಂಶೋಧನೆಯ ಭಾಗವಾಗಿದೆ

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಕಾರ್ಪೊರೇಟ್ ಗಳಿಗೆ ಶ್ರೀ ಧನಕರ್  ಕರೆ 

ಸಿಎಸ್ಐಆರ್  ಎಂದರೆ ವೈಜ್ಞಾನಿಕವಾಗಿ ಕಲ್ಪಿತ ರಾಷ್ಟ್ರಕ್ಕೆ ವೇಗವರ್ಧಕ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು

ಸಂಸ್ಥೆಗಳಲ್ಲಿ ಆರ್ & ಡಿ ಕೇವಲ ಶೈಕ್ಷಣಿಕ ಮಾಹಿತಿಯನ್ನು ಪಡೆಯುವ ಅನ್ವೇಷಣೆಯಲ್ಲಿ ಇರಬಾರದು: ಉಪರಾಷ್ಟ್ರಪತಿ

ಇಂದು ನವದೆಹಲಿಯಲ್ಲಿ ಸಿಎಸ್ಐಆರ್ನ 83ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಉಪರಾಷ್ಟ್ರಪತಿಗಳು ಮಾತನಾಡಿದರು

Posted On: 26 SEP 2024 3:22PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಸಂಶೋಧನೆ ಮತ್ತು ಅಭಿವೃದ್ಧಿಗೆ ಕೊಡುಗೆ ಗಣನೀಯವಾಗಿರಬೇಕು ಮತ್ತು ಮೇಲ್ನೋಟಕ್ಕೆ ಇರಬಾರದು. ಕೇವಲ ಆರ್ಥಿಕ ಸಂಪನ್ಮೂಲಗಳ ಬದ್ಧತೆ ಸಾಕಾಗುವುದಿಲ್ಲ, ಯಾವುದೇ ಸಂಶೋಧನೆಯ ಮಹತ್ವವನ್ನು ಸ್ಪಷ್ಟವಾದ ಫಲಿತಾಂಶಗಳ ಪರಿಭಾಷೆಯಲ್ಲಿ ಅಳೆಯಬೇಕು ಎಂದು ಹೇಳಿದರು. 

 

"ಹಣಕಾಸಿನ ಸಂಪನ್ಮೂಲಗಳು ಖಾತ್ರಿಯಾಗಿರುವ ಕಾರಣದಿಂದ ನಾವು ಜಾಗರೂಕರಾಗಿರಬೇಕು, ಅದಕ್ಕಾಗಿ ನಾವು, ಓಹ್, ನಾನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತುಂಬಾ ಖರ್ಚು ಮಾಡಿದ್ದೇನೆ ಎಂದು ಹೆಮ್ಮೆ ಪಡಲು ಆಗುವುದಿಲ್ಲ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆಯು ಸ್ಪಷ್ಟವಾದ ಫಲಿತಾಂಶಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರತಕ್ಕದ್ದು" ಎಂದು ಅವರು ಹೇಳಿದರು.

ನವದೆಹಲಿಯ ಪುಸಾ ರಸ್ತೆಯಲ್ಲಿ ಇಂದು ನಡೆದ 83ನೇ ಸಿಎಸ್ಐಆರ್ ಸಂಸ್ಥಾಪನಾ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಪ್ರಸ್ತುತ ಸನ್ನಿವೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಗಮನ ಸೆಳೆದರು, ಮೃದು ರಾಜತಾಂತ್ರಿಕತೆಮತ್ತು ರಾಷ್ಟ್ರೀಯ ಭದ್ರತೆಯು ಸಂಶೋಧನೆ ಮತ್ತು ಅಭಿವೃದ್ಧಿಯ ಭಾಗವಾಗಿದೆ ಎಂದು ಶ್ರೀ ಧನಕರ್  ಒತ್ತಿ ಹೇಳಿದರು. 

“ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯು ಶಾಶ್ವತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯು ಭದ್ರತೆಯೊಂದಿಗೆ  ಕೂಡಿಕೊಂಡಿದೆ.  ಆದ್ದರಿಂದ ಅದರಲ್ಲಿನ ಹೂಡಿಕೆಯು ರಾಷ್ಟ್ರಕ್ಕಾಗಿ. ಹೂಡಿಕೆಯು ಬೆಳವಣಿಗೆಗಾಗಿ. ಹೂಡಿಕೆಯು ಸುಸ್ಥಿರತೆಗಾಗಿ”ಎಂದು ಅವರು ಪ್ರತಿಪಾದಿಸಿದರು.

ಪ್ರಸ್ತುತ ಸನ್ನಿವೇಶವನ್ನು  ಎತ್ತಿ ತೋರಿಸುತ್ತಾ, ವೈಜ್ಞಾನಿಕ ಸಮುದಾಯಕ್ಕೆ ಮನ್ನಣೆ ಗಣನೀಯವಾಗಿ ಹೆಚ್ಚಿದೆ ಎಂದು ಶ್ರೀ ಧನಕರ್ ಸಂತಸ ವ್ಯಕ್ತಪಡಿಸಿದರು.  "ಕಳೆದ ಕೆಲವು ವರ್ಷಗಳಲ್ಲಿ ವೈಜ್ಞಾನಿಕ ಸಮುದಾಯದ ಮನ್ನಣೆ ಹೆಚ್ಚಿರುವುದು ಹರ್ಷದಾಯಕವಾಗಿದೆ. ಸರ್ಕಾರವು ಅದರ ಬಗ್ಗೆ ಬಹಳ ಗಂಭೀರವಾಗಿರುವುದು ಸೇರಿದಂತೆ ಹಲವು ವಿಧಗಳಲ್ಲಿ ಇದು ಹೆಚ್ಚಾಗಿದೆ. ಪ್ರಧಾನ ಮಂತ್ರಿಯವರ ಹೃದಯ ಮತ್ತು ಆತ್ಮವು ವೈಜ್ಞಾನಿಕ ಸಮುದಾಯದಲ್ಲಿ ಆಳವಾಗಿದೆ" ಎಂದು ಅವರು ಹೇಳಿದರು.

ಭಾರತದ ವಿಜ್ಞಾನಿಗಳ ಸಾಮರ್ಥ್ಯದ ಬಗ್ಗೆ ಪ್ರಧಾನ ಮಂತ್ರಿಯವರ ಆಳವಾದ ಗೌರವ ಮತ್ತು ನಂಬಿಕೆಯನ್ನು ಶ್ರೀ ಧನಕರ್ ಶ್ಲಾಘಿಸಿದರು.

ಹಳೆಯ ದಿನಗಳನ್ನು ನೆನಪಿಸುತ್ತಾ ಮೊದಲು ವಿಜ್ಞಾನಿಗಳ ಕೊಡುಗೆಗಳನ್ನು  ಯಾವಾಗಲೂ ಗುರುತಿಸಲ್ಪಡದ ಕಾಲದ ಬಗ್ಗೆ ಹೇಳುತ್ತಾ ಶ್ರೀ ಧನಕರ್  ಅವರು "ಸರಿಯಾದ ಮಾನ್ಯತೆ ಇಲ್ಲದ ಸಂದರ್ಭದಲ್ಲಿ, ನೀವು ಎದುರಿಸುತ್ತಿರುವ ಸಂಕಷ್ಟಗಳು, ನೀವು ಅನುಭವಿಸುವ ಅಡೆತಡೆಗಳ ಬಗ್ಗೆ ನನಗೆ  ಸಂಪೂರ್ಣವಾಗಿ ಅರಿವಿದೆ. ಆದ್ದರಿಂದ, ಹಿಂದೆ ಅಸ್ತಿತ್ವದಲ್ಲಿದ್ದ ಪರಿಸರ ವ್ಯವಸ್ಥೆಯು ನೀವು ಕೊಡುಗೆ ನೀಡುತ್ತಿದ್ದರೂ  ಅದಕ್ಕೆ  ಮಾನ್ಯತೆ ಸರಿಯಾದ ರೂಪದಲ್ಲಿ ಇರುತ್ತಿರಲಿಲ್ಲ" ಎಂದು ಅವರು ಹೇಳಿದರು.

ವ್ಯವಸ್ಥೆಯಲ್ಲಿನ ಪ್ರಸ್ತುತ ಬದಲಾವಣೆಯ ಬಗ್ಗೆ ಹೇಳಿದ  ಶ್ರೀ ಧನಕರ್ , "ಈಗ ನಮ್ಮ ವಿಜ್ಞಾನಿಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮತ್ತು ವಿಸ್ತರಿಸುವ ಪರಿಸರ ವ್ಯವಸ್ಥೆ ಇದೆ, ಅವರ ಪ್ರತಿಭೆಯನ್ನು ಬಳಸಿಕೊಳ್ಳಬಹುದು ಮತ್ತು ಅವರ ನವೀನ ಕೌಶಲ್ಯಗಳನ್ನು  ಪ್ರದರ್ಶಿಸುವ  ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಬಹುದು" ಎಂದು ಒತ್ತಿ ಹೇಳಿದರು.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಕಾರ್ಪೊರೇಟ್ ಗಳಿಗೆ ಕರೆ ನೀಡಿದ ರಾಷ್ಟ್ರಪತಿಗಳು, “ಆಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳು ಗಮನಾರ್ಹ ಕೊಡುಗೆಗಳನ್ನು ನೀಡುತ್ತಿವೆ. ನಮ್ಮ ರಾಷ್ಟ್ರದ ಗಾತ್ರ, ಅದರ ಸಾಮರ್ಥ್ಯ, ಅದರ ಸ್ಥಾನ ಮತ್ತು ಅದು ಇರುವ ಅಭಿವೃದ್ಧಿಯ ಹಾದಿಯನ್ನು ನೋಡಿ, ನಮ್ಮ ಕಾರ್ಪೊರೇಟ್ಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕಾಗಿದೆ.” ಎಂದು ಹೇಳಿದರು.

 

ಸಿಎಸ್ ಐ ಆರ್ ಅನ್ನು ವೈಜ್ಞಾನಿಕವಾಗಿ ಕಲ್ಪಿತ ರಾಷ್ಟ್ರಕ್ಕೆ ವೇಗವರ್ಧಕ ಎಂದು ಕರೆದ ಶ್ರೀ ಧನಕರ್ “ಇದು ನಿಮ್ಮ ಸಂಸ್ಥಾಪನಾ ದಿನ, ಆದರೆ ಇದು ಭಾರತದ ದೃಢವಾದ ಅಡಿಪಾಯಗಳೊಂದಿಗೆ ಅವಿಭಾಜ್ಯವಾಗಿ ಸಂಪರ್ಕ ಹೊಂದಿದೆ. ನೀವು ಭೂಮಿಯ ಮೇಲಿನ ಅತ್ಯಂತ ಚೈತನ್ಯದಾಯಕ, ಕ್ರಿಯಾತ್ಮಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಗೊಳಿಸುತ್ತಿದ್ದೀರಿ. ನೀವು ಹಿಂದೆಂದಿಗಿಂತಲೂ ಹೆಚ್ಚು ಬೆಳೆಯುತ್ತಿರುವ ರಾಷ್ಟ್ರದ ಅಡಿಪಾಯವನ್ನು ಗಟ್ಟಿಗೊಳಿಸುತ್ತಿದ್ದೀರಿ ಮತ್ತು  ಅದರ ಬೆಳವಣಿಗೆಯನ್ನು ತಡೆಯಲಾಗದು.” ಎಂದು ಹೇಳಿದರು.

ಯಾವುದೇ ರಾಷ್ಟ್ರದ ಬೆಳವಣಿಗೆಯ ಎಂಜಿನ್ ನಂತೆ ಇರುವ ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಅವರು ಮತ್ತಷ್ಟು ಒತ್ತಿಹೇಳಿದರು, ಈ ಎಂಜಿನ್ ಪ್ರಾಥಮಿಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಿಂದ (ಆರ್ & ಡಿ) ನಡೆಸಲ್ಪಡುತ್ತದೆ ಎಂದು ಒತ್ತಿ ಹೇಳಿದರು.

ಭಾರತದ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ & ಡಿ) ಪ್ರಸ್ತುತ ವಿಧಾನದ ಬಗ್ಗೆ ತಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸಿದ ಶ್ರೀ ಧನಕರ್ ಅವರು ಕೇವಲ ಮಾತಿನ ಸೇವೆಗಿಂತ ಹೆಚ್ಚಾಗಿ ಗಣನೀಯ ಕೊಡುಗೆಗಳ ಅಗತ್ಯವನ್ನು ಎತ್ತಿ ತೋರಿಸಿದರು. "ನಾನು ನಿರ್ದಿಷ್ಟವಾಗಿ ಒಂದು ಅಂಶದ ಬಗ್ಗೆ ಚಿಂತಿತನಾಗಿದ್ದೇನೆ ಮತ್ತು ಆ ಅಂಶವು ನನ್ನ ಅದೃಷ್ಟವಶಾತ್, ಸಿಎಸ್ ಐ ಆರ್ ನ ಸಮೀಕ್ಷೆಯಲ್ಲಿ ಹೇಳಲಾಗಿದೆ" ಎಂದು ಅವರು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವವರು ಕೇವಲ ಶೈಕ್ಷಣಿಕ ಲಾಭಗಳಿಂದ ಪ್ರೇರಿತರಾಗಬಾರದು ಎಂದು ಅವರು ಒತ್ತಿ ಹೇಳಿದರು, "ಸಂಶೋಧನೆಯು ಅನುಕರಣೆ  ಸಿಮ್ಯುಲೇಶನ್ ಅಲ್ಲ. ಸಂಶೋಧನೆಯೆಂದರೆ  ಸಂಶೋಧನೆಯೆ."

 ಮಾನವ ಸಂಪನ್ಮೂಲ ಮತ್ತು ಸಂಸ್ಥೆಗಳಲ್ಲಿನ ಹೂಡಿಕೆಗಳು ಅಧಿಕೃತ ಮತ್ತು ಪ್ರಭಾವಶಾಲಿ ಸಂಶೋಧನೆಯತ್ತ ನಿರ್ದೇಶಿಸಲ್ಪಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್ ಒಪಿ) ಸ್ಥಾಪನೆಗೆ ಅವರು ಮನವಿ ಮಾಡಿದರು.

ಆಧುನಿಕ ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ  ಪರಿಸರವನ್ನು ರೂಪಿಸುವಲ್ಲಿ ಸಿಎಸ್ ಐ ಆರ್  ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಶ್ಲಾಘಿಸಿದ ಶ್ರೀ ಧನಕರ್  ಅವರು ಭಾರತದ ವಿಜ್ಞಾನದ ಐತಿಹಾಸಿಕ ಪರಂಪರೆಯನ್ನು ಒತ್ತಿ ಹೇಳುತ್ತಾ. "ನಾವು ನಮ್ಮ ಐತಿಹಾಸಿಕ ದೃಷ್ಟಿಕೋನಕ್ಕೆ ಹೋದರೆ, ನಮ್ಮ ಭಾರತವು ವೈಜ್ಞಾನಿಕ ಪರಾಕಾಷ್ಠೆಯಲ್ಲಿತ್ತು ಎನ್ನುವುದನ್ನು ನಾವು ಕಂಡುಕೊಳ್ಳುತ್ತೇವೆ. ನಾವು ಜಾಗತಿಕ ನಾಯಕರಾಗಿದ್ದೆವು; ವೈಜ್ಞಾನಿಕ ಜ್ಞಾನದಲ್ಲಿ  ನಾವು ಜಗತ್ತಿನ ಕೇಂದ್ರವಾಗಿದ್ದೆವು" ಎಂದು ಹೇಳಿದರು.

ದೇಶವು ಒಂದು ಸಮಯದಲ್ಲಿ ತನ್ನ ಗುರಿಯನ್ನು ಕಳೆದುಕೊಂಡಿದ್ದರೂ, ಈಗ ವಿಜ್ಞಾನ ಜಗತ್ತಿನಲ್ಲಿ ನಮ್ಮ ಪ್ರಾಚೀನ ವೈಭವವನ್ನು ಮರಳಿ ಪಡೆಯುವ ಹಾದಿಯಲ್ಲಿದೆ ಎಂದು ಅವರು ಹೇಳಿದರು. " ನಾವು ಮಾಡಿದ್ದ ಸಂಶೋಧನೆ ಮತ್ತು ಆವಿಷ್ಕಾರಗಳು ಜಗತ್ತು  ಹೆಮ್ಮೆ ಪಡುವಂತಿದೆ, ನಾವು ಎಲ್ಲೋ ಗುರಿ ತಪ್ಪಿದ್ದೆವು ದಾರಿ ತಪ್ಪಿದ್ದೇವು, ಈಗ ನಾವು  ವೈಭವವನ್ನು ಮರಳಿ ತರಲು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದರು.

 


ಇದಕ್ಕೂ ಮುನ್ನ ಉಪರಾಷ್ಟ್ರಪತಿಗಳು ಎನ್ಎಎಸ್ ಸಿ ಕಾಂಪ್ಲೆಕ್ಸ್ ನಲ್ಲಿ 'ಸಿಎಸ್ ಐ ಆರ್ ವಿಷಯಾಧಾರಿತ ಪ್ರದರ್ಶನ 2024' ಅನ್ನು ಉದ್ಘಾಟಿಸಿದರು.

ಶ್ರೀ ಪ್ರೊ. ಅಜಯ್ ಕೆ. ಸೂದ್, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರು,  ಡಾ. ಕೆ. ರಾಧಾಕೃಷ್ಣನ್, ಸಿಎಸ್ಐಆರ್ ಸಂಸ್ಥಾಪನಾ ದಿನದ ಸ್ಪೀಕರ್, ಇಸ್ರೋ ಮಾಜಿ ಅಧ್ಯಕ್ಷರು;  ಡಾ. ಎನ್. ಕಲೈಸೆಲ್ವಿ, ಸಿಎಸ್ಐಆರ್ ಮಹಾನಿರ್ದೇಶಕರು,  ಡಾ. ಜಿ ಮಹೇಶ್, ಸಿಎಸ್ಐಆರ್ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ಕಿಸಿ: pib.gov.in/PressRelese

 

*****


(Release ID: 2059269) Visitor Counter : 38